Tuesday, 26th October 2021

ಟಿಟಿ ಪಲ್ಟಿ: ಮೂವರ ಸಾವು, ಹನ್ನೊಂದು ಮಂದಿಗೆ ಗಾಯ

ಚಾಮರಾಜನಗರ: ತಾಲೂಕಿನ ಸುವರ್ಣವತಿ ಡ್ಯಾಮ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಟಿಟಿ ಪಲ್ಟಿಯಾಗಿ ಮೂವರು ಮೃತಪಟ್ಟು, ಹನ್ನೊಂದು ಮಂದಿ ಗಾಯಗೊಂಡರು.

ತಮಿಳುನಾಡಿನಿಂದ ಮೈಸೂರಿಗೆ ಬರುವಾಗ ಘಟನೆ ಸಂಭವಿಸಿದೆ. ಅಪಘಾತದಲ್ಲಿ 11 ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸುವರ್ಣವತಿ ಡ್ಯಾಮ್ ಬಳಿ ವೇಗವಾಗಿ ಸಂಚರಿಸುತ್ತಿದ್ದ ಟಿಟಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸ ಲಾಗಿದೆ.

Leave a Reply

Your email address will not be published. Required fields are marked *