Monday, 20th January 2020

ಯತಿರಾಜ ಮಠದಲ್ಲಿ ಶ್ರೀರಾಮಾನುಜ ವೈಭವ

ಯದುಗಿರಿ ಯತಿರಾಜ ಮಠದ ವತಿಯಿಂದ ಶ್ರೀ ರಾಮಾನುಜ ವೈಭವ ಎಂಬ 14 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಸೆ.14ರಿಂದ 27ರ ವರೆಗೆ ನಡೆಯಲಿರುವ ಕಾರ್ಯಕ್ರಮಕ್ಕೆೆ ಉಪಮುಖ್ಯಮಂತ್ರಿಿ ಡಾ.ಸಿ.ಎನ್. ಆಶ್ವತ್ಥನಾರಾಯಣ್ ಚಾಲನೆ ನೀಡಲಿದ್ದಾರೆ ಎಂದು ಯತಿರಾಜ ಮಠದ ಯದುಗಿರಿ ಯತಿರಾಜ ನಾರಾಯಣ ಜೀಯರ್ ಸ್ವಾಾಮೀಜಿ ತಿಳಿಸಿದ್ದಾರೆ.
ನಗರದ ಯದುಗಿರಿ ಯತಿರಾಜ ಮಠದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಅವರು, 14 ದಿನಗಳ ಕಾಲ ನಡೆಯುವ ಈ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಾಟನಾ ಸಮಾರಂಭ ಚೌಡಯ್ಯ ಮೆಮೋರಿಯಲ್ ಸಭಾಂಗಣದಲ್ಲಿ ನಡೆಯಲಿದ್ದು, ಖ್ಯಾಾತ ನಿರ್ದೇಶಕ ಟಿ.ಎಸ್ ನಾಗಾಭರಣ ಪಾಲ್ಗೊೊಳ್ಳಲಿದ್ದಾರೆ. ಸೆ.15ರಿಂದ ಪ್ರತಿನಿತ್ಯ ಸಂಜೆ 6.30ರಿಂದ 8.30ರ ವರೆಗೆ ಮಠದ ರಾಮಾನುಜ ಸಂಸ್ಕೃತಿ ವನದಲ್ಲಿ ಸಂಗೀತ, ನೃತ್ಯ, ಬೊಂಬೆಯಾಟದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಪ್ರತಿನಿತ್ಯ ನೂರಾರು ಸಾರ್ವಜನಿಕರಿಗೆ , ಶಾಲಾ ವಿದ್ಯಾಾರ್ಥಿಗಳಿಗೆ, ಅನಾಥಾಶ್ರಮದ ಮಕ್ಕಳಿಗೆ ಅನ್ನದಾನ ಮಾಡುತ್ತಿಿರುವ ಮಠ ಮುಂದಿನ ದಿನಗಳಲ್ಲಿ ತಿಂಗಳಿಗೊಂದು ಕೊಳೆಗೇರಿ ಪ್ರದೇಶವನ್ನು ಆಯ್ಕೆೆ ಮಾಡಿಕೊಂಡು ಅಲ್ಲಿಯೂ ಸುಮಾರು 500 ಜನರಿಗೆ ಮಧ್ಯಾಾಹ್ನದ ಊಟ ನೀಡುವ ಯೋಜನೆಯಿದೆ. ಜತೆಗೆ ಶ್ರೀನಗರದಲ್ಲಿ ಯತಿರಾಜ ಮಠ ನಿರ್ಮಿಸಿ ರಾಮಾನುಜಾಚಾರ್ಯರ ಪ್ರತಿಮೆ ನಿರ್ಮಾಣಕ್ಕಾಾಗಿ ಪ್ರಧಾನ ಮಂತ್ರಿಿಗಳಿಗೆ ಮನವಿ ಮಾಡಲಾಗಿದೆ ಎಂದರು.

Leave a Reply

Your email address will not be published. Required fields are marked *