ಬೆಂಗಳೂರು: ಪ್ರೊ ಕಬಡ್ಡಿ ಲೀಗ್ನ 9 ನೇ ಸೀಸನ್ ನ ಮೊದಲಾರ್ಧದ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಅಕ್ಟೋಬರ್ 7 ರಂದು ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಮುಂದಿನ ಹಂತಕ್ಕಾಗಿ ಅಕ್ಟೋಬರ್ 28 ರಂದು ಪುಣೆಯ ಬಾಳೆವಾಡಿ ಶ್ರೀ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ (ಬ್ಯಾಡ್ಮಿಂಟನ್ ಕೋರ್ಟ್) ಗೆ ತೆರಳಲಿದೆ. ಸೀಸನ್ನಲ್ಲಿ ಕಬಡ್ಡಿ ಅಭಿಮಾನಿಗಳನ್ನು ಮತ್ತೆ ಕ್ರೀಡಾಂಗಣಕ್ಕೆ ಸ್ವಾಗತಿಸಲು ಮತ್ತು ಅವರಿಗೆ ಸತ್ಕಾರ ನೀಡಲು ಲೀಗ್ ಸಿದ್ಧವಾಗಿದೆ. ಆರಂಭಿಕ ಮೂರು ದಿನಗಳಲ್ಲಿ ಟ್ರಿಪಲ್ ಹೆಡರ್ಗಳೊಂದಿಗೆ ಅದ್ಧೂರಿ ಉದ್ಘಾಟನೆ ನಡೆಯಲಿದೆ. […]