Sunday, 27th September 2020

ಬಡವ ರಾಸ್ಕಲ್ ಗೆ ಮುಹೂರ್ತ..

ಗುಜ್ಜಲ್ ಟಾಕೀಸ್ ಹಾಗೂ ಡಾಲಿ ಪಿಕ್ಚರ್ಸ್ ಲಾಂಛನದಲ್ಲಿ ಗುಜ್ಜಲ್ ಪುರುಷೋತ್ತಮ್ ಹಾಗೂ ಡಾಲಿ ಧನಂಜಯ ನಿರ್ಮಿಸುತ್ತಿಿರುವ ‘ಬಡವ ರಾಸ್ಕಲ್‌‘ ಚಿತ್ರದ ಮುಹೂರ್ತ ಶ್ರೀಬಂಡೆ ಮಹಾಕಾಳಿ ದೇವಸ್ಥಾಾನದಲ್ಲಿ ನೆರವೇರಿತು. ರೇಣುಕಮ್ಮ ಮೊದಲ ಸನ್ನಿಿವೇಶಕ್ಕೆೆ ಆರಂಭ ಫಲಕ ತೋರಿದರು. ದುನಿಯಾ ವಿಜಯ್ ಚೊಚ್ಚಲ ದೃಶ್ಯವನ್ನು ನಿರ್ದೇಶನ ಮಾಡಿದರು. ಶಂಕರ್ ಗುರು ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಸೆಪ್ಟೆೆಂಬರ್‌ನಲ್ಲಿ ಆರಂಭವಾಗಲಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆೆ ವಾಸುಕಿ ವೈಭವ್ ಸಂಗೀತ ನೀಡುತ್ತಿಿದ್ದಾಾರೆ. ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿಿದೆ.
ಧನಂಜಯ್ ನಾಯಕರಾಗಿ ನಟಿಸುತ್ತಿಿರುವ ಈ ಚಿತ್ರದ ನಾಯಕಿ ಅಮೃತ ಅಯ್ಯಂಗಾರ್. ರಂಗಾಯಣ ರಘು, ನಾಗಭೂಷಣ್, ಪೂರ್ಣಚಂದ್ರ ಮೈಸೂರು, ನಿರಂಜನ್, ಚಂದ್ರು, ಅಲ್ಲು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾಾರೆ.

Leave a Reply

Your email address will not be published. Required fields are marked *