Thursday, 3rd December 2020

ಸೋಂಕು ತಡೆಯಲು ತಂತ್ರಜ್ಞಾನ

ಟೆಕ್ ಸೈನ್ಸ್

ಎಲ್.ಪಿ.ಕುಲಕರ್ಣಿ

ವಿಶ್ವದಾದ್ಯಂತ ಕೋವಿಡ್-೧೯ ಸೋಂಕನ್ನು ತಡೆಗಟ್ಟಲು, ಅದಕ್ಕೊಂದು ಸೂಕ್ತ ಲಸಿಕೆ ಕಂಡು ಹಿಡಿಯಲು ಹಗಲಿರುಳೆನ್ನದೇ ವಿಜ್ಞಾನಿಗಳು ಲ್ಯಾಬ್‌ಗಳಲ್ಲಿ ಕಾರ್ಯ ನಿರತರಾಗಿದ್ದಾರೆ. ಅಲ್ಲದೆ ಹಲವು ಕಂಪನಿಗಳು ಕರೋನಾ ಜತೆಗೆ ಇನ್ನಿತರೇ ಸೋಂಕು ಗಳನ್ನು ನಾಶಪಡಿಸಬಲ್ಲ ಹೊಸ ಹೊಸ ಸಾಧನ ಸಲಕರಣೆಗಳನ್ನು ತಯಾರಿಸುತ್ತಲೇ ಇದ್ದಾರೆ.

ಅಂತಹ ಸಾಧನಗಳಲ್ಲಿ ಈ ಕೆಳಗಿನ ಎರಡೂ ಉಪಕರಣಗಳೂ ಸೇರಿವೆ. 1. ಎ ಗುಡ್ ಡಜ್ ನಾವಿಂದು ಕರೋನಾ ಕಾಲದಲ್ಲಿ ಜೀವಿಸುತ್ತಿದ್ದೇವೆ. ಸೋಂಕು ತಗುಲಿದರೆ ಉಸಿರಾಟಕ್ಕೆ ತೊಂದರೆ ತರುವ ಕಾಯಿಲೆಯಾಗಿರುವುದರಿಂದ, ಶ್ವಾಸಕೋಶದ ಕಾರ್ಯಕ್ಷಮತೆಗೆ ಇಂದು ಹೆಚ್ಚಿನ ಪ್ರಾಮುಖ್ಯತೆ. ಸಾಮಾನ್ಯವಾಗಿ ನಮ್ಮ ದೇಹದ ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಶೇ.98.4 ಇರಲೇಬೇಕು.

ಇಲ್ಲವೆಂದರೆ ಯಾವುದಾದರೂ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗೆ ಅಥವಾ ಸಮಸ್ಯೆಗೆ ತುತ್ತಾಗಿದ್ದೆವೆಂದೇ ಅರ್ಥ. ಅಂತಹ
ಸಂದರ್ಭಗಳಲ್ಲಿ, ಕರೋನಾ ಸೋಂಕು ತಗುಲಿದರೆ, ಅಪಾಯದ ಸಂಭಾವ್ಯತೆ ಅಧಿಕ ಎಂಬುದಾಗಿ ತಜ್ಞ ವೈದ್ಯರು ಹೇಳುತ್ತಾರೆ.
ಕೈಗೆ ಕಟ್ಟುವ ಕೈಗಡಿಯಾರವು ನಮ್ಮ ಹೃದಯ ಬಡಿತ, ರಕ್ತದಲ್ಲಿನ ಆಮ್ಲಜನಕದ ಮಟ್ಟ ಮುಂತಾದ ಮಾಹಿತಿಗಳನ್ನು ಪ್ರತೀ ಕ್ಷಣವೂ ತಿಳಿಸುತ್ತಿದ್ದರೆ ಹೇಗಿರುತ್ತದಲ್ಲವೆ? ಇದಕ್ಕೆಂದೆ ಗೋಕ್ವಿ ‘ಎ ಗುಡ್ ಡಜ್’ ಎಂಬ ಸ್ಮಾರ್ಟ್ ವಾಚ್‌ನ್ನು ಮಾರುಕಟ್ಟೆಗೆ ತಂದಿದೆ. ಇದನ್ನು ಸಂಸ್ಥೆಯು ವೈಟಲ್ ಸ್ಮಾರ್ಟ್ ವಾಚ್ ಎಂದೂ ಪರಿಚಯಿಸುತ್ತಿದೆ.

ದಿನದ 24 ಗಂಟೆಯೂ ನಿಖರವಾಗಿ ವೇಳೆಯನ್ನು ತಿಳಿಸುವುದರೊಂದಿಗೆ ಇದರಲ್ಲಿ ಅಳವಡಿಸಿದ ಪಲ್ಸ್ ಆಕ್ಸಿಮೀಟರ್‌ನ ಸಹಾಯದಿಂದ ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಅಳೆಯುತ್ತದೆ. ಅಲ್ಲದೆ ಹೃದಯ ಬಡಿತವನ್ನೂ ಸಹ ಸ್ಪಷ್ಟವಾಗಿ ನಮೂದಿಸುವ ವಿಭಿನ್ನ ತಾಂತ್ರಿಕ ಅಂಶಗಳನ್ನು ಇದು ಒಳಗೊಂಡಿದೆ. ಎಂಬುದಾಗಿ ಸಂಸ್ಥೆ ಹೇಳಿಕೊಂಡಿದೆ. ಮನೆ, ಕಚೇರಿ, ಪ್ರವಾಸದಲ್ಲಿ ಬಳಸಬಹುದಾದ ಈ ಸಾರ್ಟ್ ವಾಚ್‌ನ ಬೆಲೆ ರು.5999 ರಿಂದ ಆರಂಭ.

2. ವೈಪ್ ಔಟ್ ವಾರಿಯರ್
ಇದೊಂದು ಬಹುಕಾರ್ಯ ನಿರ್ವಹಿಸಬಲ್ಲ ಯು.ವಿ.ಸ್ಟೆರಿಲೈಜರ್ ಮತ್ತು ವೈಯರ್ ಲೆಸ್ ಚಾರ್ಜg ನಿಂದ ಕೂಡಿದ ಪುಟ್ಟ ಉಪಕರಣ. ನಮಗೆ ಗಾಳಿ, ನೀರು, ಆಹಾರ, ವಸತಿ, ಬಟ್ಟೆಗಳೆಂಬ ಮೂಲಭೂತ ಸೌಕರ್ಯಗಳ ಸಾಲಿನಲ್ಲಿ ಈಗ ಹೊಸದಾಗಿ ಸ್ಮಾರ್ಟ್ ಫೋನ್ (ಮೊಬೈಲ್ ಫೋನ್) ಕೂಡ ಸೇರಿದೆ ಎಂದರೆ ತಪ್ಪಾಗಲಾರದು. ಇಂದು ನಾವು ಬಳಸುತ್ತಿರುವ ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಮುಂತಾದವುಗಳ ಮೇಲೆ ಬ್ಯಾಕ್ಟೀರಿಯಾದಂತಹ ಸೂಕ್ಷ್ಮಾಣು ಜೀವಿಗಳು ಕುಳಿತರೆ ಹೇಗೆ, ಅವುಗಳನ್ನು ಮುಟ್ಟಿ ದಾಗ ಆ ರೋಗಕಾರಕಗಳ ನಮ್ಮ ದೇಹವನ್ನು ಸೇರಿ ಆರೋಗ್ಯ ಕೆಡಲು ಕಾರಣವಾಗಬಹುದು.

ಅಂತಹ ಗೆಜೆಟ್ ಸಾಧನಗಳ ಮೇಲಿರುವ ಶೇ.99.9 ಸೂಕ್ಷ್ಮಾಣು ಜೀವಿಗಳನ್ನು ನಾಶಪಡಿಸಬಲ್ಲ ಉಕರಣವನ್ನು ಡೇಲಿ ಆಬ್ಜೆಕ್ಟ್ಸ್
ಕಂಪನಿ ತಯಾರಿಸಿದೆ. ಟಾಯ್ಲೆಟ್ ಸೀಟ್‌ನ ಮೇಲಿರುವ ಸೂಕ್ಷ್ಮ ಜೀವಿಗಳಿಗಿಂತಲೂ ಏಳು ಪಟ್ಟು ಹೆಚ್ಚು ಸೂಕ್ಷ್ಮ ಜೀವಿಗಳು ನಮ್ಮ ಸ್ಮಾರ್ಟ್ ಫೋನ್ ಗಳ ಮೇಲಿರುತ್ತವಂತೆ!

ಶಾಪಿಂಗ್ ಮಾಲ್‌ನಲ್ಲಿರುವ ವಸ್ತುಗಳ ಮೇಲೆ ಕುಳಿತ ಸೂಕ್ಷ್ಮ ಜೀವಿಗಳಿಗಿಂತಲೂ ಹತ್ತು ಪಟ್ಟು ಹೆಚ್ಚು ನಾವು ದಿನ ನಿತ್ಯ ಬಳಸುವ ಕೈಚೀಲ, ಪರ್ಸ್, ಮುಂತಾದವುಗಳ ಮೇಲೆ ಕಚ್ಚಿ ಕುಳಿತಿರುತ್ತವಂತೆ! ಹೀಗಿರುವಾಗ ಇಂತಹ ವಸ್ತುಗಳ ಬಳಕೆಯಿಂದ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಂತಹ ಸೂಕ್ಷ್ಮ ಜೀವಿಗಳನ್ನು ಶೇ.99.9 ರಷ್ಟು ನಾಶಗೊಳಿಸಲು ಈ ‘ವೈಪ್ ಔಟ್ ವಾರಿಯರ್’ ಉಪಕರಣವನ್ನು ತಯಾರಿಸಿದ್ದೇವೆ ಎಂದಿದೆ ಇದನ್ನು ತಯಾರಿಸಿದ ಡೇಲಿ ಆಬ್ಜೆಕ್ಟ್ ಸಂಸ್ಥೆ. ಈ ಉಪಕರಣದ ಮಾರು
ಕಟ್ಟೆ ಬೆಲೆ ಸುಮಾರು ರು.6000

Leave a Reply

Your email address will not be published. Required fields are marked *