Sunday, 17th January 2021

ಸಂಚಾರ ನಿಯಮ ಉಲ್ಲಂಘನೆ: ಒಂದೇ ದಿನ 1,86,200 ರೂ. ದಂಡ ವಸೂಲಿ

ಶಿರಸಿ : ಅಪಘಾತಗಳ ಪ್ರಮಾಣ ತಗ್ಗಿಸಲು ಹಾಗೂ ಮೋಟಾರ್ ವಾಹನ ಕಾಯ್ದೆಯ ಬಗ್ಗೆ ಜನರಿಗೆ ತಿಳಿಸಲು‌ ಹೆಲ್ಮೆಟ್ ಹಾಕದೇ ಓಡಾಡುವ ಬೈಕ್ ಸವಾರರಿಗೆ ಶಿರಸಿ ಉಪ ವಿಭಾಗದ ಪೊಲೀಸರು‌ ಭಾರೀ ದಂಡ ವಿಧಿಸುತ್ತಿದ್ದು, ಒಂದೇ ದಿನದಲ್ಲಿ 1,86,200 ರೂ. ಗಳಷ್ಟು ದಂಡ ವಸೂಲಿ ಮಾಡಲಾಗಿದೆ.

ಶಿರಸಿ ಉಪವಿಭಾಗದ ನಾಲ್ಕು ತಾಲೂಕುಗಳ ವಿವಿಧ ಠಾಣೆಯಿಂದ ಒಂದೇ ದಿನ ಬರೋಬ್ಬರಿ 366 ಪ್ರಕರಣವನ್ನು ದಾಖಲಿಸಿ 1 ಲಕ್ಷದ 86 ಸಾವಿರದ 200 ರೂಪಾಯಿಗಳ ದಂಡವನ್ನು ವಸೂಲಿ ಮಾಡಿದ್ದಾರೆ.

ದಂಡ ವಸೂಲಿಯಲ್ಲಿ ಮುಂಡಗೋಡ ಠಾಣೆ ಪ್ರಥಮ ಸ್ಥಾನ ಪಡೆದಿದ್ದು ಒಟ್ಟೂ 73 ಪ್ರಕರಣ ದಾಖಲಿಸಿ 36500 ರೂ ಗಳ ದಂಡ ವಸೂಲಿ ಮಾಡಿದರೇ ಎರಡನೆ ಸ್ಥಾನವನ್ನು ಸಿದ್ದಾಪುರ ಪೊಲೀಸ್ ಠಾಣೆ ಪಡೆದುಕೊಂಡು 57 ಪ್ರಕರಣ ದಾಖಲಿಸಿ 29 ಸಾವಿರ ರೂ ದಂಡ ವಸೂಲಿ ಮಾಡಿದ್ದಾರೆ. ತೃತೀಯ ಸ್ಥಾನವನ್ನು ಶಿರಸಿ ಗ್ರಾಮೀಣ ಠಾಣೆ ಪಡೆದಿದ್ದು ಒಟ್ಟೂ 48 ಪ್ರಕರಣ ದಾಖಲಿಸಿ 26 ಸಾವಿರದ 500 ರೂಗಳ ದಂಡವನ್ನು ವಿಧಿಸಿದೆ.

ಉಳಿದಂತೆ ಕ್ರಮವಾಗಿ ಶಿರಸಿ ಮಾರುಕಟ್ಟೆ ಠಾಣೆ 44 ಪ್ರಕರಣ ದಾಖಲಿಸಿ 25ಸಾವಿರದ 500, ಸಿರಸಿ ನಗರ ಠಾಣೆ 40 ಪ್ರಕರಣ 21 ಸಾವಿರ, ಬನವಾಸಿ ಠಾಣೆ 24 ಪ್ರಕರಣ 12 ಸಾವಿರ, ಯಲ್ಲಾಪುರ ಠಾಣೆ 15 ಪ್ರಕರಣ 3500 ರೂ, ಶಿರಸಿ ಡಿ.ಎಸ್.ಪಿ. 41 ಪ್ರಕರಣ 20 ಸಾವಿರದ 500, ಶಿರಸಿ ಸಿ.ಪಿ.ಐ. 11 ಪ್ರಕರಣ 5500 ರೂ, ಶಿರಸಿ ಹೆಚ್.ಆರ್.ಪಿ. 6 ಪ್ರಕರಣ 3 ಸಾವಿರ ಹಾಗೂ ಯಲ್ಲಾಪುರ ಹೆಚ್.ಆರ್.ಪಿ. 7 ಪ್ರಕರಣ 3 ಸಾವಿರದ 200 ರೂಪಾಯಿಗಳ ದಂಡ ವಿಧಿಸಿದ್ದಾರೆ.

ಈಗಾಗಲೇ‌ ಡಿ.ಎಸ್.ಪಿ. ರವಿ ಡಿ.ನಾಯ್ಕ ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದು ಯಾವುದೇ ಕಾರಣಕ್ಕೂ ಹೆಲ್ಮಟ್ ಹಾಗೂ ಸೀಟ್ ಬೆಲ್ಟ್ ಹಾಕದೆ ಸಂಚಾರಿ ನಿಯಮವನ್ನು ಸರಿಯಾಗಿ ಪಾಲಿಸದೆ ಇರುವವರಿಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿ ದ್ದಾರೆ.

Leave a Reply

Your email address will not be published. Required fields are marked *