Tuesday, 11th August 2020

ಮೊಬೈಲ್ ಎಂಬ ಟೈಂಬಾಬ್

ಮಾತು ಆಡಿದರೆ ಹೋಯ್ತು’, ‘ಮೊಬೈಲ್ ಆನ್ ಆಗಿದ್ದರೆ ಹೋಯ್ತು’, ಇದರ ಅನುಭವ ಮುಖ್ಯಮಂತ್ರಿಗಳಿಗೆ ಅನುಭೂತಿಯಾಗಿದೆ. ಇದರ ಫಲಿತಾಂಶವೆಂಬತೆ ಇನ್ನು ಮುಂದೆ ತಮ್ಮನ್ನು ಭೇಟಿಯಾಗಲು ಬರುವ ಯಾರ ಕೈಯಲ್ಲೂ ಮೈಯಲ್ಲು ಮೊಬೈಲ್ ಇರಕೂಡದು ಎಂದು ಕಟ್ಟಪ್ಪಣೆಗೆ ಕಾರಣವಾಗಿದೆ.

ಕೊನೆಗೂ ಅಂದುಕೊಂಡದ್ದೇ ಆಯಿತು. ಕಳೆದ ಒಂದು ವಾರದಿಂದ ಮುಖ್ಯಮಂತ್ರಿಿ ಯಡಿಯೂರಪ್ಪನವರ ಆಡಿಯೋ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಹೊಸ ಕೋಲಾಹಲ ಎಬ್ಬಿಿಸಿ ಇರುವ ಮೂರೂ ಪಕ್ಷದವರನ್ನು ಗಿರಕಿ ಹೊಡೆಸುತ್ತಿಿರುವುದು ರಾಜ್ಯದ ಬೇರೆಲ್ಲಾಾ ವಿಷಯಗಳನ್ನು ಈ ಪ್ರಕರಣ ನುಂಗಿ ಹಾಕಿ ಕುಳಿತಿರುವುದು, ರಾಜಕೀಯದ ನಾನಾ ಮಜಲುಗಳನ್ನು ಪರಿಚಯಿಸುತ್ತಿಿದೆ. ಇದರಿಂದ ಎಚ್ಚೆೆತ್ತ ಸಿಎಂ ಯಡಿಯೂರಪ್ಪನವರು ತಮ್ಮನ್ನು ಭೇಟಿ ಮಾಡಲು ಬರುವವರಿಗೆ ಕಡ್ಡಾಾಯವವಾಗಿ ಮೊಬೈಲ್‌ನ್ನು ಬಿಟ್ಟು ಬರುವಂತೆ ಮೌಖಿಕ ಆದೇಶ ಹೊರಡಿಸಿರುವುದು ಸಹಜವೇ ಆಗಿದೆ.

ಮೊಬೈಲ್ ಬಂದ ಮೇಲೆ ರಾಜಕಾರಣಿಗಳ ಖಾಸಗಿತನ ಅಂತರಂಗದ ಧ್ವನಿ ಇವೆಲ್ಲವೂ ಬಹಿರಂಗಪಡಿಸುವ ಅಪಾಯಕಾರಿಯಾಗಿ ವಸ್ತುವಾಗಿ ಪರಿಣಮಿಸಿದೆ. ಇದರಿಂದ ಸಮಯಕ್ಕೆೆ ಸರಿಯಾಗಿ ಬಳಸಿಕೊಳ್ಳಬಹುದಾದ ಅಸ್ತ್ರ ಅಥವಾ ಟೈಂಬಾಬ್ ಆಗಿ ರೂಪಾಂತರಗೊಂಡಿದೆ. ಎರಡು ವಾರಗಳಷ್ಟೇ ಹಿಂದೆ ಸಿದ್ದರಾಮಯ್ಯನವರು ಜಾತಿಗಳನ್ನು ಆಧರಿಸಿ ಮಾತನಾಡಿದ್ದ ಖಾಸಗಿ ಮಾತುಗಳ ವಿಡಿಯೋ ರಾಜಕೀಯದಲ್ಲಿ ಮತ್ತು ಅದಕ್ಕಿಿಂತ ಹೆಚ್ಚಾಾಗಿ ಮಾಧ್ಯಮಗಳಲ್ಲಿ ರೋಚಕತೆಯನ್ನು ಸೃಷ್ಟಿಿಸಿತ್ತು. ಈಗ ಯಡಿಯೂರಪ್ಪನವರ ಆಡಿಯೋ ಸರದಿ ಬಂದಿದೆ. ಇದರಿಂದ ಒಂದು ಹೊಸದಾಗಿ ಗಾದೆ ಹೇಳಬಹುದಾದರೆ ‘ಮಾತು ಆಡಿದರೆ ಹೋಯ್ತು’, ‘ಮೊಬೈಲ್ ಆನ್ ಆಗಿದ್ದರೆ ಹೋಯ್ತು’, ಇದರ ಅನುಭವ ಮುಖ್ಯಮಂತ್ರಿಿಗಳಿಗೆ ಅನುಭೂತಿಯಾಗಿದೆ. ಇದರ ಫಲಿತಾಂಶವೆಂಬತೆ ಇನ್ನು ಮುಂದೆ ತಮ್ಮನ್ನು ಭೇಟಿಯಾಗಲು ಬರುವ ಯಾರ ಕೈಯಲ್ಲೂ ಮೈಯಲ್ಲು ಮೊಬೈಲ್ ಇರಕೂಡದು ಎಂದು ಕಟ್ಟಪ್ಪಣೆಗೆ ಕಾರಣವಾಗಿದೆ.

ಇದೊಂದು ವಿನೂತನವಾದ ಸಮಾಧಾನದ ಸಂಗತಿ ಎಂದರೆ ಈ ಕಟ್ಟಳೆ ಮುಖ್ಯಮಂತ್ರಿಿಯವರನ್ನು ಕಾಣಲು ಬರುವ ಅಧಿಕಾರಿಗಳು ಮತ್ತು ಮಾಧ್ಯಮದವರಿಗೆ ಅನ್ವಯಿಸದೇ ಇರುವುದು. ಮೊನ್ನೆೆ ತಾನೇ ವಿಧಾನಸಭೆ ಅಧಿವೇಶನದಲ್ಲಿ ಕ್ಯಾಾಮೆರಾ ಚಿತ್ರೀಕರಣಕ್ಕೆೆ ಸಭಾಪತಿಗಳು ನಿಷೇಧ ಹೇರಿದ್ದು ಭಾರಿ ಚರ್ಚೆಗೆ ಒಳಗಾಗಿತ್ತು. ಆದರೆ, ಈಗ ಮುಖ್ಯಮಂತ್ರಿಿಗಳ ಆದೇಶದಲ್ಲಿ ಅಧಿಕಾರಿಗಳಿಗೆ ಮತ್ತು ಮಾಧ್ಯಮದವರಿಗೆ ರಿಯಾಯಿತಿ ನೀಡಿರುವುದು ಸಮಾಧಾನಕರ ವಿಚಾರವಾಗಿದೆ. ಹಾಗೆಯೇ ಆಡಿಯೋ ರೆಕಾರ್ಡ್ ಆಗಿದ್ದು ಮಾತ್ರ ಯಡಿಯೂರಪ್ಪನವರೊಂದಿಗೆ ಮಾತುಕತೆಯಲ್ಲಿ ಭಾಗವಹಿದ್ದ ಅವರ ನಂಬಿಕೆಯ ವ್ಯಕ್ತಿಿಗಳಿಂದಲೇ ಎಂಬುದು ಸ್ಪಷ್ಟವಾಗಿದ್ದರೂ ಅದನ್ನು ಈ ರೀತಿ ಟೈಂ ಬಾಬ್‌ನಂತೆ ಬಳಸಿದ್ದು ಮಾತ್ರ ಅಕ್ಷಮ್ಯ ಎಂಬುದು ಬರಿಯ ಯಡಿಯೂರಪ್ಪನವರಿಗೆ ಮಾತ್ರವಲ್ಲ ಅವರ ಜಾಗದಲ್ಲಿ ಬೇರೆ ಯಾವ ರಾಜಕಾರಣಿಗಳಿದ್ದರೂ ಯಾವ ಪಕ್ಷದವರೇ ಇದ್ದರೂ ಒಂದೇ. ಆದರೆ, ಟೈಂ ಬಾಬ್ ಬಳಕೆದಾರರ ಪಾತ್ರ ಮಾತ್ರ ಬದಲಾಗುತ್ತಿಿತು ಅಷ್ಟೇ.

 

Leave a Reply

Your email address will not be published. Required fields are marked *