Friday, 24th September 2021

ತಾಲಿಬಾನ್ ಸರ್ಕಾರ ಪದಗ್ರಹಣ ಸಮಾರಂಭ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಕಾಬೂಲ್: ಅಮೆರಿಕ ಅವಳಿ ಕಟ್ಟಡಗಳ ಮೇಲೆ ಉಗ್ರರ ದಾಳಿಯಾಗಿ 20 ವರ್ಷವಾದ ಹಿನ್ನೆಲೆ ಶೋಕ ದಿನ ಎಂದು ಪರಿಗಣಿಸಿದ್ದು, ತಾಲಿಬಾನ್ ಪದಗ್ರಹಣ ಕಾರ್ಯಕ್ರಮಕ್ಕ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತಾಲಿಬಾನ್ ಸರ್ಕಾರ ಪದಗ್ರಹಣ ಸಮಾರಂಭ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಯಾಗಿದೆ.

ಅಫ್ಘಾನಿಸ್ತಾನದಲ್ಲಿ ಶನಿವಾರ ತಾಲಿಬಾನ್ ಸರ್ಕಾರದ ಪದಗ್ರಹಣ ಸಮಾರಂಭ ನಡೆಯಬೇಕಿತ್ತು.

ಶೋಕ ದಿನ ಹಿನ್ನೆಲೆಯಲ್ಲಿ ತಾಲಿಬಾನ್ ಸರ್ಕಾರ ಪದಗ್ರಹಣ ಸಮಾರಂಭ ರದ್ದುಗೊಳಿಸುವಂತೆ ಅಮೆರಿಕ ಹಾಗೂ ನ್ಯಾಟೋ ಮೈತ್ರಿ ರಾಷ್ಟ್ರಗಳು ಕತಾರ್ ಮೇಲೆ ಒತ್ತಡ ಹಾಕಿವೆ. ಈ ಒತ್ತಾಯಕ್ಕೆ ಮಣಿದು ತಾಲಿಬಾನ್ ತನ್ನ ಸರ್ಕಾರದ ಪದಗ್ರಹಣ ಸಮಾರಂಭವನ್ನ ಮುಂದೂಡಿದೆ.

ತಾಲಿಬಾನ್ ತನ್ನ ಸರ್ಕಾರ ರಚನೆ ಕಾರ್ಯಕ್ರಮಕ್ಕೆ ಚೀನಾ, ರಷ್ಯಾ, ಇರಾನ್, ಟರ್ಕಿ ಮತ್ತು ಕತಾರ್ ದೇಶಗಳಿಗೆ ಆಹ್ವಾನ ನೀಡಿತ್ತು. ರಷ್ಯಾ ದೇಶ ತಾನು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವುದಾಗಿ ಸ್ಪಷ್ಟವಾಗಿ ಹೇಳಿತ್ತು. ರಾಜತಾಂತ್ರಿಕ ಮಟ್ಟದ ಅಧಿಕಾರಿಗಳು ಪ್ರತಿನಿಧಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರಷ್ಯಾ ಹೇಳಿತ್ತು. ಆದರೆ ಕೊನೆಯ ಕ್ಷಣದಲ್ಲಿ ರಷ್ಯಾ ತನ್ನ ನಿರ್ಧಾರ ಬದಲಿಸಿದೆ. ಹೀಗಾಗಿ, ತಾಲಿಬಾನ್ ತನ್ನ ಸರ್ಕಾರದ ಪದಗ್ರಹಣ ಕಾರ್ಯಕ್ರಮ ಮುಂದೂಡಿದೆ.

Leave a Reply

Your email address will not be published. Required fields are marked *