Friday, 15th November 2019

ಉಪಸಮರ: ವರಿಷ್ಠರ ಭೇಟಿಗೆ ಸಿದ್ದು

ಉಪಚುನಾವಣಾ ಚರ್ಚೆ, ಪದಾಧಿಕಾರಿಗಳ ನೇಮಕದ ಬಗ್ಗೆ ಸಮಾಲೋಚನೆ
 ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿರುವ ಸಿದ್ದರಾಮಯ್ಯ
 ವೇಣು ನೇತೃತ್ವದಲ್ಲಿ ಕೆಪಿಸಿಸಿಯಲ್ಲಿ ನಡೆದ ಸಭೆ

ಭಾರಿ ಕುತೂಹಲ ಮೂಡಿಸಿರುವ ಉಪಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿ ಆಯ್ಕೆೆ ಹಾಗೂ ಕೆಪಿಸಿಸಿ ಪದಾಧಿಕಾರಿಗಳ ನೇಮಕಕ್ಕೆೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದೆಹಲಿಗೆ ಪ್ರಯಾಣಿಸಲಿದ್ದಾರೆ.

ಜೆಡಿಎಸ್-ಕಾಂಗ್ರೆೆಸ್‌ನ 17 ಶಾಸಕ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಡಿ.5ರಂದು ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಿದ್ಧತೆ ನಡೆಸಿಕೊಂಡಿದೆ. ಆದ್ದರಿಂದ ಕಾಂಗ್ರೆೆಸ್ ಅಭ್ಯರ್ಥಿ ಪಟ್ಟಿ ಅಂತಿಮಗೊಳಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾಾರೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನಲ್ಲಿ ಕೆ.ವಿ ವೇಣುಗೋಪಾಲ್ ನೇತೃತ್ವದಲ್ಲಿ ಮಂಗಳವಾರ ನಡೆದ ಸಭೆಯ ಅಭಿಪ್ರಾಾಯ, ಪಕ್ಷದ ಆಂತರಿಕ ವರದಿ ಹಾಗೂ ಹಿರಿಯ ನಾಯಕರ ಅಭಿಪ್ರಾಯ ಸಂಗ್ರಹದ ಬಳಿಕ, ಸಿದ್ದರಾಮಯ್ಯ ಅವರು ಪ್ರತಿಕ್ಷೇತ್ರಕ್ಕೆ 2-3 ಹೆಸರನ್ನು ಅಂತಿಮಗೊಳಿಸಿದ್ದಾಾರೆ. ದೆಹಲಿಯಲ್ಲಿ ಕಾಂಗ್ರೆೆಸ್ ವರಿಷ್ಠೆೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿರುವ ಸಿದ್ದರಾಮಯ್ಯ ಅವರು ಈ ಆಕಾಂಕ್ಷಿಿಗಳ ಪಟ್ಟಿ ನೀಡಿ, ಅಂತಿಮ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾಾರೆ ಎಂದು ತಿಳಿದುಬಂದಿದೆ.

ಇದರೊಂದಿಗೆ ಪ್ರತಿಪಕ್ಷದ ನಾಯಕರಾಗಿ ಆಯ್ಕೆೆಯಾದ ಬಳಿಕ ಮೊದಲ ಬಾರಿಗೆ ಸೋನಿಯಾ ಗಾಂಧಿ ಅವರನ್ನು ಬುಧವಾರ ಬೆಳಗ್ಗೆೆ ಭೇಟಿಯಾಗಲಿದ್ದಾರೆ. ಭೇಟಿ ವೇಳೆ ಪಕ್ಷದ ಪದಾಧಿಕಾರಿಗಳ ನೇಮಕ ಹಾಗೂ ಸ್ವಪಕ್ಷೀಯರ ಮೇಲೆ ನಡೆಯುತ್ತಿರುವ ಐಟಿ ದಾಳಿ ಕುರಿತು ಪಕ್ಷದ ಮುಂದಿನ ನಡೆ ಬಗ್ಗೆೆ ಚರ್ಚಿಸಿದ್ದಾಾರೆ ಎಂದು ಮೂಲಗಳು ತಿಳಿಸಿವೆ.

ಒಗ್ಗಟ್ಟಿನ ಮಂತ್ರ ಜಪಿಸಿದ ವೇಣು
ಇನ್ನು ಸೋನಿಯಾ ಗಾಂಧಿ ಅವರಿಗೆ ಉಪಚುನಾವಣಾ ಅಭ್ಯರ್ಥಿಗಳ ಪಟ್ಟಿ ಸಲ್ಲಿಸುವ ಮೊದಲು, ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್, ಸಿದ್ದರಾಮಯ್ಯ ಸೇರಿದಂತೆ ಸ್ಥಳೀಯ ನಾಯಕರ ಪ್ರತ್ಯೇಕ ಸಭೆಯನ್ನು ಕರೆಯಲಾಗಿತ್ತು. ಈ ವೇಳೆ ಕೆ.ಸಿ ವೇಣುಗೋಪಾಲ್ ಅವರು ಯಾವುದೇ ಕಾರಣಕ್ಕೂ ಉಪಚುನಾವಣಾ ಸಮಯದಲ್ಲಿ ಭಿನ್ನಮತ, ಬಂಡಾಯಕ್ಕೆ ಆಸ್ಪದ ನೀಡಬಾರದು ಎಂದು ಮನವಿ ಮಾಡಿದ್ದಾಾರೆ ಎಂದು ತಿಳಿದುಬಂದಿದೆ.

15 ಕ್ಷೇತ್ರದ ಪೈಕಿ ಐದು ಕ್ಷೇತ್ರ ಬೆಂಗಳೂರಿಗೆ ಸೇರಿರುವುದರಿಂದ, ಈ ಐದು ಕ್ಷೇತ್ರದ ಮೇಲೆ ಕಣ್ಣಿಡಲು ಸ್ಥಳೀಯ ನಾಯಕರಿಗೆ ಸೂಚನೆ ನೀಡಿದ್ದು, ಉಪಚುನಾವಣೆ ನಡೆಯುತ್ತದೆಯೋ ಅಥವಾ ಮುಂದೂಡಿಕೆಯಾಗುತ್ತದೆಯೋ ಎನ್ನುವ ಅನುಮಾನವನ್ನು ಬದಿಗೊತ್ತಿಿ, ಚುನಾವಣಾ ತಯಾರಿಯನ್ನು ಆರಂಭಿಸುವಂತೆ ಸೂಚನೆ ನೀಡಿದ್ದಾಾರೆ ಎಂದು ಹೇಳಲಾಗಿದೆ.

ಸಭೆಯಲ್ಲಿ ಕೆಲ ನಾಯಕರು ರಾಜ್ಯ ನಾಯಕತ್ವದ ಬಗ್ಗೆೆ ಅಕ್ಷೇಪ ಎತ್ತಿದ್ದರೂ, ಉಪಚುನಾವಣೆಯಲ್ಲಿ ಮೊದಲು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಬೇಕಿದೆ. ಆದ್ದರಿಂದ ಆಂತರಿಕ ಭಿನ್ನಮತವನ್ನು ಬದಿಗೊತ್ತಿ, ಪಕ್ಷದ ಅಭ್ಯರ್ಥಿ ಪರ ಕಾರ್ಯನಿರ್ವಹಿಸಬೇಕು. ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಬಗ್ಗೆೆ ಮಾಹಿತಿ ಸಿಕ್ಕರೆ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದ್ದಾಾರೆ ಎಂದು ತಿಳಿದುಬಂದಿದೆ.

ಬಿಜೆಪಿ ವಿರುದ್ಧ ಉಪಸಮರದಲ್ಲಿ ಬಳಸಲಿರುವ ಅಸ್ತ್ರ
* ಆಪರೇಷನ್ ಕಮಲದಿಂದ ಸರಕಾರ ಪತನಗೊಳಿಸಿದ್ದು.
* ನೆರೆಯನ್ನು ಬಳಸಿಕೊಳ್ಳುವಲ್ಲಿ ಸರಕಾರ ವಿಫಲವಾಗಿರುವ ಬಗ್ಗೆೆ
* ರಾಜೀನಾಮೆ ನೀಡಿ ಸರಕಾರ ಬೀಳಿಸಿದ ಶಾಸಕರ ವಿರುದ್ಧ ಜನಾಭಿಪ್ರಾಾಯ ಮೂಡಿಸುವುದು
* ಕೇಂದ್ರ ಸರಕಾರ ರಾಜ್ಯಕ್ಕೆೆ ಯಾವುದೇ ನೆರವು ನೀಡದಿರುವ ಬಗ್ಗೆೆ
* ಬೆಂಗಳೂರು ಭಾಗದ ಪ್ರಚಾರಕ್ಕೆೆ, ಆರ್ಥಿಕ ಕುಸಿತಕ್ಕೆೆ ಕೇಂದ್ರದ ವೈಫಲ್ಯವನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

Leave a Reply

Your email address will not be published. Required fields are marked *