Tuesday, 25th February 2020

ಭಿಕ್ಷಾಟನೆ ಮಾಫಿಯಾಗೆ ನಲುಗುತ್ತಿವೆ ಕೂಸುಗಳು!

ಭಿಕ್ಷಾಟನೆ ಮಾಫಿಯಾ ಹೆಚ್ಚಿರುವ ಮೂರು ರಾಜ್ಯಗಳ ಪೈಕಿ ಕರ್ನಾಟಕವೂ ಒಂದು ಯಾವುದೋ ಮಹಿಳೆಯ ಕಂಕುಳಲ್ಲಿ ಇನ್ಯಾಾರದ್ದೋ ಕೂಸನ್ನಿಟ್ಟು ಭಿಕ್ಷೆಗೆ ತಳ್ಳುತ್ತಿರುವ ಜಾಲ 14 ವರ್ಷದ ಮೇಲ್ಪಟ್ಟ ಹೆಣ್ಣುಮಕ್ಕಳನ್ನು ಅಪಹರಿಸಿ, ಬೆದರಿಸಿ ವೇಶ್ಯಾವಾಟಿಕೆಗೆ ದೂಡುವ ಮಾಫಿಯಾ 6 ರಿಂದ 9ನೇ ವಯಸ್ಸಿಿನ ಮಕ್ಕಳಿಗೆ ಡ್ರ್ಸ್ ಮಾರಾಟ ಮಾಡುವ ತರಬೇತಿ

ಬಾಲಕೃಷ್ಣ ಎನ್. ಬೆಂಗಳೂರು
ರಾಜ್ಯದಲ್ಲಿ ಭಿಕ್ಷೆೆ ಬೇಡುವವರ ಸಂಖ್ಯೆೆ ಹೆಚ್ಚುತ್ತಲೇ ಇದ್ದು, ಕಾನೂನು ವಿರುದ್ಧದ ಕೆಲಸದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವ ಮಾಫಿಯಾಗೆ ಅಂತ್ಯವಿಲ್ಲದಂತಾಗಿದೆ. ಹಣ ಗಳಿಸುವ ವ್ಯಾಾಮೋಹಕ್ಕೆೆ ಬಿದ್ದಿರುವ ಪಾತಕಿಗಳು ಯಾವುದೋ ಮಹಿಳೆಯ ಕಂಕುಳಲ್ಲಿ ಇನ್ಯಾಾರದ್ದೋ ಕೂಸನ್ನಿಿಟ್ಟು ಭಿಕ್ಷೆಗೆ ತಳ್ಳುತ್ತಿಿರುವ ಜಾಲ ವ್ಯಾಾಪಕವಾಗಿದೆ.

ಭಿಕ್ಷಾಟನೆಯ ನಿಗ್ರಹಕ್ಕೆೆ ಕಾನೂನು ಇದೆ, ಆದರೆ ಭಿಕ್ಷೆ ಬೇಡುವುದು ಶಿಕ್ಷಾರ್ಹ ಅಪರಾಧ ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿಿಲ್ಲದ ವಿಚಾರ. ಮಕ್ಕಳ ಕಳ್ಳರ ವ್ಯಾಾಪಕ ಜಾಲ ಹರಡಿದ್ದು, ಅದರಲ್ಲಿ 4 ಬಗೆ ಇದೆ. ಹುಟ್ಟಿಿದ ಮಕ್ಕಳನ್ನು ಕದ್ದು, ಆ ಮಗುವನ್ನು ತೋರಿಸಿ ಭಿಕ್ಷೆ ಬೇಡುತ್ತಾಾರೆ. 3 ರಿಂದ 6ನೇ ವಯಸ್ಸಿಿನ ಮಕ್ಕಳನ್ನು ಅಪಹರಿಸಿ ಅವರಿಗೆ ಭಿಕ್ಷೆ ಬೇಡುವ ತರಬೇತಿ ನೀಡಿ ಬಳಸಿಕೊಳ್ಳುತ್ತಿಿದ್ದಾರೆ. 6 ರಿಂದ 9ನೇ ವಯಸ್ಸಿಿನ ಮಕ್ಕಳಿಗೆ ಡ್ರ್ಸ್ ಮಾರಾಟ ಮಾಡುವ ತರಬೇತಿ ನೀಡುತ್ತಿಿದ್ದಾರೆ. 14 ವರ್ಷದ ಮೇಲ್ಪಟ್ಟ ಹೆಣ್ಣುಮಕ್ಕಳನ್ನು ಅಪಹರಿಸಿ ಅವರನ್ನು ಬೆದರಿಸಿ ವೇಶ್ಯಾಾವಾಟಿಕೆಗೆ ದೂಡುವ ಮಾಫಿಯಾ ಇದೆ.

ಏಜೆಂಟ್‌ಗಳ ಮೂಲಕ:
ಜನದಟ್ಟಣೆ ಹೆಚ್ಚಾಾಗಿರುವ ಪ್ರದೇಶ, ಸಂಚಾರ ದಟ್ಟಣೆ ಹೆಚ್ಚಿಿರುವ ಪ್ರದೇಶಗಳು, ಜಾತ್ರೆೆ-ಉತ್ಸವಗಳು ನಡೆಯುವ ಊರುಗಳನ್ನು ಪಟ್ಟಿಿ ಮಾಡಿ ಮಾಫಿಯಾದ ಸೂತ್ರದಾರರು ಬಾಡಿಗೆ ತಾಯಂದಿರು-ಅಮಾಯಕ ಮಕ್ಕಳನ್ನೇ ಬಳಸಿಕೊಂಡು ಕೋಟಿ-ಕೋಟಿ ನುಂಗುತ್ತಿಿದ್ದಾರೆ. ರಾಜ್ಯದ ಮೂಲೆ-ಮೂಲೆಯ ವಿದ್ಯಾಾಮಾನಗಳ ಬಗ್ಗೆೆಯೂ ದಂಧೆಕೋರರು ಅಧ್ಯಯನ ನಡೆಸಿರುತ್ತಾಾರೆ. ತಮ್ಮ ಏಜೆಂಟ್‌ಗಳ ಮೂಲಕ ಮಹಿಳೆಯರು-ಮಕ್ಕಳನ್ನು ಆ ಭಾಗಗಳಲ್ಲಿ ಬಿಡುತ್ತಾಾರೆ.

ಭಿಕ್ಷಾಟನೆ ಮಾಫಿಯಾ ಹೆಚ್ಚಿಿರುವ ಮೂರು ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದೆ. ಇದನ್ನೆೆ ಬಂಡವಾಳವನ್ನಾಾಗಿಸಿಕೊಂಡಿರುವ ಪಾತಕಿಗಳು ಕೋಟ್ಯಂತರ ರು. ಸಂಗ್ರಹಿಸುತ್ತಿಿದ್ದಾಾರೆ. ಮಕ್ಕಳು ಭಿಕ್ಷೆೆ ಬೇಡಿದ ಹಣ ನೀಡದಿದ್ದರೆ ಅಂತಹವರ ಮೇಲೆ ಆ್ಯಸಿಡ್ ದಾಳಿ ಇಲ್ಲವೆ, ಕೈಕಾಲು ಊನ ಮಾಡುವ ಕೃತ್ಯ ಮುಂದುವರಿಯುತ್ತಿಿದೆ. ಮಹಿಳೆಯರು ಎಳೆ ಮಕ್ಕಳನ್ನು ಕಂಕುಳಲ್ಲಿ ಇಟ್ಟುಕೊಂಡು ಭಿಕ್ಷಾಾಟನೆಯಲ್ಲಿ ತೊಡಗುತ್ತಿಿದ್ದಾಾರೆ. ಬೆಂಗಳೂರು ನಗರ ಮತ್ತು ಗ್ರಾಾಮಾಂತರ ಬಳ್ಳಾಾರಿ, ತುಮಕೂರು ಹಾಗೂ ಮೈಸೂರಿನಲ್ಲೂ ಈ ಮಾಫಿಯಾ ಸಕ್ರಿಿಯವಾಗಿರುವುದು ತಿಳಿದು ಬಂದಿದೆ.
ರಾಜ್ಯದಲ್ಲಿರುವ ಭಿಕ್ಷುಕರ ಸಂಖ್ಯೆೆ ಖಚಿತವಾಗಿ ಹೇಳಲು ಸಾಧ್ಯವಾಗುತ್ತಿಿಲ್ಲ ಎಂದು ಅಧಿಕಾರಿಗಳು ತಿಳಿಸುತ್ತಾಾರೆ. ದೂರುಗಳು ಬಂದಿರುವ ಆಧಾರದ ಮೇಲೆ ಭಿಕ್ಷುಕರ ಸಂಖ್ಯೆೆ ಪರಿಗಣಿಸಲಾಗುತ್ತಿಿದೆ. ಈಗಾಗಲೇ ಭಿಕ್ಷುಕರ ನೆರವಿಗೆ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ ಈ ಕೇಂದ್ರಗಳು ಸೌಲಭ್ಯಗಳ ಹೊರತಾಗಿವೆ. ಆದ್ದರಿಂದಲೇ ಪುನರ್ವಸತಿ ಕೇಂದ್ರದಲ್ಲಿರುವ ಭಿಕ್ಷುಕರು ಮತ್ತೆೆ ಬೀದಿಗೆ ಬಂದು ತಮ್ಮ ವೃತ್ತಿಿ ಮುಂದುವರಿಸುತ್ತಿಿದ್ದಾಾರೆ.
=====

ಭಿಕ್ಷಾಾಟನೆಗೆ ಸಾರ್ವಜನಿಕರಿಂದಲೇ ಮುಕ್ತಿಿ!
1. ಕೆಲಸ ಮಾಡುವ ಸಾಮರ್ಥ್ಯ ಇರುವವರಿಗೆ ನಿರ್ದಾಕ್ಷಿಣ್ಯವಾಗಿ ಭಿಕ್ಷೆ ಕೊಡಲು ನಿರಾಕರಿಸಬೇಕು.
2. ವೃದ್ಧರನ್ನು ಅವರ ಮಕ್ಕಳ ಮನವೊಲಿಸಿ ಪಾಲನೆಯ ಹೊಣೆ ಹೊರಿಸಬೇಕು.
3. ಮಕ್ಕಳ ಕೈಗೆ ಹಣ ಕೊಡದೆ ಆಹಾರ, ಬಟ್ಟೆೆ ಮಾತ್ರ ನೀಡುವ ಮೂಲಕ ಇದು ಒಂದು ದಂಧೆಯಾಗದಂತೆ ತಡೆಯಬೇಕು.
4. ಮಕ್ಕಳು ದುಡ್ಡಿಿಗೆ ಕೈ ಚಾಚುತ್ತಿಿರುವುದು ಕಂಡು ಬಂದರೆ ಅವರ ಪೂರ್ವಾಪರ ವಿಚಾರಿಸಿ, ಅನುಮಾನ ಬಂದರೆ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.
5. ಭಿಕ್ಷುಕರು ಈ ಸಮಾಜದ ನತದಷ್ಟ ಶಿಶುಗಳು. ಅವರ ಬಗ್ಗೆೆ ಕಳಕಳಿ-ಕನಿಕರ ಇರಲಿ. ಆದರೆ ಅವರನ್ನು ಉತ್ತೇಜಿಸುವುದು ಬೇಡ.

ಭಿಕ್ಷುಕರ ಸೆಸ್ ಹಣಕ್ಕೆೆ ಅಧಿಕಾರಿಗಳು ಕತ್ತರಿ ಪ್ರಯೋಗ?
ಭಿಕ್ಷುಕರ ಸೆಸ್ ಹೆಸರಿನಲ್ಲಿ ರಾಜ್ಯ ಸರಕಾರ ಪ್ರತಿ ವರ್ಷ ಕೋಟ್ಯಂತರ ರು. ಸಂಗ್ರಹಿಸುತ್ತದೆ. ಆದರೆ, ನಿರ್ಗತಿಕರ ಪುನರ್ವಸತಿಗೆ ಬಳಸಬೇಕಾಗಿದ್ದ ಈ ಹಣವನ್ನೂ ನುಂಗಿ ಹಾಕಲಾಗುತ್ತಿಿದೆ. ನಿಸ್ಸಹಾಯಕರ ಬಾಳಿನಲ್ಲಿ ನವ ಜೀವನದ ಆಶಾಕಿರಣ ಮೂಡಿಸಬೇಕಾಗಿದ್ದ ಪುನರ್ವಸತಿ ಕೇಂದ್ರಗಳು ಚಿತ್ರಹಿಂಸೆ ಕೊಡುವ ಸಾವಿನ ಶಿಬಿರಗಳಾಗಿ ಮಾರ್ಪಟ್ಟಿಿವೆ. ಮೊದಲು ಇಂಥ ಕೇಂದ್ರಗಳನ್ನು ವ್ಯವಸ್ಥಿಿತವಾಗಿ ರೂಪಿಸಬೇಕಿದೆ. ಸ್ವಾಾವಲಂಬಿ ಬದುಕಿಗಾಗಿ ಭಿಕ್ಷುಕರಲ್ಲಿ ಜೀವನ ಕೌಶಲ ರೂಢಿಸಬೇಕಿದೆ. ಬೀದಿ ಮಕ್ಕಳನ್ನು ಬಾಲ ಮಂದಿರಕ್ಕೆೆ ಸೇರಿಸಿ, ಅಪಹರಣ ಕೃತ್ಯಗಳಿಗೆ ಕಡಿವಾಣ ಹಾಕಬೇಕಿದೆ.

ಭಿಕ್ಷಾಾಟನೆ ಅಂತ್ಯಕ್ಕೆೆ ಸರಕಾರ ಏನು ಮಾಡಬೇಕು?
-ಮಾಫಿಯಾ ರುವಾರಿಗಳನ್ನು ಪತ್ತೆೆ ಹಚ್ಚಿಿ ಕ್ರಮಕೈಗೊಳ್ಳಬೇಕು
-ಭಿಕ್ಷಾಟನೆ ಕುರಿತ ಸಂಪ್ರದಾಯದ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು
-ಪುನರ್ವಸತಿ ಕೇಂದ್ರಗಳನ್ನು ಹೆಚ್ಚಿಿಸಬೇಕು
-ಭಿಕ್ಷಾಾಟನೆ ನಿರ್ಮೂಲನೆಗೆ ತಜ್ಞರ ಸಮಿತಿ ನೇಮಕ ಮಾಡಬೇಕು
-ರಕ್ಷಿಸಿದ ಮಕ್ಕಳ ಆರೈಕೆಗೆ ಪ್ರತ್ಯೇಕ ಸ್ವೀಕಾರ ಕೇಂದ್ರ ಸ್ಥಾಾಪನೆ

ಮಕ್ಕಳ ರಕ್ಷಣೆಗಿರುವ ಆಯೋಗ ಸೂಕ್ತವಾಗಿ ಕೆಲಸ ಮಾಡುತ್ತಿಿಲ್ಲ. ಮಹಾ ನಗರಗಳಲ್ಲಿ ಭಿಕ್ಷಾಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಗುರುತಿಸಿ ಅವರನ್ನು ರಕ್ಷಿಿಸುವಲ್ಲಿ ಪೊಲೀಸ್ ಇಲಾಖೆ ಅಥವಾ ಪುನರ್ವಸತಿ ಕೇಂದ್ರ ನಿಷ್ಕ್ರಿಿಯವಾಗಿದೆ. ಕರ್ನಾಟಕದಲ್ಲಿ ಹೆಚ್ಚು ಭಿಕ್ಷುಕರಿದ್ದಾಾರೆ.
ಕುಮಾರ್ ಜಾಗೀರ್‌ದಾರ್ ಕ್ರಿಿಸ್‌ಪ್‌ ಸಂಸ್ಥೆೆಯ ಅಧ್ಯಕ್ಷ

Leave a Reply

Your email address will not be published. Required fields are marked *