Friday, 27th May 2022

ವಕೀಲರ ಸಂಘಕ್ಕೆ ನೂತನ ಸಾರಥಿಗಳ ಅಧಿಕಾರ ಸ್ವೀಕಾರ

ಚಿತ್ರದುರ್ಗ: ಜಿಲ್ಲಾ ವಕೀಲರ ಸಂಘದ 2021-2023 ರ ಸಾಲಿನ ನೂತನ ಅಧ್ಯಕ್ಷರಾಗಿ ಸಿ.ಶಿವು ಯಾದವ್ ರವರು ಅಧಿಕಾರ ಸ್ವೀಕರಿಸಿ ಪದಗ್ರಹಣ ಮಾಡಿದರು

ಹಿಂದಿನ ಅಧ್ಯಕ್ಷರಾದ ಎಸ್. ವಿಜಯಕುಮಾರ್ ರವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿ ಶುಭ ಕೋರಿದರು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಾದ ಜಿ.ಸಿ ದಯಾನಂದ ಉಪಾಧ್ಯಕ್ಷರಾಗಿ ಎಂ.ಮೂರ್ತಿ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಅಜ್ಜಯ್ಯ, ಖಜಾಂಚಿ ಯಾಗಿ ವಿಶ್ವನಾಥ ರೆಡ್ಡಿ, ಸಹ ಕಾರ್ಯ ದರ್ಶಿ ಯಾಗಿ ಪದಗ್ರಹಣ ಮಾಡಿದರು. ಇದೇ ಸಂದರ್ಭದಲ್ಲಿ ಅನೇಕ ವಕೀಲರು ನೂತನ ಅಧ್ಯಕ್ಷರಿಗೆ ಹಾಗೂ ಪದಾಧಿಕಾರಿಗಳಿಗೆ ಅಭಿನಂದಿಸಿದರು.

ಅಧಿಕಾರ ವಹಿಸಿಕೊಂಡು ಮಾತನಾಡಿದ ಅಧ್ಯಕ್ಷರಾದ ಸಿ. ಶಿವುಯಾದವ್ ಸಂಘದ ಸದಸ್ಯರ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ.

ಸರ್ಕಾರದೊಂದಿಗೆ ವ್ಯವಹರಿಸಿ ಸರ್ಕಾರದಿಂದ ಅನೇಕ ಸೌಲಭ್ಯಗಳನ್ನು ತರಲು ಪ್ರಯತ್ನ ಮಾಡುತ್ತೇನೆ. ನಿಂತು ಹೊಗಿರುವ ವಕೀಲರ ಸಂಘದ ಸಹಕಾರಿ ಸಂಘವನ್ನು ಪುನರ್ ಪ್ರಾರಂಭಿಸಿ ಸಂಘಕ್ಕೆ ಹೆಚ್ಚಿನ ಆದಾಯ ತರುವಲ್ಲಿ ಪ್ರಯತ್ನ ಮಾಡುತ್ತೇನೆ ಎಂದರು.

ಸಂಘದ ಸದಸ್ಯರು ಮೃತಹೊಂದಿದರೆ ಈಗ ನೀಡುವ ಐದು ಸಾವಿರದ ಬದಲಿಗೆ ಇಪ್ಪತೈದು ಸಾವಿರಕ್ಕೆ ಹೆಚ್ಚಿಸುತ್ತೇನೆ ಮತ್ತು ವಕೀಲರು ಕಷ್ಟ ಸುಖಗಳಲ್ಲಿ ಅವರೊಂದಿಗೆ ಸಂಘವು ಸದಾ ಇರುತ್ತದೆ ವಕೀಲರಿಗೆ ಅನ್ಯಾಯವಾದಾಗ ಅವರಿಗೆ ನ್ಯಾಯ ಒದಗಿಸಲು ಸಂಘವು ಪ್ರಮಾಣಕ ಪ್ರಯತ್ನ ಮಾಡುತ್ತದೆ ಎಂದು ತಿಳಿಸಿದರು.

ಮಾಜಿ ಅಧ್ಯಕ್ಷರಾದ ಫಾತ್ಯರಾಜನ್, ಜಿ ವಿ ಶಿವಣ್ಣರೆಡ್ಡಿ, ಎಚ್.ಎಂ.ಎಸ್ ನಾಯಕ ಆರ್ ಉದಯಶಂಕರ್, ಜಿ ಎಂ ಉಮಾಪತಿ, ಮಾಜಿ ಕಾರ್ಯದರ್ಶಿ ಅನಿಲ್ ಕುಮಾರ್ ಎಸ್, ನೂರುಲ್ಲಾ ಹಸನ್ ಡಿ ಸಿ ವೆಂಕಟೇಶಮೂರ್ತಿ ಎಸ್ ಪ್ರಕಾಶ್ ಮತ್ತು ಸಂಘದ ಹಿರಿಯ ಮತ್ತು ಕಿರಿಯ ಸದಸ್ಯರು ಉಪಸ್ಥಿತರಿದ್ದರು.