Monday, 9th December 2019

ವೈಮಾನಿಕ ಸಮೀಕ್ಷೆಗಳಿಂದ ಲಾಭವೇನು?

ರಾಜ್ಯದಲ್ಲಿ ನೆರೆಯಿಂದ ಲಕ್ಷಾಾಂತರ ಜನರು ಮನೆ ಮಠ ಕಳೆದುಕೊಂಡಿದ್ದಾಾರೆ. ನೂರಾರು ನೀರಿನಲ್ಲಿ ಕೊಚ್ಚಿಿಹೋಗಿದ್ದು, ಅವರನ್ನು ಎನ್‌ಡಿಆರ್‌ಎಫ್ ಮತ್ತು ಸೇನಾ ಸಿಬ್ಬಂದಿ ರಕ್ಷಣೆ ಮಾಡುತ್ತಿಿದ್ದಾಾರೆ. ಈ ನಡುವೆಯೂ ಅಲ್ಲಲ್ಲಿ ಸಾವು ಸಂಭವಿಸುತ್ತಿಿರುವ ಬಗ್ಗೆೆ ವರದಿಯಾಗಿದೆ. ಉತ್ತರ ಕರ್ನಾಟಕದಲ್ಲಿ ಸಾವಿನ ಸಂಖ್ಯೆೆ ಅಷ್ಟೊೊಂದು ಪ್ರಮಾಣದಲ್ಲಿ ಹೆಚ್ಚಾಾಗದಿದ್ದರೂ ಆಗಿರುವ ಹಾನಿ ಮಾತ್ರ ಅಪಾರ ಪ್ರಮಾಣದ್ದು. ಆದರೆ, ಕೊಡಗು ಸೇರಿದಂತೆ ಮಲೆನಾಡು ಪ್ರದೇಶದಲ್ಲಿ ಗುಡ್ಡ ಕುಸಿತದಂತಹ ಪ್ರಕರಣಗಳಲ್ಲಿ ಸಾವಿನ ಸಂಖ್ಯೆೆ ಹೆಚ್ಚುತ್ತದೆ.

ಇಷ್ಟೆೆಲ್ಲ ಅವಾಂತರಗಳಾಗಿರುವ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಅವರು ಮೂರ್ನಾಾಲ್ಕು ಬಾರಿ ವೈಮಾನಿಕ ಸಮೀಕ್ಷೆೆ ನಡೆಸಿದ್ದಾಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನೆರೆ ಹಾವಳಿಯ ಕುರಿತು ವೈಮಾನಿಕ ಸಮೀಕ್ಷೆೆ ನಡೆಸುವ ಮೂಲಕ ಹಾನಿ ಅಂದಾಜು ಲೆಕ್ಕಾಾಚಾರ ಮಾಡಿಕೊಂಡಿದ್ದಾಾರೆ. ಈ ನಡುವೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ವೈಮಾನಿಕ ಸಮೀಕ್ಷೆೆ ನಡೆಸಿದ್ದಾಾರೆ. ಅವರಿಗೆ ಆಗಿರುವ ಹಾನಿಯ ಪ್ರಮಾಣದ ಕುರಿತು ಬಿಎಸ್‌ವೈ ಮನವರಿಕೆ ಮಾಡಿಕೊಟ್ಟಿಿದ್ದಾಾರೆ.

ವೈಮಾನಿಕ ಸಮೀಕ್ಷೆೆ ಆಡಳಿತ ಪಕ್ಷಕ್ಕೆೆ ಮಾತ್ರ ಸೀಮಿತವಾಗಿಲ್ಲ. ವಿಪಕ್ಷಗಳು ಕೂಡ ವೈಮಾನಿಕ ಸಮೀಕ್ಷೆೆಯ ಮೂಲಕ ಹಾನಿಯ ನಷ್ಟವನ್ನು ಅರಿಯುವ ಪ್ರಯತ್ನ ನಡೆಸಿವೆ. ರಾಹುಲ್ ಗಾಂಧಿ ರಾಜ್ಯದ ಬೆಳಗಾವಿ ಜಿಲ್ಲೆೆ ಮತ್ತು ಉತ್ತರ ಕರ್ನಾಟಕ ಪ್ರದೇಶದ ಹಾನಿಯ ಬಗ್ಗೆೆ ವೈಮಾನಿಕ ಸಮೀಕ್ಷೆೆ ನಡೆಸಲು ಆಗಮಿಸಲಿದ್ದಾಾರೆ ಎಂಬ ಮಾಹಿತಿಯಿದೆ. ಇಷ್ಟೆೆಲ್ಲ ವೈಮಾನಿಕ ಸಮೀಕ್ಷೆೆಗಳು ನಡೆದರೂ ರಾಜ್ಯಕ್ಕೆೆ ಮತ್ತು ನೆರೆ ಹಾವಳಿಗೆ ತುತ್ತಾಾದ ಜನರಿಗೆ ಆದ ಲಾಭವೇನು ಎಂಬುದು ಯಕ್ಷಪ್ರಶ್ನೆೆಯಾಗಿದೆ.
ಸಿಎಂ ಯಡಿಯೂರಪ್ಪ ಪ್ರವಾಹದ ತೀವ್ರತೆ ಅರಿಯುವ ದೃಷ್ಟಿಿಯಿಂದ ವೈಮಾನಿಕ ಸಮೀಕ್ಷೆೆ ನಡೆಸಿದ್ದು ಸರಿ. ಆದರೆ, ನಿರ್ಮಲಾ ಸೀತಾರಾಮನ್ ಮತ್ತು ಗೃಹ ಸಚಿವರು ಸಮೀಕ್ಷೆೆ ನಡೆಸಿದರೂ ಕೇಂದ್ರದಿಂದ ರಾಜ್ಯಕ್ಕೆೆ ಯಾವುದೇ ಪರಿಹಾರ ಘೋಷಣೆ ಈವರೆಗೆ ಆಗಿಲ್ಲ. 6 ಸಾವಿರ ಕೋಟಿ ನಷ್ಟವಾಗಿರುವ ಬಗ್ಗೆೆ ಸಿಎಂ ಅಧಿಕೃತವಾಗಿ ತಿಳಿಸಿದ್ದು, ಈವರೆಗೆ ಕೇಂದ್ರದಿಂದ ಯಾವುದೇ ಪರಿಹಾರದ ಅನುದಾನ ಬಂದ ಬಗ್ಗೆೆ ಮಾಹಿತಿಯಿಲ್ಲ.

ನೆರೆ ಸಮೀಕ್ಷೆೆಯಲ್ಲಿಯೇ ಕಾಲ ಕಳೆಯುವ ಬದಲು ಕೇಂದ್ರ ಸರಕಾರದ ರಾಜ್ಯದ ಸ್ಥಿಿತಿಗತಿಯ ಬಗ್ಗೆೆ ಅರಿತು ಪರಿಹಾರ ಘೋಷಣೆ ಮಾಡಬೇಕು. ರಾಜ್ಯದಲ್ಲಿ ಆಡಳಿತದಲ್ಲಿರುವವರು ಮತ್ತು ಅಧಿಕಾರಿಗಳು ಅನುದಾನ ಬಳಕೆ ಮಾಡಿಕೊಂಡು ಚುರುಕಾಗಿ ಪರಿಕಾರ್ಯಗಳನ್ನು ನಡೆಸಲು ಮುಂದಾಗಬೇಕು. ವಿಪಕ್ಷದ ನಾಯಕರು ಪರಿಹಾರ ಕಾರ್ಯಗಳಿಗೆ ಕೈಜೋಡಿಸಬೇಕು. ಅದೆಲ್ಲವನ್ನೂ ಬಿಟ್ಟು ಎಲ್ಲಾಾ ನಾಯಕರು ವೈಮಾನಿಕ ಸಮೀಕ್ಷೆೆ ನಡೆಸುತ್ತಲೇ ಕಾಲ ಕಳೆದರೆ ಪ್ರವಾಹದಲ್ಲಿ ನೊಂದವರಿಗೆ ಏನು ಪ್ರಯೋಜನವಾಗುವುದಿಲ್ಲ.

ಪ್ರವಾಹ ಸ್ಥಿಿತಿಗತಿಯ ಬಗ್ಗೆೆ ಅಧಿಕಾರಿಗಳು ಮತ್ತು ಕಾರ್ಯಚರಣೆ ನಿರತ ರಕ್ಷಣಾ ಪಡೆಗಳಿಂದ ಮಾಹಿತಿ ಪಡೆದು ಪರಿಹಾರ ನೀಡಲು ಸಾಧ್ಯವಿಲ್ಲವೇಕೆ? ಈ ಬಗ್ಗೆೆ ಮುಂದಾದರೂ ಯೋಚಿಸಲಿ…

Leave a Reply

Your email address will not be published. Required fields are marked *