Tuesday, 21st March 2023

ಕಾಲ ಕಳೆದಂತೆ, ರೂಪುಗೊಳಿಸುವ ನಮ್ಮ ಪರಿಶ್ರಮ !

ಪರಿಶ್ರಮ

parishramamd@gmail.com

ಇಂಗ್ಲೀಷ್ ತರಗತಿಯಲ್ಲಿಯೇ ವ್ಯಾಸಂಗ ಮಾಡಿರಬೇಕು, ಟಾಪ್ ಪಿಯು ಸೈನ್ಸ್ ಕಾಲೇಜುಗಳಲ್ಲಿ ಓದಿದರಷ್ಟೇ ಐಐಟಿಗೆ ಉತ್ತೀರ್ಣನಾಗುತ್ತೀನೆನ್ನುವ ಮಾತುಗಳಿದ್ದರೆ ಅಲ್ಲಿಯೇ ಬಿಟ್ಟುಬಿಡಿ. ಕಠಿಣ ಶ್ರಮವೊಂದಿದ್ದರೆ ಸಾಕು, ಏನು ಬೇಕಾ ದರೂ ಗಳಿಸಬಹುದು, ಯಾವ ಪರೀಕ್ಷೆಯಲ್ಲಾದರೂ ಗೆಲ್ಲಬಹುದು. ಎಲ್ಲದಕ್ಕೂ ಶ್ರಮ ಮತ್ತೆ ಆತ್ಮವಿಶ್ವಾಸದ ಮೇಲೆ ನಂಬಿಕೆ ಇರಲಿ ಅಷ್ಟೇ!

ಬಾಲ್ಯದ ನೆನಪು
ಹರಿದ ಸಮವಸ ತೂತಾದ ಜೇಬು
ಜೇಬಿನೊಳಗೊಂದು ನಾಕಾಣೆಯ ಹುಸಿನಗು
ದಣಿದಷ್ಟು ಆಟ, ಅಮ್ಮನ ದಿಟ್ಟನೆಯ ನೋಟ
ಬಡತನದ ನೋವು, ಆ ನೋವಲ್ಲೊಂದು
ನೆಮ್ಮದಿಯ ಛಾಪು
ಪ್ರತಿಯೊಂದು ಗಾಯದ ನೋವಿನೊಳಗೆ ಕಲಿತ
ಪಾಠಗಳೆಷ್ಟೋ?
ಕಾಲಚಕ್ರವು ಸರಿದವು, ವಯಸ್ಸಿನ
ಪರದೆಯೊಂದಿಗೆ…
ಮರೆಯಾದವು ಬಾಲ್ಯದ ನೆನಪುಗಳು
ಗಾಯದ ಗುರುತಿನೊಂದಿಗೆ

ಕಾಲ ಕಳೆದಂತೆ ಬದುಕಿನ ಆದ್ಯತೆಗಳು, ಅನಿವಾರ್ಯತೆಗಳು, ಅವಶ್ಯಕತೆಗಳು ಬದಲಾಗುತ್ತವೆ. ಕಾಲ ಕಳೆದಂತೆ ಸೋಲು ಗೆಲ್ಲು ವಾಗುತ್ತದೆ, ಗೆಲುವು ಸೋಲಾಗುತ್ತದೆ. ಕಾಲ ಕಳೆದಂತೆ ಸೋಲಿನ ಸನ್ನಿಹದಿಂದ ಯಶಸ್ಸಿನ ಸಾಮ್ರಾಜ್ಯಕ್ಕೆ ಹಾದಿಯಾಗುತ್ತದೆ. ಸೋತು ಸುಣ್ಣವಾದ ಯುವಕ, ಗೆಲುವಿನ ಸಾಮ್ರಾಜ್ಯದ ಅಧಿಪತಿಯಾಗುತ್ತಾನೆ. ಕಾಲ ಕಳೆ ದಂತೆ, ಕಳೆದುಕೊಂಡದನೆಲ್ಲಾ ಪಡೆದು ಮತ್ತೊಮ್ಮೆ ಬದುಕಿನ ಆಸೆ, ಭರವಸೆಗಳನ್ನು ಮತ್ತೊಮ್ಮೆ ಚಿಗುರೊಡೆಯುವಂತೆ ಮಾಡಿಕೊಳ್ಳುತ್ತಾನೆ.

ಕಾಲ ಕಳೆದಂತೆ, ಕಳೆದು ಹೋದ ಅದ್ಭುತ ಕ್ಷಣಗಳನ್ನು ಮರು ಸೃಷ್ಟಿಸಿಕೊಳ್ಳುತ್ತಾನೆ. ಕಾಲ ಬದಲಾದಂತೆ, ಕಾಲ ಕಳೆದಂತೆ ಎಲ್ಲವೂ ಬದಲಾಗುತ್ತದೆ, ಏಕೆಂದರೆ ಜಗತ್ತಿನ ಪ್ರತಿ ಸಮಸ್ಯೆಗೆ ಕಾಲವೇ ಉತ್ತರ, ಸಮಯವೇ ಪರಿಹಾರ Time Heals, Time Deals ಅಂತಾರೆ.

ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ದೊಡ್ಡ ಕಲ್ಪನೆಯಿರುವ ಯುವಕ, ಯುವತಿಯರಿಗೆ ಇಂದು ಸಹನೆಯ ಕೊರತೆ ಇದೆ. ಏನೂ ಸಾಧಿಸಬೇಕೆಂದು ಇನ್ಸ್ಟಾಂಟ್ ಆಗಿ ಬಯಸುತ್ತಾರೆ, ದೊಡ್ಡ-ದೊಡ್ಡ ಸಾಮ್ರಾಜ್ಯಗಳು ರಾತೋರಾತ್ರಿ ಆಗಬೇಕೆಂದು ಬಯಸುತ್ತಾರೆ. ಅದರಲ್ಲೂ ಶ್ರದ್ಧೆಯ ಒಂದಷ್ಟು ಕೊರತೆಯಿರುತ್ತದೆ, ಏಕಾಗ್ರತೆಗಂತೂ ಡಿವೋರ್ಸ್ ಕೊಟ್ಟಿರುತ್ತದೆ. ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ಒಂದಷ್ಟು ವರ್ಷಗಳ ತಪಸ್ಸು, ದೃಢ ಸಂಕಲ್ಪ ಬೇಕೆನ್ನುವ ಸಾಮಾನ್ಯ ಜ್ಞಾನ ಇಲ್ಲದೇ ಒಂದು ತಲೆಮಾರು ಇಂದು ಅತಂತ್ರದಲ್ಲಿ ಮುಳುಗಿ ಹೋಗಿದೆ.

ಎಲ್ಲವನ್ನು ಮೀರಿದ್ದು ಆತ್ಮ ವಿಶ್ವಾಸ, ಆತ್ಮ ವಿಶ್ವಾಸವೊಂದಿದ್ದರೇ ಸಾಕು, ಜೀವನದಲ್ಲಿ ಏನಾದರೂ, ಏನೂ ಬೇಕಾದರೂ ಸಾಧಿಸಬಹುದು. ದೇಹಕ್ಕೆ ಬಿಟ್ಟು, ದಾಹದ ಕೆಲಸಕ್ಕೆ ಬರದಿರುವ ಸಮುದ್ರದ ಅಲೆಗಳೇ ತನ್ನ ತಾಕತ್ತಿನ ಪ್ರದರ್ಶನ ಮಾಡುವಾಗ ಮನುಷ್ಯ ಪ್ರಯತ್ನಪಟ್ಟರೇ ಗೆಲ್ಲಬಹುದು ಎಂಬುವುದಕ್ಕೆ ಒಂದು ಅಥವಾ ಎರಡು ಅಲ್ಲ ಸಾಕಷ್ಟು ನಿದರ್ಶನಗಳಿವೆ.

ಸಾಧನೆಯೆಂದರೆ ಹಾಗೇ ಕಣ್ರೀ, ಯಾರೂ ಊಹಿಸಲಿಕ್ಕಾಗದ ಗೆಲವನ್ನು ತಂದುಕೊಡುತ್ತೆ. ಸಾಧನೆಯ ದಾರಿಯಲ್ಲಿ ನಡೆಯುವಾಗ ಅದಕ್ಕೆ ಬೇಕಾದ ಸವಲತ್ತು, ಶ್ರಮ, ಸಂಯಮ, ದೃಢ ನಿಶ್ಚಯಗಳನ್ನು ಪಾವತಿಸಬೇಕು. ಆ ರೀತಿಯಲ್ಲಿ ಪಾವತಿಸಿದವರ ಕತೆಗಳು ಸಾಕಷ್ಟಿವೆ. ಅಂತಹದೇ, ಉತ್ತರ ಪ್ರದೇಶದ ಒಂದು ಸಣ್ಣ ಹಳ್ಳಿ, ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಹುಡುಗನ ಹೆಸರು ಕಿಶೋರ್.
ಏನೂ ಸಾಽಸಬೇಕೆಂಬ ಹಠ ಅವನಲ್ಲಿತ್ತು. ಅದರೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಏನೋ ಸಾಧಿಸಬೇಕೆಂಬ ಹಠ, ಅವನ್ನನ್ನು ಸಾಽಸಲು ಪ್ರೇರೇಪಿಸಿತ್ತು.

ಹತ್ತನೇ ತರಗತಿಯಲ್ಲಿ ಶೇಕಡ 75% ರಷ್ಟು ಅಂಕವನ್ನು ಗಳಿಸಿದ್ದರೂ, ಈ ಅಂಕವನ್ನು ನೋಡಿದಾಗ ಯಾರಿಗಾದರೂ ಅನಿಸು ವುದು ಇವನು ಏನು ಮಾಡಲು ಸಾಧ್ಯ? ಏಕೆಂದರೆ ಅಂಕಗಳಿಂದಲೇ ವ್ಯಕ್ತಿಯ ಸಾರ್ಮಥ್ಯವನ್ನು ಅಳೆಯುವ ಜನರಿದ್ದಾರೆ. ನಂತರ ಅವನು ಪಿ.ಯು.ಸಿಗೆ ಸೇರಿ ಐಐಟಿಗೆ ತಯಾರಿ ನಡೆಸುತ್ತಾನೆ. ಅದರೆ ಐಐಟಿ ಪಾಸ್ ಮಾಡುವುದು ಅಷ್ಟು ಸುಲಭದ ಮಾತಲ್ಲ. ಶೇಕಡ ೯೫% ರಷ್ಟು ವಿದ್ಯಾರ್ಥಿಗಳ ಕೈಯಲ್ಲೇ ಆಗುತ್ತಿಲ್ಲ.

ಅಂತಹ ಸಂದರ್ಭದಲ್ಲಿ ಈ ಹುಡುಗ ಹೇಗೆ ಕ್ರ್ಯಾಕ್ ಮಾಡುತ್ತಾನೆ ಎಂಬ ಪ್ರಶ್ನೆ ಅವನಿಗೂ ಸೇರಿದಂತೆ ಎಲ್ಲರಿಗೂ ಕಾಡಿತು. ಅದೇನಾಯಿತೋ ಏನೋ ಎರಡು ವರ್ಷಗಳ ತಪಸ್ಸಿನಂತೆ ಮಾಡಿದ. ಕಬ್ಬಿಣದ ಕಡಲೆಯಾಗಿದ್ದ ಐಐಟಿ ಅನ್ನು ಅತೀ ಹೆಚ್ಚು ಅಭ್ಯಾಸ ಮಾಡಿದ, ಗಣಿತ ಅವನಿಗೆ ಮಾತ್ರವಲ್ಲ, ಬಹಳಷ್ಟು ಮಂದಿಗೆ ಕಷ್ಟವಾಗಿತ್ತು. ಅದನ್ನು ಸುಲಭವಾಗಿಸಿಕೊಂಡ. ಇಂದಿಲ್ಲ ನಾಳೆ ಗೆದ್ದೆ ಗೆಲ್ಲುತ್ತೇನೆಂಬ ದೃಢ ಸಂಕಲ್ಪದಲ್ಲಿದ್ದ.

ಮೊದಲನೇ ಬಾರಿ ಐಐಟಿ ಪರೀಕ್ಷೆ ಬರೆದಾಗ ಅವನ ಆಸೆಗಳು-ಕನಸುಗಳು ನೂಚ್ಚು- ನೂರಾಗಿತ್ತು, ಕಲ್ಪನೆಗಳ ಸಾಮ್ರಾಜ್ಯ ಕುಸಿದು ಹೋಗಿತ್ತು. ಐಐಟಿ ಪರೀಕ್ಷೆಯನ್ನು ಪಾಸ್ ಮಾಡಬೇಕೆಂಬ ಒಬ್ಬ ಹುಡುಗನ ಕನಸು ಈಡೇರಲಿಲ್ಲ, ಆದರೂ ಧೃತಿ ಗೇಡಲಿಲ್ಲ. ಮತ್ತೊಮ್ಮೆ ಮನೆಯಲ್ಲಿ ಕುಳಿತುಕೊಂಡು ಅಭ್ಯಾಸ ಮಾಡಿದ. ಏಕೆಂದರೆ ಕೋಚಿಂಗ್ ಸೆಂಟರ್‌ಗೆ ಹೋಗುವಷ್ಟು
ಸಾರ್ಮಥ್ಯ ಅವನಲಿರಲಿಲ್ಲ. ಅಷ್ಟು ಹಣವನ್ನು ವ್ಯಯಿಸುವುದಕ್ಕೆ ಅವನ ಕುಟುಂಬಕ್ಕೆ ತುಂಬಾ ಕಷ್ಟಕರವಾಗಿತ್ತು. ಮನೆಯಲ್ಲೇ ಕುಳಿತು ಅಭ್ಯಾಸ ಮಾಡಿದ, ಕಷ್ಟ ಪಟ್ಟು ಓದಿದ್ದ, ಏನಾದರೂ ಆಗಲಿ, ಸಾಧಿಸೇ ಸಾಧಿಸುತ್ತೇನೆಂಬ ಹಠತೊಟ್ಟ. ಪ್ರತಿ ದಿನ 14 ತಾಸು ಅಭ್ಯಾಸ ಮಾಡಲು ಪ್ರಾರಂಭಿಸಿದ. ಈ ಪಠಣ ಹೀಗೆ ನಿರಂತರವಾಗಿ ನಡೆದಿದ್ದು 10 ತಿಂಗಳುಗಳ ಕಾಲ!

ಅಷ್ಟನ್ನೆಲ್ಲ ಅಭ್ಯಾಸ ಮಾಡಿ ಕಡೆಗೂ ಐಐಟಿಯಲ್ಲಿ ಇಡೀ ಭಾರತಕ್ಕೇ ಅಗ್ರ 100 ಗಳಲ್ಲಿ ತನ್ನದೂ ಸ್ಥಾನ ಆತ ಗಳಿಸಿದ. ಇಂದು
ಐಐಟಿ ಖಾನ್‌ಪುರ್‌ನಲ್ಲಿ ಓದುತ್ತಿದ್ದಾನೆ. ಈಗ ಹೇಳಿ ಹತ್ತನೇ ತರಗತಿಯಲ್ಲಿ ಕಡಿಮೆ ಅಂಕ ಗಳಿಸಿದ ಮಾತ್ರಕ್ಕೆ ತಾವು ಏನೂ
ಸಾಽಸಲು ಸಾಧ್ಯವೇ ಇಲ್ಲವೆಂಬ ತಪ್ಪು ಕಲ್ಪನೆಯಿಂದ ದೂರ ಬನ್ನಿ. ಹತ್ತನೇ ತರಗತಿಯಲ್ಲಿ ಚಂದವಾಗಿ ಓದಿದ್ದರೆ ಅಂಕಗಳು ಬರುತ್ತದೆ, ಅದಕ್ಕೆ ಮೊದಲನೇ ತರಗತಿಯಿಂದಲೇ ಶಾಲೆಗೆ ರ‍್ಯಾಂಕ್ ಬಂದಿರಬೇಕೆನ್ನುವುದು.

ಇಂಗ್ಲೀಷ್ ತರಗತಿಯಲ್ಲಿಯೇ ವ್ಯಾಸಾಂಗ ಮಾಡಿರಬೇಕು, ಟಾಪ್ ಪಿಯು ಸೈನ್ಸ್ ಕಾಲೇಜುಗಳಲ್ಲಿ ಓದಿದರಷ್ಟೇ ಐಐಟಿಗೆ ಉತ್ತೀರ್ಣ ನಾಗುತ್ತೀನೆನ್ನುವ ಮಾತುಗಳಿದ್ದರೆ ಅಲ್ಲಿಯೇ ಬಿಟ್ಟುಬಿಡಿ. ಕಠಿಣ ಶ್ರಮವೊಂದಿದ್ದರೆ ಸಾಕು, ಏನು ಬೇಕಾದರೂ ಗಳಿಸಬಹುದು, ಯಾವ ಪರೀಕ್ಷೆಯಲ್ಲಾದರೂ ಗೆಲ್ಲಬಹುದು. ಎಲ್ಲದಕ್ಕೂ ಶ್ರಮ ಮತ್ತೆ ಆತ್ಮವಿಶ್ವಾಸದ ಮೇಲೆ ನಂಬಿಕೆ ಇರಲಿ ಅಷ್ಟೇ!

ಇದೆಲ್ಲ ಪಿಯುಸಿಯಲ್ಲಿ ಚಂದವಾಗಿ ಓದಿದ್ದರೆ ಬಂದಿರುತ್ತದೆ, ಇಲ್ಲದಿದ್ದರೇ ಬರುವುದಿಲ್ಲ. ಅಷ್ಟೇ ಕಾರಣವಾಗಿರುವುದೇ ವಿನಹಃ ಸೋಲು ನಿಮ್ಮ ಪ್ರಯತ್ನಕ್ಕಷ್ಟೇ ವಿನಹಃ ನಿಮಗಲ್ಲ! ನಿಮ್ಮ ಹಿನ್ನೆಲೆ ಏನೇ ಇರಬಹುದು, ಧೃಢ ನಿರ್ಧಾರವೊಂದಿದ್ದರೇ ಜೀವನ ದಲ್ಲಿ ಏನೂ ಬೇಕಾದರೂ ಸಾಽಸಬಹುದು. ವಿಲಿಯಂ ಶೇಕ್ಸ್ ಪೀಯರ್ ನ್ನ ಇಂಗ್ಲೀಷ್‌ನಲ್ಲೇನು ಪದವಿ ಪಡೆದಿರಲಿಲ್ಲ, ಆದರೇ ಇಂದು ಯಾರೇ ಆಗಿರಲಿ ಶೇಕ್ಸ್‌ಪೀಯರ್‌ನ ಓದದೇ ಇಂಗ್ಲೀಷ್‌ನಲ್ಲಿ ಎಂ.ಎ ಪದವಿ ಪಡೆಯಲು ಸಾಧ್ಯವಾಗುತ್ತಾ? ಇಲ್ಲ. ಇದಕ್ಕೆಲ್ಲ ಜೀವನದಲ್ಲಿ ಏನಾಗಿದೆ? ಏನಿಲ್ಲ ಅಂತಲ್ಲ, ಏನು ಮಾಡುತ್ತೇನೆಂಬುವುದು ಮುಖ್ಯವಾಗುತ್ತದೆ.

ಇಷ್ಟೆಲ್ಲಾ ಬಹಳಷ್ಟು ಹುಡುಗರು ನಮ್ಮ ನಡುವೆ ಇದು ಸ್ಫೂರ್ತಿಯ ಸೆಲೆಯಾಗುತ್ತಾರೆ. ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು, ಅದರೆ ಏನು ಸಾಧಿಸಬೇಕೆಂಬ ಸ್ಪಷ್ಟತೆಯಾದರೂ ಇರಬೇಕು. ಯಾರೋ ಹೇಳಿದರು ಅಂತ ಎಂಜಿನೀಯರ್
ಆಗುತ್ತೀನಿ, ಯಾರೋ ಹೇಳಿದರು ಅಂತ ಡಾಕ್ಟರ್ ಆಗುತ್ತೀನಿ, ಯಾರೋ ಹೇಳಿದರು ಅಂತ ಸೈಂಟಿಸ್ಟ್, ಐಎಎಸ್ ಅಧಿಕಾರಿ…… ಹೀಗೆ. ಇದೆಲ್ಲ ಯಾರೋ ಹೇಳಿದರೆಂದು ಮಾಡುವುದಲ್ಲ, ನಿಮಗೇನೆಸುತ್ತದೆಯೋ ಅದನ್ನೇ ಮಾಡಬೇಕು.

ಆದರೆ ಏನೆನಿಸುತ್ತೆಂಬ ಸ್ಪಷ್ಟ ಅರಿವಿರಲಿ. ಇಂದು ಅಥವಾ ನಾಳೆ ಗೆದ್ದೇ ಗೆಲ್ಲುತ್ತೀರಾ ಆತ್ಮವಿಶ್ವಾಆಸ್ತ್ರ ಇಟ್ಟುಕೊಂಡರೆ ನಿಮ್ಮನ್ನು ನೀವೂ ಕೂಡ ಸೋಲಿಸಲು ಸಾಧ್ಯವಿಲ್ಲ. ಏನೇ ಆಗಲಿ ಎಲ್ಲರಿಗೂ ಶುಭವಾಗಲಿ.

error: Content is protected !!