Monday, 21st September 2020

ತಾಯಿಯ ಪಕ್ಕ ಕುಳಿತರೆ,ದೇಗುಲಕ್ಕೆ ಹಾಗಬೇಕಿಲ!

ಎಂದಿನಂತೆ ಆಫೀಸು ನಡೆಯುತ್ತಿತ್ತು. ಎಲ್ಲರೂ ಕೆಲಸಕ್ಕೆೆ ಬಂದಿದ್ದರು. ಆದರೆ ಒಂದೇ ರೀತಿ ಕೆಲಸ, ಸಮಯ, ಆಫೀಸು ಎಲ್ಲವನ್ನೂ ನೋಡಿ ಬೇಸತ್ತಿದ್ದ ನೌಕರರು ಹೊಸತೇನನ್ನೋ ಹುಡುಕುತ್ತಿದ್ದರು. ತಮಗೆ ಪ್ರಮೋಶನ್ ಇಲ್ಲ, ಸಂಬಳ ಹೆಚ್ಚಾಗಿಲ್ಲ, ರಜೆ ಸಿಗುತ್ತಿಲ್ಲ, ನನ್ನ ಯಶಸ್ಸನ್ನು ಯಾರೋ ತಡೆಹಿಡಿಯುತ್ತಿದ್ದಾರೆ. ಹೀಗೆ ಒಬ್ಬೊಬ್ಬರದು ಒಂದೊಂದು ಸಮಸ್ಯೆೆ. ಯಾವಾಗಲೂ ಟೆನ್ಶನ್‌ನಲ್ಲಿಯೇ ಇರುತ್ತಿದ್ದರು.

ಇದನ್ನೆೆಲ್ಲ ಗಮನಿಸಿದ ಮಾಲೀಕ ಉಪಾಯವೊಂದನ್ನು ಮಾಡಿದ. ಕೆಲ ದಿನಗಳ ಬಳಿಕ ‘ಆಫೀಸಿನಲ್ಲಿ ನೀವು ಯಶಸ್ಸು ಸಾಧಿಸದಂತೆ ನಿಮ್ಮನ್ನು ತಡೆಯುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ ಎಲ್ಲರೂ ಅವನ ಅಂತಿಮ ದರ್ಶನಕ್ಕೆ ‘ಆಫೀಸಿನ ಜಿಮ್ ರೂಮಿನಲ್ಲಿ’ ಎಂದು ಮಾಲೀಕ ಹೇಳಿದ. ಎಲ್ಲರಿಗೂ ಆ ವ್ಯಕ್ತಿಿ ಯಾರು ಎಂಬ ಕುತೂಹಲ, ನಮ್ಮ ಯಶಸ್ಸಿಗೆ ಕಣ್ಣು ಹಾಕಿದರೆ ಹೀಗೇ ಆಗೋದು ಎಂದೆಲ್ಲಾ ಮಾತನಾಡಿದರು. ಜಿಮ್ ರೂಮಿನತ್ತ ಎಲ್ಲರೂ ಧಾವಿಸಿದರು. ಶವ ಪೆಟ್ಟಿಗೆ ಇತ್ತು. ಎಲ್ಲರಿಗೂ ಆ ವ್ಯಕ್ತಿಿಯನ್ನು ನೋಡಬೇಕು. ಆದರೆ ಪೆಟ್ಟಿಗೆ ತೆಗೆಯಲು ಭಯ. ಒಬ್ಬಾಾತ ಧೈರ್ಯ ಮಾಡಿ ಪೆಟ್ಟಿಗೆ ತೆಗೆದು ನೋಡಿ, ನಿಂತಲ್ಲೇ ನಿಂತು ಬಿಟ್ಟ. ಅವನಿಗೆ ಮಾತೇ ಹೊರಡಲಿಲ್ಲ. ಹಾಗಾದರೆ ಆ ಯಾರದ್ದು? ಅಸಲಿಗೆ ಅಲ್ಲಿ ಯಾವ ಶವವೂ ಇರಲಿಲ್ಲ. ಇದ್ದದ್ದು ಕನ್ನಡಿ ಮಾತ್ರ! ಕನ್ನಡಿಯಲ್ಲಿ ತನ್ನನ್ನು ತಾನೇ ನೋಡಿ ಆತ ಹೆದರಿದ್ದ. ತಾನು ಮುಂದೆ ಹೋಗದಂತೆ ತಡೆದಿದ್ದು ಯಾರು ಎಂದು ತಿಳಿಯಿತು.

ಹೌದು ನಮ್ಮನ್ನು ಯಾರೂ ತಡೆಯಲಾಗುವುದಿಲ್ಲ. ಹೆಜ್ಜೆೆ ಇಡಲು ಹಿಂದು ಮುಂದು ನೋಡುವವರು ನಾವೇ. ಯಶಸ್ಸು ಸಾಧಿಸಲಾಗದೇ ಒದ್ದಾಡುತ್ತೀರೆಂದರೆ, ಬದಲಾಗಬೇಕಾದ್ದು ನೀವೆ. ಇಲ್ಲಿ ಬದಲಾವಣೆ ಸಕಾರಾತ್ಮಕವಾಗಿರಬೇಕು ಆಗ ಮಾತ್ರ ಯಶಸ್ಸು ನಿಮ್ಮ ಕೈಗೆಟಕುತ್ತದೆ.

ಒಬ್ಬ ಹುಡುಗನಿದ್ದ. ಸಾಮಾನ್ಯ ಅವನು ಒಂದು ವಿಷಯದಲ್ಲೂ ಪಾಸಾಗುತ್ತಿಿರಲಿಲ್ಲ. ಕ್ರೀಡೆಗೆ ನಿಂತರೆ ಅವನ ಕಳಪೆ ಪ್ರದರ್ಶನದಿಂದಲೇ ತಂಡ ಸೋತುಹೋಗುತ್ತಿಿತ್ತು. ತಂಡವಾಗಿ ಹೋದರೂ ಅವನು ಉತ್ತಮ ಎನಿಸಿಕೊಳ್ಳಲಿಲ್ಲ. ವೈಯಕ್ತಿಿಕವಾಗಿ ಕೂಡ ಅಷ್ಟಕ್ಕಷ್ಟೆೆ. ಇನ್ನು ಶಾಲೆಯಲ್ಲಂತೂ ಯಾವ ಶಿಕ್ಷಕರೂ ಅವನನ್ನು ಅಷ್ಟಾಾಗಿ ಗಮನಿಸುತ್ತಿಿರಲಿಲ್ಲ. ಈ ಹುಡುಗನ ಬುದ್ಧಿಿಯೇ ಇಷ್ಟು. ಇವನನ್ನು ಸುಧಾರಿಸಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ್ದರು. ಸ್ನೇಹಿತರೂ ಅವನನ್ನು ಹತ್ತಿಿರ ಸೇರಿಸುತ್ತಿಿರಲಿಲ್ಲ. ಯಾರಾದರೂ ಅವನನ್ನು ಮಾತನಾಡಿಸಿಬಿಟ್ಟರೆ ಅವನಿಗೇ ಆಶ್ಚರ್ಯವಾಗಿ ಬಿಡುತ್ತಿಿತ್ತು. ತಾನು ಯಾವತ್ತಿಿದ್ದರೂ ಹೀಗೆಯೇ, ಕೈಲಾಗದವ. ತನ್ನ ಯಾರೂ ಇಷ್ಟಪಡುವುದಿಲ್ಲ. ಇರಲಿ, ನಾನಿರುವುದೇ ಹೀಗೆ ಅಂದುಕೊಂಡು ಆತ ಕಾಲೇಜು ತಲುಪಿದ. ಅಲ್ಲಿಯೂ ಯಾವ ಹುಡುಗಿಯರೂ ಅವನನ್ನು ಇಷ್ಟಪಡಲಿಲ್ಲ. ಅವನೂ ಪ್ರಯತ್ನಿಿಸಲಿಲ್ಲ. ಅಲ್ಲಿಯೂ ಫೇಲ್ ಆಗುತ್ತಿಿದ್ದ. ಅವನು ಒಂದೇ ಒಂದು ಹುಡುಗಿಯ ಹತ್ತಿಿರವೂ ನಗುತ್ತಿಿರಲಿಲ್ಲ. ಯಾವಾಗಲೂ ತನ್ನ ಲೋಕದಲ್ಲಿ ತಾನಿದ್ದು ಬಿಡುತ್ತಿಿದ್ದ. ಯಾರನ್ನೂ ಇಂಪ್ರೆೆಸ್ ಮಾಡಲೂ ಹೋಗುತ್ತಿಿರಲಿಲ್ಲ. ತನ್ನ ಬಗ್ಗೆೆಯೂ ಬೇಸರಪಟ್ಟುಕೊಳ್ಳುತ್ತಿಿರಲಿಲ್ಲ. ನಾನಿರುವುದೇ ಹೀಗೆ ಎಂದು ಒಪ್ಪಿಿಕೊಂಡಿದ್ದು ಬಿಟ್ಟ.

ಆ ಹುಡುಗನ ಒಂದೇ ಒಂದು ಪ್ರತಿಭೆ ಆತನಿಗೆ ತುಂಬ ಸುಂದರವಾಗಿ ಚಿತ್ರ ಬಿಡಿಸಲು ಬರುತ್ತಿಿತ್ತು. ಒಂದಿಷ್ಟು ಕಾರ್ಟೂನ್ ಬಿಡಿಸಿ ಶಾಲೆಯ ಮ್ಯಾಾಗಜಿನ್‌ಗೆ ಕೊಟ್ಟ. ದುರಾದೃಷ್ಟವೆಂದರೆ ಅಲ್ಲಿಯೂ ಕಾರ್ಟೂನ್‌ಗಳನ್ನು ನಿರಾಕರಿಸಲಾಯಿತು. ಆದರೆ ಈ ಬಾರಿ ಅವನು ಬಿಡಲಿಲ್ಲ. ಅವನಿಗೆ ತಾನು ಉಳಿದೆಲ್ಲಕ್ಕಿಿಂತ ಚೆನ್ನಾಾಗಿ ಚಿತ್ರ ಬಿಡಿಸಬಲ್ಲೆೆ ಎಂಬುದು ಗೊತ್ತಿಿತ್ತು. ವಾಲ್‌ಟ್‌ ಡಿಸ್ನಿಿ ಸ್ಟುಡಿಯೋಗೆ ಕಳಿಸಿದ. ಅವನಿಗೆ ಈ ಬಾರಿ ಬಹಳ ನಿರೀಕ್ಷೆೆಯಿತ್ತು. ಆದರೆ ಈ ಸಲವೂ ಅವರಿಂದ ತಿರಸ್ಕೃತನಾದ! ಅಲ್ಲಿಗೆ ಅವನೊಬ್ಬ ಕೈಲಾಗದವ ಎಂಬುದು ಸ್ಪಷ್ಟವಾಯಿತು. ಹುಡುಗ ತೀರ್ಮಾನಿಸಿದ. ಆಯಿತು. ಇನ್ನೂ ಏನಾಗುವುದಿದೆ? ಸೋತಾಯಿತಲ್ಲ. ಇನ್ನು ಪ್ರಯತ್ನ ಮಾಡುತ್ತಲೇ ಇರುತ್ತೇನೆ. ಈ ಸಲ ನನ್ನ ಕಥೆಯನ್ನೇ ಹೇಳುತ್ತೇನೆ. ನನ್ನ ಸೋಲಿನ ಕಥೆ ಹೇಳುತ್ತೇನೆ ಅಂದುಕೊಂಡು ತನ್ನದೇ ಚಿತ್ರ ಬಿಡಿಸಿ, ತನ್ನದೇ ತಳಮಳಗಳನ್ನು ಕಾಮಿಕ್‌ಸ್‌ ಮಾಡಿದ. ಜನರು ಆತನ ಸೋಲಿನ ಜತೆಗೆ ತಮ್ಮನ್ನು ಹೋಲಿಸಿ ನೋಡಿಕೊಳ್ಳತೊಡಗಿದರು. ನೋಡನೋಡುತ್ತಿಿದ್ದಂತೆ ಆತ ಜನಪ್ರಿಿಯತೆ ಗಳಿಸತೊಡಗಿದ. ಆತನೇ ಅಮೆರಿಕದ ಪ್ರಸಿದ್ಧ ಕಾರ್ಟೂನಿಸ್‌ಟ್‌ ಚಾರ್ಲಸ್ ಸ್ಕಲ್‌ಸ್‌. ಅವನ ‘ಪೀನಟ್’ ಪುಸ್ತಕವನ್ನು ನಾವು ನೀವೆಲ್ಲ ನೋಡಿರುತ್ತೇವೆ.

ಎಲ್ಲರಿಗೂ ಒಂದೇ ಕಾಲಕ್ಕೆೆ ಒಳ್ಳೆೆಯ ಸಮಯವನ್ನು ಕೊಡುವುದಿಲ್ಲ. ಎಲ್ಲರಂತೆ ಯಶಸ್ಸು ಸಿಗಲಿಲ್ಲ ಎಂದರೆ ನಾವು ಯಾವಾಗಲೂ ಸೋಲುಣ್ಣುವವರು ಎಂದಲ್ಲ. ನಮ್ಮ ಸಮಯ ಬರುವವರೆಗೂ ಪ್ರಯತ್ನಿಿಸುತ್ತಲೇ ಇರಬೇಕು. ಪ್ರಯತ್ನಕ್ಕೆೆ ಫಲ ಕೊಡದೆ ಜೀವನ ಯಾರನ್ನೂ ಕಳುಹಿಸದು. ಸೋಲುಂಡರೂ ಪ್ರಯತ್ನಿಿಸುತ್ತಲೇ ಇರುವುದನ್ನು ಮರೆಯಬಾರದು. ಒಂದಲ್ಲ ಒಂದು ದಿನ ಫಲ ಸಿಕ್ಕೇ ಸಿಗುತ್ತದೆ. ಕಷ್ಟ, ಹತಾಶೆಗಳು ಎಲ್ಲರಿಗೂ ಕಟ್ಟಿಿಟ್ಟಿಿದ್ದೇ, ಆದರೆ ನಾವದನ್ನು ಹೇಗೆ ತೆಗೆದುಕೊಳ್ಳಬೇಕು ಎಂಬ ಆಯ್ಕೆೆ ಸದಾ ನಮಗಿರುತ್ತದೆ. ಕಷ್ಟ ಬಂದಾಗ, ಅತ್ತು, ಕರೆದು ರಂಪ ಮಾಡಿ, ಅಸಹಾಯಕರಾಗಿ ಕೂರದೆ ಸಹನೆಯಿಂದಿದ್ದು ನಾವು ಮಾಡುವುದನ್ನು ಮಾಡುತ್ತ ಹೋದರೆ ನಮ್ಮ ಪಾಲಿನದು ನಮಗೆ ಸಿಕ್ಕೇ ಸಿಗುತ್ತದೆ. ಭಗವಂತ ಕೊಟ್ಟ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಸಮಯ ತೆಗೆದುಕೊಂಡಷ್ಟೂ ನಮ್ಮ ಯಶಸ್ಸಿಿನ ದಿನಗಳು ದೂರವಾಗುತ್ತ ಹೋಗುತ್ತವೆ.

ಒಂದು ದೊಡ್ಡ ಕಂಪನಿಯ ಮ್ಯಾಾನೇಜರ್ ಹುದ್ದೆೆಗೆ ರಮೇಶ ಎಂಬುವನು ಅರ್ಜಿ ಹಾಕುತ್ತಾಾನೆ. ಹುದ್ದೆೆಗೆ ಬೇಕಾದಂಥ ಎಲ್ಲ ಅರ್ಹತೆ ಅವನಿಗಿರುತ್ತದೆ. ಪರೀಕ್ಷೆೆ ಮತ್ತು ಗುಂಪು ಸಂದರ್ಶನದಲ್ಲಿ ಪಾಸ್ ಆಗುತ್ತಾಾನೆ. ಕೊನೆಗೆ ಮಾತ್ರ ಉಳಿದಿರುತ್ತದೆ. ಕಂಪನಿಯ ನಿರ್ದೇಶಕರು ಸಂದರ್ಶನಕ್ಕೆೆ ತಯಾರಿ ನಡೆಸಿ ರಮೇಶನನ್ನು ಕರೆಯುತ್ತಾಾರೆ.
ನಿರ್ದೇಶಕ: ನೀನು ನಿನ್ನ ವಿದ್ಯಾಾಭ್ಯಾಾಸದ ಅವಧಿಯಲ್ಲಿ ವಿದ್ಯಾಾರ್ಥಿ ವೇತನ ಪಡೆದಿದ್ದೀಯಾ?
ರಮೇಶ: ಇಲ್ಲ.
ನಿರ್ದೇಶಕ: ಹಾಗಾದರೆ ನಿಮ್ಮ ತಂದೆ ಶಾಲೆಯ ಶುಲ್ಕ ಭರ್ತಿ ಮಾಡುತ್ತಿಿದ್ದರಾ?
ರಮೇಶ: ನಾನು ಮೂರು ವರ್ಷದವನಿದ್ದಾಾಗ ಅವರು ತೀರಿಕೊಂಡರು, ನನ್ನ ಅಮ್ಮ ನನ್ನನ್ನು ಓದಿಸಿದ್ದು ಎಂದ.
ನಿರ್ದೇಶಕ: ನಿಮ್ಮ ತಾಯಿ ಏನು ಮಾಡುತ್ತಿಿದ್ದಾಾರೆ?
ರಮೇಶ: ನನ್ನ ತಾಯಿ ಬಟ್ಟೆೆ ಒಗೆಯುವ ಕೆಲಸ ಎಂದ.

ರಮೇಶನ ತಾಯಿಯ ಕೆಲಸ ಕೇಳಿ ನಿರ್ದೇಶಕ, ರಮೇಶ ಅವರೆ ನಿನ್ನ ಕೈ ತೋರಿಸಿ ಎಂದರು. ರಮೇಶನ ಕೈ ಮೃದುವಾಗಿದ್ದವು. ನಿರ್ದೇಶಕ ಮತ್ತೆೆ ಪ್ರಶ್ನೆೆ ಕೇಳಲು ಶುರು ಮಾಡಿದರು.
ನಿನ್ನ ತಾಯಿಯ ಕೆಲಸದಲ್ಲಿ ಸಹಾಯ ಮಾಡುವುದಿಲ್ಲವೇ ನೀನು? ಇಲ್ಲ ಎಂದ ರಮೇಶ. ಸರಿ, ನಿನ್ನ ಕೆಲಸ ಖಾತ್ರಿಿಯಾಗಿದೆ. ಆದರೆ ಒಂದು ಷರತ್ತು. ನಿಮ್ಮ ತಾಯಿ ನಿನಗೋಸ್ಕರ ಬಟ್ಟೆೆ ಒಗೆದು ನಿನ್ನನ್ನು ಸಾಕಿದ್ದಾಾಳೆ ಎಂದರೆ ಅವರ ಕೈಯನ್ನು ತೊಳೆದು ಬಾ ಇಷ್ಟೇ ತಾನೆ ಎಂದು ರಮೇಶ, ಖುಷಿಯಲ್ಲೇ ಮನೆಗೆ ಹೋಗುತ್ತಾಾನೆ. ಬಂದ ತಕ್ಷಣ ಅಮ್ಮ ನನಗೆ ಕೆಲಸ ಸಿಕ್ಕಿಿದೆ ಎಂದು ತಾಯಿಯ ಕೈ ಹಿಡಿದುಕೊಳ್ಳುತ್ತಾಾನೆ. ನೋಡಿದರೆ ಬಟ್ಟೆೆ ಒಗೆದು ಒಗೆದು ಕೈತುಂಬಾ ಗುಳ್ಳೆೆಗಳು, ಹರಿದ ಗಾಯಗಳಾಗಿರುತ್ತವೆ. ನೋಡಿದಾಕ್ಷಣ ಮಗನಿಗೆ ಕಣ್ಣಿಿರು ಬರುತ್ತದೆ. ಕೈಯನ್ನು ಮೆಲ್ಲನೆ ಮುಟ್ಟಿಿ, ಶುಚಿಗೊಳಿಸುತ್ತಾನೆ.

ಹೌದು, ತಾಯಿ ಮಗನ ವಿದ್ಯಾಾಭ್ಯಾಾಸ, ಕುಟುಂಬ ನಿರ್ವಹಣೆಗಾಗಿ ದಿನಾಲೂ ಬಟ್ಟೆೆ ಒಗೆದು ಒಗೆದು ಕೈ ನೋವಾದರೂ ಅದೇ ಕೆಲಸ ಮುಂದುವರಿಸುತ್ತಾಾಳೆ. ನನಗೆ ದುಡ್ಡು ಬೇಕು, ಬೈಕ್, ಹಬ್ಬಕ್ಕೆೆ ಹೊಸ ಬಟ್ಟೆೆ, ಪಾಕೇಟ್ ಮನಿ ಕೇಳುವ ನಾವು ನನ್ನ ತಂದೆ, ತಾಯಿ ಏನು ಕೆಲಸ ಮಾಡುತ್ತಾಾರೆ, ಆ ಕೆಲಸದಿಂದ ಅವರ ಆರೋಗ್ಯ ಹೇಗಿದೆ ಎಂದು ಯಾವತ್ತಾಾದರೂ ಯೋಚಿಸಿದ್ದೇವೆಯಾ? ಮಕ್ಕಳ ಖುಷಿಗಾಗಿ ಪೋಷಕರು ಕಷ್ಟ ಪಡುತ್ತಾಾರೆ. ಆದರೆ ಒಂದು ದಿನವಾದರೂ ನಾವು ಅವರ ಪಕ್ಕ ಕುಳಿತು ಮಾತನಾಡಿದ್ದೇವೆಯಾ? ಅವರ ಹತ್ತಿಿರ ಏನು ಮಾತು ಎಂದು ಅಸಡ್ಡೆೆ ತೋರಿಸಿದ್ದೇ ಹೆಚ್ಚು. ತಂದೆ, ತಾಯಿಯ ಪಕ್ಕ ಕುಳಿತರೆ ದೇವಸ್ಥಾಾನಕ್ಕೂ ಹೋಗುವ ಅವಶ್ಯಕತೆ ಇಲ್ಲ.
ಆ ದಿನ ಹೆಂಡತಿ ಏನೋ ವಿಚಿತ್ರವಾಗಿ ವರ್ತಿಸುತ್ತಿಿದ್ದಾಾಳೆ ಎಂದೆನಿಸಿತ್ತು. ಅಡುಗೆ ಮನೆಯಲ್ಲಿ ಪಾತ್ರೆೆಗಳ ಸದ್ದು ಜೋರಾಗೇ ಕೇಳುತ್ತಿಿತ್ತು. ಇಂದು ಯಾರದ್ದಾಾದರೂ ಹುಟ್ಟಿಿದ ಹಬ್ಬವಾ?, ವೆಡ್ಡಿಿಂಗ್ ಆ್ಯನಿವರ್ಸರಿಯಾ? ಅಥವಾ ಎಲ್ಲಿಗಾದರೂ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಮರೆತೆನಾ? ಎಂದೆಲ್ಲಾಾ ಸಾಲು ಸಾಲು ಯೋಚನೆಗಳು ತಲೆಯಲ್ಲಿ ಬಂದವು. ಆದರೆ ಇದ್ಯಾಾವುದೂ ಕಾರಣವಿದ್ದಂತೆ ಕಾಣಲಿಲ್ಲ.

ಸ್ವಲ್ಪ ಸಮಯದ ನಂತರ ಹೆಂಡತಿಯೇ ಬಂದು, ಸಂಜೆ ಆಫೀಸಿನಿಂದ ಬೇಗ ಎಂದಳು. ಈಗಂತೂ ಯೋಚನೆಗಳು ಹೆಚ್ಚಾಾದವು. ಸುಮ್ಮನೆಯಂತೂ ಹೆಂಡತಿ ಆಫೀಸಿಂದ ಬೇಗ ಬನ್ನಿಿ ಎನ್ನುವವಳಲ್ಲ. ಏನಿರಬಹುದು ಎಂದು ಯೋಚಿಸಿ, ‘ಏಕೆ?’ ಎಂದು ಪ್ರಶ್ನಿಿಸಿಯೇ ಬಿಟ್ಟ. ಹೆಂಡತಿ ಗಂಡನ ಮುಖ ನೋಡಿ, ‘ನನ್ನಂತೆ ನಿಮ್ಮನ್ನು ಪ್ರೀತಿಸುವ ಇನ್ನೊೊಂದು ಮಹಿಳೆಯನ್ನು ಕೆಲ ದಿನಗಳ ಹಿಂದೆ ನಾನು ಭೇಟಿ ಮಾಡಿದೆ. ಅವಳಿಗೂ ನನ್ನಂತೆ ನಿಮ್ಮ ಜತೆ ಸ್ವಲ್ಪ ಸಮಯ ಕಳೆಯುವ ಆಸೆ ಇರುವುದಿಲ್ಲವೇ? ನೀವು ನನ್ನ ಗಂಡ. ಜೀವನ ಪೂರ್ತಿ ನನ್ನ ಜತೆಯೇ ಇರುತ್ತೀರಿ. ಅವಳಿಗೆ ಹಾಗಲ್ಲವಲ್ಲಾಾ? ಒಂದು ಬಾರಿ ಆಕೆಯನ್ನು ಮೀಟ್ ಮಾಡಿ, ಕೆಲ ಕಾಲ ಅವಳೊಟ್ಟಿಿಗೆ ಕಳೆದು ಬನ್ನಿಿ’ ಎಂದಳು. ಗಂಡನಿಗೆ ಮಾತೇ ಹೊರಡಲಿಲ್ಲ. ಕೋಪವೂ ಬಂತು. ‘ನೀನೇನು ಮಾತನಾಡುತ್ತಿಿದ್ದೀಯ ನಿನಗೆ ಗೊತ್ತಿಿದೆಯಾ?, ನಾನು ಯಾಕೆ ಯಾರನ್ನು ಮೀಟ್ ಮಾಡಬೇಕು. ನಾನು ನಿನ್ನನ್ನು ಮಾತ್ರ ಪ್ರೀತಿಸುತ್ತೇನೆ ’ಎಂದ . ‘

ನೀವು ಅವಳನ್ನೂ ಪ್ರೀತಿಸಿದ್ದಿರಿ ಎಂಬುದು ನನಗೆ ಗೊತ್ತಿಿದೆ’ ಎಂದಳು ಹೆಂಡತಿ. ಗಂಡನಿಗೆ ಕೋಪ ಹೆಚ್ಚಾಾಯಿತು. ‘ನಾನು ಇಷ್ಟ ಪಟ್ಟಿಿದ್ದು ನಿನ್ನನ್ನೇ, ನಿನ್ನನ್ನೇ’ ಎಂದು ಹೇಳಿ ಎದ್ದು ದಡಬಡನೆ ಆಫೀಸಿಗೆ ಹೊರಟೇ ಹೋದ.

ಗಂಡ ಆಫೀಸಿಗೆ ಹೋದ ಮೇಲೆ, ‘ನನ್ನ ಮೇಲೆ ಸ್ವಲ್ಪವಾದರೂ ಪ್ರೀತಿಯಿದ್ದರೆ, ನೀವು ಅವಳನ್ನು ಮೀಟ್ ಮಾಡಿಯೇ ಬರುತ್ತೀರಿ. ದೇವಸ್ಥಾಾನದ ಬಳಿ ಇರುವ ಹೊಟೇಲ್‌ನಲ್ಲಿ ಸಂಜೆ ಆಕೆ ನಿಮಗಾಗಿ ಕಾಯುತ್ತಿಿರುತ್ತಾಾಳೆ’ ಎಂದು ಮೆಸೇಜ್ ಹಾಕಿ ಫೋನ್ ಆಫ್ ಮಾಡಿಬಿಟ್ಟಳು. ಒಲ್ಲದ ಮನಸ್ಸಿಿನಿಂದ, ಹೆಂಡತಿ ಮಾತಿಗೆ ಕಟ್ಟುಬಿದ್ದು ಸಂಜೆ ಆತ ಹೊಟೇಲ್ ತಲುಪಿದ. ರೇಶ್ಮೆೆ ಸೀರೆ ಧರಿಸಿ, ಹೋಗಿ ಬರುವವರನ್ನೆೆಲ್ಲಾಾ ಜಗ್‌ನಿಂದ ಲೋಟಕ್ಕೆೆ ನೀರು ಹಾಕಿಕೊಳ್ಳಲು ಕಷ್ಟಪಡುತ್ತಿಿದ್ದ ಮಹಿಳೆಯೊಬ್ಬರು ಕಣ್ಣಿಿಗೆ ಬಿದ್ದರು. ಅವರು ಬೇರಾರು ಅಲ್ಲ, ಈತನ ತಾಯಿ!

ಹೆಣ್ಣು ಮಕ್ಕಳು ಮದುವೆಯಾಗಿ ತಮ್ಮ ಮನೆ ಬಿಟ್ಟು ಬರುತ್ತಾಾರೆ, ನಂತರ ಅಪ್ಪ ಅಮ್ಮನನ್ನು ತನ್ನ ಅತ್ತೆೆ ಮಾವನಲ್ಲಿ ಕಾಣುತ್ತಾಾರೆ. ಗಂಡಸರೂ ಕೊನೆವರೆಗೆ ತಂದೆ ತಾಯಿಯ ಜತೆಗೇ ಇದ್ದು ಅವರನ್ನು ಚೆನ್ನಾಾಗಿ ನೋಡಿಕೊಳ್ಳೋೋಣ ಎಂದುಕೊಳ್ಳುತ್ತಾಾರೆ. ಆದರೆ ಬ್ಯುಸಿ ದಿನಚರಿಯಲ್ಲಿ, ಹಣ ಗಳಿಸುವ ಓಟದಲ್ಲಿ, ನಡೆಸಲು ಕಲಿಸಿದವರನ್ನೇ ಮರೆತುಬಿಡುತ್ತೇವೆ. ನಾವು ನಮ್ಮ ಪೋಷಕರನ್ನು ನೋಡಿಕೊಳ್ಳುತ್ತೀವೋ ಹಾಗೆ ನಮ್ಮ ಮಕ್ಕಳು ಮುಂದೆ ನಮ್ಮನ್ನು ನೋಡಿಕೊಳ್ಳುತ್ತಾಾರೆ ಎಂಬ ಸತ್ಯವನ್ನು ಮರೆಯಬಾರದು ಅಲ್ಲವೆ?

ಹಿಂದೆ ಒಬ್ಬ ಸ್ವಾಾಮಿಯ ಬಳಿ ಯುವಕನೊಬ್ಬ ಕಲಿಕೆಗಾಗಿ ಬಂದಿದ್ದ. ಜ್ಞಾಾನಾರ್ಜನೆ ಅವನ ಗುರಿಯಾಗಿತ್ತು. ಕೆಲವು ದಿನಗಳ ನಂತರ ಅವನು ಗುರುಗಳಿಗೆ, ‘ಸ್ವಾಾಮೀ ನಾನು ತಮ್ಮ ಹತ್ತಿಿರ ಸಕಲ ಶಾಸ್ತ್ರಗಳನ್ನು ತಿಳಿದುಕೊಂಡೆನು. ನನ್ನ ಓದು ಮುಗಿಯಿತೆ? ತಾವು ಅಪ್ಪಣೆ ಕೊಟ್ಟರೆ ಹೊರಟು ಹೋಗುತ್ತೇನೆ’ ಎಂದನು. ‘ನೀನು ಬಹಳ ಹೆಚ್ಚೇ ಓದಿಕೊಂಡಿರುವೆ. ಯಾವಾಗ ಬೇಕಾದರೂ ನೀನು ಆದರೆ ನಿನ್ನ ಓದು ಮಾತ್ರ ಇನ್ನೂ ಪೂರ್ತಿಯಾಗಿಲ್ಲ’ ಎಂದು ಗುರುಗಳು ಹೇಳಿದರು. ‘ಓದು ಪೂರ್ತಿ ಮುಗಿಯದೆ ನಾನು ಇಲ್ಲಿಂದ ಹೋಗುವುದಿಲ್ಲ’ ಎಂದು ಯುವಕ ಹೇಳಿದ. ಮತ್ತೆೆ ಸ್ವಲ್ಪ ಕಾಲದ ಬಳಿಕ ಗುರುಗಳು ಅವನಿಗೆ ಸೃಷ್ಟಿಿ ರಹಸ್ಯಗಳನ್ನು ವಿವರಿಸಿದರು.‘ಗುರುಗಳೇ ಇನ್ನೂ ನಾನೇನಾದರೂ ತಿಳಿಯುವಂಥದ್ದಿದೆಯಾ?’ ಎಂದು ಯುವಕ ಪ್ರಶ್ನೆೆ ಮಾಡಿದ.

‘ಇನ್ನೂ ತುಂಬಾ ಇದೆ. ಪ್ರಾಾಣಿಗಳಲ್ಲಿ ಮನುಷ್ಯನಿಗೆ ಮಾತ್ರ ಮಾತಾಡಲು ಹೇಗೆ ಸಾಧ್ಯವಾಯಿತು? ಮನುಷ್ಯನು ಸತ್ತು ಹೋದ ಮೇಲೆ ಏನಾಗುತ್ತಾಾನೆ? ಇವುಗಳನ್ನೆೆಲ್ಲ ಅದಕ್ಕೆೆ ಬಹಳ ಕಾಲ ಹಿಡಿಯುತ್ತದೆ’ಎಂದರು ಸ್ವಾಾಮಿಗಳು.

ಆದರೆ ಆತನಿಗೆ ಓದುಪೂರ್ತಿ ಮಾಡಿಯೇ ಹೋಗಬೇಕೆಂಬ ಹಟವಿದ್ದಿತು. ಹೀಗೆ ಕಾಲ ಕಳೆಯುತ್ತಿಿರುವಾಗ, ಗುರುಗಳು ಇನ್ನೊೊಬ್ಬ ಶಿಷ್ಯನಿಗೆ ನೋಡಿ ‘ಅಪ್ಪಾಾ ನನ್ನ ಹತ್ತಿಿರ ನಿನ್ನ ವಿದ್ಯಾಾಭ್ಯಾಾಸವೆಲ್ಲ ಮುಗಿಯಿತು. ನೀನಿನ್ನು ಹೋಗಬಹುದು‘‘ ಎಂದರು. ಆಗ ಈ ಯುವಕನಿಗೆ ಆಶ್ಚರ್ಯ, ತನ್ನ ಕಲಿಕೆ ಮುಗಿದಿಲ್ಲ ಇವನದು ಹೇಗೆ ಮುಗಿಯಲು ಸಾಧ್ಯ ಎಂದು. ನಂತರ ಗುರುಗಳ ಬಳಿ ಬಂದು ‘ಮನುಷ್ಯ ಸತ್ತ ಮೇಲೆ ಏನಾಗುತ್ತಾಾನೆಂದು ಅವನಿಗೆ ಹೇಳಿದಿರಾ?’ ಕೇಳಿದನು. ‘ಅದನ್ನು ತಿಳಿಯಬೇಕೆಂದು ಇನ್ನೂ ನಾನು ಪ್ರಯತ್ನ ಮಾಡುತ್ತಿಿದ್ದೇನೆ. ಅವನಿಗೆ ಹೇಳಲು ಹೇಗೆ ಸಾಧ್ಯ?’ ಎಂದರು ಸ್ವಾಾಮಿಗಳು. ‘ಹಾಗಿದ್ದರೆ ನನ್ನ ಓದು ಮುಗಿಯುವುದರೊಳಗೆ ಅವನ ಓದು ಹೇಗೆ ಮುಗಿಯಿತು?’ಎಂದು ಕೇಳಿದನು. ‘ಅದನ್ನು ಅವನ ಹತ್ತಿಿರವೇ ಕೇಳು ತಿಳಿದೀತು’ ಎಂದರು ಸ್ವಾಾಮಿಗಳು.

ಯುವಕ ಇನ್ನೊೊಬ್ಬ ಶಿಷ್ಯನ ಬಳಿ ಬಂದು, ‘ನಾನು ಓದಿರುವುದನ್ನೆೆ ನೀನೂ ಓದಿರುವೆ. ನನಗೆ ಗೊತ್ತಿಿಲ್ಲದ್ದು ನಿನಗೂ ಗೊತ್ತಿಿರಲಾರದು. ನಿನ್ನ ಓದು ಮಾತ್ರ ಹೇಗೆ ಪೂರ್ತಿ ಮುಗಿಯಿತು?’ ಎಂದು ‘ನನ್ನ ಓದು ಪೂರ್ತಿ ಮುಗಿಯಿತೆಂದು ನಾನು ಹೊರಡುತ್ತಿಿಲ್ಲ. ಓದನ್ನು ಪೂರ್ತಿ ಮುಗಿಸಲು ನನ್ನಿಿಂದಾಗದು. ನಾನು ನನ್ನ ತಂದೆಗೆ ಸಹಾಯ ಮಾಡಬೇಕು. ಅದಕ್ಕೆೆ ಹೊರಟಿದ್ದೇನೆ’ ಎಂದನು.

ಗುರುವಿನ ಬಳಿಗೆ ಹೋಗಿ ಮತ್ತೊೊಮ್ಮೆೆ ವಿಚಾರಿಸಲು ‘ಎಷ್ಟು ಶಾಸ್ತ್ರ ಓದಿ ಮುಗಿಸಿದರೂ ವಿದ್ಯೆೆ ಪೂರ್ತಿಯಾಗುತ್ತದೇನು? ಈ ಪ್ರಶ್ನೆೆಯ ಅರ್ಥ ಆತ ತಿಳಿದಿದ್ದಾಾನೆ. ‘ನೀನೂ ತಿಳಿದು ಬಿಟ್ಟರೆ ನಿನ್ನ ವಿದ್ಯಾಾಭ್ಯಾಾಸವೂ ಮುಗಿದ ಹಾಗೇನೇ!’ ಎಂದರು ಸ್ವಾಾಮಿಗಳು.

ಓದು, ಕಲಿಕೆ, ಜ್ಞಾಾನಾರ್ಜನೆಗೆ ಕೊನೆಯಿಲ್ಲ. ಕಲಿಕೆ ನಿರಂತರ ಅರಿತವ ಮಾತ್ರ ಮುಂದುವರಿಯುತ್ತಾಾನೆ. ಎಲ್ಲವನ್ನೂ ಕಲಿತೇ ತೀರುತ್ತೇನೆ ಎಂದವನು ದಡ್ಡನಾಗಿಯೇ ಉಳಿಯುತ್ತಾಾನೆ.
ವೈದ್ಯರೊಬ್ಬರು ಗಡಿಬಿಡಿಯಲ್ಲಿ ಆಸ್ಪತ್ರೆೆಗೆ ಧಾವಿಸಿದರು. ಹುಡುಗನೊಬ್ಬನಿಗೆ ಅಪಘಾತ ಆಗಿದೆ, ಆತನ ಸ್ಥಿಿತಿ ಗಂಭೀರ ಎಂದು ಆ ವೈದ್ಯರಿಗೆ ಕರೆ ಬಂದಿತ್ತು. ಆಪರೇಶನ್ ಥಿಯೇಟರ್‌ನ ಬಳಿಗೆ ಓಡಿ ಬಂದ ವೈದ್ಯರನ್ನು ನೋಡಿದ, ಹುಡುಗನ ತಂದೆ ಅವರ ಮೇಲೆ ಕೂಗಾಡಲು ಆರಂಭಿಸಿದ. ‘ನಿಮಗೆ ಟೈಮ್ ಸೆನ್‌ಸ್‌ ಇಲ್ವಾಾ? ನಿಮ್ಮ ಮಗನಿಗೆ ಹೀಗೇ ಆಗಿದ್ದರೆ ಇಷ್ಟೇ ನಿಧಾನಕ್ಕೆೆ ಬರುತ್ತಿಿದ್ದಿರಾ? ಬರುತ್ತಾಾರೆಂದು ಕಾಯುತ್ತಾಾ ನನ್ನ ಮಗ ಪ್ರಾಾಣ ಬಿಡಬೇಕಿತ್ತಾಾ? ಎಂದ.

ವೈದ್ಯರು ಸಮಾಧಾನವಾಗಿ, ನನಗೆ ಕರೆ ಬಂದ ಕೂಡಲೇ ನಾನು ಹೊರಟು ಬಂದಿದ್ದೇನೆ, ನಿಮ್ಮ ಮಗ ಆರಾಮಾಗುತ್ತಾಾನೆ ಸ್ವಲ್ಪ ಶಾಂತವಾಗಿರಿ ಎಂದರು. ಮತ್ತೆೆ ತಂದೆ ಮಾತನಾಡುತ್ತಾಾ, ಪ್ರಾಾಣ ಉಳಿಸುವ ವೈದ್ಯರಿಗೇ ಸಮಯ ಪ್ರಜ್ಞೆೆ ಇಲ್ಲಾಾ ಎಂದಾದರೆ ಇಂಥ ವೈದ್ಯರಿರುವುದೇಕೆ? ಆಸ್ಪತ್ರೆೆಯೇಕೆ ಎಂದು ಗೊಣಗುತ್ತಲೇ ಇದ್ದ.

ಇದಕ್ಕೂ ವೈದ್ಯರು ಸಮಾಧಾನವಾಗಿ ಉತ್ತರಿಸಿ ಆಪರೇಶನ್ ಥಿಯೇಟರ್‌ಗೆ ಹೊರಟರು. ಕೆಂಪು ದೀಪ ಆರಿತು. ವೈದ್ಯರ ಕೇಳಲು ಹತ್ತಾಾರು ಪ್ರಶ್ನೆೆಗಳನ್ನು ರೆಡಿ ಇಟ್ಟುಕೊಂಡ ತಂದೆ ಅವರು ಹೊರಬರುವುದನ್ನೇ ಕಾಯುತ್ತಿಿದ್ದರು. ವೈದ್ಯರು ಹೊರಬಂದು ‘ನಿಮ್ಮ ಮಗ ಈಗ ಆರೋಗ್ಯವಾಗಿದ್ದಾಾನೆ, ಇನ್ನೇನಾದರೂ ಪ್ರಶ್ನೆೆಗಳಿದ್ದರೆ ನರ್ಸ್ ಬಳಿ ಕೇಳಿ’ ಎಂದಂದು, ಗಡಿಬಿಡಿಯಲ್ಲಿ ಹೊರಟರು. ತನ್ನ ಪ್ರಶ್ನೆೆಗಳಿಗೆ ಪೂರ್ಣ ಉತ್ತರಿಸದ ವೈದ್ಯರನ್ನು ದೂಷಿಸುತ್ತಲೇ ನರ್ಸ್ ಬಳಿ ಬಂದ ತಂದೆ ಅವರೇಕೆ ಹೀಗೆ ಗಡಿಬಿಡಿಯಲ್ಲಿ ಹೋದರು ಎಂದು ಕೇಳಿದ. ಆಗಲೇ ಕಣ್ಣೀರಾಗಿದ್ದ ನರ್ಸ್ ಹೇಳಿದರು ‘ ನಿನ್ನೆೆಯಷ್ಟೇ ಅವರ ಮಗ ಅಪಘಾತದಲ್ಲಿ ಮೃತಪಟ್ಟ.

ಅಂತಿಮ ಕಾರ್ಯ ಅರ್ಧಕ್ಕೇ ಬಿಟ್ಟು ಬಂದಿದ್ದರು, ವಿಧಿ ಅಪೂರ್ಣವಾಗಿತ್ತು. ಅದಕ್ಕೇ ಹಾಗೆ ಹೋದರು’ ಎಂದರು.
ಪಶ್ಚಾಾತ್ತಾಾಪದ ಹೊರತು ಆ ತಂದೆಯಲ್ಲಿ ಏನಿರಲು ಸಾಧ್ಯ? ಯಾರನ್ನೇ ಆಗಲಿ ಒಂದು ಕ್ಷಣದಲ್ಲಿ ಅವರೆಂತವರು ಎಂಬುದನ್ನು ನಿರ್ಧರಿಸುವುದು ಸುಲಭ. ಆದರೆ ಅದು ಸರಿಯಾಗಿರಬೇಕು ಎಂದೇನಿಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ಕಾರಣಗಳಿರುತ್ತವೆ. ಅದನ್ನು ಅರ್ಥ ಮಾಡಿಕೊಂಡು ಬಾಳುವುದು ಉತ್ತಮ ಅಲ್ಲವೆ?

Leave a Reply

Your email address will not be published. Required fields are marked *