Saturday, 23rd January 2021

ಸಮಯದ ಸದ್ವಿನಿಯೋಗ ಯಶಸ್ಸಿನ ಹುಟ್ಟು

ತಿಕೋಟಾ

*ಮಲ್ಲಪ್ಪ. ಸಿ. ಖೊದ್ನಾಪೂರ 

ನನಗೆ ಟೈಮ್ ಚೆನ್ನಾಾಗಿಲ್ಲವೆಂದು ಬಹಳಷ್ಟು ಜನರು ಒದ್ದಾಾಡುತ್ತಾಾರೆ ಮತ್ತು ಮರುಗುತ್ತಾಾರೆ. ಅವರಿಗೆ ನಿಜವಾಗಿಯೂ ಸಮಯದ ಸದ್ವಿಿನಿಯೋಗ ಹೇಗೆ ಮಾಡಿಕೊಳ್ಳಬೇಕೆಂಬ ಪ್ರಜ್ಞೆ ಮತ್ತು ಅರಿವಿರುವುದಿಲ್ಲ.

ಖ್ಯಾಾತ ಮನಃಶಾಸ್ತ್ರಜ್ಞ ಹಾಗೂ ಸಾಹಿತಿ ವಾಲ್ಟನ್ ರವರು ‘ಏನನ್ನಾಾದರೂ ಮಾಡು ಸುಮ್ಮನೆ ಕೂಡಬೇಡಿ, ಕಾಲವನ್ನು ವೃಥಾ ಕಾಲಹರಣ ಮಾಡಬೇಡಿ, ನಿಮ್ಮ ಕೈಗಳಿಗೆ ವಿಶ್ರಾಾಂತಿ ಕೊಟ್ಟರೆ ಕೂಡಲೇ ಸೈತಾನನು ಅವುಗಳನ್ನು ಆಕ್ರಮಿಸಿಕೊಳ್ಳುತ್ತಾಾನೆ ’ ಎಂದು ಹೇಳಿದ್ದಾಾರೆ. ಆದ್ದರಿಂದ ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ಸು ಗಳಿಸಬೇಕು ಅಥವಾ ಏನನ್ನಾಾದರೂ ಸಾಧನೆಗೈಯಲು ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿಯೆಂದರೆ ಸಮಯ ಪ್ರಜ್ಞೆ ಮತ್ತು ಆ ಸಮಯದ ಸದ್ವಿಿನಿಯೋಗ ಮಾಡಿಕೊಳ್ಳುವದು. ಸಮಯದ ಪ್ರತಿ ಕ್ಷಣವೂ ಅತಿ ಅಮೂಲ್ಯವಾದುದು. ನಮಗೆ ದೊರೆತ ಸಮಯವನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವದರ ಮೇಲೆ ನಮ್ಮ ಯಶಸ್ಸು ನಿಂತಿರುತ್ತದೆ. ಈಗ ಸಮಯ ಸರಿಯಾಗಿಲ್ಲ, ಕಾಲ ಪಕ್ವವಾಗಿಲ್ಲ, ಇಂದು ಬೇಡ, ನಾಳೆ, ನಾಡಿದ್ದು ಮಾಡೋಣ, ರಾಹು ಕಾಲವಿದೆ ಅಥವಾ ಮತ್ತಿಿತರ ಕಾರಣವೊಡ್ಡಿಿ ನಾವು ಸಮಯವನ್ನು ವೃಥಾ ಕಾಲಹರಣ ಮಾಡುತ್ತೇವೆ. ಆದರೆ ನಾವು ಕಂಡ ಕನಸು ನನಸು ಮಾಡಲು ಹಾಗೂ ಯಶಸ್ಸು ಗಳಿಸಲು ಸಮಯದ ಉಪಯೋಗವು ಪ್ರಮುಖ ಪಾತ್ರ ವಹಿಸುತ್ತವೆ. ಅದಕ್ಕಂತಲೇ ಲಿಯೋ ಟಾಲ್‌ಸ್ಟಾಾಯ್ ರವರು ‘ಒಳ್ಳೆೆಯ ಕೆಲಸ-ಕಾರ್ಯ ಆರಂಭಿಸಲು ಎಲ್ಲ ಸಮಯವು ಶುಭಪ್ರದ. ವಿಳಂಬ ಮತ್ತು ಆಲಸ್ಯವೇ ಅಶುಭ’ ಎಂದು ಹೇಳಿರುವದು ನಿಜಕ್ಕೂ ಸತ್ಯವಾದ ಮಾತು.

ಅಂದುಕೊಂಡಂತೆ ಸಾಧನೆಗೈಯಲು ಅಥವಾ ಜೀವನದಲ್ಲಿ ಯಶಸ್ಸು ಗಳಿಸಲು ಬೇಕಾದ ಅತಿ ಅವಶ್ಯಕವಾದ ಸಾಧನವೇ ಸಮಯದ ಸದ್ವಿಿನಿಯೋಗ, ನಿರ್ವಹಣೆ. ಲಭ್ಯವಾದ ಅಮೂಲ್ಯವಾದ ಸಮಯವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೇ ಇರುವದೇ ವೈಫಲ್ಯಕ್ಕೆೆ ಮುಖ್ಯ ಕಾರಣವೆಂದು ಹೇಳಬಹುದು. ಸಮಯದ ಸದುಪಯೋಗ ಪಡಿಸಿಕೊಳ್ಳುವದು ಅಸಾಧ್ಯವೇನಲ್ಲ. ವ್ಯರ್ಥವಾದ ಹಣವನ್ನು ಮತ್ತೆೆ ಗಳಿಸಬಹುದು. ಆದರೆ ಕಳೆದು ಹೋದ ಸಮಯ ಅಥವಾ ಕಾಲ ಎಂದೂ ಮರಳಿ ಬರಲಾರದು. ಯಾರು ಕೆಲಸ-ಕಾರ್ಯದಲ್ಲಿ ನಿಜವಾಗಿಯೂ ಯಶಸ್ಸು ಸಾಧಿಸಿದ್ದಾಾರೆಂದರೆ ಅವರು ತಮ್ಮ ಕೆಲಸದಿಂದ ಆರಂಭಿಸುವುದಿಲ್ಲ. ತಮ್ಮ ಕಾಲದಿಂದ ಆರಂಭಿಸುತ್ತಾಾರೆ. ಸಮಯದ ಸದುಪಯೋಗದಿಂದ ಅವರಿಗೆ ಯಶಸ್ಸು ಲಭಿಸುತ್ತದೆ.

ಅಮೂಲ್ಯವಾದ ಸಮಯದ ಸದ್ವಿಿನಿಯೋಗ
ಸಮಯದ ಮೌಲ್ಯ ತಿಳಿದುಕೊಳ್ಳಿಿ: ಖ್ಯಾಾತ ಆಂಗ್ಲ ಸಾಹಿತಿ ಕಾಲಗೌಂಡ್ ಬರ್ಗ್ ರವರು ಹೇಳಿರುವಂತೆ, ‘ಕಾಲ ನಿನ್ನ ಜೀವನದ ನಾಣ್ಯ. ನಿನ್ನಲ್ಲಿರುವುದು ಇದೊಂದೇ ನಾಣ್ಯ. ಅದನ್ನು ಹೇಗೆ ಖರ್ಚು ಮಾಡುವೆ ಎಂಬುದು ನೀನೇ ನಿರ್ಧರಿಸಬಲ್ಲೆೆ. ಇತರರು ಅದನ್ನು ನಿನಗಾಗಿ ಖರ್ಚು ಮಾಡಿಬಿಟ್ಟಾಾರು ಎಚ್ಚರದಿಂದಿರು’ ಎಂದು ಹೇಳಿದ್ದಾಾರೆ. ಅದಕ್ಕೆೆ ನಾವೆಲ್ಲರೂ ಯಾವುದೇ ಕೆಲಸ-ಕಾರ್ಯಗಳನ್ನು ಮಾಡುವಾಗ ನಮಗೆ ಸಿಕ್ಕ ಅವಕಾಶ, ಸಮಯ ಮತ್ತು ಸುಸಂಧಿಯನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಮಾಡುವ ಕೆಲಸವನ್ನು ಬಿಟ್ಟು ಅನ್ಯಕಾರ್ಯಗಳಲ್ಲಿ ತೊಡಗುವುದು ಮತ್ತು ಹರಟೆ ಹೊಡೆಯುವದು, ಟೈಂ ಪಾಸ್ ಮಾಡುವದು, ಅನವಶ್ಯಕ ಕಾಲ ಹರಣ ಮಾಡುವ ಬದಲು ಫಲಿತಾಂಶ ನೀಡುವ ಹಾಗೂ ಕ್ರಿಿಯಾಶೀಲತೆಯಿಂದ ಕೂಡಿದ ಕೆಲಸ-ಕಾರ್ಯಗಳಲ್ಲಿ ಸಕ್ರಿಿಯವಾಗಿ ತೊಡಗುತ್ತಾಾ ನಮ್ಮ ಶಕ್ತಿಿ-ಸಾಮರ್ಥ್ಯಗಳನ್ನು ಓರೆಗೋಲಿಗೆ ಹಚ್ಚಬೇಕು. .

ಕಳೆದು ಹೋದ ಕಾಲ ಮರಳಿ ಬರಲಾದೆಂಬ ಅರಿವಿರಬೇಕು: ನಾವು ಯಾವುದೇ ಕೆಲಸ-ಕಾರ್ಯವನ್ನು ಕೈಗೊಳ್ಳಲಿ ಅಥವಾ ಕೆಲಸ ಮಾಡುವಾಗ ಎಚ್ಚರಿಕೆಯಿಂದ ಮತ್ತು ಸಮಯದ ಪ್ರಜ್ಞೆಯೊಂದಿಗೆ ಸಮಯವನ್ನು ಸದ್ವಿಿನಿಯೋಗ ಮಾಡಿಕೊಳ್ಳಬೇಕು. ಆ ಸಮಯ ವ್ಯರ್ಥವಾಗದಂತೆ ಮಾಡುವ ಕೆಲಸವನ್ನು ಇಂದು-ಇಂದಿಗೆ ಮಾಡಿ ಮುಗಿಸುವ ತವಕದಲ್ಲಿ ಇರಬೇಕು. ಯಾವ ಕೆಲಸವನ್ನು ಯಾವ ಯಾವ ಸಮಯದಲ್ಲಿ ಮಾಡಬೇಕೆಂಬ ಬಗ್ಗೆೆ ಸಾಮಾನ್ಯ ಪ್ರಜ್ಞೆ ನಮ್ಮಲ್ಲಿರಬೇಕು. ನಿಗದಿತ ಸಮಯದಲ್ಲಿ ಅಂದುಕೊಂಡ ಕಾರ್ಯ ಅಥವಾ ನಿಶ್ಚಯಿಸಿಕೊಂಡ ಕೆಲಸವನ್ನು ಮಾಡಿ ಮುಗಿಸಿಯೇ ತೀರುತ್ತೇನೆಂಬ ದೃಢನಿರ್ಧಾರ ತೆಗೆದುಕೊಳ್ಳಬೇಕು. ‘ಮಿಂಚಿ ಹೋದ ಕಾಲಕ್ಕೆೆ ಚಿಂತಿಸಿ ಫಲವಿಲ್ಲ’ ಎಂಬ ನಾಣ್ಣುಡಿಯಂತೆ, ಒಂದು ವೇಳೆ ನಮಗೆ ದೊರೆತ ಆ ಸಮಯವನ್ನು ವೃಥಾ ಕಾಲಹರಣ ಮಾಡಿದರೆ ಅಥವಾ ಸಮಯವನ್ನು ಸದ್ಬಳಕೆ ಮಾಡಿಕೊಳ್ಳದೇ ಹೋದರೆ ಆ ಕಾಲವು ಮುಂದೆ ಎಂದಿಗೂ ಮರಳಿ ಬರಲಾರದು. ಒಬ್ಬನು ಸಮಯವನ್ನು ಹೇಗೆ ಬಳಸಿಕೊಳ್ಳುತ್ತಾಾನೆ ಎಂಬುದರ ಮೇಲೆ ಆತನ ಜೀವನ ರೂಪಿತವಾಗುತ್ತದೆ.

ತಪ್ಪುುಗಳು ಆದಾಗ ಕೈ ಚೆಲ್ಲಿ ಕೂಡಬೇಡಿ: ನಾವು ಆರಂಭಿಸಿದ ಕೆಲಸ-ಕಾರ್ಯಗಳು ಯಾವುದೇ ಸಂದರ್ಭಗಳಲ್ಲಿ ಅಥವಾ ಅನೇಕ ಕಾರಣಗಳಿಂದ ನಿರಿಕ್ಷೀತ ಮಟ್ಟದ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹೀಗೆ ಕೈಗೆತ್ತಿಿಕೊಂಡ ಕಾರ್ಯದಲ್ಲಿ ಸಮಸ್ಯೆೆ, ತೊಂದರೆ, ಎಡರು-ತೊಡರು, ಕಷ್ಟ-ನಷ್ಟ, ತೆಗಳಿಕೆ, ಹೀಯಾಳಿಕೆ, ಅಪಹಾಸ್ಯ, ಸೋಲು, ವೈಫಲ್ಯ, ನಿರಾಸೆ, ಹತಾಶೆಗಳಂತಹ ಸಂದರ್ಭಗಳು ಎದುರಾಗಬಹುದು. ಹೀಗೆ ಎದುರಾಗುವ ಸಂಗ್ಧಿಿದತೆ, ಪರಿಸ್ಥಿಿತಿ, ಸನ್ನಿಿವೇಶ-ಸಂದರ್ಭಗಳಲ್ಲಿ ಜಗತ್ತು ಮುಳುಗಿ ಹೋಯಿತು ಎನ್ನುವಂತೆ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳದೇ, ಎದೆಗುಂದದೆ, ಧೈರ್ಯಗೆಡದೆ ಆದ ಪ್ರಮಾದ, ತಪ್ಪುು ಮರುಕಳಿಸದಂತೆ ಹೆಜ್ಜೆೆಯಿಟ್ಟು ಮತ್ತು ಸೋಲಿನ ಕಲಿತ ಪಾಠ-ಅನುಭವಗಳನ್ನು ಬಳಸಿಕೊಂಡು ಆ ತಪ್ಪಿಿಂದ ಕಲಿತ ಪಾಠದಿಂದ ಮುಂದೆ ಹೇಗೆ ಅದನ್ನು ಸರಿಪಡಿಸಬೇಕು, ಎಲ್ಲಿ ತಪ್ಪುು ಎಸಗಿತು ಮತ್ತು ಸೋಲಿಗೆ ಕಾರಣಗಳನ್ನು ಕಂಡುಕೊಳ್ಳಬೇಕು

ಇಂದು-ನಾಳೆ ಬೇಡ, ಈಗಲೇ ಪ್ರಾಾರಂಭಿಸಿ: ದಿನದ ಪ್ರತಿಯೊಂದು ಕೆಲಸ-ಕಾರ್ಯಗಳಿಗೆ ಸಮಯವನ್ನು ನಿಗದಿಪಡಿಸಿಕೊಂಡು ಬಹಳಷ್ಟು ಸಮಯವನ್ನು ಉಳಿಸಬಹುದು. ನಾವು ಮಾಡುವ ಕಾರ್ಯ ಅಥವಾ ಕೈಗೆತ್ತಿಿಕೊಂಡ ಕೆಲಸಕ್ಕೆೆ ಸಂಬಂಧಿಸಿದಂತೆ ಕವಿ ಬೆಟಗೇರಿ ಕೃಷ್ಣಶರ್ಮರವರು ‘ನಿನ್ನೆೆ ಮತ್ತು ನಾಳೆಗಳ ಬಗ್ಗೆೆ ಕುರಿತು ಚಿಂತಿಸುವದು ಬೇಡ. ನಿನ್ನೆೆ ಕಳೆದು ಹೋಗಿದೆ ಮತ್ತು ನಾಳೆ ಇನ್ನೂ ಬರಬೇಕಾಗಿದೆ ಇಂದಿನ ಸಮಯ ನಿನ್ನದು ಅದನ್ನು ಹೇಗೆ ಉಪಯುಕ್ತ ರೀತಿಯಲ್ಲಿ ಬಳಸಿಕೋ’ ಎಂದು ಸಮಯದ ಮೌಲ್ಯದ ಕುರಿತು ಮಾರ್ಮಿಕವಾಗಿ ತಿಳಿಸಿದ್ದಾಾರೆ. ಆದ್ದರಿಂದ ಯಾವುದೇ ನೆಪವೊಡ್ಡಿಿ ಅಥವಾ ಕಾರಣ ನೀಡಿ ಕೈಗೆತ್ತಿಿಕೊಳ್ಳಬೇಕಾದ ಕೆಲಸ-ಕಾರ್ಯಗಳನ್ನು ಅನವಶ್ಯಕವಾಗಿ ಯಾವುದೇ ಕಾರಣಕ್ಕೆೆ ಮುಂದೂಡದೇ ತಕ್ಷಣದಲ್ಲಿಯೇ ಅದನ್ನು ಮಾಡಿ ಮುಗಿಸುವ ಹಂಬಲ ಹೊಂದಿರಬೇಕು. ಆದಷ್ಟು ಮಟ್ಟಿಿಗೆ ಇಂದಿನ ಕೆಲಸಗಳನ್ನು ಇಂದೇ ಮಾಡುವುದು ಒಳಿತು. ಏಕೆಂದರೆ ಇಂದು ಬೇಡ, ನಾಳೆ ಮಾಡೋಣ ಎಂಬ ಉದಾಸೀನತೆಯಿಂದ ಕಾರ್ಯವನ್ನು ಮುಂದೂಡಬೇಡಿ.

ವೇಳಾಪಟ್ಟಿಿ: ಯಾವುದೇ ಕೆಲಸ-ಕಾರ್ಯಗಳನ್ನು ಕೈಗೊತ್ತಿಿಬೇಕಾದರೆ ಅದಕ್ಕೆೆ ನಿರ್ಧಿಷ್ಟ ವೇಳಾಪಟ್ಟಿಿ ತಯಾರಿಸಿ, ಅದಕ್ಕೆೆ ಅನುಗುಣವಾಗಿ ದೈನಂದಿನ ಕಾರ್ಯಗಳನ್ನು ಮಾಡುವದು ಅತ್ಯಗತ್ಯ. ನಾಳೆ ಯಾವ ಕೆಲಸ ಮಾಡಬೇಕು ಅಂದುಕೊಂಡಿರುತ್ತೀರೋ, ಆ ಕೆಲಸ-ಕಾರ್ಯಗಳ ಬಗ್ಗೆೆ ಹಿಂದಿನ ದಿನ ರಾತ್ರಿಿಯೇ ಮೊದಲು ವೇಳಾಪಟ್ಟಿಿ-ರೂಪರೇಷೆ ತಯಾರಿಸಿಕೊಳ್ಳಬೇಕು ಮತ್ತು ಒಂದೊಂದು ಕೆಲಸವನ್ನು ಪೂರ್ಣಗೊಳಿಸುತ್ತಾಾ ಹೋಗಬೇಕು. ಈ ರೀತಿ ಮಾಡುವದರಿಂದ ನಮ್ಮ ಮನಸ್ಸು ಒಂದು ನಿರ್ದಿಷ್ಟ ಸಮಯಕ್ಕೆೆ ತಕ್ಕಂತೆ ಹೊಂದಿಕೊಂಡು ಕಾರ್ಯನಿರ್ವಹಿಸಲು ಪ್ರೇರಣೆ ಮತ್ತು ಉತ್ತೇಜನ ನೀಡುತ್ತದೆ. ಆ ದಿನದ ಕೊನೆಗೆ ಇವತ್ತು ನಾವು ಮಾಡಬೇಕಾದ ಕಾರ್ಯಗಳು ನಡೆದಿವೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಅಗತ್ಯ ಬಿದ್ದರೆ ವೇಳಾಪಟ್ಟಿಿಯನ್ನು ಬದಲಾಯಿಸಿಕೊಳ್ಳುವದು ಅವಶ್ಯಕ. ನನಗೆ ಟೈಮ್ ಚೆನ್ನಾಾಗಿಲ್ಲವೆಂದು ಬಹಳಷ್ಟು ಜನರು ಒದ್ದಾಾಡುತ್ತಾಾರೆ ಮತ್ತು ಮರುಗುತ್ತಾಾರೆ. ಅವರಿಗೆ ನಿಜವಾಗಿಯೂ ಸಮಯದ ಸದ್ವಿಿನಿಯೋಗ ಹೇಗೆ ಮಾಡಿಕೊಳ್ಳಬೇಕೆಂಬ ಪ್ರಜ್ಞೆ ಮತ್ತು ಅರಿವಿರುವುದಿಲ್ಲ.

ಕೊನೆಯ ನುಡಿ:
ಜೀವನದಲ್ಲಿ ನಮಗೆ ಒಳ್ಳೆೆಯ ಕೆಲಸ-ಕಾರ್ಯ ಮಾಡುವ ಅವಕಾಶಗಳು ಕೆಲವೇ ಸಂದರ್ಭಗಳಲ್ಲಿ ಸಿಗುತ್ತವೆ. ಬದುಕು ಮತ್ತು ಸಮಯ ಇವು ಪ್ರತಿಯೊಬ್ಬ ವ್ಯಕ್ತಿಿಯ ಜೀವನಕ್ಕೆೆ ಒಳ್ಳೇಯ ಗುರುಗಳಿದ್ದಂತೆ. ಗುರುಗಳು ನಮಗೆ ಸಮಯವನ್ನು ಹೇಗೆ ಬಳಸಿಕೊಳ್ಳಲು ಕಲಿಸಿದರೆ, ಸಮಯ-ಕಾಲ ನಮ್ಮ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕೆಂದು ತಿಳಿಸುತ್ತದೆ. ‘ಮುತ್ತು ಕಳೆದರೆ ಸಿಕ್ಕೀತು ಹೊತ್ತು ಕಳೆದರೆ ಸಿಕ್ಕೀತೇ’’ ಎನ್ನುವ ಹಿರಿಯರ ಅನುಭವದ ಮಾತಿನಂತೆ ನಾವು-ನಿವೆಲ್ಲರೂ ಸಮಯದ ಮೌಲ್ಯವನ್ನು ಅರಿತು ಕಾರ್ಯತತ್ಪರರಾಗಬೇಕಾಗಿದೆ.
ಇನ್ನೂ ಕಾಲ ಮಿಂಚಿಲ್ಲ. ಕಳೆದು ಹೋದ ಕಾಲ ಮತ್ತೆೆ ಹಿಂದಿರುಗಿ ಬರಲಾದೆಂಬ ಕಟು ಸತ್ಯವನ್ನು ಮತ್ತು ಸಮಯದ ಮೌಲ್ಯದ ಅರಿವಿನೊಂದಿಗೆ ಕಾರ್ಯ ಕೈಗೊಂಡರೆ ಯಶಸ್ಸು ಲಭಿಸುವದರಲ್ಲಿ ಯಾವುದೇ ಸಂದೇಹವಿಲ್ಲ.

Leave a Reply

Your email address will not be published. Required fields are marked *