Friday, 27th May 2022

ಉತ್ತರ ಕನ್ನಡ ಜಿಲ್ಲಾ ಅಖಾಡ: ಇಂದು ನಾಮಪತ್ರ ಸಲ್ಲಿಕೆ

ಶಿರಸಿ: ವಿಧಾನಪರಿಷತ್ ಚುನಾವಣೆಗೆ ಸಿದ್ಧವಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಲಿದ್ದು, ಈಗಾಗಲೇ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್‌ ನಾಮಪತ್ರ ಸಲ್ಲಿಸಿದರು.

ಶಾಸಕರಾದ ರೂಪಾಲಿ ನಾಯ್ಕ್, ದಿನಕರ ಶೆಟ್ಟಿ ಸೇರಿದಂತೆ ಪಕ್ಷದ ಮುಖಂಡರು ಉಳ್ವೇಕರ್ ಅವರಿಗೆ ಬೆಂಬಲವಾಗಿದ್ದರು.

ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಭ್ಯರ್ಥಿ ಬಳಿಕ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕರಿಂದಲೂ ಇಂದು ನಾಮಪತ್ರ ಸಲ್ಲಿಕೆಯಾಗ ಲಿದ್ದು, ನಾಯ್ಕ್‌ಗೆ ಶಾಸಕ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಮಾಜಿ ಶಾಸಕ ಸತೀಶ್ ಸೈಲ್ ಸಾಥ್ ನೀಡಲಿದ್ದಾರೆ.