Thursday, 23rd March 2023

ನಾಳೆ ಕಾಂತಾರ ಸಿನಿಮಾ ಪ್ರದರ್ಶನಕ್ಕೆ ವಿಶ್ವಸಂಸ್ಥೆ ಸಿದ್ಧತೆ

ವಿಶ್ವಸಂಸ್ಥೆ: ನಾಳೆ ಕಾಂತಾರ ಸಿನಿಮಾದ ಪ್ರದರ್ಶನಕ್ಕೆ ವಿಶ್ವಸಂಸ್ಥೆ ಸಿದ್ಧತೆ ಮಾಡಿಕೊಂಡಿದೆ. ವಿಶ್ವಸಂಸ್ಥೆಯ ಮಾನವ ಮಾನವ ಹಕ್ಕುಗಳ ಮಂಡಳಿ ವಾರ್ಷಿಕ ಸಭೆಯಲ್ಲಿ ಮಾತನಾಡಲು ಈಗಾಗಲೇ ಸ್ವಿಜರ್ಲ್ಯಾಂಡ್‌ನ ಜಿನಿವಾಗೆ ತೆರಳಿರುವ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ ಆಗಲೇ ಕನ್ನಡದಲ್ಲಿ ಮಾತುಗಳನ್ನೂ ಆಡಿದ್ದಾರೆ. ಇದೀಗ

ಮಾ.17 ರಂದು ಹಾಲ್ ಸಂಖ್ಯೆ 13ರ ಪಾಥೆ ಬಾಲೆಕ್ಸರ್ಟ್ ನಲ್ಲಿ ಸಿನಿಮಾ ಪ್ರದರ್ಶನಗೊಳ್ಳು ತ್ತಿರುವುದಾಗಿ ಸಿಜಿಎಪಿಪಿ ನಿರ್ದೇಶಕಿ ಅನಿಂಧ್ಯಾ ಸೇನ್ ಗುಪ್ತ ತಿಳಿಸಿದ್ದಾರೆ.

ರಿಷಬ್ ಪರಿಸರ, ಹವಾಮಾನ ಮತ್ತು ಸಂರಕ್ಷಣೆಯ ಕುರಿತು ಹಾಗೂ ಕಾಂತಾರ ಸಿನಿಮಾದ ಬಗ್ಗೆಯೂ ಮಾತನಾಡಲಿದ್ದಾರೆ ಎಂದು ನಿರ್ದೇಶಕಿ ಅನಿಂಧ್ಯಾ ಮಾಹಿತಿ ನೀಡಿದ್ದಾರೆ. ಈಗಾಗಲೇ ಮಾತನಾಡುವ ವಿಷಯದ ಮೌಖಿಕ ಸಲ್ಲಿಕೆಯನ್ನು ರಿಷಬ್ ಪೂರ್ಣಗೊಳಿಸಿದ್ದಾರೆ.

ಕನ್ನಡದಲ್ಲೇ ರಿಷಬ್ ಭಾಷಣ ಮಾಡಲಿದ್ದು, ನಾಳೆ ಸ್ವಿಝರ್ ಲ್ಯಾಂಡ್ ಕಾಲಮಾನದ ಪ್ರಕಾರ ಸಂಜೆ 6.30ಕ್ಕೆ ಕಾಂತಾರ ಸಿನಿಮಾದ ಪ್ರದರ್ಶನ ದಲ್ಲೂ ಭಾಗಿಯಾಗಲಿದ್ದಾರೆ.

error: Content is protected !!