Friday, 18th June 2021

ಉಗ್ರಪ್ಪ ಎಂಬ ರಾಜಕಾರಣದ ಅಸಹ್ಯಕರ ಶಬ್ದಮಾಲಿನ್ಯ!

ಮನುಷ್ಯನಿಗೆ ಮಾತೇ ವ್ಯಕ್ತಿಿತ್ವ. ‘ಮಾತೇ ಮಾಣಿಕ್ಯ’ ಎಂದು ಭಾವಿಸಿದ ಸಂಸ್ಕೃತಿ ನಮ್ಮದು. ಮಾತು ಬೇರೆ ಅಲ್ಲ, ಮನುಷ್ಯ ಬೇರೆ ಅಲ್ಲ. ಆದರೆ ಈ ಮಾತು ನಮ್ಮ ರಾಜಕಾರಣಿಗಳಿಗೆ ಅನ್ವಯಿಸುವುದಿಲ್ಲ. ಹಾಗಾದರೆ ರಾಜಕಾರಣಿಗಳು ಮನುಷ್ಯರು ಅಲ್ಲವಾ ಎಂಬುದು ಬೇರೆ ಮಾತು. ರಾಜಕಾರಣಿಗಳ ಮಾತಿಗೂ, ನಡೆಗೂ, ವ್ಯಕ್ತಿಿತ್ವಕ್ಕೂ ಸಂಬಂಧವೇ ಇಲ್ಲ. ‘ನನ್ನ ಮಾತುಗಳೇ ನಾನು’ ಎಂಬುದನ್ನು ಇಡೀ ಸಮಾಜವೇ ಒಪ್ಪಿಿಕೊಂಡರೂ, ರಾಜಕಾರಣಿಗಳು ಮಾತ್ರ ಒಪ್ಪಿಿಕೊಳ್ಳುವುದಿಲ್ಲ. ತಮ್ಮ ಮಾತುಗಳಿಂದ ತಮ್ಮ ವ್ಯಕ್ತಿಿತ್ವ ನಿರ್ಧರಿತವಾಗುತ್ತದೆ ಎಂಬುದನ್ನು ಅವರು ಗಂಭೀರವಾಗಿ ಪರಿಗಣಿಸುವುದಿಲ್ಲ. ಹೀಗಾಗಿ ಬೇಕಾಬಿಟ್ಟಿಿ ಮಾತಾಡಿ ತಮ್ಮ ವ್ಯಕ್ತಿಿತ್ವ ಕೆಡಿಸಿಕೊಂಡು ಜನರ ಕಣ್ಣಲ್ಲಿ ಸಣ್ಣವರಾಗುತ್ತಾಾರೆ.

‘ಆರೋಪ ಸಾಬೀತಾದರೆ ರಾಜೀನಾಮೆ’ ಎಂದು ನೂರಾರು ರಾಜಕಾರಣಿಗಳು ಹೇಳಿರಬಹುದು. ಆದರೆ ಇಲ್ಲಿ ತನಕ ಒಬ್ಬನೂ ನುಡಿದಂತೆ ನಡೆದಿದ್ದನ್ನು ನಾನಂತೂ ನೋಡಿಲ್ಲ. ‘ಆರೋಪ ಸಾಬೀತಾದರೆ ರಾಜಕೀಯ ಸನ್ಯಾಾಸ ಸ್ವೀಕರಿಸುತ್ತೇನೆ’ ಎಂಬುದೂ ಹಳೇ ವರಸೆಯೇ. ಆದರೆ ಇಲ್ಲಿಯವರೆಗೆ ಒಬ್ಬನೇ ಒಬ್ಬ ರಾಜಕಾರಣಿಯೂ ರಾಜಕೀಯ ಸನ್ಯಾಾಸ ಸ್ವೀಕರಿಸಿದ್ದನ್ನು ಯಾರೂ ನೋಡಿಲ್ಲ. ‘ನರೇಂದ್ರ ಮೋದಿ ಎರಡನೆ ಬಾರಿ ಪ್ರಧಾನಿಯಾದರೆ ನಾನು ರಾಜಕೀಯ ಸನ್ಯಾಾಸ ಸ್ವೀಕರಿಸುವೆ’ ಎಂದು ದೇವೇಗೌಡರ ಪುತ್ರ, ಅಂದಿನ ಸಚಿವ ಎಚ್.ಡಿ. ರೇವಣ್ಣ ಅಂದು ಚುನಾವಣೆ ಸಂದರ್ಭದಲ್ಲಿ ಹೇಳಿದ್ದರು. ಚುನಾವಣೆ ಮುಗಿಯಿತು, ಮೋದಿ ಎರಡನೇ ಬಾರಿ ಪ್ರಧಾನಿಯೂ ಆದರು. ಆದರೆ ರೇವಣ್ಣ ಮಾತ್ರ ಹೇಳಿದ ಮಾತನ್ನು ಇನ್ನೂ ಈಡೇರಿಸಿಲ್ಲ. ತಮ್ಮ ಮಾತಿಗೆ ತಾವೇ ಕಿಮ್ಮತ್ತು ಕೊಡದಿದ್ದರೆ, ಇನ್ಯಾಾರು ಕೊಡುತ್ತಾಾರೆ ಎಂಬ ಕನಿಷ್ಠ ಜ್ಞಾಾನವೂ ರೇವಣ್ಣಂಗೆ ಇಲ್ಲದೇ ಹೋಯಿತಾ? ರೇವಣ್ಣ ರಾಜಕೀಯ ಸನ್ಯಾಾಸ ಸ್ವೀಕರಿಸಲಿ ಎಂಬ ಇರಾದೆ ಯಾರಿಗೂ ಇರಲಿಲ್ಲ. ಆದರೆ ಅವರೇ ಆ ಮಾತುಗಳನ್ನು ಹೇಳಿ ತಮ್ಮ ವ್ಯಕ್ತಿಿತ್ವಕ್ಕೆೆ ಕುಂದು ತಂದುಕೊಂಡರು.

‘ಈ ಜನ್ಮದಲ್ಲೂ ಮತ್ತೊೊಮ್ಮೆೆ ಯಡಿಯೂರಪ್ಪನವರು ಮುಖ್ಯಮಂತ್ರಿಿ ಆಗೊಲ್ಲ, ಒಂದು ವೇಳೆ ಆದರೆ ನಾನು ಅವರ ಮನೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತೇನೆ’ ಎಂದು ಕುಮಾರಸ್ವಾಾಮಿಯ ಸಂಪುಟದಲ್ಲಿ ಸಚಿವರಾಗಿದ್ದ ಜಮೀರ್ ಅಹಮದ್ ಹೇಳಿದ್ದರು. ಯಡಿಯೂರಪ್ಪನವರು ಮುಖ್ಯಮಂತ್ರಿಿಯಾದರು. ಕೇವಲ ಎರಡು ವಾರಗಳ ಹಿಂದೆ ಹೇಳಿದ ಮಾತನ್ನು ಜಮೀರ್ ಮರೆಯಲು ಸಾಧ್ಯವಿರಲಿಲ್ಲ. ಅಲ್ಲದೇ ಎಲ್ಲ ಟಿವಿ ಚಾನೆಲ್‌ಗಳು, ಪತ್ರಿಿಕೆಗಳು ‘ಜಮೀರ್, ನೀವು ಒಂದು ದಿನದ ಮಟ್ಟಿಿಗೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡ್ತೀನಿ ಅಂತ ಹೇಳಿದ್ದಿರಿ’ ಎಂದು ನೆನಪಿಸಿದವು. ಸೋಶಿಯಲ್ ಮೀಡಿಯಾದಲ್ಲಂತೂ ಜಮೀರ್ ಟ್ರೋೋಲ್ ಆದರು. ಅವರು ತಮ್ಮ ಮಾತನ್ನು ಮರೆತವರಂತೆ ಸುಮ್ಮನಿದ್ದರು. ಬೇರೆಯವರು ಕೊಡುವುದು ದೂರವೇ ಉಳಿಯಿತು, ಜಮೀರ್ ತಮ್ಮ ಮಾತಿಗೆ ತಾವೇ ಕಿಮ್ಮತ್ತು ಕೊಡಲಿಲ್ಲ. ಮುಂದೆ ಈ ನಾಯಕರ ಮಾತುಗಳನ್ನು ಯಾರು ಗಂಭೀರವಾಗಿ ತೆಗೆದುಕೊಳ್ಳುತ್ತಾಾರೆ? ನಾಚಿಕೆ, ಮಾನ-ಮರ್ಯಾಾದೆ ಇಲ್ಲದವರು!

ಸಾರ್ವಜನಿಕ ಜೀವನದಲ್ಲಿ ಇರುವವರು ಒಂದು ಮಾತನ್ನಾಾಡುವಾಗ ಹತ್ತು ಸಲ ಯೋಚಿಸಬೇಕು. ಬೇರೆಯವರ ಬಗ್ಗೆೆ ಮಾತಾಡುವಾಗಂತೂ ಚೆನ್ನಾಾಗಿ ಯೋಚಿಸಬೇಕು. ಅನ್ಯರ ಬಗ್ಗೆೆ ಮಾತಾಡುವಾಗ ಒಂದು ತೂಕ, ಹದ ಇಲ್ಲದಿದ್ದರೆ, ಹಾಗೆ ಮಾತಾಡುವವರನ್ನು ಎಲ್ಲರೂ ಲಘುವಾಗಿಯೇ ಪರಿಗಣಿಸುತ್ತಾಾರೆ. ಆ ಮೂಲಕ ಅವರು ತಮ್ಮ ಘನತೆಯನ್ನು ತಾವೇ ಕಳೆದುಕೊಳ್ಳುತ್ತಾಾರೆ. ಜನರ ಕಣ್ಣಲ್ಲಿ ಸಣ್ಣವರಾಗಿ ಕಾಣುತ್ತಾಾರೆ. ತಮ್ಮ ರಾಜಕೀಯ ವಿರೋಧಿಗಳ ಬಗ್ಗೆೆ ಮಾತಾಡುವಾಗ ಗೌರವ, ಸಂಯಮ, ಮರ್ಯಾಾದೆಯ ಎಲ್ಲೆೆ ಮೀರಬಾರದು ಎಂಬ ಸಾಮಾನ್ಯ ಸಂಗತಿಯೂ ಗೊತ್ತಿಿರುವುದಿಲ್ಲ. ಎರಡು ಬಾರಿ ಮುಖ್ಯಮಂತ್ರಿಿಯಾದ ಕುಮಾರಸ್ವಾಾಮಿಯಂಥ ನಾಯಕರೂ ಉಡಾಫೆಯಿಂದ ಮಾತಾಡುವುದನ್ನು ಕೇಳಿರಬಹುದು. ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳ ಬಗ್ಗೆೆ ವಿರೋಧವಿರಲಿ, ತಪ್ಪೇನಿಲ್ಲ. ಆದರೆ ಅನಾದರ, ಅಗೌರವ ಬೇಡವೇ ಬೇಡ. ನಾಲಗೆ ನಿಯಂತ್ರಣವಿಲ್ಲದ ನಾಯಕ, ಯಾರ ಮೇಲೂ ನಿಯಂತ್ರಣವನ್ನು ಇಟ್ಟುಕೊಳ್ಳಲಾರ, ಅದಕ್ಕಿಿಂತ ಹೆಚ್ಚಾಾಗಿ ಬಹುಬೇಗ ಜನರ ಕಣ್ಣಲ್ಲಿ ಸಣ್ಣವನಾಗುತ್ತಾಾನೆ.

ಉದಾಹರಣೆಗೆ, ನಾಲ್ಕು ತಿಂಗಳ ಲೋಕಸಭಾ ಸದಸ್ಯ ವಿ.ಎಸ್. ಉಗ್ರಪ್ಪ. ಈ ಮನುಷ್ಯ ಮೈಮೇಲೆ, ಬುದ್ಧಿಿಮೇಲೆ ಪರಿವೆ ಇಲ್ಲದಂತೆ ಮಾತಾಡುತ್ತಾಾರೆ. ಮೊದಲೇ ಕೆಟ್ಟ ಸ್ವರ, ಬಾಯಿ ತೆರೆದರೆ ಕರ್ಕಶ. ತನ್ನ ರಾಜಕೀಯ ಪ್ರತಿಸ್ಪರ್ಧಿಗಳ ಬಗ್ಗೆೆ ಲಘುವಾಗಿ, ಹಗುರವಾಗಿ ಮಾತಾಡುತ್ತಾಾರೆ. ಮಾತಿನಲ್ಲಿ ಯಾವುದೇ ಹುರುಳಾಗಲಿ, ತಿರುಳಾಗಲಿ ಇರುವುದಿಲ್ಲ. ಆದರೂ ವಟವಟ ಅಂತ ಬಡಬಡಿಸುತ್ತಾಾರೆ. ಟಿವಿ ಸ್ಟುಡಿಯೋದಲ್ಲಿ ಕುಳಿತರೆ ಇವರು ಬೇರೆ ಯಾರಿಗೂ ಮಾತಾಡಲು ಬಿಡುವುದಿಲ್ಲ. ತಾನೊಂದು ಖಾಲಿ ಕೊಡ ಎಂಬುದನ್ನು ಪದೇಪದೆ ಸಾಬೀತು ಮಾಡುತ್ತಾಾರೆ. ಇವರ ಮಾತನ್ನು ಅವರ ಪಕ್ಷದವರೇ ಗಂಭೀರವಾಗಿ ಪರಿಗಣಿಸುವುದಿಲ್ಲ. ಇತ್ತೀಚೆಗೆ ಕಾಂಗ್ರೆೆಸ್ ನಾಯಕರಿದ್ದ ಸಭೆಯಲ್ಲಿ ಧ್ವನಿವರ್ಧಕ ಕೈಕೊಟ್ಟಿಿತು.

ವೇದಿಕೆಯಲ್ಲಿದ್ದ ನಾಯಕರೊಬ್ಬರು, ‘ಮೈಕ್ ಸರಿ ಹೋಗುವ ತನಕ ಉಗ್ರಪ್ಪ ಮಾತಾಡಲಿ’ ಎಂದು ಸಲಹೆ ನೀಡಿದರಂತೆ. ಇಷ್ಟು ಸಾಕಾ ಅವರ ಮುಖಕ್ಕೆೆ?! ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಸೋಲುವಂಥ ಹೀನಾಯ ಸ್ಥಿಿತಿ ತಂದುಕೊಂಡ ಅವರ ವ್ಯಕ್ತಿಿತ್ವವನ್ನು ಬಳ್ಳಾಾರಿ ಲೋಕಸಭಾ ಕ್ಷೇತ್ರದ ಮತದಾರರು ಅಳೆದರು. ಮತ್ಯಾಾರೂ ಅಲ್ಲ, ಅವರ ಮೊದಲ ಶತ್ರು ಅವರ ಬಾಯಿ, ಅವರ ಮಾತು.

ಇತ್ತೀಚೆಗೆ ಕೆಪಿಸಿಸಿ ಕಚೇರಿಯಲ್ಲಿ ಉಗ್ರಪ್ಪ, ಉಪಮುಖ್ಯಮಂತ್ರಿಿ ಲಕ್ಷ್ಮಣ ಸವದಿ ಬಗ್ಗೆೆ ಮಾತಾಡಿದರು. ವಿಧಾನಸಭೆಯಲ್ಲಿ ಬ್ಲ್ಯೂಫಿಲಂ ನೋಡಿದ್ದು ದೇಶದ್ರೋಹವಲ್ಲ ಎನ್ನುವ ಬಿಜೆಪಿ ಸರಕಾರದ ಸಚಿವರು, ಮುಂದಿನ ದಿನಗಳಲ್ಲಿ ಬಸ್‌ಸ್ಟ್ಯಾಾಂಡಿನಲ್ಲಿ ಸಾರ್ವಜನಿಕವಾಗಿ ಬ್ಲ್ಯೂಫಿಲಂ ತೋರಿಸಿದರೂ ಅಚ್ಚರಿಯಿಲ್ಲ ಎಂದು ವ್ಯಂಗ್ಯವಾಡಿದರು. ಸವದಿ ಸದನದಲ್ಲಿ ಬ್ಲ್ಯೂಫಿಲಂ ನೋಡಿದರೆನ್ನಲಾದ ಪ್ರಕರಣ ಸುಮಾರು ಆರೆಂಟು ವರ್ಷಗಳಷ್ಟು ಹಳೆಯದು. ಅದನ್ನು ರಾಜ್ಯದ ಜನತೆ ಮರೆತುಬಿಟ್ಟಿಿದ್ದಾಾರೆ. ಆದರೆ ಉಗ್ರಪ್ಪನವರ ಮನಸ್ಸಿಿನಲ್ಲಿ ಮಾತ್ರ ಇನ್ನೂ ನೀಲಿಚಿತ್ರವೇ ಇದೆ. ಸವದಿಯವರು ಸದನದಲ್ಲಿ ಅದನ್ನು ನೋಡಬಾರದಿತ್ತು. ಆದರೆ ಆಕಸ್ಮಿಿಕವಾಗಿ ನೋಡಿಬಿಟ್ಟರು.

ಅದಕ್ಕೆೆ ಪ್ರಾಾಯಶ್ಚಿಿತವಾಗಿ ರಾಜೀನಾಮೆಯನ್ನೂ ಕೊಟ್ಟರು. ಅಲ್ಲಿಗೆ ಆ ಕತೆ ಮುಗಿಯಿತು. ಅದೊಂದು ತೀರಾ ಆಕಸ್ಮಿಿಕ, ದುರ್ದೈವ, ಅನಪೇಕ್ಷಿಿತ ಘಟನೆ. ಅಲ್ಲಿ ಆ ಚಿತ್ರವನ್ನು ನೋಡಬಾರದು ಎಂಬ ವಿವೇಕ ಸವದಿ ಅವರಿಗೆ ಖಂಡಿತವಾಗಿಯೂ ಇತ್ತು, ಇದೆ. ಆದರೆ ಅವರಿಂದ ಆದ ಪ್ರಮಾದ ತೀರಾ ಆಕಸ್ಮಿಿಕ. ಅದು ಕ್ಷಮಾರ್ಹವಲ್ಲದ ಅಪರಾಧವೇನಲ್ಲ. ಸದನದಲ್ಲಿ ಬಿಡಿ, ಬೇರೆಲ್ಲೂ ಉಗ್ರಪ್ಪನವರು ಬ್ಲ್ಯೂಫಿಲಂ ನೋಡಿಯೇ ಇಲ್ಲವಾ? ಅದನ್ನು ನೋಡಿದವರು ಜಗತ್ತಿಿನಲ್ಲಿ ಸವದಿ ಅವರೊಬ್ಬರೇನಾ? ತಕರಾರು ಇರುವುದು ಅವರು ನೋಡಿದ ಜಾಗದ ಬಗ್ಗೆೆ ತಾನೇ? ಅದಕ್ಕಾಾಗಿ ಸವದಿಯವರು ಪ್ರಾಾಯಶ್ಚಿಿತ ಮಾಡಿಕೊಂಡಿದ್ದಾಾರೆ. ಎಲ್ಲ ಪ್ರಮಾದಗಳಿಗೂ ಕ್ಷಮೆ, ಪ್ರಾಾಯಶ್ಚಿಿತ್ತವಿದೆ. ಸವದಿ ಅವರು ಆ ಪಾಪದಿಂದ ಈಗ ಪ್ರಾಾಯಶ್ಚಿಿತ್ತ ಮಾಡಿಕೊಂಡು ಹೊರಬಂದಿದ್ದಾಾರೆ, ಸ್ವಚ್ಛವಾಗಿದ್ದಾಾರೆ.

ಆದರೆ ಇನ್ನೂ ಗಲೀಜಾಗಿರುವವರು ಉಗ್ರಪ್ಪನವರು. ತಮ್ಮ ಮಾತಿನ ಮೂಲಕ ತಮ್ಮ ಮನಸ್ಥಿಿತಿ ಎಷ್ಟು ಕೊಳಕು, ಅಸಹ್ಯವಾಗಿದೆಯೆಂಬುದನ್ನು ಉಗ್ರಪ್ಪನವರು ಪ್ರದರ್ಶಿಸಿದ್ದಾಾರೆ. ‘ರಾಜ್ಯದ ಜನತೆಗೆ ಸವದಿಯವರು ಬಸ್‌ಸ್ಟ್ಯಾಾಂಡಿನಲ್ಲಿ ಸಾರ್ವಜನಿಕವಾಗಿ ಬ್ಲ್ಯೂಫಿಲಂ ತೋರಿಸಬಹುದು’ ಎಂದು ಲಘುವಾಗಿ ಮಾತಾಡುವಾಗ, ತಾವು ರಾಜ್ಯದ ಜನರನ್ನು ಎಷ್ಟು ಉದಾಸೀನ, ಕೇವಲವಾಗಿ ಪರಿಗಣಿಸಿ ಅವರಿಗೆ ಅವಮರ್ಯಾಾದೆ ಮಾಡುತ್ತಿಿದ್ದೇವೆಂಬ ಕನಿಷ್ಠ ಜ್ಞಾಾನವೂ ಇರಲಿಲ್ಲವಾ? ತಾನು ಅವಮಾನಿಸುತ್ತಿಿರುವುದು ಸವದಿ ಅವರನ್ನಲ್ಲ, ರಾಜ್ಯದ ಜನತೆಯನ್ನು ಎಂದು ಅವರಿಗೆ ಅನಿಸಲಿಲ್ಲವಾ? ಬಸ್‌ಸ್ಟ್ಯಾಾಂಡಿನಲ್ಲಿ ಬ್ಲ್ಯೂಫಿಲಂ ನೋಡುವುದು ನಮ್ಮ ಜನರ ಸಂಸ್ಕೃತಿಯಾ? ಮಾತಾಡುವುದಕ್ಕೂ ಒಂದು ಮಿತಿ, ಸಂಯಮ, ನಿಯಂತ್ರಣ, ಗೌರವ ಬೇಕಲ್ಲವಾ? ತಾನು ರಾಜ್ಯದ ಉಪಮುಖ್ಯಮಂತ್ರಿಿ ಸ್ಥಾಾನದಲ್ಲಿರುವ ವ್ಯಕ್ತಿಿ ಬಗ್ಗೆೆ ಮಾತಾಡುತ್ತಿಿದ್ದೇನೆಂಬ ಕನಿಷ್ಠ ತಿಳಿವಳಿಕೆ, ವಿವೇಚನೆಯೂ ಉಗ್ರಪ್ಪನವರಿಗೆ ಇಲ್ಲವಾ? ಸವದಿಯವರನ್ನು ವ್ಯಂಗ್ಯಮಾಡುವ ಭರದಲ್ಲಿ ರಾಜ್ಯದ ಜನತೆಯ ಮರ್ಯಾಾದೆ, ಸಂಪನ್ನತೆಯನ್ನು ಹರಾಜು ಹಾಕುತ್ತಿಿದ್ದೇನೆಂಬ ಸಾಮಾನ್ಯ ಬುದ್ಧಿಿಯೂ ಉಗ್ರಪ್ಪಗೆ ಇಲ್ಲದಾಯಿತಾ?

ಉಗ್ರಪ್ಪ ನಮ್ಮ ರಾಜ್ಯರಾಜಕಾರಣದ ಅತಿ ಅಸಹ್ಯಕರ ಶಬ್ದ ಮಾಲಿನ್ಯ! ಅವರು ರಂಧ್ರಗಳನ್ನೆೆಲ್ಲ ಬಾಯಿ ಎಂದು ಭಾವಿಸಿದಂತಿದೆ. ಅದಕ್ಕಾಾಗಿ ಅವರ ಮಾತುಗಳು ಅಷ್ಟು ಹೊಲಸಾಗಿರುತ್ತವೆ. ಈ ಕಟು ಸಂಗತಿ ಅವರಿಗೆ ಗೊತ್ತಾಾಗಲಿ ಎಂದೇ ನೇರಾನೇರ ಹೇಳಿದ್ದೇನೆ. ಅವರು ಆಡುವುದು ಮಾತುಗಳಲ್ಲ, ಬರೀ ಹೊಲಸು ಎಂಬುದು ಜನರಿಗೆ ಗೊತ್ತಾಾಗಲಿ. ನಾಲ್ಕು ಜನ್ಮಕ್ಕೆೆ ಸಾಕಾಗುವಷ್ಟು ಈ ಜನ್ಮದಲ್ಲೇ ಮಾತಾಡಿರುವ ಉಗ್ರಪ್ಪನವರಿಗೆ ಮೌನದ ಮಹತ್ವ ಅರಿವಾಗಲಿ. ಅವರ ಬಾಯಿ ಅಂದ್ರೆೆ ಪಾಲಿಕೆ ತೊಟ್ಟಿಿ ಎಂಬುದು ಗೊತ್ತಿಿದೆ. ಆದರೂ ಅದನ್ನು ಅವರೇ ಪ್ರೂೂವ್ ಮಾಡುವುದು ಬೇಡ.

ಅಷ್ಟಕ್ಕೂ ಉಗ್ರಪ್ಪನವರಿಗೆ ತಮ್ಮ ಪಕ್ಷದ ನಾಯಕರು ಎಂಥವರು ಎಂಬುದು ಗೊತ್ತಿಿಲ್ಲವಾ? ಅವರ ಗುಣಕಥನಗಳ ಬಗ್ಗೆೆ ಅರಿವಿಲ್ಲವಾ? ಕಾಂಗ್ರೆೆಸ್‌ನ ರಾಜ್ಯಸಭಾ ಸದಸ್ಯ ಅಭಿಷೇಕ ಮನು ಸಿ್ಂವ, ಸುರ್ಜೇವಾಲ ಅವರ ರಾಸಲೀಲೆಗಳು ಬ್ಲ್ಯೂಫಿಲಂಗಳನ್ನೂ ನಾಚಿಸುವಂತಿದ್ದವು. ಕಾಂಗ್ರೆೆಸ್ ಸರಕಾರದಲ್ಲಿ ಸಚಿವರಾಗಿದ್ದ ಎಚ್.ವೈ.ಮೇಟಿಯವರು ಯಾವ ಕಾರಣಕ್ಕೆೆ ರಾಜೀನಾಮೆ ನೀಡಿದರು ಎಂಬುದನ್ನು ಉಗ್ರಪ್ಪನವರು ಹೇಳಲಿ ನೋಡುವಾ. ಅಂಥ ಹಲ್ಕಟ್ ಕೆಲಸವನ್ನೇನನ್ನೂ ಸವದಿಯವರು ಮಾಡಲಿಲ್ಲ. ಅಂದು ಅವರ ಜಾಗದಲ್ಲಿ ಯಾರೇ ಇದ್ದಿದ್ದರೂ ಅದನ್ನು ನೋಡಿರುತ್ತಿಿದ್ದರು. ಅವರ ಕ್ರಿಿಯೆ ಅಷ್ಟೊೊಂದು ಆಕಸ್ಮಿಿಕವಾಗಿತ್ತು. ಅದರಲ್ಲಿ ಯಾವ ಅಶ್ಲೀಲತೆಯಾಗಲಿ, ಅಸಭ್ಯವರ್ತನೆಯಾಗಲಿ ಇರಲಿಲ್ಲ.

ಕಾಗೆ ಹಿಕ್ಕೆೆ ಹಾಕುವಾಗ ಅವರು ಕೆಳಗೆ ಬಂದರು. ಅವರ ಬದಲು ಬೇರೆಯವರು ಬಂದಿದ್ದರೂ ಅವರ ತಲೆ ಮೇಲೆ ಅದು ಬೀಳುತ್ತಿಿತ್ತು. ಅಷ್ಟೇ, ಅದಕ್ಕೂ ಅವರು ಶಿಕ್ಷೆೆ ಅನುಭವಿಸಿದ್ದಾಾರೆ. ಇದೇ ಅಪರಾಧ ಎನ್ನುವುದಾದರೆ, ಆ ಅಪರಾಧಕ್ಕೂ ಅವರು ಒಂದಕ್ಕಿಿಂತ ಹೆಚ್ಚು ಸಲ ಶಿಕ್ಷೆೆ ಅನುಭವಿಸಿದ್ದಾಾರೆ. ಈ ಯಾವ ಸಂಗತಿಗಳೂ ಉಗ್ರಪ್ಪನವರಿಗೆ ಗೊತ್ತಿಿಲ್ಲವೇ? ಗೊತ್ತಿಿದ್ದರೂ ಹೇಳುತ್ತಾಾರೆ ಅಂದ್ರೆೆ, ಅವರ ಮನಸ್ಸಿಿನಲ್ಲಿ ಬ್ಲ್ಯೂಫಿಲಂ ವಿಚಾರ ಎಷ್ಟರಮಟ್ಟಿಿಗೆ ಕಾಡುತ್ತಿಿರಬಹುದು? ಸುಖಾಸುಮ್ಮನೆ ಜನರ ಕಣ್ಣಲ್ಲಿ ಸಣ್ಣವರಾಗೋದು ಅಂದ್ರೆೆ ಇದು. ಈ ರೀತಿ ಉಗ್ರಪ್ಪ ಆಗಾಗ ಆಗುತ್ತಿಿರುವುದು ಇದೇ ಮೊದಲಲ್ಲ. ಸವದಿಯವರೇನಾದರೂ ಉಗ್ರಪ್ಪನವರಿಗೆ, ಸಿ್ಂವ, ಸುರ್ಜೇವಾಲ, ಮೇಟಿಯವರ ಪ್ರಕರಣಗಳ ಬಗ್ಗೆೆ ಪ್ರಶ್ನಿಿಸಿದರೆ, ಅವರ ಬಳಿ ಸಮರ್ಥಿಸಿಕೊಳ್ಳಲು ಯಾವ ಕಾರಣಗಳಿವೆ? ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಸ್ಕೋೋರ್ ಸಾಧಿಸುವುದರಿಂದ, ಮತಗಳು ಬರುವುದಿಲ್ಲ.

ಅದರಿಂದ ಅವರ ಪಕ್ಷಕ್ಕೆೆ ಲಾಭವೂ ಆಗುವುದಿಲ್ಲ. ಆದರೆ ಅಂಥ ಆರೋಪ ಮಾಡಿದವರು ಮಾತ್ರ ಸಣ್ಣವರಾಗುತ್ತಾಾರೆ. ಒಂದೂವರೆ ವರ್ಷಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸವದಿಯವರು ಪರಾಭವ ಹೊಂದಿರಬಹುದು, ಆದರೆ ಬ್ಲ್ಯೂಫಿಲಂ ಹಗರಣದ ನಂತರ, ನಡೆದ ವಿಧಾನಸಭಾ ಚುನಾವಣೆಯಲ್ಲಿ(2013) ಅವರನ್ನು ಅವರ ಕ್ಷೇತ್ರದ ಜನತೆ ಆರಿಸಿದ್ದರು. ಅಂದರೆ ಅವರ ಕ್ಷೇತ್ರದ ಜನತೆಗೆ ಈ ಹಗರಣ ಪ್ರಭಾವ ಬೀರಿರಲಿಲ್ಲ ಎಂದಂತಾಯಿತಲ್ಲವೇ?

ನಾನು ಉಗ್ರಪ್ಪನವರ ಬಗ್ಗೆೆ ಇಷ್ಟೊೊಂದು ವಿವರ ಏಕೆ ಹೇಳಿದೆ ಅಂದರೆ, ನಮ್ಮ ರಾಜಕಾರಣದಲ್ಲಿ ಉಗ್ರಪ್ಪನವರಂಥ ಬಾಯಿಹರುಕರು, ವಾಚಾಳಿಗಳು, ಬಹಳ ಮಂದಿಯಿದ್ದಾಾರೆ. ಅವರಿಗೆ ಸಾರ್ವಜನಿಕವಾಗಿ ಹಲುಬುವುದು, ವಿಷ ಕಾರುವುದು, ಬಾಯಿ ಚಪಲಕ್ಕಾಾಗಿ ಲಘುವಾಗಿ ಮಾತಾಡುವುದು, ಮಾನಸಿಕ ಕಾಯಿಲೆಯಾಗಿದೆ. ಇಲ್ಲಿ ಉಗ್ರಪ್ಪ ಒಂದು ಸಂಕೇತ, ಪ್ರತಿಮೆ. ಅವರಿಗೆ ಮಾಧ್ಯಮಗಳಲ್ಲಿ ತಮ್ಮ ಹೆಸರು ಬರಬೇಕು, ಚಾಲ್ತಿಿಯಲ್ಲಿರಬೇಕು ಎಂಬ ಹಂಬಲ ಅಷ್ಟೆೆ. ಆದರೆ ತಾವು ಆ ಮೂಲಕ ಅದೆಷ್ಟು ಕುಬ್ಜರಾಗುತ್ತಿಿದ್ದೇವೆ ಎಂಬುದು ಗೊತ್ತಿಿರುವುದಿಲ್ಲ. ಎಲ್ಲಾಾ ಪಕ್ಷಗಳಲ್ಲೂ ಉಗ್ರಪ್ಪನವರಂಥವರು ಇದ್ದಾಾರೆ. ‘ಉಗ್ರಪ್ಪ ಸಂತತಿ’ ಕೇವಲ ಕಾಂಗ್ರೆೆಸ್ಸಿಿಗಷ್ಟೇ ಸೀಮಿತವಲ್ಲ.

ಅದರಿಂದ ಯಾವ ಪ್ರಯೋಜನವೂ ಇಲ್ಲ. ಜನಸಾಮಾನ್ಯರಿಗಂತೂ ಅದರಿಂದ ಏನೂ ಲಾಭವಿಲ್ಲ. ಲಾಭವಿರಲಿ, ಅದರಿಂದ ನಷ್ಟವೇ ಹೆಚ್ಚು. ಇದರಿಂದ ಸಾರ್ವಜನಿಕ ಸ್ವಾಾಸ್ಥ್ಯ ಹಾಳಾಗುತ್ತದೆ. ಅನುತ್ಪಾಾದಕ ಚರ್ಚೆಗಳಿಂದ ನಮ್ಮ ಸಮಾಜ ಜೀವನಕ್ಕೆೆ ಯಾವ ಪ್ರಯೋಜನವೂ ಆಗಲಾರದು. ಟಿವಿ ಚಾನೆಲ್‌ಗಳ ವರದಿಗಾರರು ಮೈಕ್ ಹಿಡಿದರೆ ಸಾಕು, ಕೆಲವು ರಾಜಕಾರಣಿಗಳು ಲಂಗು-ಲಗಾಮಿಲ್ಲದೇ ಮಾತಾಡುತ್ತಲೇ ಹೋಗುತ್ತಾಾರೆ. ತಮ್ಮ ಮಾತುಗಳಿಂದ ಜನರ ಮೇಲೆ ಎಂಥ ಪರಿಣಾಮವಾಗಬಹುದು ಎಂಬ ಬಗ್ಗೆೆ ಅವರು ಯೋಚಿಸುವುದಿಲ್ಲ. ಮಾತಾಡಿದರೆ ವಿಷ ಕಕ್ಕಲಾರಂಭಿಸುತ್ತಾಾರೆ. ಅಂಥ ಪರಮ ದ್ವೇಷವಾದರೂ ಏಕೆ? ರಾಜಕೀಯವೆಂದರೆ ಇದೇನಾ?

ಮೊನ್ನೆೆ ಭಾನುವಾರ ಮುಖ್ಯಮಂತ್ರಿಿ ಯಡಿಯೂರಪ್ಪನವರು ಬೆಂಗಳೂರಿನಲ್ಲಿ ಪ್ರದಕ್ಷಿಿಣೆ ಮಾಡುವುದಾಗಿ ಹೇಳಿದರು. ಅವರು ಮುಖ್ಯಮಂತ್ರಿಿಯಾದಂದಿನಿಂದ ನೆರೆಪೀಡಿತ ಪ್ರದೇಶಗಳಲ್ಲಿ ಮಾತ್ರ ಪ್ರವಾಸ ಮಾಡಿದ್ದರು. ಬೆಂಗಳೂರಿನ ಕಡೆ ಗಮನ ಹರಿಸಿರಲಿಲ್ಲ. ಮಳೆಯಿಂದಾಗಿ ಬೆಂಗಳೂರು ನಗರವೂ ಅಧ್ವಾಾನವಾಗಿದ್ದರಿಂದ, ಮುಖ್ಯಮಂತ್ರಿಿಯವರ ನಗರ ಪ್ರದಕ್ಷಿಿಣೆಗೆ ಸಹಜವಾಗಿ ಪ್ರಾಾಮುಖ್ಯ ಬಂದಿತ್ತು.

ಇಂಥ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಿ ಕುಮಾರಸ್ವಾಾಮಿ ಒಂದು ಕೀಟಲೆ ಮಾಡಿದರು. ‘ಮುಖ್ಯಮಂತ್ರಿಿ ಬಿಎಸ್‌ವೈ ಹಾಗೂ ಅವರ ಮಂತ್ರಿಿಗಳು ನೆರೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ, ಬೀದಿಗೆ ಬಿದ್ದಿರುವ ಬಡ ಕುಟುಂಬಗಳೊಂದಿಗೆ ಕುಳಿತು ಪರಿಹಾರ ಕಾರ್ಯಗಳ ಪರಿಶೀಲನೆಗೆ ಮಾಡಬೇಕಾದ ಈ ಸಂದರ್ಭದಲ್ಲಿ ‘ಬೆಂಗಳೂರು ನಗರದ ಪರಿವೀಕ್ಷಣೆ’ ಎಂಬ ನಾಟಕವಾಡುತ್ತಿಿದ್ದಾಾರೆ’ ಎಂದು ಟ್ವೀಟ್ ಮಾಡಿದ್ದರು. ಇಲ್ಲಿ ಇಂಥ ಕ್ಷುಲ್ಲಕ, ಚಿಲ್ಲರೆ ರಾಜಕಾರಣ ಮಾಡಬೇಕಾದ ಅಗತ್ಯವಿತ್ತಾಾ? ನೆರೆಪೀಡಿತ ಪ್ರದೇಶಗಳಿಗೆ ಮಾತ್ರ ಭೇಟಿ ಕೊಟ್ಟರೆ, ‘ಬೆಂಗಳೂರಿನಲ್ಲಿ ಸಹ ಮಳೆಯಿಂದ ಹಾನಿಯಾಗಿದೆ. ಮುಖ್ಯಮಂತ್ರಿಿಯವರು ಬೇರೆ ಕಡೆ ಗಮನಹರಿಸುತ್ತಾಾರೆ’ ಎಂದು ಟೀಕಿಸುತ್ತಾಾರೆ.

ಒಂದು ದಿನ ಬೆಂಗಳೂರು ಪ್ರದಕ್ಷಿಿಣೆ ಕಾರ್ಯಕ್ರಮ ಹಾಕಿಕೊಂಡರೆ, ಹೀಗೆ ಹೇಳುತ್ತಾಾರೆ. ಮುಖ್ಯಮಂತ್ರಿಿಯವರು ಬೆಂಗಳೂರು ಪರಿವೀಕ್ಷಣೆ ಮಾಡಿದರೆ ಅದರಲ್ಲಿ ನಾಟಕವೇನು ಬಂತು? ಸಿಎಂ ಅವರು ಬೆಂಗಳೂರು ನಗರದಲ್ಲಿ ಒಂದು ರೌಂಡ್ ಹಾಕಲೇಬೇಕಿತ್ತು. ಈ ಸಲದ ನೆರೆ ಸಂದರ್ಭದಲ್ಲಿ ಯಡಿಯೂರಪ್ಪನವರನ್ನು ಯಾರೂ ಟೀಕಿಸುವಂತಿಲ್ಲ. ಬೇರೆ ಬೇರೆ ಕಾರಣಗಳಿಂದ ಇಡೀ ಸರಕಾರದಲ್ಲಿ ತಾವೊಬ್ಬರೇ ಇದ್ದರೂ, ಒಂದು ದಿನವೂ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಕಾಲಿಗೆ ಚಕ್ರ ಕಟ್ಟಿಿಕೊಂಡವರಂತೆ ತಿರುಗಿದರು. ಜಿಲ್ಲಾಾಡಳಿತದ ಜತೆ ಮಾತುಕತೆಗೆ ಕುಳಿತರು. ಇಡೀ ಸರಕಾರಿ ಆಡಳಿತಯಂತ್ರವನ್ನು ಏಕಾಂಗಿಯಾಗಿ ಚುರುಕುಗೊಳಿಸಿದರು. ಆ ಇಳಿವಯಸ್ಸಿಿನಲ್ಲೂ ದಣಿವನ್ನು ಲೆಕ್ಕಿಿಸದೇ, ಪ್ರತಿದಿನ ನೆರೆಪೀಡಿತ ಗ್ರಾಾಮಗಳನ್ನು ಖುದ್ದಾಾಗಿ ವೀಕ್ಷಿಿಸಿದರು. ಆದರೂ ಕುಮಾರಸ್ವಾಾಮಿ ಅವರಿಂದ ಕೊಂಕು ಮಾತು!

‘ಚಂದ್ರಯಾನ-2’ ವೀಕ್ಷಿಿಸಲು ಬೆಂಗಳೂರಿಗೆ ಬಂದ ಪ್ರಧಾನಿ ಮೋದಿ ಬಗ್ಗೆೆಯೂ ಕುಮಾರಸ್ವಾಾಮಿ ಕೊಂಕು. ‘ನೆರೆಯಿಂದ ತತ್ತರಿಸುವ ಕುಟುಂಬಗಳನ್ನು ನೋಡದೇ, ಕೇಂದ್ರದಿಂದ ಪರಿಹಾರವನ್ನೂ ಘೋಷಿಸದೇ ಹಾಗೇ ತೆರಳಿದ್ದು ನೋವಿನ ವಿಚಾರ. ಕೇಂದ್ರದಿಂದ ನೆರೆ ಪರಿಹಾರ ಕೊಡಿಸಲು ಸಾಧ್ಯವಾಗದ ದುರ್ಬಲ ಮುಖ್ಯಮಂತ್ರಿಿ’ ಎಂಬ ಚುಚ್ಚುಮಾತು ಬೇರೆ. ಇವೆಲ್ಲ ಕುಮಾರಸ್ವಾಾಮಿಯವರಿಗೆ ಶೋಭಿಸುವ ಮಾತುಗಳಾ? ‘ಕುಮಾರಸ್ವಾಾಮಿಯವರು ಎರಡು-ಮೂರು ದಿನ ನೆರೆಪೀಡಿತ ಪ್ರದೇಶಗಳಿಗೆ ಕಾಟಾಚಾರಕ್ಕೆೆ ಹೋಗಿ ಬಂದರು. ಅವರಿಗೆ ಈಗ ಬೆಂಗಳೂರಿನಲ್ಲಿ ಏನು ಕೆಲಸ? ನೆರೆಪೀಡಿತ ಪ್ರದೇಶಗಳಲ್ಲಿಯೇ ಸಂತ್ರಸ್ತರ ಜತೆ ಉಳಿಯಬಹುದಲ್ಲ?’ ಎಂದು ಕೇಳಿದರೆ, ಅದು ಎಷ್ಟು ಕ್ಷುಲ್ಲಕವೋ, ಕುಮಾರಸ್ವಾಾಮಿಯವರ ಮಾತುಗಳೂ.

ನಾಯಕರಾದವರು ತಮ್ಮ ಮಾತಿಗೆ ಒಂದು ಶಿಸ್ತು, ಸಂಯಮ ತಂದುಕೊಳ್ಳದಿದ್ದರೆ ಅವರ ಬಗ್ಗೆೆಯೇ ಅಸಹ್ಯ ಮೂಡುತ್ತದೆ. ಉಗ್ರಪ್ಪನವರು ಒಳ್ಳೆೆಯ ಸಂಗತಿಗಳನ್ನು ಹೇಳಿದರೂ, ಅವರ ಮಾತುಗಳನ್ನು ಯಾರೂ ಪ್ರಶಂಸಿಸುವುದಿಲ್ಲ. ‘ಹರಕುಬಾಯಿ ಉಗ್ರಪ್ಪ’ ಎಂದು ಅವರ ಪಕ್ಷದವರೇ ಲೇವಡಿ ಮಾಡುತ್ತಾಾರೆ. ನಾಯಕರ ಮಾತಿನಷ್ಟೇ ಅವರ ಮೌನಕ್ಕೂ ಬೆಲೆಯಿದೆ. ಆದರೆ ಅದು ಅವರಿಗೆ ಅರ್ಥವಾಗಬೇಕು. ಮಾತಾಡಿ ಮಾನಗೇಡಿಗಳಾದರು ಎಂದು ಹೇಳಿಸಿಕೊಳ್ಳುವುದಕ್ಕೆೆ ಹೆಚ್ಚು ಶ್ರಮಪಡಬೇಕಿಲ್ಲ. ಈ ಅಂಶವನ್ನು ರಾಜಕಾರಣಿಗಳು ಅರ್ಥಮಾಡಿಕೊಳ್ಳಲಿ. ಕಪ್ಪೆೆಗಳು ವಟಗುಟ್ಟುತ್ತವೆ.
ಟ ್ಚ್ಟಛಿ?

Leave a Reply

Your email address will not be published. Required fields are marked *