Wednesday, 21st October 2020

ತೇಜಸ್ವಿ ಹೇಳಿಕೆ ಖಂಡಿಸಿ ಬೆಂಗಳೂರು ಬಂದ್‌ಗೆ ಕರೆ

ಕನ್ನಡಪರ ಹೋರಾಟಗಾರರನ್ನು ರೌಡಿಗಳೆಂದು ಕರೆದಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಟೀಕೆ ಖಂಡಿಸಿ ಕನ್ನಡ ಪರ ಸಂಘಟನೆಗಳು ಶನಿವಾರ ಬೆಂಗಳೂರು ಬಂದ್ ನಡೆಸಲು ತೀರ್ಮಾನಿಸಿವೆ.

ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ಅವರ ನಿರ್ಧಾರ ತಿಳಿಸಿದ್ದಾಾರೆ. ಬೆಂಗಳೂರು ಬಂದ್‌ಗೆ ಕರವೇ ಮೊದಲಾದ ಕನ್ನಡಪರ ಸಂಘಟನೆಗಳು, ಹೋರಾಟಗಾರರು ಬೆಂಬಲ ನೀಡುವ ಸಾಧ್ಯತೆ ಇದೆ. ಭಗವಾನ್ ಜೈನ್ ರಸ್ತೆೆಯ ಜಿನಮಂದಿರದ ಸಮೀಪದ ಗಣೇಶ್ ಬಾಗ್ ಪ್ರಾಾರ್ಥನಾ ಸ್ಥಳದಲ್ಲಿ ಜೈನ ಸಮುದಾಯ ತಮ್ಮ ಚಾತುರ್ಮಾಸ್ಯ ಕಾರ್ಯಕ್ರಮ ಆಚರಿಸುತ್ತಿಿದ್ದರು. ಈ ಸಂಬಂಧ ಕಟ್ಟಡದ ಹೊರಗೆ ಹಿಂದಿಯಲ್ಲಿ ನಾಮಫಲಕ ಹಾಕಿದ್ದಾರೆ. ಕೆಲ ಕನ್ನಡಪರ ಕಾರ್ಯಕರ್ತರು ಸ್ಥಳಕ್ಕೆೆ ಹೋಗಿ ಬೋರ್ಡ್‌ನಲ್ಲಿ ಕನ್ನಡ ಇಲ್ಲದಿರುವುದಕ್ಕೆೆ ಆಕ್ಷೇಪಿಸಿ ಗಲಾಟೆ ಮಾಡಿದ್ಧಾಾರೆ. ಬಳಿಕ ಫಲಕವನ್ನು ಏಣಿ ಏರಿ ಕಿತ್ತುಹಾಕಿದ್ದಾರೆ. ಮೊಬೈಲ್ನಲ್ಲಿ ಇದರ ಚಿತ್ರೀಕರಣವೂ ಆಗಿ ಆ ವಿಡಿಯೋ ವಾಟ್ಸ್ಯಾಾಪ್‌ನಲ್ಲಿ ವೈರಲ್ ಅಗಿದೆ.

ತೇಜಸ್ವಿಿ ಸೂರ್ಯ ಅವರು ಹೋರಾಟಗಾರರ ವರ್ತನೆ ಖಂಡಿಸಿ ಟ್ವಿಿಟ್ ಮಾಡಿದ್ದರು. ಹಿಂದಿಯಲ್ಲಿ ಬ್ಯಾಾನರ್ ಬರೆದಿದ್ದಕ್ಕೆೆ ಕೆಲ ರೌಡಿಗಳು ಜೈನ ಸಮುದಾಯದ ಮೇಲೆ ಹಲ್ಲೆ ಮಾಡಿದ್ದು ತುಂಬಾ ನೋವಾಯಿತು. ಬೆಂಗಳೂರಿನಲ್ಲಿ ಉರ್ದು ಬಳಕೆಯಾಗುತ್ತಿಿದ್ದರೂ ಅದನ್ನು ಪ್ರಶ್ನೆೆ ಮಾಡಲ್ಲ ಎಂದು ಧಾರ್ಮಿಕ ದೃಷ್ಟಿಿಕೋನದಲ್ಲಿ ವಿಶ್ಲೇಷಣೆ ಮಾಡಿದ್ದರು. ತೇಜಸ್ವಿಿ ಸೂರ್ಯ ಅವರ ಈ ಟ್ವಿಿಟ್ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಕಾರಣವಾಯಿತು. ಅದಾದ ಬೆನ್ನಲ್ಲೇ ಒಂದೆರಡು ಗಂಟೆಯಲ್ಲಿ ತೇಜಸ್ವಿಿ ಸೂರ್ಯ ಅವರು ಜೈನರಿಗೆ ಕನ್ನಡ ಕಲಿಯಬೇಕೆಂದು ಸಲಹೆ ಮತ್ತೊೊಂದು ಟ್ವಿಿಟ್ ಮಾಡಿದರು.

ಇದೇ ವೇಳೆ, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಈ ಘಟನೆ ಸಂಬಂಧ ರಮೇಶ್‌ಗೌಡ, ಆಂಜಿನಪ್ಪ, ಹರೀಶ್, ಮಾದೇಶ ಗೌಡ, ಮಂಜುನಾಥ್ ಮತ್ತು ಚಂದ್ರಶೇಖರ್ 6 ಹೋರಾಟಗಾರರನ್ನು ಬಂಧಿಸಲಾಯಿತು. ಧಾರ್ಮಿಕ ಭಾವನೆಗಳಿಗೆ ಧಕ್ಕೆೆ ಮಾಡಿದ್ದು, ದಾಂಧಲೆ, ಬೆದರಿಕೆ ಹಾಕಿದ್ದು ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪದ ಮೇಲೆ ಸೆಕ್ಷನ್ 153ಎ, 427, 504 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಟ್ವೀಟಿಗರ
ಕನ್ನಡಿಗರ ವಿರುದ್ಧ ರೌಡಿಗಳು ಎಂಬ ಪದ ಬಳಕೆ ಮಾಡಿರುವ ತೇಜಸ್ವಿಿ ಸೂರ್ಯ ವಿರುದ್ಧ ಕನ್ನಡ ಪರ ಹೋರಾಟಗಾರರು ಸೇರಿದಂತೆ ಜಾಲತಾಣಿಗರು ಆಕ್ರೋೋಶ ವ್ಯಕ್ತಪಡಿಸಿದ್ದಾಾರೆ. ಕನ್ನಡ ಬಳಕೆ ಮಾಡದ ಕ್ರಮ ಖಂಡಿಸಿದ್ದರೆ ಧರ್ಮದ ಬಣ್ಣ ಹಚ್ಚುವ ಮೂಲಕ ತೇಜಸ್ವಿಿ ಸೂರ್ಯ ತಮ್ಮ ನಿಜ ಬಣ್ಣ ಬಯಲು ಮಾಡಿದ್ದಾಾರೆ ಎಂದು ಹಲವರು ಟೀಕೆ ಮಾಡಿದ್ದಾಾರೆ. ಮತ್ತೇ ಕೆಲವರು ಕನ್ನಡಿಗರ ಪರವಾಗಿ ನಿಲ್ಲಬೇಕಾದ ಸಂಸದರು ಮಾರ್ವಾಡಿಗಳ ಪರ ನಿಲ್ಲುವ ಮೂಲಕ ತಮ್ಮ ನಿಷ್ಠೆೆ ಗೆಲ್ಲಿಸಿದ ಜನತೆಗಲ್ಲ, ತಮ್ಮ ಗುಜರಾತಿ ಪಕ್ಷಕ್ಕೆೆ ಎಂದು ಕಿಡಿಕಾರಿದ್ದಾಾರೆ. ತೇಜಸ್ವಿಿ ತಮ್ಮ ಹೇಳಿಕೆ ಹಿಂಪಡೆಯದಿದ್ದರೆ ಕನ್ನಡಿಗರೆಲ್ಲ ಸೇರಿ ಹೋರಾಟ ನಡೆಸುವ ಎಚ್ಚರಿಕೆಯನ್ನು ಟ್ವೀಟಿಗರು ನೀಡಿದ್ದಾಾರೆ. ಜತೆಗೆ, ಪೊಲೀಸರು ಬಂಧಿಸಿರುವ ಹೋರಾಟಗಾರರನ್ನು ಬಿಡುಗಡೆ ಮಾಡುವಂತೆ ಟ್ವಿಿಟರ್ ಟ್ರೆೆಂಡ್ ಸೃಷ್ಟಿಿಯಾಗಿದೆ.

Leave a Reply

Your email address will not be published. Required fields are marked *