Friday, 15th November 2019

ಥಾಮಸ್ ಕುಕ್ ಕಂಪನಿ ಏಕಾಏಕಿ ಲಾಕ್ ಇಪ್ಪತ್ತೆರಡು ಸಾವಿರ ಉದ್ಯೋಗಿಗಳಿಗೆ ಶಾಕ್

ಲಂಡನ್:ವಿಶ್ವದ ಅತಿ ಹಳೆಯ ಯಾತ್ರಾ ಸಂಸ್ಥೆೆಯಾದ ಥಾಮಸ್ ಕುಕ್ ದಿವಾಳಿಯಾಗಿ ಬಂದ್ ಅಗಿದೆ.ಕಂಪನಿಯು ಹಠಾತ್ತಾಾಗಿ ಈ ನಿರ್ಧಾರ ಪ್ರಕಟಿಸಿದ ಪರಿಣಾಮ, ಇದರ ಮೂಲಕ ಪ್ರವಾಸ ಕೈಗೊಂಡಿದ್ದ ಲಕ್ಷಾಾಂತರ ಜನರು ಜಗತ್ತಿನ ಬೇರೆ ಬೇರೆ ಕಡೆ ಅತಂತ್ರರಾಗಿದ್ದಾಾರೆ.

ಈ ಅನಿರೀಕ್ಷಿತ ಬೆಳವಣಿಗೆಯ ಬಳಿಕ, ಅಲ್ಲಲ್ಲಿ ಬಾಕಿಯಾಗಿರುವ 6 ಲಕ್ಷ ಪ್ರವಾಸಿಗರನ್ನು ವಾಪಸ್ ಕರೆತರುವುದಾಗಿ ಬ್ರಿಟನ್ ಪ್ರಕಟಿಸಿದೆ.ಈ ಮೂಲಕ ದೊಡ್ಡ ಪ್ರಮಾಣದ ವಾಪಸಾತಿ ಪ್ರಕ್ರಿಿಯೆಯನ್ನು ಆರಂಭಿಸಿದೆ.

ಕಂಪನಿ ಮುನ್ನಡೆಸಲು ಅಗತ್ಯವಾಗಿದ್ದ ಹೆಚ್ಚುವರಿ ಹಣಕಾಸು ಕ್ರೋೋಡೀಕರಿಸಲು ಸಾಧ್ಯವಾಗದ ಹಿನ್ನೆೆಲೆಯಲ್ಲಿ ವಿಶ್ವದ ಅತಿದೊಡ್ಡ ಪ್ರವಾಸಿ ಸಂಸ್ಥೆೆಯೂ ಆಗಿರುವ ಥಾಮಸ್ ಕುಕ್, ಸೆಪ್ಟೆೆಂಬರ್ 23 ರಂದು ತನ್ನ ಕಾರ್ಯಾಾಚರಣೆಯನ್ನು ನಿಲ್ಲಿಸಿದೆ.
ಕಂಪನಿಯ ಈ ತೀರ್ಮಾನದಿಂದಾಗಿ 22 ಸಾವಿರ ಉದ್ಯೋೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾಾರೆ.ಅಲ್ಲದೆ ವಿಶ್ವದಾದ್ಯಂತ 6 ಲಕ್ಷ ಪ್ರವಾಸಿಗರು ಸಂಕಷ್ಟಕ್ಕೆೆ ಸಿಲುಕಿದ್ದಾರೆ.

ಕಂಪನಿಯ ಕಾರ್ಯಾಾಚರಣೆಗೆ ತುರ್ತಾಗಿ ಬೇಕಾದ ಕೋಟಿ ಡಾಲರ್ ಹಣವನ್ನು ಖಾಸಗಿ ಹೂಡಿಕೆದಾರರಿಂದ ಹೊಂದಿಸಲು ಸಾಧ್ಯವಾಗಲಿಲ್ಲ. ಇದರ ಜತೆಗೆ ಆನ್‌ಲೈನ್ ಸ್ಪರ್ಧೆಯಿಂದಾಗಿ ಬುಕ್ಕಿಿಂಗ್ ಪ್ರಮಾಣದಲ್ಲಿ ಕುಸಿತ, ಬ್ರೆಕ್ಸಿಿಟ್ ಬಿಕ್ಕಟ್ಟು ಈ ಸ್ಥಿಿತಿಗೆ ಕಾರಣ ಎಂದು ಕಂಪನಿ ಹೇಳಿಕೊಂಡಿದೆ.

2007 ರಲ್ಲಿ ಮೈ ಟ್ರಾಾವಲ್ ಎಂಬ ಕಂಪನಿಯನ್ನು ಖರೀದಿಸುವ ಕೆಟ್ಟ ನಿರ್ಧಾರದಿಂದಾಗಿ ಆರ್ಥಿಕ ಮುಗ್ಗಟ್ಟು ಎದುರಿಸತೊಡಗಿತು.ಅದಾದ ಬಳಿಕ ಸತತ ನಷ್ಟ ಅನುಭವಿಸುತ್ತಿಿದ್ದ ಅದು ಅಸ್ತಿಿತ್ವ ಉಳಿಸಿಕೊಳ್ಳಲು ಅಗತ್ಯವಾಗಿದ್ದ ಬಂಡವಾಳ ಹೊಂದಿಸಲು ಸಾಧ್ಯವಾಗದೆ ಅಂತಿಮವಾಗಿ ಈ ನಿರ್ಧಾರ ಕೈಗೊಂಡಿತು.

ಪ್ರಯತ್ನಗಳ ಬಳಿಕವೂ ಕಂಪನಿಯ ಪಾಲುದಾರರು ಹಾಗೂ ಹೂಡಿಕೆದಾರರ ನಡುವೆ ಒಡಂಬಡಿಕೆ ಸಾಧ್ಯವಾಗಲಿಲ್ಲ.ಹೀಗಾಗಿ ಕಂಪನಿಯನ್ನು ಬರಖಾಸ್ತುಗೊಳಿಸುವ ಅನಿವಾರ್ಯ ನಿರ್ಧಾರವನ್ನು ಕೈಗೊಳ್ಳಬೇಕಾಯಿತು ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

178 ವರ್ಷ ಹಳೆಯ ಕಂಪನಿ
ಥಾಮಸ್ ಕುಕ್ ಎಂಬುವವರು 1841ರಲ್ಲಿ ಈ ಯಾತ್ರಾಾ ಸಂಸ್ಥೆೆಯನ್ನು ಆರಂಭಿಸಿದರು.ಆಗ ರೈಲುಗಳ ಮೂಲಕ ಬ್ರಿಿಟನ್ನಿಿನ ನಾನಾ ನಗರಗಳಿಗೆ ಸಂಚಾರ ವ್ಯವಸ್ಥೆೆಯನ್ನು ಈ ಕಂಪನಿ ಕಲ್ಪಿಿಸುತ್ತಿಿತ್ತು.
ನಿಧಾನವಾಗಿ ವಿದೇಶಗಳಿಗೆ ಪ್ರವಾಸ ಪ್ಯಾಾಕೇಜ್ ಆರಂಭಿಸಿತು.ಅದು ಜನಪ್ರಿಿಯವಾದಂತೆ ತನ್ನದೇ ಆದ ಹೋಟೆಲ್‌ಗಳು ಹಾಗೂ ರೆಸಾರ್ಟ್‌ಗಳನ್ನು ಹೊಂದಿ ಪ್ರವಾಸಿಗರಿಗೆ ಟೂರ್ ಪ್ಯಾಾಕೇಜ್ ಒದಗಿಸುತ್ತಿಿತ್ತು.
100 ಕೋಟಿ ಪೌಂಡ್ ವಹಿವಾಟು ಹಾಗು 2 ಕೋಟಿ ಪ್ರವಾಸಿಗರನ್ನೂ ಹೊಂದಿದ ಜಗತ್ತಿಿನ ಅತಿ ಹಳೆಯ ಮತ್ತು ಅತಿ ದೊಡ್ಡ ಪ್ರವಾಸೋದ್ಯಮ ಕಂಪನಿ ಎಂಬ ಹೆಗ್ಗಳಿಕೆ ಪಡೆದಿತ್ತು.

ಭಾರತದಲ್ಲಿ ಅಬಾಧಿತ
ಥಾಮಸ್ ಕುಕ್ ಕಂಪನಿ ತನ್ನ ಕಾರ್ಯಾಾಚರಣೆ ನಿಲ್ಲಿಸಿದ್ದರೂ ಭಾರತದಲ್ಲಿ ಅದರಿಂದ ಯಾವ ಪರಿಣಾಮವೂ ಆಗದು ಎಂದು ಕಂಪನಿಯ ಭಾರತದ ಅಧಿಕಾರಿಗಳು ತಿಳಿಸಿದ್ದಾಾರೆ.
ಥಾಮಸ್ ಕುಕ್ ಪ್ರತ್ಯೇಕ ಅಸ್ತಿಿತ್ವ ಹೊಂದಿದ್ದು ಥಾಮಸ್ ಕುಕ್ ಬ್ರಿಿಟನ್‌ನ ನಿರ್ಧಾರದಿಂದ ಯಾವುದೇ ಸಮಸ್ಯೆೆ ಇಲ್ಲ ಎಂದು ಕಂಪನಿಯ ಅಧ್ಯಕ್ಷ ಮಾಧವನ್ ಮೆನನ್ ಸ್ಪಷ್ಟಪಡಿಸಿದ್ದಾಾರೆ.

ಸಂಸ್ಥೆೆಯನ್ನು ಬಂದು ಮಾಡುವುದರಿಂದ ನನ್ನ 21 ಸಾವಿರ ಸಹೋದ್ಯೋೋಗಿಗಳ ಹೃದಯ ಒಡೆದು ಹೋಗಿದೆ ಎಂಬುದು ನನಗೆ ಗೊತ್ತು.ಇದಕ್ಕಾಾಗಿ ನಾನು ಅವರ ಕ್ಷಮೆ ಯಾಚಿಸುವೆ
ಪೀಟರ್ ಫ್ಯಾಾಂಕ್‌ಹಾಸರ್
ಸಿಇಒ, ಥಾಮಸ್ ಕುಕ್

Leave a Reply

Your email address will not be published. Required fields are marked *