Sunday, 27th September 2020

ನಾಳೆ ಎಂಬುದು ತಾಯಿಯ ಹೊಟ್ಟೆಯಲ್ಲಿರುವ ಮಗುವಿನಂತೆ

ನಾಳೆಯ ಸೂರ್ಯ ಪ್ರಖರವಾಗಿ ಉದಯಿಸಬಹುದು ಅಥವಾ ಮೋಡದ ಮರೆಯಲ್ಲಿ ನಿಂತು ಕಿರಣ ಸೂಸಬಹುದು. ಆದರೆ ಸೂರ್ಯ ಸತ್ಯ. ಅದರ ಬಗ್ಗೆೆ ನಾವಿಂದು ಗಂಟೆಗಟ್ಟಲೆ ಕುಳಿತು ಚಿಂತಿಸಿದರೂ ಪ್ರಯೋಜನವಿಲ್ಲ. ನಾಳೆ ಎಂಬುದು ತಾಯಿ ಹೊಟ್ಟೆೆಯಲ್ಲಿರುವ ಮಗುವಿನಂತೆ.

ಚಿಕ್ಕ ಚಿಕ್ಕ ನೀತಿ ಕಥೆಗಳು, ಎಲ್ಲೋೋ ನಡೆದುಹೋದ ಸಾಧನೆಯ ಸತ್ಯ ಘಟನೆಗಳು ಕಥೆಗಳ ರೂಪದಲ್ಲಿ ಕೇಳಿದಾಗ, ಓದಿದಾಗ, ನಮ್ಮೊೊಳಗೊಂದು ಹೊಸ ಚೈತನ್ಯ ಹುಟ್ಟುತ್ತದೆ. ನಾವು ಜೀವನವನ್ನು ನೋಡುವ ರೀತಿಯನ್ನೇ ಬದಲಾಯಿಸಬಲ್ಲವು. ನಮ್ಮೊೊಳಗೊಂದು ಜೀವನೋತ್ಸಾಾಹ, ಹುರುಪು ಮೂಡಿಸಬಲ್ಲವು. ಅದೇಷ್ಟೋೋ ಸಾಧಕರು ಚಿಕ್ಕ ವಯಸ್ಸಿಿನಲ್ಲಿ ತಾವು ಓದಿದ ಅಥವಾ ಹಿರಿಯರಿಂದ, ಗುರುಗಳಿಂದ ಕೇಳಿದ ಪ್ರೇರಿತರಾಗಿ ಸಾಧನೆಯ ಶಿಖರ ಹತ್ತಿಿದ್ದಾಾರೆ. ಕಥೆಗಳೆಂದರೆ ಹಾಗೆ ಅಲ್ಲವೇ. ನಾನಿಲ್ಲಿ ನಿಮಗೆ ಅಂಥದ್ದೇ ಕಥೆಗಳನ್ನು ಹೇಳಿದ್ದೇನೆ. ಇವುಗಳನ್ನು ಓದಿದಾಗ, ನಿಮ್ಮೊೊಳಗೊಂದಿಷ್ಟು ಸಕಾರಾತ್ಮಕ ಬದಲಾವಣೆಗೆ ಕಾರಣವಾಗಬಲ್ಲವು ಎಂದು ನಂಬಿದ್ದೇನೆ.

ಆತನೊಬ್ಬ ಮಹತ್ವಾಾಕಾಂಕ್ಷಿಿ ಉದ್ಯಮಿ. ಬ್ಯುಸಿನೆಸ್ ಬೆಳೆಸಬೇಕು, ಹಣ ಮಾಡಬೇಕು ಎಂಬುದು ಅವನ ಜೀವನದ ಪರಮೋದ್ದೇಶ. ಹಣ, ಹಣ, ಹಣ ಎಂದು ದುಡ್ಡಿಿನ ಹಿಂದೆ ಬಿದ್ದು ಉಳಿದೆಲ್ಲವನ್ನೂ, ಉಳಿದವರೆಲ್ಲರನ್ನೂ ನಿರ್ಲಕ್ಷಿಿಸಿದ. ಹೆಂಡತಿ-ಮಕ್ಕಳಿಗೂ ಆತ ಸಮಯ ಕೊಡುತ್ತಿಿರಲಿಲ್ಲ. ಮಾತಾಡಿಸಲು ಪುರುಸೊತ್ತಿಿರಲಿಲ್ಲ. ಹೀಗೆ ಹೊಟ್ಟೆೆ ಕಟ್ಟಿಿ ದುಡಿದು ಆ ಉದ್ಯಮಿ ಐವತ್ತು ಕೋಟಿ ರು. ಆಸ್ತಿಿಯ ಒಡೆಯನಾದ. ಆದರೆ ಅವನು ಅಷ್ಟಕ್ಕೇ ಸುಮ್ಮನಾಗಲಿಲ್ಲ. ಇನ್ನು ಹಣ ಗಳಿಸಬೇಕೆಂಬ ಆಸೆಗೆ ಬಿದ್ದ. ಐವತ್ತು ಕೋಟಿ ನೂರಾಗಲಿ, ನೂರು ಇನ್ನೂರಾಗಲಿ ಎಂದು ಆಶಿಸಿದ. ಒಂದು ದಿನ ಬೆಳಗೆದ್ದು ಇನ್ನೇನು ಆಫೀಸ್‌ಗೆ ಹೊರಡಬೇಕು ಎನ್ನುವಷ್ಟರಲ್ಲಿ ಅವನ ಮನೆಯಲ್ಲಿ ಆಗಂತುಕನೊಬ್ಬ ಕಾಣಿಸಿಕೊಂಡ.

‘ಏಯ್ ಯಾರೋ ನೀನು? ನನ್ನನ್ನು ನೋಡಲು ಬರುವಾಗ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಬೇಕು ಅಂತ ಗೊತ್ತಿಿಲ್ವಾಾ? ಅದ್ಹೆೆಂಗೆ ಒಳಗೆ ಬಂದೆ ಎಂದು ಶ್ರೀಮಂತ ಕೂಗಾಡಿದ.
ಅದಕ್ಕೆೆ ಆಗಂತುಕ ನಕ್ಕು ಹೇಳಿದ ‘ನಾನು ಬರುವಾಗ ಯಾರ ಅಪಾಯಿಂಟ್‌ಮೆಂಟ್ ಕೂಡ ಪಡೆಯೋ ಅವಶ್ಯಕತೆ ಇಲ್ಲ. ನಾನ್ಯಾಾರು ಅಂತ ಗೊತ್ತಾಾಗಲಿಲ್ವಾಾ? ನಾನು ಮೃತು! ನನ್ನನ್ನು ಯಾರೂ ಕರೆಯೋದಿಲ್ಲ. ನಾನು ಕರೆಯದೇ ಬರುವ ಅತಿಥಿ. ನಾನ್ಯಾಾರಿಗೂ ಕಾಣಿಸುವುದಿಲ್ಲ. ಯಾರನ್ನು ಕರೆದುಕೊಂಡು ಹೋಗಲು ಬರುತ್ತೀನೋ ಅವರಿಗೆ ಮಾತ್ರ ಕಾಣಿಸುತ್ತೇನೆ’.
ಇದು ಆ ಉದ್ಯಮಿಗೆ ಗೊತ್ತಾಾಗಿ ಬೆಚ್ಚಿಿಬಿದ್ದು, ‘ಅನ್ಯಾಾಯ, ಅನ್ಯಾಾಯ ನನ್ನನ್ನು ಯಾವಾಗ ಕರೆದುಕೊಂಡು ಹೋಗುತ್ತಿಿ!’ ಎಂದು ಶ್ರೀಮಂತ ಕೇಳಿದ.

‘ಈಗಲೇ, ಈ ಕ್ಷಣದಲ್ಲೇ’
‘ಅಯ್ಯೊೊಯ್ಯೋ ಈಗಷ್ಟೇ ನಾನು ಐವತ್ತು ಕೋಟಿ ಆಸ್ತಿಿ ಮಾಡಿಟ್ಟಿಿದ್ದೇನೆ. ಅದನ್ನು ಅನುಭವಿಸಿಲ್ಲ; ಈಗಲೇ ಕರೆದುಕೊಂಡು ಹೋಗ್ತೀನಿ ಅಂದ್ರೆೆ ಹೆಂಗೆ? ಇದು ಸರಿಯಲ್ಲ. ನನಗೆ ಒಂದಷ್ಟು ಸಮಯ ಕೊಡು’ ಎಂದು ಬೇಡಿಕೊಳ್ಳುತ್ತ ಮಾತು ಮುಂದುವರಿಸಿದ, ‘ಸರಿ ಒಂದು ಒಪ್ಪಂದಕ್ಕೆೆ ಬರೋಣ. ನಾನು ನಿನಗೆ 25 ಕೋಟಿ ರುಪಾಯಿ ಕೊಡುತ್ತೇನೆ. ನನಗೆ ಒಂದು ತಿಂಗಳು ಸಮಯ ಕೊಡು. ಅಷ್ಟರೊಳಗೆ ನಾನು ಉಳಿದ ಹಣದಲ್ಲಿ ಜೀವನವನ್ನು ಅನುಭವಿಸುತ್ತೇನೆ’ ಶ್ರೀಮಂತ ಅಂಗಲಾಚಿದ.

‘ನಿನ್ನನ್ನು ನೋಡಿದರೆ ನನಗೆ ನಗು ಬರುತ್ತದೆ ಕಣಯ್ಯಾಾ. ಈಗಲೂ ನೀನು ಅರ್ಧದಷ್ಟು ಹಣ ಮಾತ್ರ ಕೊಡಲು ತಯಾರಿದ್ದೀಯಾ. ಆದರೆ ನಿನಗೆ ನನ್ನ ಕೆಲಸದ ಬಗ್ಗೆೆ ಗೊತ್ತಿಿಲ್ಲ; ಇಲ್ಲಿಯವರೆಗಿನ ಜೀವನ ನಿನ್ನದಾಗಿತ್ತು. ಅದನ್ನು ಹೇಗೆ ಉಪಯೋಗಿಸಬೇಕೋ ಅದು ನಿನ್ನದೇ ಕೈಯಲ್ಲಿತ್ತು. ಈಗ ನಿನ್ನ ಸಮಯ ಮುಗಿದಿದೆ. ನಾನು ಒಂದು ಕ್ಷಣವನ್ನೂ ನಿನಗೆ ಹೆಚ್ಚಿಿಗೆ ಕೊಡಲಾಗುವುದಿಲ್ಲ’ ಎಂದಿತು ಬಾಗಿಲಿನಲ್ಲಿ ನಿಂತಿದ್ದ ಸಾವು.

‘ಆಯ್ತು, ಪೂರ್ತಿ 50 ಕೋಟಿಯೂ ನಿನ್ನದೇ. ಒಂದು ದಿನವನ್ನಾಾದರೂ ಕೊಡು ನನಗೆ’ ಎಂದ ಉದ್ಯಮಿ.
‘ಆಗುವುದೇ ಇಲ್ಲ. ಆದರೆ ನಿನಗೆ ಒಂದೆರಡು ನಿಮಿಷಗಳನ್ನು ಕೊಡುತ್ತೇನೆ. ಏನು ಮಾಡುತ್ತೀಯೋ ಮಾಡು’ ಎಂದಿತು ಮೃತ್ಯು.
ಶ್ರೀಮಂತ ತನ್ನ ಕೋಣೆಗೆ ಓಡಿ ಹೋದ. ಅಲ್ಲಿದ್ದ ಪುಸ್ತಕದಿಂದ ಒಂದು ಹಾಳೆ ಹರಿದು ಅದರ ಮೇಲೆ ಹೀಗೆ ಗೀಚಿದ- ‘ಇಂದು ನನ್ನ ಬದುಕಿನ ಕೊನೆಯ ದಿನ. ಇವತ್ತು ನನಗೆ ಅರಿವಾದ ಸತ್ಯವೆಂದರೆ ನಿಮ್ಮ ಬಳಿ 50 ಕೋಟಿ ರುಪಾಯಿ ಇದ್ದರೂ ಅದರಿಂದ ಒಂದು ಖರೀದಿಸಲು ಸಾಧ್ಯವಿಲ್ಲ. ಬದುಕಿನಲ್ಲಿ ಹಣವೊಂದೇ ಎಲ್ಲವೂ ಅಲ್ಲ. ನಾನು ದುಡ್ಡು ಮಾಡುವ ಆತುರದಲ್ಲಿ ನನ್ನಿಿಡೀ ಜೀವನವನ್ನು ವ್ಯರ್ಥವಾಗಿ ಕಳೆದುಬಿಟ್ಟೆೆ. ಇವತ್ತು ಖಾಲಿ ಕೈಯಲ್ಲಿ ಜೀವನ ಮುಗಿಸಿ ಹೋಗುತ್ತಿಿದ್ದೇನೆ. ನಾನು ಗಳಿಸಿದ ಹಣವೂ ನನ್ನೊೊಂದಿಗೆ ಬರುವುದಿಲ್ಲ, ತೆಗೆದುಕೊಂಡು ಹೋಗುವಂಥ ಸುಂದರ ನೆನಪುಗಳನ್ನೂ ನಾನು ಸೃಷ್ಟಿಿಸಿಲ್ಲ. ನೀವು ನನ್ನಂತಾಗಬೇಡಿ. ಪ್ರತಿ ಕ್ಷಣವನ್ನೂ ಆಸ್ವಾಾದಿಸುತ್ತಾಾ ಬದುಕಿ. ಸಾವು ಬಾಗಿಲಿನಲ್ಲಿ ನಿಂತಾಗ ಅದರೊಂದಿಗೆ ಹಣದ ವ್ಯವಹಾರಕ್ಕಿಿಳಿಯಬೇಡಿ’

ಪ್ರತಿ ವಾರದಲ್ಲಿಯೂ ಎರಡು ದಿನಗಳಿರುತ್ತವೆ. ಅದರ ನಾವು ಎಳ್ಳಷ್ಟೂ ಚಿಂತೆ ಮಾಡಬಾರದು. ಅರೇ, ವಾರಕ್ಕೆೆ ಏಳು ದಿನ ಇರುವುದಲ್ಲವೆ ಎಂದು ಯೋಚಿಸುತ್ತಿಿದ್ದೀರ? ನಾನು ಹೇಳುತ್ತಿಿರುವ ಎರಡು ದಿನಗಳೆಂದರೆ ನಾಳೆ ಮತ್ತು ನಿನ್ನೆೆಗಳ ಬಗ್ಗೆೆ!
ಹೌದು, ಈ ಎರಡು ದಿನಗಳನ್ನು ನಾವು ಭಯ, ಆತಂಕದಿಂದ ದೂರವಿಡಬೇಕು. ನಿನ್ನೆೆ ಎಂಬುದು ಕಾಲಗರ್ಭದಲ್ಲಿ ಹೂತು ಹೋದ ಪಳೆಯುಳಿಕೆ. ನೀವು ಅದೆಷ್ಟೇ ಯೋಚನೆ-ಚಿಂತೆ ಮಾಡಿದರೂ, ಪ್ರಯತ್ನಪಟ್ಟರೂ ಅದನ್ನು ವಾಪಸ್ ತರಲಾಗುವುದಿಲ್ಲ. ಜಗತ್ತಿಿನ ಅಷ್ಟೂ ಸಂಪತ್ತುಗಳನ್ನು ಧಾರೆಯೆರೆದರೂ ನಿನ್ನೆೆಯನ್ನು ಮತ್ತೆೆ ಮರಳಿ ಬರುವಂತೆ ನಿನ್ನೆೆ ನೀವಾಡಿದ ಮಾತುಗಳನ್ನು, ನೀವು ಮಾಡಿದ ಕೆಲಸಗಳನ್ನು ಬದಲಿಸಲು ಸಾಧ್ಯವೇ ಇಲ್ಲ. ಇಂದಿನ ದಿನ ನಿನ್ನೆೆಯೆನಿಸಿಕೊಂಡು ಜಾರಿ ಹೋಗುವ ಮುನ್ನ ಅದನ್ನು ಕಾಪಾಡಿಕೊಳ್ಳುವ, ಅದು ನಮ್ಮನ್ನು ಮತ್ತೆೆಂದೂ ಬಾಧಿಸದ ರೀತಿಯಲ್ಲಿ ಉಪಯೋಗಿಸುವ ಜಾಣತನ ನಮ್ಮದಾಗಿರಬೇಕು.

ಇನ್ನು ಕಣ್ಣ ಮುಂದಿದ್ದರೂ ಕೈಗೆ ಸಿಗದ ನಾಳೆಗಳ ಬಗ್ಗೆೆಯೂ ನಾವು ಯೋಚಿಸಬಾರದು, ಆತಂಕ ಪಡಬಾರದು. ಕೇವಲ ಭರವಸೆಗಳನ್ನಿಿಟ್ಟುಕೊಳ್ಳಬಹುದಷ್ಟೆೆ. ನಾಳೆಯ ಸೂರ್ಯ ಪ್ರಖರವಾಗಿ ಉದಯಿಸಬಹುದು ಅಥವಾ ಮೋಡದ ಮರೆಯಲ್ಲಿ ನಿಂತು ಕಿರಣ ಸೂಸಬಹುದು. ಆದರೆ ಹುಟ್ಟುವುದಂತೂ ಸತ್ಯ. ಅದರ ಬಗ್ಗೆೆ ನಾವಿಂದು ಗಂಟೆಗಟ್ಟಲೆ ಕುಳಿತು ಚಿಂತಿಸಿದರೂ ಪ್ರಯೋಜನವಿಲ್ಲ. ನಾಳೆ ಎಂಬುದು ತಾಯಿ ಹೊಟ್ಟೆೆಯಲ್ಲಿರುವ ಮಗುವಿನಂತೆ.

ಹಾಗಾದರೆ ನಮ್ಮ ಬಳಿ ಉಳಿದಿರುವುದೇನು?
ಇವತ್ತು ಮಾತ್ರ ನಮ್ಮ ಕೈಯಲ್ಲಿರುವುದು. ಅದಕ್ಕೇ ತಾನೆ ಅದನ್ನು * ್ಟೃಛಿಛ್ಞಿಿಠಿ ಎನ್ನುವುದು. ದೇವರು ನಮಗೆ ನೀಡಿರುವ ಬಹುಮಾನವದು. ನಾವು, ನೀವು, ಎಲ್ಲರೂ ಈ ಒಂದು ದಿನದ ಯುದ್ಧವನ್ನು ಮಾತ್ರ ಹೋರಾಡಬಹುದು. ನಿನ್ನೆೆ-ನಾಳೆಗಳ ಬಗ್ಗೆೆ ಚಿಂತಿಸಬಹುದಷ್ಟೇ ಹೊರತು ಇನ್ನೇನನ್ನೂ ಮಾಡಲು ನಮ್ಮಿಿಂದ ಸಾಧ್ಯವಿಲ್ಲ. ನಡೆದು ಹೋದ ಕೆಟ್ಟ ಘಟನೆಗಳ ಬಗ್ಗೆೆ, ನಾಳೆ ಎದುರಾಗಬಹುದಾದ ಸಮಸ್ಯೆೆಗಳ ಬಗ್ಗೆೆ ಚಿಂತಿಸಿ ನಾವು ಇವತ್ತನ್ನು ಹಾಳು ಮಾಡಿಕೊಳ್ಳುವುದು ಮೂರ್ಖತನವಾಗುತ್ತದೆ.
ಹಾಗಾಗಿ ನಿನ್ನೆೆ, ನಾಳೆಗಳ ನಡುವಿನ ನಮ್ಮ ಜೀವನವನ್ನು ಸಾರ್ಥಕವಾಗಿ ಬದುಕೋಣ.

ಇಬ್ಬರು ಸ್ನೇಹಿತರಿದ್ದರು. ಒಬ್ಬರನ್ನೊೊಬ್ಬರು ಬಿಟ್ಟು ಕೊಡುತ್ತಿಿರಲಿಲ್ಲ. ಇಬ್ಬರೂ ಬಡವರೇ. ಏನಾದರೂ ಬ್ಯುಸಿನೆಸ್ ಮಾಡಬೇಕು ಎಂದು ಯೋಚಿಸಿದರು. ಸಾಲ ಮಾಡಿ, ಬಂಡವಾಳ ಹೂಡಿದರು. ಬ್ಯುಸಿನೆಸ್‌ನಲ್ಲಿ ಲಾಭವಾಯಿತು. ಮತ್ತೆೆ ಬಂಡವಾಳ ಹೂಡಿದರು. ಮತ್ತೆೆ ಲಾಭವಾಯಿತು.

ಹೀಗೆ ಇಬ್ಬರೂ ಬ್ಯುಸಿನೆಸ್ ಚೆನ್ನಾಾಗಿ ನಡೆಯುತ್ತಿಿತ್ತು. ಒಬ್ಬ ಸ್ನೇಹಿತ ಬಂದು ‘ಇನ್ನೊೊಂದು ಒಳ್ಳೆೆ ಆಫರ್ ಇದೆ. ನನ್ನ ಬಂಡವಾಳ ಸಾಲದು, ನೀನು ಬಂಡವಾಳ ಹೂಡು, ಲಾಭ ಹಂಚಿಕೊಳ್ಳೋೋಣ’ ಎಂದ. ಅಷ್ಟೇನು ಒಪ್ಪಿಿಗೆ ಇರದಿದ್ದರೂ ಸ್ನೇಹಿತನನ್ನು ನಂಬಿ ಬಂಡವಾಳ ಹೂಡಿದ್ದಾಾಯ್ತು. ಆದರೆ ಈ ಬಾರಿ ಅದೃಷ್ಟ ಇವರ ಕೈಯಲ್ಲಿ ಇರಲಿಲ್ಲ. ಕೈ ಸುಟ್ಟುಕೊಂಡರು. ಒಬ್ಬ ಸ್ನೇಹಿತ ಇನ್ನೊೊಬ್ಬನಿಗೆ ‘ನನಗೆ ಬಂಡವಾಳ ಹೂಡಲು ಸಂಪೂರ್ಣ ಮನಸ್ಸಿಿರಲಿಲ್ಲ.

ನಿನ್ನ ನಂಬಿ ತಪ್ಪುು ಮಾಡಿದೆ. ಕೆಲ ದಿನದ ಕೋಟ್ಯಧಿಪತಿಗಳಾದ ನಾವು ಇಂದು ಭಿಕ್ಷುಕರು. ಎಲ್ಲಾಾ ನಿನ್ನಿಿಂದಲೇ’ ಎಂದು ಮೂದಲಿಸಿದ. ಅದಕ್ಕೆೆ ಇನ್ನೊೊಬ್ಬಾಾತ ‘ಲಾಭ ಬಂದಿದ್ದರೆ ಸಂತೋಷ ಪಡುತ್ತಿಿರಲಿಲ್ಲವೇ? ನನಗೂ ಹೀಗೆ ಆಗುತ್ತದೆಂದು ಗೊತ್ತಿಿರಲಿಲ್ಲ’ ಎಂದ. ಇವನಿಗೆ ಬುದ್ಧಿಿ ಕಲಿಸಬೇಕು ಎಂದು ಒಬ್ಬಾಾತ ಸ್ನೇಹಿತನ ಮನೆಗೆ ಬೆಂಕಿ ಹಚ್ಚಿಿದ. ಇನ್ನೊೊಬ್ಬ ದ್ವೇಷ ತೀರಿಸಿಕೊಳ್ಳಲು ಸೂಕ್ತ ಮಾರ್ಗಕ್ಕಾಾಗಿ ಕಾಯುತ್ತಿಿದ್ದ. ಅಷ್ಟರಲ್ಲಿ ಆತನ ಬಳಿಗೆ ಇನ್ನೊೊಬ್ಬಾಾತ ಬಂದು ಬ್ಯುಸಿನೆಸ್ ಪಾರ್ಟನರ್ ಆಗಿ ಮಾಡುಕೊಳ್ಳುತ್ತೇನೆ ಎಂದು ಕೇಳಿದ.

ಆತ ಖುಷಿಯಿಂದಲೇ ಒಪ್ಪಿಿದ. ಇಬ್ಬರೂ ಈತ ಮತ್ತೆೆ ಶ್ರೀಮಂತನಾಗತೊಡಗಿದ. ಮನೆಗೆ ಬೆಂಕಿ ಹಚ್ಚಿಿದ ಸ್ನೇಹಿತನಿಗೆ ಹೊಟ್ಟೆೆ ಉರಿ ತಾಳಲಾಗಲಿಲ್ಲ. ಆತನ ಆಫೀಸಿಗೆ ಬೆಂಕಿ ಹಚ್ಚುವ ಪ್ರಯತ್ನ ಮಾಡಿ ಸಿಕ್ಕು ಬಿದ್ದ. ಹೀಗೆ ದಿನ ಕಳೆದವು. ಒಂದು ದಿನ ಆ ಸ್ನೇಹಿತ ಶ್ರೀಮಂತ ಸ್ನೇಹಿತನ ಮನೆಗೆ ಬಂದು, ಈ ಜಗಳ ಸಾಕು ನಾನು ನಿನ್ನ ಬ್ಯುಸಿನೆಸ್ ಪಾರ್ಟನರ್ ಆಗುತ್ತೇನೆ, ಅದಕ್ಕಿಿಂತ ಹೆಚ್ಚಾಾಗಿ ಮತ್ತೆೆ ನಿನ್ನ ಸ್ನೇಹಿತನಾಗುತ್ತೇನೆ ಎಂದು ಬೇಡಿಕೊಂಡ. ಆದರೆ ಈತ ಒಪ್ಪಲಿಲ್ಲ. ಅದಕ್ಕೆೆ ಅವನು, ಸ್ನೇಹಿತರಾಗಿದ್ದೆೆವು, ಒಂದೇ ತಟ್ಟೆೆಯಲ್ಲಿ, ರಸ್ತೆೆ ಬದಿಯಲ್ಲಿ ಕೂತು ತಿಂದುದನ್ನು ಮರೆತು ಬಿಟ್ಟೆೆಯಾ?’ ಎಂದು ಕೂಗಿದ. ‘ನೀನು ನನ್ನ ಮನೆಗೆ ಬೆಂಕಿ ಹಾಕಿದ್ದನ್ನೂ ನಾನು ಮರೆತಿಲ್ಲ. ನಾನು ನಿನ್ನನ್ನು ಕ್ಷಮಿಸುತ್ತೇನೆ. ಆದರೆ ನೀನು ಮಾಡಿದ್ದನ್ನು ಮರೆಯುವುದಿಲ್ಲ’ ಎಂದು ಹೇಳಿದ.

ದ್ವೇಷ ಸಾಧಿಸಲು ಎರಡು ದಾರಿಯಿದೆ. ಒಂದು ದ್ವೇಷದಿಂದ, ಇನ್ನೊೊಂದು ಏಳಿಗೆಯಿಂದ. ಎರಡನೇ ಸ್ನೇಹಿತ ಎರಡನೇ ದಾರಿ ಆರಿಸಿಕೊಂಡ. ಆತ ಮನೆಗೆ ಬೆಂಕಿ ಇಟ್ಟಾಾಗ, ಈತನೂ ಅವನ ಮನೆಗೆ ಬೆಂಕಿ ಇಟ್ಟಿಿದ್ದರೆ ಸಾಧಿಸಿದಂತೆ ಆಗುತ್ತಿಿತ್ತು. ಆದರೆ ಆತನ ಏಳಿಗೆ ಈತನ ಕ್ಷಮೆ ಕೇಳುವಂತೆ ಮಾಡಿತು. ಇಂಥ ತಪ್ಪುು ಮಾಡಿದ ಸ್ನೇಹಿತರನ್ನು ಕ್ಷಮಿಸಿ. ಆದರೆ ಅವರು ಮಾಡಿದ್ದನ್ನೆೆಲ್ಲ ಮರೆತು ಮತ್ತೆೆ ಹತ್ತಿಿರ ಬಿಟ್ಟುಕೊಳ್ಳದಿರಿ.

ಅವನು ಬಹುದೊಡ್ಡ ಕಂಪನಿಯೊಂದರಲ್ಲಿ ಮ್ಯಾಾನೇಜರ್ ಆಗಿದ್ದ. ಒಂದು ದಿನ ಕಾರಿನಲ್ಲಿ ಮನೆ ಕಡೆ ಹೊರಟವನಿಗೆ ದಾರಿಯಲ್ಲೊೊಂದು ವಿಚಿತ್ರ ದೃಶ್ಯ ಕಾಣಿಸಿತು. ಇಬ್ಬರು ವ್ಯಕ್ತಿಿಗಳು ರಸ್ತೆೆ ಬದಿಯ ಜಾಗದಲ್ಲಿ ಬೆಳೆದಿದ್ದ ಹುಲ್ಲನ್ನು ಮೇಯುತ್ತಿಿದ್ದರು. ಅದನ್ನು ನೋಡಿ ಚಕಿತನಾದ ಮ್ಯಾಾನೇಜರ್ ಇಳಿದು ಹುಲ್ಲು ಮೇಯುತ್ತಿಿದ್ದವರಲ್ಲಿಗೆ ಬಂದ.
‘ನೀವು ಮನುಷ್ಯರಲ್ಲವೆ? ದನಗಳಂತೆ ಹುಲ್ಲನ್ನೇಕೆ ತಿನ್ನುತ್ತಿಿದ್ದೀರಿ?’ ಎಂದು ಕೇಳಿದ.

‘ನಾವು ಬಡವರು ಸಾರ್. ಊಟಕ್ಕೂ ದುಡ್ಡಿಿಲ್ಲ. ಹಸಿವು ಇಂಗಿಸಲು ಹುಲ್ಲು ತಿನ್ನದೆ ಬೇರೆ ವಿಧಿಯೇ ಇಲ್ಲ’ ಎಂದ ಮೊದಲನೆಯವ.

‘ಹಾಗಾದರೆ ನನ್ನ ಜತೆ ಬನ್ನಿಿ. ನಾನು ನಿಮಗೆ ಸಹಾಯ ಮಾಡುತ್ತೇನೆ’ ಎಂದ ಮ್ಯಾಾನೇಜರ್.
‘ಆದರೆ ಸಾರ್ ನನಗೆ ಹೆಂಡತಿ ಮತ್ತು ಐವರು ಮಕ್ಕಳಿದ್ದಾಾರೆ. ಅಲ್ಲಿ ನೋಡಿ, ಅವರೆಲ್ಲ ಆ ಮರದ ಕೆಳಗೆ ನಿಂತಿದ್ದಾಾರೆ’ ತೋರಿಸಿದ.

‘ಅವರನ್ನೂ ನಿನ್ನ ಜತೆ ಕರೆದುಕೊಂಡು ಬಾ, ತೊಂದರೆಯಿಲ್ಲ’ ಎಂದು ಎರಡನೆಯವನ ಕಡೆ ತಿರುಗಿ ‘ನೀನೂ ನನ್ನೊೊಡನೆ ಬರಬಹುದು’ ಎಂದು ಹೇಳಿದ.
ಎರಡನೆಯವ ನಿಧಾನ ಸ್ವರದಲ್ಲಿ -‘ಸಾರ್ ನನಗೂ ಹೆಂಡತಿ ಮತ್ತು ಏಳು ಜನ ಮಕ್ಕಳಿದ್ದಾಾರೆ’ ಎಂದ ಸಂಕೋಚದಿಂದ.
‘ಪರವಾಗಿಲ್ಲ ಅವರೂ ನಿಮ್ಮೊೊಡನೆ ಬರಲಿ’ ಎಂದ ಕರುಣಾಮಯಿ ಮ್ಯಾಾನೇಜರ್.

ಅವರೆಲ್ಲರೂ ಓಡಿ ಬಂದು ಕಾರ್ ಹತ್ತಿಿದರು. ಮ್ಯಾಾನೇಜರ್‌ನ ದೊಡ್ಡ ಕಾರು ಜನರು ತುಂಬಿದ ಮಿನಿ ಬಸ್‌ನಂತೆ ಕಾಣಿಸುತ್ತಿಿತ್ತು. ಆಗ ಬಡವ ಹೇಳಿದ ‘ಸಾರ್ ನೀವು ತುಂಬಾ ಒಳ್ಳೆೆಯವರು. ನಮ್ಮನ್ನೆೆಲ್ಲ ಕರೆದುಕೊಂಡು ಹೋಗಿ ಊಟ ಹಾಕುತ್ತಿಿದ್ದೀರಲ್ಲ ದೇವರು ನಿಮಗೆ ಒಳ್ಳೆೆಯದು ಮಾಡಲಿ. ನಿಮ್ಮ ಮನಸ್ಸು ತುಂಬಾ ದೊಡ್ಡದು’ ಎಂದು ಹೊಗಳಿದ.

ಮ್ಯಾಾನೇಜರ್ ಹೇಳಿದ ‘ಪರವಾಗಿಲ್ಲ. ನೀವು ನಿಜಕ್ಕೂ ನನ್ನ ಜಾಗವನ್ನು ಇಷ್ಟಪಡುತ್ತೀರಿ. ನಿಮ್ಮ ಮೈದಾನಕ್ಕಿಿಂತ ಅದು ದೊಡ್ಡದಿದೆ ಮತ್ತು ಅಲ್ಲಿ ಹುಲ್ಲು ಒಂದು ಮೀಟರ್‌ಗಿಂತಲೂ ಎತ್ತರವಾಗಿ ಬೆಳೆದುಕೊಂಡಿದೆ!’
ನೀತಿಯೇನೆಂದರೆ, ಯಾರೋ ಸಹಾಯ ಮಾಡುತ್ತಾಾರೆ ಎಂದು ನಂಬಬೇಡಿ. ಅದರಲ್ಲೂ ಮ್ಯಾಾನೇಜರ್‌ಗಳನ್ನಂತೂ ನಂಬಲೇಬಾರದು ಮಾತು ಕಾರ್ಪೋರೆಟ್ ವಲಯದಲ್ಲಿದೆ. ಯಾಕೆ ಹೇಳಿ? ತಮ್ಮ ಕೆಲಸವಾಗಬೇಕೆಂದರೆ ಮ್ಯಾಾನೇಜರ್‌ಗಳು ಏನು ಮಾಡಲೂ ಸಿದ್ಧರಿರುತ್ತಾಾರೆ.

ಇನ್ನೊೊಂದು ಮಾತು; ಈ ‘ಕರುಣಾಮಯಿ ಮ್ಯಾಾನೇಜರ್’ ಎಂಬುವನು ಇನ್ನೂ ಹುಟ್ಟೇ ಇಲ್ಲವಂತೆ!

Leave a Reply

Your email address will not be published. Required fields are marked *