Monday, 13th July 2020

ಟೋಯಿಂಗ್ ಹುಡುಗರ ಗುಂಡಾವರ್ತನೆ: ಸಾರ್ವಜನಿಕರ ಆಕ್ರೋಶ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು:
ಟೋಯಿಂಗ್ ಬಾಯ್ ಬಳಿ ದಂಡ ವಿಧಿಸುವ ಯಂತ್ರ ಇದ್ದುದ್ದನ್ನು ಪ್ರಶ್ನಿಿಸಿದ ಬೈಕ್ ಸವಾರನ ಮೇಲೆ ಐದಾರು ಮಂದಿ ಹಲ್ಲೆೆ ಮಾಡಿರುವ ಘಟನೆ ಆರ್.ಟಿ.ನಗರದಲ್ಲಿ ನಡೆದಿದ್ದು, ಇದರ ವಿಡಿಯೊ ವೈರಲ್ ಆಗಿದೆ.


ಆರ್.ಟಿ ನಗರ ಸಂಚಾರ ಎಎಸ್‌ಐ ಜಯಪ್ರಕಾಶ್ ಅವರು, ದಂಡ ವಿಧಿಸುವ ಯಂತ್ರವನ್ನು ಟೋಯಿಂಗ್ ಹುಡುಗನ ಕೈಗೆ ಕೊಟ್ಟಿಿದ್ದಾಾರೆ. ಟೋಯಿಂಗ್ ಬಾಯ್ ವಾಹನ ಸವಾರರಿಂದ ದಂಡ ವಸೂಲಿ ಮಾಡಿ ರಶೀದಿ ಕೊಡದೆ ಕಿರಿಕ್ ಮಾಡಿದ್ದಾನೆ. ಇದನ್ನು ಪ್ರಶ್ನಿಿಸಿದಕ್ಕೆೆ ಬೈಕ್ ಸವಾರನ ಮೇಲೆ ಐದಾರು ಮಂದಿ ಟೋಯಿಂಗ್ ಹುಡುಗರು ಹಲ್ಲೆೆ ಮಾಡಿದ್ದಾಾರೆ.

ಪ್ರಕರಣದ ವಿವರ:

ಹೆಬ್ಬಾಾಳ ಬಳಿಯ ಬ್ಯಾಾಪಿಸ್‌ಟ್‌ ಆಸ್ಪತ್ರೆೆ ಬಳಿ ನೋ ಪಾರ್ಕಿಂಗ್‌ನಲ್ಲಿ ಕಿರಣ್‌ಮೂರ್ತಿ ಎಂಬುವರು ಬೈಕ್ ನಿಲ್ಲಿಸಿದ್ದರು. ಅದನ್ನು ಆರ್.ಟಿ.ನಗರ ಸಂಚಾರ ಪೊಲೀಸರು ಟೋಯಿಂಗ್ ಮಾಡಿ ತೆಗೆದುಕೊಂಡು ಹೋಗಿದ್ದರು. ಬಳಿಕ ಬೈಕ್ ವಾಪಸ್ ಕೇಳಲು ಕಿರಣ್ ಮೂರ್ತಿ ಹೋದಾಗ ಟೋಯಿಂಗ್ ಬಾಯ್ 1600 ರುಪಾಯಿ ದಂಡ ಕಟ್ಟುವಂತೆ ಹೇಳಿದ್ದಾನೆ. ಈ ವೇಳೆ ಕಿರಣ್ 2 ಸಾವಿರ ಕೊಟ್ಟಿಿದ್ದಾಾರೆ. ಆದರೆ ಟೋಯಿಂಗ್ ಬಾಯ್ 1000 ರು. ಇಟ್ಟುಕೊಂಡು 1000 ರು. ವಾಪಸ್ ನೀಡಿ ಬಿಲ್ ನೀಡದೆ ಕಿರಿಕ್ ಮಾಡಿದ್ದಾನೆ. ಸಂಚಾರಿ ಪೊಲೀಸ್ ಅವರ ಬಳಿ ಇರಬೇಕಾದ ಈ ಮಷಿನ್ ನಿಮ್ಮ ಕೈಗೆ ಏಕೆ ಬಂತು ಎಂದು ಪ್ರಶ್ನಿಿಸಿದ್ದಾಾರೆ. ಈ ವೇಳೆ

ಮಾತಿಗೆ ಮಾತು ಬೆಳೆದು ಕಿರಣ್ ಮೇಲೆ ಐದಾರು ಟೋಯಿಂಗ್ ಬಾಯ್ ಸೇರಿ ಹಲ್ಲೆೆ ಮಾಡಿದ್ದಾಾರೆ. ಹಲ್ಲೆೆಯಿಂದಾಗಿ ಕಿರಣ್ ಅವರ ಮುಖ, ಕಿವಿಗೆ ಗಾಯಗಳಾಗಿವೆ.

ಘಟನೆಯ ವಿಡಿಯೋ ವೈರಲ್ ಆಗಿದೆ. ಅಲ್ಲದೇ ಟೋಯಿಂಗ್ ಹುಡುಗರು ನನ್ನ ಮೇಲೆ ಹಲ್ಲೆ ಮಾಡಿದ್ದಾಾರೆ ಎಂದು ಆರೋಪಿಸಿ ಬೈಕ್ ಸವಾರ ಕಿರಣ್ ಆರ್.ಟಿ.ನಗರ ಸಂಚಾರಿ ಪೊಲೀಸ್ ಠಾಣೆ ಹಾಗೂ ಲಾ ಅಂಡ್ ಆರ್ಡರ್ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದಾಾರೆ. ಟೋಯಿಂಗ್ ಹುಡುಗರ ಈ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋೋಶ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *