Saturday, 22nd February 2020

ಇಂದು ಡಿಕೆಶಿ ಮೇಲ್ಮನವಿ ಭವಿಷ್ಯ ನಿರ್ಧರಿಸಲಿರುವ ಹೈಕೋರ್ಟ್

ಅಕ್ರಮ ಆಸ್ತಿ ಪತ್ತೆ ಹಾಗೂ ಹವಾಲ ಮೂಲಕ ಹಣ ಸಾಗಿಸಿದ ಆರೋಪ ಸಂಬಂಧ ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯ ನೀಡಿದ್ದ ಸಮ್ಸ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಿಸಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿಭಾಗೀಯ ಪೀಠದಲ್ಲಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಗಳ ಮಾನ್ಯತೆಯನ್ನು ಹೈಕೋರ್ಟ್ ಇಂದು ನಿರ್ಧರಿಸಲಿದೆ.

ಮನವಿ ವಜಾಗೊಳಿಸಿರುವ ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಿಸಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಮುಖ್ಯ ನ್ಯಾಾಯಮೂರ್ತಿ ಎ.ಎಸ್.ಓಕಾ ಹಾಗೂ ನ್ಯಾಾ. ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು. ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ಪೀಠ, ಮೇಲ್ಮನವಿ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಬೇಕೋ, ಇಲ್ಲವೋ ಎಂಬುದನ್ನು ಮಂಗಳವಾರ (ಸೆ.17) ಮಧ್ಯಾಾಹ್ನ 2.30ಕ್ಕೆೆ ನಿರ್ಧರಿಸುವುದಾಗಿ ತಿಳಿಸಿ ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ಡಿ.ಕೆ.ಶಿವಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಬಿ.ವಿ. ಆಚಾರ್ಯ ಅವರು, ಅರ್ಜಿದಾರರು ಮನವಿ ಸಲ್ಲಿಸಿದ್ದು ಸಂವಿಧಾನದ ಅನುಚ್ಛೇದ 226 ರ ಅಡಿ. ಆದರೆ, ಏಕಸದಸ್ಯ ಪೀಠ ಸಿಆರ್‌ಪಿಸಿ ಸೆಕ್ಷನ್ 482ರಡಿ ತೀರ್ಪು ನೀಡಿರುವುದಾಗಿ ಹೇಳಿದೆ. ಆದರೆ, ಅಂತಹ ಯಾವುದೇ ಅಧಿಕಾರವ್ಯಾಾಪ್ತಿಿ ಏಕಸದಸ್ಯ ಪೀಠಕ್ಕೆೆ ಇಲ್ಲ. ಹಾಗಾಗಿ, ಕಾನೂನುಬಾಹಿರ ಹಾಗೂ ವಜಾಗೊಳ್ಳಲು ಯೋಗ್ಯವಾಗಿರುವ ಏಕಸದಸ್ಯ ಪೀಠದ ತೀರ್ಪನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿದರು.

ಜಾರಿ ನಿರ್ದೇಶನಾಲಯ ಪರ ವಾದ ಮಂಡಿಸಿದ ವಕೀಲ ಎಸ್.ನಾಗಾನಂದ, ಅರ್ಜಿದಾರರು ಸಮ್ಸ್ ರದ್ದು ಕೋರಿ 226ನೇ ವಿಧಿಯಡಿ ಮನವಿ ಸಲ್ಲಿಸಿದ್ದರೂ, ಪ್ರಕರಣ ಕ್ರಿಮಿನಲ್ ವ್ಯಾಾಪ್ತಿಿಗೆ ಒಳಪಡುವುದರಿಂದ ಅರ್ಜಿಯನ್ನು ನ್ಯಾಾಯಾಲಯದ ವಿವೇಚನೆ ಅನುಸಾರ ಸಿಆರ್‌ಪಿಸಿ ಸೆಕ್ಷನ್ 482ರಡಿ ಪರಿಗಣಿಸಿ ವಜಾಗೊಳಿಸಿದೆ. ಹೀಗಾಗಿ ಏಕಸದಸ್ಯ ಪೀಠದ ತೀರ್ಪು ಸರಿಯಾಗಿದ್ದು, ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ವಿಚಾರಣೆಗೆ ಅರ್ಹವಲ್ಲ ಎಂದು ಪ್ರತಿಪಾದಿಸಿದರು.

ಮತ್ತೊಬ್ಬ ಹಿರಿಯ ನ್ಯಾಾಯವಾದಿ ಎಂ.ಬಿ.ನರಗುಂದ ಅವರು ವಾದಿಸಿ, ಕ್ರಿಿಮಿನಲ್ ಸ್ವರೂಪದ ಪ್ರಕರಣಗಳ ದೂರು ದಾಖಲು, ವಿಚಾರಣೆ, ತೀರ್ಪು, ಖುಲಾಸೆ ಈ ಎಲ್ಲ ಸಂದರ್ಭಗಳಿಗೂ ಸಂವಿಧಾನದ ಅನುಚ್ಛೇದ 226 ಹಾಗೂ ಸಿಆರ್‌ಪಿಸಿ ಸೆಕ್ಷನ್ 482 ಅನ್ವಯವಾಗುತ್ತವೆ ಎಂದರು. ಇದೇ ವೇಳೆ ಪ್ರಕರಣದ ಇತರ ಆರೋಪಿಗಳಾದ ಸುನೀಲ್ ಕುಮಾರ್ ಶರ್ಮಾ ಹಾಗೂ ಇತರರು ಸಲ್ಲಿಸಿದ್ದ ಮೇಲ್ಮವಿಗಳಿಗೆ ಸಂಬಂಧಿಸಿದಂತೆ ಸೆ.17ರವರೆಗೆ ಆರೋಪಿಗಳನ್ನು ಬಂಧಿಸಿದಂತೆ ಜಾರಿ ನಿರ್ದೇಶನಾಲಯಕ್ಕೆೆ ವಿಭಾಗೀಯ ಪೀಠ ನಿರ್ದೇಶಿಸಿತು. ಈ ಮೇಲ್ಮನವಿಗಳ ಕುರಿತಂತೆಯೂ ಮಂಗಳವಾರವೇ ತೀರ್ಪು ಹೊರ ಬರಲಿದೆ.

Leave a Reply

Your email address will not be published. Required fields are marked *