Wednesday, 5th August 2020

ಸೋತು ಗೆದ್ದವಳು; ಜೂಲಿ

ಅಭಿಮತ

 ವಿಕ್ರಮ್ ಜೋಶಿ

ಪ್ರಜಾಪ್ರಭುತ್ವ ಪ್ರಬಲವಾಗಬೇಕೆಂದರೆ, ಬಲವಾದ ಕಾರಣವಿದ್ದಾಗ ಸರಕಾರವನ್ನು ವಿರೋಧಿಸುವ ಅವಕಾಶ ಎಲ್ಲರಿಗೂ ಇರಬೇಕು. ನಮ್ಮಲ್ಲಿ ಸರಕಾರಿ ಕೆಲಸದಲ್ಲಿ ಇರುವವರು ಸರಕಾರದ ವಿರುದ್ಧ ಏನೂ ಹೇಳುವಂತಿಲ್ಲ, ಖಾಸಗಿ ಕಂಪನಿಯಲ್ಲಿ ಇರುವ ವ್ಯಕ್ತಿಿಗಳು ಇಂಥ ವಿಷಯದಲ್ಲಿ ನಾಜೂಕಾಗಿ ವ್ಯವಹರಿಸುತ್ತಾಾರೆ!

ಬಾಕ್‌ಸ್‌; ಡೊನಾಲ್ಡ್ ಟ್ರಂಪ್ ಸರಕಾರದ ವಿರುದ್ಧ ಆಕೆ ತೋರಿದ ಅತೃಪ್ತತೆ, ಹತಾಶಭಾವದ ಪ್ರದರ್ಶನ ಅದಾಗಿತ್ತು. ಇದಾಗಿ ಮೂರೇ ದಿನದಲ್ಲಿ ಜೂಲಿ ತನ್ನ ಕೆಲಸವನ್ನು ಕಳೆದುಕೊಳ್ಳುತ್ತಾಾಳೆ. ಅದಕ್ಕೆೆ ಕಾರಣವೇನು? ಜೂಲಿ ಬ್ರಿಿಸ್‌ಕ್‌‌ಮನ್ ತನ್ನ ಸೈಕಲ್ ಮೇಲಿಂದ ಮಧ್ಯದ ಬೆರಳು ತೋರಿಸಿದ ದೃಶ್ಯವನ್ನು ವೈಯರ್ ಸೇವೆ ಕ್ಯಾಾಮೆರಾದಲ್ಲಿ ಸೆರೆ ಹಿಡಿಯುತ್ತದೆ.

ಜೂಲಿ ಬ್ರಿಿಸ್‌ಕ್‌‌ಮನ್ ಅಮೆರಿಕದ ವರ್ಜೀನಿಯಾದ ನಿವಾಸಿ. ಅಲ್ಲಿನ ‘ಅಕಿಮಾ’ ಎನ್ನುವ ಒಂದು ಖಾಸಗಿ ಕನ್‌ಸ್‌‌ಟ್ರಕ್ಷನ್ ಕಂಪನಿಯಲ್ಲಿ ಅವಳ ಕೆಲಸ. ಒಂದು ಶನಿವಾರ ಆಕೆ ಮನೆಯ ಹತ್ತಿಿರದ ರಸ್ತೆೆಯಲ್ಲಿ ಸೈಕ್ಲಿಿಂಗ್‌ಗೆ ಹೋಗಿರುತ್ತಾಾಳೆ. ಅದೇ ದಿನ ಅಮೆರಿಕದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಕೂಡ ಅಲ್ಲಿಗೆ ಬಂದಿರುತ್ತಾಾರೆ. ವರ್ಜೀನಿಯಾದಲ್ಲಿ ಅವರದ್ದೊಂದು ಖಾಸಗಿ ಗಾಲ್‌ಫ್‌ ಕೋರ್ಸ್ ಇದೆ. ಅಲ್ಲಿ ವಿರಮಿಸಲು ಬಂದಿದ್ದಿರಬೇಕು. ರಸ್ತೆೆಯ ನಡುವೆ ಟ್ರಂಪ್ ಹಾಗೂ ಸುರಕ್ಷಾ ದಳದ ವಾಹನಗಳ ಸಾಲು ಹೋಗುತ್ತಿಿರುವುದನ್ನು ಕಂಡ ಜೂಲಿ ತನ್ನ ಕೈ ಎತ್ತಿಿ ಮಧ್ಯದ ಬೆರಳನ್ನು ತೋರಿಸುತ್ತಾಾಳೆ. ಡೊನಾಲ್ಡ್ ಟ್ರಂಪ್ ಸರಕಾರದ ವಿರುದ್ಧ ಆಕೆ ತೋರಿದ ಅತೃಪ್ತತೆ, ಹತಾಶಭಾವದ ಪ್ರದರ್ಶನ ಅದಾಗಿತ್ತು. ಇದಾಗಿ ಮೂರೇ ದಿನದಲ್ಲಿ ಜೂಲಿ ತನ್ನ ಕೆಲಸವನ್ನು ಕಳೆದುಕೊಳ್ಳುತ್ತಾಾಳೆ. ಅದಕ್ಕೆೆ ಕಾರಣವೇನು? ಜೂಲಿ ಬ್ರಿಿಸ್‌ಕ್‌‌ಮನ್ ತನ್ನ ಸೈಕಲ್ ಮೇಲಿಂದ ಮಧ್ಯದ ಬೆರಳು ತೋರಿಸಿದ ದೃಶ್ಯವನ್ನು ವೈಯರ್ ಸೇವೆ ಕ್ಯಾಾಮೆರಾದಲ್ಲಿ ಸೆರೆ ಹಿಡಿಯುತ್ತದೆ. ನಂತರದಲ್ಲಿ ಅದನ್ನು ‘ವಾಯ್‌ಸ್‌ ಆಫ್ ಅಮೆರಿಕ’ ತನ್ನ ಆನ್‌ಲೈನ್ ಪುಟದಲ್ಲಿ ಪ್ರಕಟಿಸುತ್ತದೆ. ಕೆಲವೇ ಗಂಟೆಗಳಲ್ಲಿ ಟ್ರಂಪ್ ಮೋಟರ್ ಕೇಡ್‌ಗೆ ಮಹಿಳೆಯೊಬ್ಬಳು ವಿರೋಧಿಸಿದ ಫೋಟೋ ಜಗತ್ತಿಿನಾದ್ಯಂತ ವೈರಲ್.

ಆ ಫೋಟೋವನ್ನು ಜೂಲಿ ತನ್ನ ಫೇಸ್‌ಬುಕ್ ಹಾಗೂ ಟ್ವಿಿಟರ್ ಖಾತೆಯ ಪ್ರೊೊಫೈಲ್ ಪಿಕ್ ಆಗಿ ಮಾಡಿಕೊಂಡು ಸಂಭ್ರಮಿಸುತ್ತಾಾಳೆ. ಇದು ಆಕೆ ಕೆಲಸ ಮಾಡುತ್ತಿಿರುವ ಕಂಪನಿಗೆ ಗೊತ್ತಾಾಗುತ್ತದೆ. ಆ ಖಾಸಗಿ ಕಂಪನಿ ಸರಕಾರದ ಹಲವಾರು ಪ್ರಾಾಜ್ಟೆೃ್ನಲ್ಲಿ ಕೆಲಸ ಮಾಡುತ್ತಿಿರುತ್ತದೆ. ತನ್ನ ಉದ್ಯೋೋಗಿಯೊಬ್ಬಳು ಹೀಗೆ ಮಾಡಿದ್ದು ಸರಕಾರಕ್ಕೆೆ ಗೊತ್ತಾಾದರೆ ಕಂಪನಿಗೆ ತೊಂದರೆ ತಪ್ಪಿಿದ್ದಲ್ಲ ಎಂದು ತೀರ್ಮಾನಿಸಿ ತಕ್ಷಣವೇ ಜೂಲಿಗೆ ಒತ್ತಾಾಯ ಪೂರ್ವಕವಾಗಿ ರಾಜೀನಾಮೆ ಕೊಡುವಂತೆ ಮಾಡಿ ಅವಳನ್ನು ಕೆಲಸದಿಂದ ತೆಗೆಯಲಾಗುತ್ತದೆ. ಕಂಪನಿಯ ಉದ್ಯೋೋಗಿಯಾಗಿ ಸಾಮಾಜಿಕ ಜಾಲತಾಣದ ನಿಯಮ ಮುರಿದಿರುವುದೇ ಕೆಲಸದಿಂದ ವಜಾ ಮಾಡುವ ಕಾರಣವಾಗುತ್ತದೆ. ಪ್ರತಿಯೊಬ್ಬ ನಾಗರಿಕನಿಗೂ ತನ್ನ ‘ಅಭಿವ್ಯಕ್ತಿಿ ಸ್ವಾಾತಂತ್ರ್ಯ ಹಂಚಿಕೊಳ್ಳುವ ಹಕ್ಕು ಪ್ರಜಾಪ್ರಭುತ್ವ’ದಲ್ಲಿ ಇರುತ್ತದೆ. ಇದಕ್ಕೆೆ ಅಮೆರಿಕ ಹೊರತಾಗಿಲ್ಲ. ಆದರೂ ಜೂಲಿಯ ಪಾಲಿಗೆ ಶಿಕ್ಷೆ ತಪ್ಪಿಿರಲಿಲ್ಲ. ಇನ್ನೊೊಂದು ವಿಷಯ ಅಂದರೆ ಜೂಲಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲೂ ತಾನು ಈ ಕಂಪನಿಯಲ್ಲಿ ಕೆಲಸ ಮಾಡುತ್ತಿಿದ್ದೇನೆ ಎಂದು ಬರೆದುಕೊಂಡಿರುವುದಿಲ್ಲ. ಅಷ್ಟೇ ಅಲ್ಲ, ವೈರಲ್ ಆದ ಆ ಫೋಟೋದಲ್ಲಿ ಆಕೆಯ ಮುಖವೂ ಕಾಣುತ್ತಿಿರಲಿಲ್ಲ. ಅದ್ಯಾಾಗೂ ಅವಳನ್ನು ಕೆಲಸದಿಂದ ತೆಗೆದು ಹಾಕುತ್ತಾಾರೆ. ಇದು ಅನ್ಯಾಾಯ ಅಲ್ಲವೇ?

ಜೂಲಿ ನ್ಯಾಾಯ ಕೋರಿ ಕೋರ್ಟಿನ ಮೆಟ್ಟಿಿಲು ಹತ್ತುತ್ತಾಾಳೆ. ನ್ಯಾಾಯಾಧೀಶರು ಜೂಲಿಯ ಪರವಾಗಿ ಆದೇಶ ಹೊರಡಿಸುತ್ತಾಾರೆ. ಆಕೆಗೆ ನ್ಯಾಾಯ ಬದ್ಧ ಪರಿಹಾರ ಸಿಗುತ್ತದೆ. ಇಷ್ಟಕ್ಕೇ ಕೇಸ್ ಮುಗಿದಿದ್ದರೆ ಮಾತು ಬೇರೆ ಇತ್ತು. ಆದರೆ, ಜೂಲಿ ಮತ್ತೆೆ ಪುನಃ ಕೆಲಸಕ್ಕೆೆ ಸೇರುವುದಿಲ್ಲ. ಆಕೆ ತಾನು ಚುನಾವಣೆಗೆ ನಿಲ್ಲುವುದಾಗಿ ಹೇಳುತ್ತಾಾಳೆ. ಅದೂ ಟ್ರಂಪ್ ಪಕ್ಷ, ರಿಪಬ್ಲಿಿಕನ್ ಪಾರ್ಟಿಯ ವಿರುದ್ಧ! ಅವಳ ಎದುರಾಳಿ ರಿಪಬ್ಲಿಿಕನ್ ಸುಜೇನ್ ವೋಲ್ಪ್. ಇವರು ಎಂಟು ವರ್ಷದಿಂದ ಅಲ್ಲಿಯ ಆಡಳಿತಾಧಿಕಾರಿ. ಅವರ ವಿರುದ್ಧ ಲೌಡೌನ್ ಕೌಂಟಿ ಬೋರ್ಡ್ ಚುನಾವಣೆಯಲ್ಲಿ 52% ಮತ ಪಡೆದು ಗೆದ್ದಿದ್ದಾರೆ. ಇದು ಸಣ್ಣ ಸಾಮಾನ್ಯ ವಿಷಯವಲ್ಲ, ನಾವು ಗಮನಿಸಬೇಕಾದದ್ದು. ರಾಷ್ಟ್ರಾಾಧ್ಯಕ್ಷರನ್ನು ಎದುರಿಸಿ, ಕೆಲಸ ಕಳೆದುಕೊಂಡು, ಚುನಾವಣೆಗೆ ನಿಂತು, ಪ್ರಚಾರ ಮಾಡಿ, ಅಲ್ಲಿಯ ಪ್ರಭಾವಿ ಅಭ್ಯರ್ಥಿ ಎದುರು ಗೆದ್ದು ಬರುವ ಆ ಎರಡು ವರ್ಷಗಳ ಹೋರಾಟ ಪ್ರಶಂಸನೀಯ!

ಇಲ್ಲಿ ಎರಡು ಮುಖ್ಯ ವಿಚಾರಗಳಿವೆ ಮೊದಲನೆಯದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿಿರುವ ಒಬ್ಬ ವ್ಯಕ್ತಿಿ ಸರಕಾರದ ವಿರುದ್ಧ ತನ್ನ ಅಭಿಪ್ರಾಾಯ ವ್ಯಕ್ತಪಡಿಸುವ ಸ್ವಾಾತಂತ್ರ್ಯ ಇದೆಯೇ? ಎರಡನೆಯ ವಿಷಯ ಖಾಸಗಿ ಕಂಪನಿಗಳು ತಮ್ಮ ಉದ್ಯೋೋಗಿಗಳು ಸರಕಾರದ ಬಗ್ಗೆೆ ಅತೃಪ್ತಿಿ ತೋರಿದಾಗ ಹೇಗೆ ನಡೆದುಕೊಳ್ಳಬೇಕು ಎನ್ನುವುದು. ಜೂಲಿ ತನ್ನ ಕೆಲಸದ ವೇಳೆಯಲ್ಲಿ ಯಾವುದೇ ಸಾಮಾಜಿಕ ಚಟುವಟಿಕೆ ನಡೆಸಿರಲಿಲ್ಲ. ಬದಲಾಗಿ ಕೆಲಸದ ಹೊರಗಿನ ಸಮಯದಲ್ಲಿ ಸರಕಾರದ ವಿರುದ್ಧ ತನ್ನ ಅಸಂತುಷ್ಟತೆಯನ್ನು ಹಂಚಿಕೊಂಡಿದ್ದಳು. ಇದಲ್ಲದೆ ಆಕೆ ಎಲ್ಲೂ ತಾನು ಕೆಲಸ ಮಾಡುತ್ತಿಿರುವ ಕಂಪನಿಯ ಬಗ್ಗೆೆ ಹೇಳಿ ಕೊಂಡಿರಲಿಲ್ಲ. ಇದನ್ನು ಗಮನಿಸಬೇಕಿತ್ತಲ್ಲವೇ? ಅದನ್ನು ಬಿಟ್ಟು ಸರಕಾರಕ್ಕೆೆ ಹೆದರಿ, ಟ್ರಂಪ್ ತಮ್ಮ ಕಾಂಟ್ರಾ್ಟಾೃ್‌ ರದ್ದು ಪಡಿಸಬಹುದೆನೋ ಎಂದು ಕೊಂಡು ತಕ್ಷಣವೇ ಆಕೆಗೆ ರಾಜೀನಾಮೆ ಕೊಡುವಂತೆ ಒತ್ತಾಾಯ ಮಾಡಿದ್ದು ಅಮೆರಿಕದಂತಹ ಪ್ರಜಾಪ್ರಭುತ್ವದಲ್ಲಿ ಆಶ್ಚರ್ಯವೇ! ಅಮೆರಿಕ ಇರಲಿ, ಭಾರತ ವಿರಲಿ, ರಷ್ಯಾಾ, ಈಜ್ಟಿ್ೃ, ಇಸ್ರೇಲ್ ಇನ್ಯಾಾವುದೇ ರಾಷ್ಟ್ರವಿರಬಹುದು, ಎಲ್ಲ ಕಡೆಯೂ ಇಂದು ಇದೊಂದು ಟ್ರೆೆಂಡ್ ಆಗಿದೆ. ಸಾಮಾಜಿಕ ಜಾಲತಾಣವನ್ನು ಆಧಾರವಾಗಿಟ್ಟುಕೊಂಡು ಅವರ ಭವಿಷ್ಯವನ್ನು ಕಡಿದು ಹಾಕುವುದು. ಕೆಲವೊಬ್ಬರು ಹೋರಾಡುವುದಿಲ್ಲ, ಇನ್ನು ಕೆಲವರು ಹೋರಾಡುತ್ತಾಾರೆ. ಜೂಲಿ ನಂತರದ ಗುಂಪಿಗೆ ಸೇರಿದವಳು, ಸೋತು ಗೆದ್ದವಳು!

ನಮ್ಮ ದೇಶದಲ್ಲಿ ಕೂಡ ಇಂತಹ ಬಹಳ ನಿದರ್ಶನಗಳು ಇವೆ. ಕರ್ನಾಟಕದಲ್ಲಿಯೇ ಉದಾಹರಣೆಗಳು ಬೇಕಾದಷ್ಟಿಿವೆ. ಆದರೆ, ಇಲ್ಲಿ ಹೋರಾಡಿ ಗೆದ್ದವರ ಸಂಖ್ಯೆೆ ಬಹಳ ವಿರಳ. ನಮಗೆ ಗೊತ್ತಿಿರದ ಅದೆಷ್ಟೋೋ ಸಾಮಾಜಿಕ ಜಾಲತಾಣದ ಕಾರ್ಯಕರ್ತರು ನೋಡು ನೋಡುತ್ತಿಿರುವಂತೆ ಕಾಣೆಯಾಗುತ್ತಾಾರೆ. ಅಮೆರಿಕದಲ್ಲಿರುವಷ್ಟು ಪಾರದರ್ಶಕತೆ ನಮ್ಮಲ್ಲಿ ಇಲ್ಲ. ಅದೂ ವಿಶೇಷವಾಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿಿರುವ ವ್ಯಕ್ತಿಿ ಇಂತಹ ಇಕ್ಕಟ್ಟಿಿಗೆ ಸಿಲುಕಿದಾಗ, ಅವರನ್ನು ರಕ್ಷಿಸಲು ಮುಂದಾಗುವ ಸಂಘ-ಸಂಸ್ಥೆೆಗಳು ಕೂಡ ಕಡಿಮೆ. ಪ್ರಜಾಪ್ರಭುತ್ವ ಪ್ರಬಲವಾಗಬೇಕು ಅಂದರೆ ಬಲವಾದ ಕಾರಣವಿದ್ದಾಗ ಸರಕಾರವನ್ನು ವಿರೋಧಿಸುವ ಅವಕಾಶ ಎಲ್ಲರಿಗೂ ಇರಬೇಕು. ನಮ್ಮಲ್ಲಿ ಸರಕಾರಿ ಕೆಲಸದಲ್ಲಿ ಇರುವವರು ಸರಕಾರದ ವಿರುದ್ಧ ಏನೂ ಹೇಳುವಂತಿಲ್ಲ, ಖಾಸಗಿ ಕಂಪನಿಯಲ್ಲಿ ಇರುವ ವ್ಯಕ್ತಿಿಗಳು ಸರಕಾರದ ವಿರುದ್ಧದ ಚಟುವಟಿಕೆಗಳಲ್ಲಿ ಬಹಳ ನಾಜೂಕಾಗಿ ವ್ಯವಹರಿಸಬೇಕು. ಇನ್ನು ನೀವು ವ್ಯಾಾಪಾರಸ್ಥರಾಗಿದ್ದರೆ ಸರಕಾರದ ಕೆಲಸದಲ್ಲಿ ವ್ಯವಹಾರ ಮಾಡುತ್ತಿಿದ್ದರೆ, ಸರಕಾರಿ ಕಚೇರಿಗಳಿಗೆ ಹೋಗಿ ಬರುವ ವ್ಯಾಾಪಾರ ಆಗಿದ್ದರೆ ಇನ್ನೂ ಕಷ್ಟ. ಹಾಗಿದ್ದರೆ ವಿರೋಧಿಸುವ ಹಕ್ಕು ಕೇವಲ ನಿರುದ್ಯೋೋಗಿಗಳಿಗೆ ಅಥವಾ ಸಮಾಜ ಸೇವೆ ಎನ್ನುವ ನಾಮಫಲಕ ಕಟ್ಟಿಿ ಕೊಂಡವರಿಗೆ ಮಾತ್ರ ಸೀಮಿತವೇ? ಉಳಿದವರು ತಮ್ಮ ಸ್ವಾಾತಂತ್ರ್ಯವನ್ನು ತಿಜೋರಿಯಲ್ಲಿ ಕೂಡಿಟ್ಟು ನಿವೃತ್ತಿಿ ಪಡೆದ ನಂತರ ಬಳಸಬೇಕೆ? ಇದೇ ಕಾರಣಕ್ಕೆೆ ಏನೂ ಇಲ್ಲದೇ ಸುಮ್ಮನೆ ಸರಕಾರವನ್ನು ವಿರೋಧಿಸಿ ಹಣಗಳಿಸುವುದು ನಿರುದ್ಯೋೋಗಿಗಳ ಉದ್ಯೋೋಗವಾಗಿದೆ. ಉದ್ಯೋೋಗ ಇದ್ದವರು ಬಾಯಿಮುಚ್ಚಿಿಕೊಂಡು ಇರಬೇಕು ಎನ್ನುವ ಅಲಿಖಿತ ನಿಯಮ!

ನಮ್ಮಲ್ಲಿಯ ಇಂದಿನ ಈ ಪರಿಸ್ಥಿಿತಿ ಬದಲಾಗಬೇಕು. ಉದ್ಯೋೋಗ ಹಾಗೂ ನಾಗರಿಕ ಕರ್ತವ್ಯ ಎರಡೂ ಬೇರೆಯಾಗಿ ನೋಡಬೇಕು. ಎರಡನ್ನೂ ಅಷ್ಟೇ ಮುಖ್ಯವಾಗಿ ಕಾಣಬೇಕು. ಸೇವೆ ಮಾಡುತ್ತಿಿದ್ದಾನೆ ಅಂದರೆ ಆತ ಒಂದು ಸಂಸ್ಥೆೆಯ ಸ್ವತ್ತಾಾಗುವುದಿಲ್ಲ! ಆತನಿಗೂ ಖಾಸಗಿ ಬದುಕಿರುತ್ತದೆ. ಆತ ತನ್ನ ಸಮಾಜದ ಭಾಗವಾಗಿರುತ್ತಾಾನೆ. ಹಕ್ಕು ಹಾಗೂ ಕರ್ತವ್ಯ ಎರಡೂ ಅವನ ಪಾಲಿಗೆ ಸಂವಿಧಾನ ಕೊಟ್ಟಿಿದೆ. ಎಲ್ಲವೂ ಇದ್ದರೂ ಕೆಲವು ಸಂಸ್ಥೆೆಗಳು ತಮ್ಮದೇ ನಿಯಮ ಹಾಕಿ ಕೊಂಡಿರುತ್ತವೆ. ಅದನ್ನು ನಿಭಾಯಿಸದೇ ಬದುಕಲು ಸಾಮಾನ್ಯರಿಗೆ ಸಾಧ್ಯವಿಲ್ಲ. ಮನೆ ಮಠ ಮಕ್ಕಳನ್ನು ಕಟ್ಟಿಿಕೊಂಡು ಕೋರ್ಟ್-ಕಚೇರಿ ಅಲೆದಾಡುವ ಉಸಾಬರಿ ಯಾಕೆ ಎಂದು ಎದೆಯೊಳಗೆ ಜ್ವಾಾಲಾಮುಖಿ ಇಟ್ಟುಕೊಂಡು ಬದುಕುತ್ತಾಾರೆ ಬಹಳಷ್ಟು ಜನ! ಇದು ಉಗುಳಲೂ ಆಗದ, ನುಂಗಲೂ ಆಗದ ತುತ್ತು. ಅಂತರ್ಜಾಲ ಜಗತ್ತು, ಸಾಮಾಜಿಕ ಜಾಲತಾಣ, ಇಂಡಸ್ಟ್ರಿಿ 4.0 ಹೀಗೆ ಹೊಸ ಸಮಾಜಿಕ ಆಯಾಮದಲ್ಲಿ ಬದುಕುತ್ತಿಿರುವ ನಾವು ಸರಕಾರ ಹಾಗೂ ನಾಗರಿಕರ ನಡುವಿನ ವ್ಯವಹಾರವನ್ನು ಬೇರೆಯೇ ರೀತಿಯಿಂದ ನೋಡಬೇಕಾದ ದಿನಗಳು ಬಂದಿವೆ.

ಅಂತರ್ಜಾಲ ಇರದೇ ಹೋಗಿದ್ದರೆ, ಸಾಮಾಜಿಕ ಜಾಲತಾಣ ಇಲ್ಲವಾಗಿದ್ದರೆ ಟ್ರಂಪ್ ರಾಷ್ಟ್ರಾಾಧ್ಯಕ್ಷ ಆಗುತ್ತಿಿರಲಿಲ್ಲ, ಜೂಲಿಯ ಫೋಟೋ ವೈರಲ್ ಆಗುತ್ತಿಿರಲಿಲ್ಲ. ಇಡೀ ಪ್ರಸಂಗದ ಮೂಲ ಸಾಮಾಜಿಕ ಬದಲಾವಣೆ. ಅದಕ್ಕೆೆ ತಕ್ಕ ಕಾನೂನು ಬೇಕು, ಸಾರ್ವಜನಿಕರ ರಕ್ಷಣೆ ಅವಶ್ಯಕ. ಜೂಲಿಗೆ ಕೆಲವರು ಟ್ರಂಪ್ ರಾಷ್ಟ್ರಾಾಧ್ಯಕ್ಷ ಅವರಿಗಲ್ಲದಿದ್ದರೂ ಆ ಸ್ಥಾಾನಕ್ಕೆೆ ಗೌರವ ಕೊಡಬೇಕು ಎಂದು ಬುದ್ಧಿಿವಾದ ಹೇಳಿದರಂತೆ. ಇದು ಚರ್ಚೆಯ ಮಾತು. ಹೇಗೆ ವಿರೋಧಿಸಬೇಕಿತ್ತು, ಬೇಡ, ಅಲ್ಲಿಯ ಆಚಾರ, ವಿಚಾರ, ಸಂಸ್ಕೃತಿ ಹೀಗೆ ಹಲವು ಹಿನ್ನೆೆಲೆಯಲ್ಲಿ ನೋಡಬೇಕಿದೆ. ಆದರೆ, ಇಂದು ಬೇಕಿರುವುದು ನಾಗರಿಕರಿಗೆ ಹಿತರಕ್ಷಣೆ. ಕಳೆದ ಸರಕಾರದ ಸಮಯದಲ್ಲಿ ಸರಕಾರದ ವಿರುದ್ಧ ಮಾತನಾಡಿದರೆ ಜೈಲಿಗೆ ತುಂಬುವುದನ್ನು, ಕೇಸ್ ಜಡಿದು ಬಾಯಿ ಮುಚ್ಚುವವರನ್ನು ನೋಡಿದ್ದೇವೆ. ಆ ಪಕ್ಷ ಈ ಪಕ್ಷ ಅಂತಲ್ಲ, ಎಲ್ಲರೂ ತಮ್ಮ ತಮ್ಮ ಅನುಕೂಲಕ್ಕೆೆ ಬಣ್ಣ ಬದಲಾಯಿಸುವವರೇ! ಇದನ್ನು ಮನಗಂಡ ನಾವು ನಮ್ಮನ್ನು ಪ್ರತಿನಿಧಿಸುವ ಸಂಸದರನ್ನು, ವಿದಾಯಕರನ್ನು ಹೊಸ ಕಾನೂನು ತರುವಂತೆ ಆಗ್ರಹಿಸಬೇಕು. ನಾವು ಕಂಡ ಪರಿಸ್ಥಿಿತಿ ಮುಂದೆ ಬರದಂತೆ ನೋಡಿಕೊಳ್ಳಲು ಒಂದು ಕಾನೂನು ವ್ಯವಸ್ಥೆೆ ಸಿದ್ಧಪಡಿಸಲು ಒತ್ತಾಾಯಿಸಬೇಕು. ಸಾಮಾನ್ಯ ಪ್ರಜೆಯೂ ಕೂಡ ತನ್ನ ಖಾಸಗಿ ಸಮಯದಲ್ಲಿ ‘ಅಭಿವ್ಯಕ್ತಿಿ ಸ್ವಾಾತಂತ್ರ್ಯ’ ಬಳಸುವಂತಾಗಬೇಕು. ಇಂದು ಸಾಮಾಜಿಕ ಜಾಲತಾಣ, ಅಂತರ್ಜಾಲಗಳು ಪರಿಣಾಮಕಾರಿಯಾಗಿರುವಾಗ ಅದರ ಮೇಲೆ ಹಿಡಿತ ಸಾಧಿಸುವುದು ಪ್ರಜಾಪ್ರಭುತ್ವದ ನರವನ್ನು ಹಂತ ಹಂತವಾಗಿ ಕತ್ತರಿಸುತ್ತಾಾ ಹೋದಂತೆ. ಯಾವಾಗ ಪ್ರಜ್ಞೆ ತಪ್ಪುುತ್ತದೆ ಎನ್ನುವುದೇ ಗೊತ್ತಾಾಗುವುದಿಲ್ಲ. ಒಮ್ಮೆೆಲೆ ಹೃದಯ ಬಡಿತ ನಿಂತು ಹೋಗುತ್ತದೆ. ಹೀಗಾಗಿ ಇಂತಹ ಸೂಕ್ಷ ್ಮ ವಿಷಯದಲ್ಲಿ ಎಚ್ಚರಿಕೆ ಅವಶ್ಯಕ!

Leave a Reply

Your email address will not be published. Required fields are marked *