Tuesday, 7th July 2020

ತಂತ್ರಜ್ಞಾನದ ಹಿರಿಮೆಗೆ : ಹೆಬ್ಬೆಟ್ಟಿನ ಗರಿಮೆ

* ವಸಂತ ಗ ಭಟ್
ಕೆಲವು ದಶಕಗಳ ಹಿಂದೆ ಅನಕ್ಷರಸ್ಥರು ಸಹಿ ಮಾಡುವ ಬದಲು ಹೆಬ್ಬೆೆಟ್ಟಿಿನ ರೇಖೆಗಳನ್ನು ಮೂಡಿಸಿ, ತಮ್ಮ ಒಪ್ಪಿಿಗೆಯನ್ನು ಸೂಚಿಸುತ್ತಿಿದ್ದರು. ಹೆಬ್ಬೆೆಟ್ಟು ಎಂದರೆ, ಏನೂ ಅರಿಯದ ವ್ಯಕ್ತಿಿ ಎಂಬ ತಮಾಷೆಯೂ ನಡೆಯುತ್ತಿಿತ್ತು. ಇಂದು ಕಾಲ ಬದಲಾಗಿದೆ. ಅತ್ಯಾಾಧುನಿಕ ಸಹಿ ಅಥವಾ ಗುರುತಿನ ರೂಪದಲ್ಲಿ ಹೆಬ್ಬೆೆಟ್ಟಿಿನ ರೇಖೆಗಳು ಉಪಯೋಗಿಸಲ್ಪಡುತ್ತಿಿವೆ. ಮೊಬೈಲ್‌ಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ಬೆರಳಚ್ಚು ಬಳಸುವ ಮರ್ಮದ ಕುರಿತು ಈ ಬರಹ, ಹೆಬ್ಬೆೆಟ್ಟಿಿನ ಮಹತ್ವವನ್ನು ತಿಳಿಹೇಳುತ್ತಿಿದೆ.

ಇಂದು ಮೊಬೈಲ್ ಫೋನ್‌ಗಳು ಕೇವಲ ಕರೆ ಮಾಡುವುದಕ್ಕೆೆ ಅಥವಾ ಸಂದೇಶಗಳನ್ನು ಕಳುಹಿಸುವುದಕ್ಕೆೆ ಮೀಸಲಾಗಿಲ್ಲ. ನಮ್ಮ ಖಾಸಗಿ ಫೋಟೋಗಳು, ಪಾಸ್ವರ್ಡ್ ಗಳು, ಕೆಲವೊಮ್ಮೆೆ ಬ್ಯಾಾಂಕ್ ಖಾತೆಯ ವಿವರಗಳು, ಅತ್ಯಾಾಪ್ತರೊಟ್ಟಿಿಗಿನ ವಾಟ್ಸಪ್, ಮೇಸ್ಸೆೆಂಜರ್ ಸಂದೇಶಗಳು ಹೀಗೆ ಹತ್ತು ಹಲವು. ಸುಮ್ಮನೆ ತಮಾಷೆಗೆ ಹೇಳುವುದಾದರೆ ಮನೆ ಕೊಳ್ಳೆೆ ಹೊಡಿದರೆ ಆಗುವ ನಷ್ಟಕ್ಕಿಿಂತ ಎಷ್ಟೋೋ ಬಾರಿ ಮೊಬೈಲ್ ಕದ್ದರೆ ಹೆಚ್ಚು ನಷ್ಟ ಮತ್ತು ಆತಂಕವಾಗುತ್ತದೆ. ಇಷ್ಟು ಮುಖ್ಯವಾದಂತಹ ಮೊಬೈಲ್‌ಗಳನ್ನು ರಕ್ಷಿಸಲು ಮೊಬೈಲ್ ತಯಾರಾಕ ಕಂಪನಿಗಳು ಸಾಧ್ಯವಾದಷ್ಟು ಭದ್ರತಾ ವ್ಯವಸ್ಥೆೆಗಳನ್ನು ರೂಪಿಸುತ್ತಲೇ ಇವೆ. ಪಾಸ್ವರ್ಡ್, ಪ್ಯಾಾಟರ್ನ್, ಬೆರಳಚ್ಚು, ಮತ್ತು ಇತ್ತೀಚೆಗೆ ಆಪಲ್ ಫೋನ್‌ಗಳಲ್ಲಿ ಪ್ರಖ್ಯಾಾತಿಯಾಗಿರುವ ಫೇಸ್ ಐಡಿ ಅಥವಾ ಬಳಕೆದಾರನ ಮುಖವನ್ನಾಾದರಿಸಿ ವ್ಯವಹಾರಿಸುವ ಭದ್ರತಾ ವ್ಯವಸ್ಥೆೆ.

ಫೇಸ್ ಐಡಿ ಆಪಲ್ ಹೊರತುಪಡಿಸಿ ಇನ್ನಿಿತರ ಮೊಬೈಲ್‌ಗಳಲ್ಲಿ ಅಷ್ಟು ವ್ಯವಸ್ತಿಿತವಾಗಿ ಕಾರ್ಯ ನೀರ್ವಹಿಸದ ಕಾರಣ ಇಂದಿಗೂ ಅತಿ ಹೆಚ್ಚು ನಂಬಿಕಸ್ಥ ಭದ್ರತಾ ವ್ಯವಸ್ಥೆೆ ಯೆಂದರೆ ಅದು ಬೆರಳಚ್ಚು. ಯಾಕೆಂದರೆ ನಿಮ್ಮ ಬೆರಳಚ್ಚನ್ನು ನಕಲು ಮಾಡುವುದು ಅಷ್ಟು ಸುಲಭದ ಕೆಲಸವಲ್ಲ.

ಇಂದು ಮಾರುಕಟ್ಟೆೆಯಲ್ಲಿರುವ ಹೆಚ್ಚಿಿನ ಮೊಬೈಲ್‌ಗಳ ಬೆರಳಚ್ಚು ಭದ್ರತಾ ವ್ಯವಸ್ಥೆೆ ಮೊಬೈಲ್‌ನ ಹಿಂಭಾಗದಲ್ಲಿದೆ. ಇದಕ್ಕೆೆ ಮುಖ್ಯ ಕಾರಣ ಮೊಬೈಲ್‌ನ ಮುಂಭಾಗದಲ್ಲಿರುವ ಜಾಗದ ಕೊರತೆ. ಸಂಪೂರ್ಣ ಮೊಬೈಲ್ ಪರದೆಯನ್ನು ಬಳಕೆದಾರನ ಬಳಕೆಗೆ ಮೀಸಲಿಡಬೇಕು ಎನ್ನುವ ಮೊಬೈಲ್ ತಯಾರಾಕಾ ಕಂಪನಿಯ ಉದ್ದೇಶದಿಂದ ಮುಂಭಾಗದ ಕ್ಯಾಾಮೆರಾ ಕೂಡ ಈಗಿನ ದುಬಾರಿ ಮೊಬೈಲ್‌ಗಳಲ್ಲಿ ಒಳಗೆ ಅಡಗಿದ್ದು ಯಾವಾಗ ಅವಶ್ಯಕವೋ ಆಗ ಮಾತ್ರ ಹೊರಬರುತ್ತದೆ. ಅಂತಹದರಲ್ಲಿ ಬೆರಳಚ್ಚು ಕಂಡು ಹಿಡಿಯುವ ವ್ಯವಸ್ಥೆೆಯನ್ನು ಮೊಬೈಲ್‌ನ ಮುಂಭಾಗದಲ್ಲಿಡಲು ಹೇಗೆ ಸಾಧ್ಯ ? ಆದರೆ ದಿನಕ್ಕೆೆ ನೂರಾರು ಬಾರಿ ಮೊಬೈಲ್‌ಅನ್ನು ಓಪೆನ್ ಮಾಡಿ ಚೆಕ್ ಮಾಡುವ ಈಗಿನ ಯುವ ಜನತೆಗೆ ಪ್ರತಿ ಬಾರಿಯೂ ಹಿಂಬದಿಯಲ್ಲಿರುವ ಭದ್ರತಾ ವ್ಯವಸ್ಥೆೆಯಲ್ಲಿ ಬೆರಳಚ್ಚನ್ನು ದಾಖಲಿಸುವುದು ಕೂಡ ಅಷ್ಟು ಬಳಕೆದಾರ ಸ್ನೇಹಿ ವ್ಯವಸ್ಥೆೆಯಲ್ಲ.

ಇದನ್ನರಿತ ಕೆಲವು ಮೊಬೈಲ್ ತಯಾರಾಕಾ ಕಂಪನಿಗಳು ಇಂದು ಮೊಬೈಲ್ ಪರದೆಯಲ್ಲೇ ಬೆರಳಚ್ಚನ್ನು ಕಂಡು ಹಿಡಿಯುವ ವ್ಯವಸ್ಥೆೆಯನ್ನು ರೂಪಿಸಿವೆ. ಒನ್ ಪ್ಲಸ್ 6ಟಿ, ಒನ್ ಪ್ಲಸ್ 7-7ಟಿ, ಒಪ್ರೋೋ ಕೆ1, ವಿವೋ ವಿ 11 ಪ್ರೊೊ ಇನ್ನಿಿತರ ಮೊಬೈಲ್ ಗಳಲ್ಲಿ ಈ ಸೌಲಭ್ಯವಿದೆ.

ಆಪ್ಟಿಕಲ್ ಹಾಜರಾತಿ
ಮೊಬೈಲ್ ಪರದೆ ಹೇಗೆ ಬೆರಳಚ್ಚನ್ನು ಕಂಡುಹಿಡಿಯುತ್ತದೆ ಎನ್ನುವುದನ್ನು ಅರಿಯುವ ಮೊದಲು ಬೆರಳಚ್ಚು ಭದ್ರತಾ ವ್ಯವಸ್ಥೆೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಅರಿಯುವುದು ಅತ್ಯಾಾವಶ್ಯಕ. ಮುಖ್ಯವಾಗಿ ಬೆರಳಚ್ಚನ್ನು ಕಂಡು ಹಿಡಿಯಲು ಎರಡು ವಿಧದ ವ್ಯವಸ್ಥೆೆಯನ್ನು ಬಳಸಲಾಗುತ್ತದೆ. ಮೊದಲನೆಯದು ಆಪ್ಟಿಿಕಲ್. ಹೆಚ್ಚಿಿನ ಕಾರ್ಯಾಲಯಗಳಲ್ಲಿ ಹಾಜರಿಗೋಸ್ಕರ ಅಥವಾ ಬಾಗಿಲು ತೆಗೆಯುವುದಕ್ಕೋೋಸ್ಕರ ಬೆರಳಚ್ಚನ್ನು ಗುರುತು ಹಿಡಿಯುವಲ್ಲಿ ಬಳಕೆಯಾಗುವುದೇ ಇದೆ ವ್ಯವಸ್ಥೆೆ.

ನಾವು ಮೊದಲ ಬಾರಿ ನಮ್ಮ ಬೆರಳಚ್ಚನ್ನು ನೀಡಿದ ತಕ್ಷಣ ಅದರ ಒಂದು ಚಿತ್ರವನ್ನೂ ತೆಗೆದುಕೊಳ್ಳುವ ಈ ವ್ಯವಸ್ಥೆೆ ಅದನ್ನು ತನ್ನ ಆಂತರಿಕ ಮೆಮೊರೀ ಯಲ್ಲಿ ದಾಖಲಿಸಿಕೊಳ್ಳುತ್ತದೆ. ಮತ್ತು ನಾವು ಪ್ರತಿಬಾರಿ ಬೆರಳಚ್ಚು ನೀಡಿದ ತಕ್ಷಣ ದಾಖಲಾದ ಬೆರಳಚ್ಚಿಿನೊಂದಿಗೆ ಹೋಲಿಸಿ ನೀವು ಕಾರ್ಯಾಲಯದ ನಿಜವಾದ ಉದ್ಯೋೋಗೀ ಹೌದೊ ಅಲ್ಲವೋ ಎಂಬುದನ್ನೂ ಕಂಡು ಹಿಡಿಯುತ್ತದೆ. ಈ ವ್ಯವಸ್ಥೆೆ ಸಂಪೂರ್ಣ ಸುರಕ್ಷಿತವಾದುದಲ್ಲ, ಇದನ್ನು ಬಳಸುವ ಹೆಚ್ಚಿಿನವರು ಗಮನಿಸಿರಬಹುದು. ನಿಮ್ಮ ಬೆರಳು ಜಿಡ್ಡಿಿನಿಂದ ಕೂಡಿದ್ದರೆ ಅಥವಾ ಒದ್ದೆಯಾಗಿದ್ದರೆ ಅಥವಾ ಬೆರಳಿನ ಚರ್ಮ ಸ್ವಲ್ಪ ಕಿತ್ತು ಹೋಗಿದ್ದರೆ ನಿಮ್ಮ ಬೆರಳಚ್ಚನ್ನು ಈ ವ್ಯವಸ್ಥೆೆ ಕಂಡು ಹಿಡಿಯದೆ ಇರಬಹುದು. ಅಲ್ಲದೆ ಯಾವುದಾದರೂ ಪ್ಲಾಾಸ್ಟಿಿಕ್ ಮೇಲೆ ನಿಮ್ಮ ಬೆರಳಚ್ಚನ್ನು ದಾಖಲಿಸಿ ಅದನ್ನು ಭದ್ರತಾ ವ್ಯವಸ್ಥೆೆಯ ಮೇಲಿಟ್ಟು ಸಹ ಕೆಲವೊಂದು ಬಾರಿ ಮೋಸಮಾಡಬಹುದು.

ಎರಡನೆಯ ವ್ಯವಸ್ಥೆೆ ಕೆಪ್ಯಾಾಸಿಟಿವ್. ಇದರಲ್ಲಿ ಬೆರಳಿನ ಚಿತ್ರ ತೆಗೆಯುವ ಬದಲು ನಮ್ಮ ಬೆರಳಿನ ಸೂಕ್ಷ್ಮ ರೇಖೆಗಳು ಮತ್ತು ಅದರ ನಡುವೆ ಇರುವ ಅಂತರ ಹಾಗೂ ಉಬ್ಬು ತಗ್ಗು ಗಳನ್ನೊೊಳಗೊಂಡ ಒಂದು ಗ್ರಾಾಫ್ ಅನ್ನು ಈ ವ್ಯವಸ್ಥೆೆ ಸಿಡ್ಡಪಡಿಸಿಕೊಳ್ಳುತ್ತದೆ. ಮೊದಲ ಬಾರಿ ಆಪ್ಟಿಿಕಲ್ ರೀತಿಯಲ್ಲಿಯೇ ಗ್ರಾಾಫ್ ಅನ್ನು ತನ್ನ ಆಂತರಿಕ ಮೆಮೊರೀ ಯಲ್ಲಿ ದಾಖಲಿಸಿಕೊಳ್ಳುವ ಈ ವ್ಯವಸ್ಥೆೆ, ಮುಂದೆ ಪ್ರತಿ ಬಾರಿ ನಾವು ಬೆರಳಿಟ್ಟಾಾಗ ಈ ಗ್ರಾಾಫ್ ನೋಡನೆ ಹೋಲಿಸಿ ಬಳಕೆದಾರನನ್ನು ಕಂಡು ಹಿಡಿಯುತ್ತದೆ. ಮೊಬೈಲ್ ನ ಹಿಂಬದಿಯ ಬೆರಳಚ್ಚು ಭದ್ರತಾ ವ್ಯವಸ್ಥೆೆಯಲ್ಲಿ ಬಳಕೆಯಾಗುವುದು ಇದೆ ವ್ಯವಸ್ಥೆೆ. ಇದು ಮೊದಲನೆಯದಿಕ್ಕಿಿಂತ ಹೆಚ್ಚು ಸುರಕ್ಷಿತ. ಇದನ್ನು ಅಷ್ಟು ಸುಲಭವಾಗಿ ಭೇದಿಸಲಾಗುವುದಿಲ್ಲ.

ಒಎಲ್‌ಇಡಿ ಸಹಕಾರ
ಈಗ ಮತ್ತೆೆ ಮೊಬೈಲ್ ಪರದೆಯ ವಿಚಾರಕ್ಕೆೆ ಬರೋಣ. ಮೊಬೈಲ್ ಪರದೆಯಲ್ಲೇ ಬೆರಳಚ್ಚು ಕಂಡು ಹಿಡಿಯುವ ವ್ಯವಸ್ಥೆೆಯನ್ನು ರೂಪಿಸಬೇಕು ಎಂದು ಬಹಳಷ್ಟು ಮೊಬೈಲ್ ತಯಾರಾಕಾ ಕಂಪನಿಗಳು ಹಲವು ವರ್ಷದಿಂದ ಪ್ರಯತ್ನಿಿಸುತ್ತಿಿದ್ದವು. ಮೊದಲು ಮೊಬೈಲ್ ಪರದೆಯಲ್ಲಿ ಬಳಕೆಯಾಗುತ್ತಿಿದ್ದಂತಹ ಎಲ್ಈಡಿ ತಂತ್ರಜ್ಞಾಾನದಲ್ಲಿ ಇದನ್ನು ರೂಪಿಸುವುದು ಅತಿ ಕಷ್ಟ. ಕಾರಣ ಎಲ್ಈಡಿ ಪರದೆಯಲ್ಲಿ ಮೊಬೈಲ್ ಪರದೆಯ ಹಿಂದೆ ಚಿಕ್ಕದಾದಂತಹ ಎಲ್ಈಡಿ ಬಲ್ಬ್ ಗಳಿರುತ್ತವೆ. ಇಂತಹ ವ್ಯವಸ್ಥೆೆಯಲ್ಲಿ ಪರದೆ ಮತ್ತು ಎಲ್ಈಡಿ ಯ ನಡುವೆ ಯಾವುದೇ ಬೆರಳಚ್ಚು ಕಂಡುಹಿಡಿಯುವ ಸೆರ್ನ್ಸ ಗಳನ್ನು ಜೋಡಿಸುವುದು ಅಸಾಧ್ಯ. ನಂತರದ ದಿನಗಳಲ್ಲಿ ಬಂದಿದ್ದೆ ಒಎಲ್ಈಡಿ ಪರದೆ, ಈ ವ್ಯವಸ್ಥೆೆಯಲ್ಲಿ ಎಲ್ಈಡಿ ರೀತಿಯ ಲೈಟ್ ಗಳು ಬಳಕೆಯಾಗದ ಕಾರಣ ಮೊಬೈಲ್ ಪರದೆಯ ಹಿಂದೆ ಬೆರಳಚ್ಚು ಕಂಡುಹಿಡಿಯುವ ಸೆರ್ನ್ಸ ಗಳನ್ನು ಬಳಸಬಹುದು.

ಒಎಲ್ಈಡಿ ಪರದೆಯ ಹಿಂದೆ ಆಪ್ಟಿಿಕಲ್ ಬೆರಳಚ್ಚು ಕಂಡು ಹಿಡಿಯುವಂತಹ ವ್ಯವಸ್ಥೆೆಯನ್ನು ಮೊಬೈಲ್ ತಯಾರಾಕ ಕಂಪನಿಗಳು ಸಿದ್ದಪಡಿಸಿದವು. ಇದನ್ನು ಬಳಸಿದವರಿಗೆ ಗೊತ್ತಿಿರುತ್ತದೆ ನಿಮ್ಮ ಮೊಬೈಲ್ ಪರದೆಯ ಯಾವ ಭಾಗದಲ್ಲಾದರೂ ನೀವು ನಿಮ್ಮ ಬೆರಳಚ್ಚನ್ನು ದಾಖಲಿಸಲಾಗುವುದಿಲ್ಲ ಇದಕ್ಕೆೆಂದೆ ಒಂದು ಜಾಗವಿರುತ್ತದೆ, ಸಾಮಾನ್ಯವಾಗಿ ಪರದೆಯ ಕೆಳಬಾಗದಲ್ಲಿ. ನೀವು ಮೊದಲ ಬಾರಿ ಬೆರಳಚ್ಚನ್ನು ದಾಖಲಿಸುವಾಗ ಆ ಜಾಗದ ಮೇಲೆ ಬೆರಳಿಟ್ಟ ತಕ್ಷಣ ಒಂದು ಬೆಳಕು ನಿಮ್ಮ ಬೆರಳಿನ ಸುತ್ತ ಹಾದು ಹೋಗಿ ನಿಮ್ಮ ಬೆರಳಿನ ಚಿತ್ರವನ್ನೂ ಮೊಬೈಲ್ ಮೆಮೋರಿಯಲ್ಲಿ ದಾಖಲಿಸಿ ಕೊಳ್ಳುತ್ತದೆ. ನಂತರ ನೀವು ಯಾವಾಗ ಆ ಜಾಗದಲ್ಲಿ ಬೆರಳಿಟ್ಟರು ನಿಮ್ಮ ಬೆರಳಿನ ಚಿತ್ರವನ್ನೂ ದಾಖಲಿಸಿ ಅದನ್ನು ಮೆಮೋರಿಯಲ್ಲಿ ದಾಖಲಾಗಿರುವ ಚಿತ್ರದೊಡನೆ ತಾಳೆ ಮಾಡಿ ನಿಜವಾದ ಬಳಕೆದಾರ ನೀವು ಹೌದೊ ಅಲ್ಲವೋ ಎಂದು ನಿರ್ಧರಿಸುತ್ತದೆ. ಸಧ್ಯ ಮಾರುಕಟ್ಟೆೆಯಲ್ಲಿರುವ ಹೆಚ್ಚಿಿನ ಅಂರ್ಡ ಸ್ಕ್ರೀನ್ ಫಿಂಗರ್ ಪ್ರಿಿಂಟ್ ತಂತ್ರಜ್ಞಾಾನ ಬಳಸುವುದು ಇದೆ ವ್ಯವಸ್ಥೆೆಯನ್ನು. ಮೇಲೆ ಹೆಸರಿಸಿದ ಒನ್ ಪ್ಲಸ್ 6-6ಟಿ-7, ಒಪ್ಪೋೋ ಕೆ1 ಇವೆಲ್ಲವೂ ಸಹ ಇದೆ ವ್ಯವಸ್ಥೆೆಯನ್ನು ಬಳಸುವುದು.

ಕೆಪ್ಯಾಾಸಿಟಿವ್ ಮತ್ತು ಆಪ್ಟಿಿಕಲ್ ಹೊರತಾಗಿ ಇತ್ತೀಚಿಗೆ ಇನ್ನೊೊಂದು ತಂತ್ರಜ್ಞಾಾನ ಮೊಬೈಲ್‌ನಲ್ಲಿ ಬೆರಳಚ್ಚು ಭದ್ರತಾ ವ್ಯವಸ್ಥೆೆಯಲ್ಲಿ ಮಹತ್ವದ ಪಾತ್ರವಹಿಸುತ್ತಿಿದೆ. ಅದೇ ಅಲ್ಟ್ರಾಾ ಸೋನಿಕ್ ವಿಧಾನ. ಕೆಪ್ಯಾಾಸಿಟಿವ್ ಮತ್ತು ಆಪ್ಟಿಿಕಲ್ ತಂತ್ರಜ್ಞಾಾನದಲ್ಲಿ ಬೆರಳಿನ ಚಿತ್ರವನ್ನೂ 2ಡಿ ಆಯಾಮ ದಲ್ಲಿ ಆಂತರಿಕ ಮೆಮರೀಯಲ್ಲಿ ದಾಖಲಿಸಿಕೊಂಡರೆ, ಅಲ್ಟ್ರಾಾ ಸೋನಿಕ್ ತಂತ್ರಜ್ನಾಾನದಲ್ಲಿ ನಾವು ಪರದೆಯ ಮೇಲೆ ಬೆರಳಿಟ್ಟ ತಕ್ಷಣ ಅಲ್ಟ್ರಾಾ ಸೋನಿಕ್ ತರಂಗಗಳು ನಮ್ಮ ಬೆರಳಿನ ಮೇಲೆ ಹಾದು ಹೋಗಿ ನಮ್ಮ ಬೆರಳಿನ 3ಡಿ ಆಯಮದ ಮ್ಯಾಾಪ್ ಅನ್ನು ಮೊಬೈಲ್ ಮೆಮೋರಿ ಯಲ್ಲಿ ದಾಖಲಿಸಿ ಕೊಳ್ಳುತ್ತದೆ. ಕೆಪ್ಯಾಾಸಿಟಿವ್ ಮತ್ತು ಆಪ್ಟಿಿಕಲ್ ಇವೆರಡಕ್ಕಿಿಂತಲೂ ಈ ತಂತ್ರಜ್ಞಾಾನ ಹೆಚ್ಚು ಭದ್ರತೆಯನ್ನು ಒದಗಿಸುತ್ತದೆ. ಸಧ್ಯ ಇದು ಸ್ಯಾಾಮ್ಸಂಗ್ ಎಸ್10 ನಂತಹ ದುಬಾರಿ ಫೋನ್ ಗಳಲ್ಲಿ ಮಾತ್ರ ಲಭ್ಯವಿದೆ.

ಸಧ್ಯ ಕೇವಲ ಒಂದು ಜಾಗದಲ್ಲಿ ಬೆರಳಿಟ್ಟಾಾಗ ಮಾತ್ರ ಬೆರಳಚ್ಚನ್ನು ಕಂಡು ಹಿಡಿಯುಯುವ ವ್ಯವಸ್ಥೆೆಯಿದ್ದು, ಇಡೀ ಪರದೆಯಲ್ಲಿ ಎಲ್ಲಿ ಬೇಕಾದರೂ ಬೆರಳಿಟ್ಟು ಮೊಬೈಲ್ ಅನ್ನು ಆನ್ ಲಾಕ್ ಮಾಡುವ ದಿನಗಳು ಖಂಡಿತ ದೂರವಿಲ್ಲ.

Leave a Reply

Your email address will not be published. Required fields are marked *