Tuesday, 17th September 2019

ಹೊಸ ಅಲೆ ಎಬ್ಬಿಸಿದ ವಾರ್ !

ಆ್ಯಕ್ಷನ್ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಹೊಸ ಅಲೆಯೆಬ್ಬಿಿಸಿದ್ದ ನಿರ್ದೇಶಕ ಸಿದ್ದಾರ್ಥ್ ಆನಂದ್ ಮತ್ತೆೆ ಅಂತಹದ್ದೇ ಚಿತ್ರದ ಮೂಲಕ ಗಮನಸೆಳೆಯುತ್ತಿಿದ್ದಾಾರೆ. ಅದು ಕೂಡ ಮೈನವಿರೇಳಿಸುವ ಸಾಹಸಮಯ ಥ್ರಿಿಲ್ಲರ್ ಚಿತ್ರದೊಂದಿಗೆ. ಹಿಂದಿ ಚಿತ್ರರಂಗದ ಸ್ಟಾಾರ್ ನಟರಾದ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್‌ರನ್ನು ಒಂದೇ ಚಿತ್ರದಲ್ಲಿ ಸೇರಿಸಿ ಸಿದ್ದಾರ್ಥ್ ಆನಂದ್ ’ವಾರ್’ ಆ್ಯಕ್ಷನ್ ಚಿತ್ರ ಮಾಡಿ ಮುಗಿಸಿದ್ದಾರೆ. ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಖತ್ ಸದ್ದು ಮಾಡುತ್ತಿಿದೆ. ಹಾಲಿವುಡ್ ಚಿತ್ರಗಳಿಗೂ ಕಮ್ಮಿಿಯಿಲ್ಲ ಎಂಬ ಅಭಿಪ್ರಾಾಯಗಳು ಕೇಳಿಬಂದಿವೆ. ಸಾಹಸಮಯ ಟ್ರೈಲರ್‌ನಲ್ಲಿ ಕಟಮಸ್ತಾಾದ ದೇಹದೊಂದಿಗಿನ ಹೃತಿಕ್ ಹಾಗೂ ಟೈಗರ್ ಎಂಟ್ರಿಿ ನೋಡುಗರನ್ನು ಮೈನವಿರೇಳಿಸುತ್ತದೆ. ಚೇಸಿಂಗ್, ಫೈಟ್ ದೃಶ್ಯಗಳು ಸಹ ಅಚ್ಚರಿಗೊಳಿಸುತ್ತವೆ.

Leave a Reply

Your email address will not be published. Required fields are marked *