Tuesday, 11th August 2020

ನ್ಯೂಜಿಲೆಂಡ್‌ಗೆ ಟೇಲರ್ ಅರ್ಧ ಶತಕದ ಆಸರೆ

ಮೊದಲನೇ ಟೆಸ್‌ಟ್‌: ಧನಂಜಯ್‌ಗೆ ಐದು ವಿಕೆಟ್ ಗೊಂಚಲು ಶೂನ್ಯಕ್ಕೆ ಔಟ್ ಆದ ಕೇನ್ ವಿಲಿಯಮ್ಸನ್

ಗಾಲೆ:
ರಾಸ್ ಟೇಲರ್ (86 ರನ್, 1131 ಎಸೆತಗಳು) ಅವರ ಅರ್ಧ ಶತಕದ ಹೊರತಾಗಿಯೂ ಅಖಿಲ ಧನಂಜಯ್ (57 ಕ್ಕೆೆ 5) ಅವರ ಸ್ಪಿಿನ್ ಮೋಡಿಗೆ ನಲುಗಿದ ನ್ಯೂಜಿಲೆಂಡ್ ತಂಡ ಮೊದಲನೇ ಟೆಸ್‌ಟ್‌ ಪಂದ್ಯದ ಪ್ರಥಮ ಇನಿಂಗ್‌ಸ್‌‌ನಲ್ಲಿ ಶ್ರೀಲಂಕಾ ವಿರುದ್ಧ ಸಾಧರಣ ಮೊತ್ತ ಕಲೆಹಾಕಿದೆ.

ಇಲ್ಲಿನ ಗಾಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಾಟಿಂಗ್ ಮಾಡಿದ ನ್ಯೂಜಿಲೆಂಡ್ ಮೊದಲನೇ ದಿನದಾಟ ಮುಕ್ತಾಾಯಕ್ಕೆೆ 68 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆೆ 203 ರನ್ ಗಳಿಸಿದೆ.
ಆರಂಭಿಕರಾಗಿ ಕಣಕ್ಕೆೆ ಇಳಿದ ಜೀತ್ ರಾವಲ್ ಹಾಗೂ ಟಾಮ್ ಲಥಾಮ್ ಜೋಡಿಯು ಅತ್ಯುತ್ತಮ ಬ್ಯಾಾಟಿಂಗ್ ಮಾಡಿತು. ಆರಂಭದಲ್ಲಿ ಲಂಕಾ ಹೊಸ ಚೆಂಡಿನ ದಾಳಿಯನ್ನು ಸಮರ್ಥವಾಗಿ ಎದುರಿಸಿತು. ಈ ಜೋಡಿಯು ಮುರಿಯದ ಮೊದಲನೇ ವಿಕೆಟ್‌ಗೆ 64 ರನ್ ಗಳಿಸಿ ಕಿವೀಸ್‌ಗೆ ಉತ್ತಮ ಆರಂಭ ನೀಡಿತು.

ಆರಂಭದಿಂದಲೂ ತಾಳ್ಮೆೆಯ ಬ್ಯಾಾಟಿಂಗ್ ಮಾಡಿದ ಟಾಮ್ ಲಥಾಮ್ 88 ಎಸೆತಗಳಲ್ಲಿ ಮೂರು ಬೌಂಡರಿಯೊಂದಿಗೆ 30 ರನ್ ಗಳಿಸಿದರು. ಮತ್ತೊೊಂದು ತುದಿಯಲ್ಲಿ ಉತ್ತಮ ಬ್ಯಾಾಟಿಂಗ್ ಮಾಡಿದ ಜೀತ್ ರಾವಲ್ 83 ಎಸೆತಗಳಲ್ಲಿ ಮೂರು ಬೌಂಡರಿಯೊಂದಿಗೆ 33 ರನ್ ಗಳಿಸಿದರು. ಯಶಸ್ವಿಿಯಾಗಿ ಮುನ್ನುಗ್ಗುತ್ತಿಿದ್ದ ಜೀತ್ ರಾವಲ್ ಹಾಗೂ ಟಾಮ್ ಲಥಾಮ್ ಜೋಡಿಯನ್ನು ಅಖಿಲಾ ಧನಂಜಯ್ ಸ್ಪಿಿನ್ ಬಲೆಗೆ ಬೀಳಿಸಿದರು. ನಂತರ, ಮೂರನೇ ಕ್ರಮಾಂಕದಲ್ಲಿ ಬ್ಯಾಾಟಿಂಗ್‌ಗೆ ಇಳಿದ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಧನಂಜಯ್ ಶೂನ್ಯಕ್ಕೆೆ ಪೆವಿಲಿಯನ್‌ಗೆ ಕಳುಹಿಸಿದರು.
ಟೇಲರ್-ನಿಕೋಲ್‌ಸ್‌ ಜುಗಲ್‌ಬಂದಿ:

ತಂಡದ ಮೊತ್ತ 71 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆೆ ಸಿಲುಕಿದ್ದ ವೇಳೆ ಜತೆಯಾದ ರಾಸ್ ಟೇಲರ್ ಹಾಗೂ ಹೆನ್ರಿಿ ನಿಕೋಲ್‌ಸ್‌ ಜೋಡಿಯು ಲಂಕಾ ದಾಳಿಯನ್ನು ಸಮರ್ಥವಾಗಿ ಎದುರಿಸಿತು. ಈ ಜೋಡಿಯು ಮುರಿಯದ ನಾಲ್ಕನೇ ವಿಕೆಟ್‌ಗೆ 100 ರನ್ ದಾಖಲಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿತು.
ರಾಸ್ ಟೇಲರ್‌ಗೆ ಅತ್ಯುತ್ತಮ ಸಾಥ್ ನೀಡುತ್ತಿಿದ್ದ ಹೆನ್ರಿಿ ನಿಕೋಲ್‌ಸ್‌ ಅವರು 78 ಎಸೆತಗಳಲ್ಲಿ ಎರಡು ಬೌಂಡರಿಯೊಂದಿಗೆ 42 ರನ್ ಗಳಿಸಿದ್ದರು. ಅರ್ಧ ಶತಕದಂಚಿನಲ್ಲಿ ನಿಕೋಲ್‌ಸ್‌ ಅವರನ್ನು ಧನಂಜಯ್ ಅವರು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು.
ಬಿ.ಜೆ ವ್ಯಾಾಟ್ಲಿಿಂಗ್(1) ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಧನಂಜಯ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಔಟ್ ಆದರು.
ಒಂದು ತುದಿಯಲ್ಲಿ ಗಟ್ಟಿಿಯಾಗಿ ನೆಲೆಯೂರಿದ ರಾಸ್ ಟೇಲರ್ ಶ್ರೀಲಂಕಾ ಸ್ಪಿಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಯಾವುದೇ ತಪ್ಪುು ಹೊಡೆತಗಳಿಗೆ ಕೈ ಹಾಕದು ಅವರು ಬಹಳ ಎಚ್ಚರಿಕೆಯಿಂದ ಎದುರಿಸಿದರು. 131 ಎಸೆತಗಳನ್ನು ಎದುರಿಸಿದ ಅವರು ಆರು ಬೌಂಡರಿಯೊಂದಿಗೆ ಅಜೇಯ 86 ರನ್ ಗಳಿಸಿ ಇಂದಿಗೆ ಬ್ಯಾಾಟಿಂಗ್ ಕಾಯ್ದುಕೊಂಡಿದ್ದಾಾರೆ. ಮತ್ತೊೊಂದು ತುದಿಯಲ್ಲಿ ಮಿಚೆಲ್ ಸ್ಯಾಾಂಟ್ನರ್ 8 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದಿದ್ದಾಾರೆ.

ಮಿಂಚಿದ ಧನಂಜಯ್:

ಪ್ರಥಮ ಇನಿಂಗ್‌ಸ್‌‌ನಲ್ಲಿ ಶ್ರೀಲಂಕಾ ವೇಗಿಗಳ ದಾಳಿ ನ್ಯೂಜಿಲೆಂಡ್ ಬ್ಯಾಾಟ್‌ಸ್‌‌ಮನ್‌ಗಳ ಮೇಲೆ ಯಾವುದೇ ಗಂಭೀರ ಪರಿಣಾಮ ಬೀರಲಿಲ್ಲ. ಇದನ್ನು ಅರಿತ ನಾಯಕ ದಿಮುತ್ ಕರುಣರತ್ನೆೆ ಅವರು ಅಖಿಲ ಧನಂಜಯ್ ಅವರಿಗೆ ಚೆಂಡು ನೀಡಿದರು. ನಾಯಕ ಭರವಸೆ ಉಳಿಸಿಕೊಂಡು ಧನಂಜಯ್ ಕಿವೀಸ್ ಬ್ಯಾಾಟ್‌ಸ್‌‌ಮನ್‌ಗಳಿಗೆ ತಲೆ ನೋವಾಗಿ ಪರಿಗಣಿಸಿದರು. 22 ಓವರ್‌ಗಳಿಗೆ 57 ರನ್ ನೀಡಿ ಐದು ವಿಕೆಟ್ ಗೊಂಚಲು ಪಡೆದರು. ಶ್ರೀಲಂಕಾ ಪರ ಇವರನ್ನು ಬಿಟ್ಟರೆ ಇನ್ನುಳಿದ ಬೌಲರ್‌ಗಳು ಒಂದೂ ವಿಕೆಟ್ ಪಡೆಯದೆ ನಿರಾಸೆ ಅನುಭವಿಸಿದರು.

ಸಂಕ್ಷಿಪ್ತ ಸ್ಕೋೋರ್
ನ್ಯೂಜಿಲೆಂಡ್
ಪ್ರಥಮ ಇನಿಂಗ್‌ಸ್‌: 203/5 (68)
ರಾಸ್ ಟೇಲರ್-86*
ಹೆನ್ರಿಿ ನಿಕೋಲ್‌ಸ್‌-42
ಜೀತ್ ರಾವಲ್-33
ಟಾಮ್ ಲಥಾಮ್-30

ಬೌಲಿಂಗ್: ಅಖಿಲ ಧನಂಜಯ 57 ಕ್ಕೆೆ 5

ಕ್ಯಾಪ್ಷನ್
-ನ್ಯೂಜಿಲೆಂಡ್ ಪರ ಆಕರ್ಷಕ ಅರ್ಧ ಶತಕ ಸಿಡಿಸಿದ ಅಖಿಲ ಧನಂಜಯ ಬ್ಯಾಾಟಿಂಗ್ ವೈಖರಿ
-ಕಿವೀಸ್ ವಿರುದ್ಧ ಐದು ವಿಕೆಟ್ ಗೊಂಚಲು ಪಡೆದ ಅಖಿಲ ಧನಂಜಯ ಸಂಭ್ರಮ

Leave a Reply

Your email address will not be published. Required fields are marked *