Wednesday, 20th November 2019

ಟಿಪ್ಪು ಪಠ್ಯದ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ

ತಿಂಗಳ ಕಾಲ ಅವಕಾಶ ಕೇಳಿದ ಸಮಿತಿ

ಮಕ್ಕಳ ಪಠ್ಯದಲ್ಲಿ ಟಿಪ್ಪು ಸುಲ್ತಾನ್ ಇತಿಹಾಸ ಇರಬೇಕೇ ಬೇಡವೇ ಎನ್ನುವ ಅಂಶ ಸೇರಿಸಬೇಕು ಎನ್ನುವ ವರದಿ ಸಲ್ಲಿಸಲು ವಿಷಯ ತಜ್ಞರು ತಿಂಗಳ ಕಾಲಾವಕಾಶ ಕೋರಿದ್ದಾರೆ.
ಪಠ್ಯಪುಸ್ತಕದಲ್ಲಿ ಟಿಪ್ಪುು ಸುಲ್ತಾಾನ್ ಬಗ್ಗೆೆ ಇರುವ ಅಂಶಗಳನ್ನು ತೆಗೆದುಹಾಕಬೇಕು ಎಂದು ಶಾಸಕ ಅಪ್ಪಚ್ಚು ರಂಜನ್ ಅವರು ಬರೆದಿರುವ ಪತ್ರದ ಆಧಾರದಲ್ಲಿ ತಜ್ಞರು ಹಾಗೂ ಅಪ್ಪಚ್ಚು ರಂಜನ್ ಜತೆ ಸಭೆ ನಡೆಸಿ, ವರದಿ ಸಲ್ಲಿಸುವಂತೆ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಾಪಕ ನಿರ್ದೇಶಕರಿಗೆ ಪ್ರಾಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ನಿರ್ದೇಶಿಸಿದ್ದರು.

ಈ ಹಿನ್ನೆಲೆಯಲ್ಲಿ ರಾಜ್ಯಾಾದ್ಯಂತ ಹಲವು ರೀತಿಯಲ್ಲಿ ಚರ್ಚೆಗೆ ಮೂರು ದಿನದೊಳಗೆ ವರದಿ ಸಲ್ಲಿಸಲು ಸೂಚಿಸಿದ್ದರು. ಹೊಸ ಸಮಿತಿ ರಚನೆ ಅಥವಾ ಈ ಹಿಂದೆ ಪಠ್ಯಪರಿಷ್ಕರಣೆ ಮಾಡಿರುವ ಸಮಿತಿಯೇ ಇದರ ಸಾಧಕ-ಬಾಧಕ ಚರ್ಚೆ ಮಾಡಬೇಕೇ ಎಂಬುದು ಸೇರಿದಂತೆ ಹಲವು ಗೊಂದಲ ಸೃಷ್ಟಿಯಾಗಿತ್ತು. ಅಂತಿಮವಾಗಿ ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ಈ ಹಿಂದಿನ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರು ಹಾಗೂ ವಿಷಯ ತಜ್ಞರೊಂದಿಗೆ ನ.7ರಂದು ಸಭೆ ನಡೆಸಲು ನಿರ್ಧರಿಸಿತ್ತು.
ಅದರಂತೆ ಪಠ್ಯಪುಸ್ತಕ ಸಂಘದಿಂದ ಗುರುವಾರ ಮಲ್ಲೇಶ್ವರದ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾಾ ಮಂಡಳಿಯಲ್ಲಿ ಅಪ್ಪಚ್ಚು ರಂಜನ್ ಹಾಗೂ ಪಠ್ಯಪುಸ್ತಕ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಪ್ರೊ. ಬರಗೂರು ರಾಮಚಂದ್ರಪ್ಪ ಮತ್ತು ವಿಷಯ ತಜ್ಞರ ಸಭೆ ಕರೆದಿತ್ತು.

ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಾಪಕ ನಿರ್ದೇಶಕ ಎಚ್.ಎನ್.ಗೋಪಾಲಕೃಷ್ಣ ಮಾತನಾಡಿ, ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷರಾಗಿದ್ದ ಪ್ರೊೊ.ಬರಗೂರು ರಾಮಚಂದ್ರಪ್ಪ ಮತ್ತು ವಿಷಯ ತಜ್ಞರಾದ ಪ್ರೊೊ.ಅಶ್ವತ್‌ಥ್‌ ನಾರಾಯಣ, ಪ್ರೊೊ.ರಾಜೇಶ್ ಹಾಗೂ ಪ್ರೊೊ.ಚಂದ್ರಶೇಖರ್ ಅವರು ದಾಖಲೆಗಳನ್ನು ಸ್ವೀಕರಿಸಿ, ಪರಿಶೀಲಿಸಿ ವರದಿ ನೀಡಲು ಒಂದು ತಿಂಗಳ ಕಾಲಾವಕಾಶ ಕೋರಿದ್ದಾಾರೆ. ಸಭೆಯಲ್ಲಿ ಯಾವುದೇ ರೀತಿಯ ವಾದ-ವಿವಾದ ಬದಲಾಗಿ ಶಾಸಕರು ಸಲ್ಲಿಸಿದ ಎಲ್ಲ ದಾಖಲೆಗಳನ್ನು ತಜ್ಞರು ತೆಗೆದುಕೊಂಡಿದ್ದಾಾರೆ. ಪರಿಶೀಲಿಸಿ ವರದಿ ಸಲ್ಲಿಸಲು ಕಾಲಾವಕಾಶ ಕೋರಿದ್ದಾಾರೆ. ಹೀಗಾಗಿ ತಿಂಗಳ ಕಾಲವಕಾಶ ನೀಡಿದ್ದೇವೆ. ತಜ್ಞರು ಯಾವ ರೀತಿ ವರದಿ ನೀಡುತ್ತಾಾರೋ, ಅದನ್ನು ಸರಕಾರಕ್ಕೆೆ ಯಥಾಪ್ರಕಾರ ಸಲ್ಲಿಸಲಿದ್ದೇವೆ. ಈ ಬಗ್ಗೆೆ ಸರಕಾರ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವಿವರಿಸಿದರು.

ಪಠ್ಯಪುಸ್ತಕದಲ್ಲಿ ಟಿಪ್ಪುು ಸುಲ್ತಾಾನ್ ಕುರಿತು ಈಗಿರುವ ಅಂಶ ತೆಗೆದು ನೈಜ ಇತಿಹಾಸವನ್ನು ತಿಳಿಸುವ ಪ್ರಯತ್ನ ಮಾಡಬೇಕು. ಇದು ಸಾಧ್ಯವಾಗದಿದ್ದಲ್ಲಿ ಸುಲ್ತಾಾನ್ ಕುರಿತಾದ ಎಲ್ಲ ಅಂಶಗಳನ್ನು ಸಂಪೂರ್ಣವಾಗಿ ಪಠ್ಯದಿಂದ ತೆಗೆದು ಹಾಕಿ ದೇಶಪ್ರೇಮ, ರಾಷ್ಟ್ರಭಕ್ತಿಿಗೆ ಪ್ರೇರಣೆ ನೀಡುವ ಅಂಶಗಳನ್ನು ಪಠ್ಯದಲ್ಲಿ ಸೇರಿಸಬೇಕು.
-ಅಪ್ಪಚ್ಚು ರಂಜನ್, ಶಾಸಕ

Leave a Reply

Your email address will not be published. Required fields are marked *