Tuesday, 7th July 2020

ಸಮಯ ಪಾಲನೆಯಲ್ಲಿ ಮೊದಲ ಸ್ಥಾನ ಕಾಪಾಡಿಕೊಂಡ ವಂದೇ ಭಾರತ್‌ ಎಕ್ಸ್‌ಪ್ರೆಸ್‌; ರಾಜಧಾನಿ, ಶತಾಬ್ದಿ ಎಕ್ಸ್‌ಪ್ರೆಸ್‌ಗಳು ರೇಸ್‌ನಲ್ಲಿ ಹಿಂದೆ

ಭಾರತೀಯ ರೈಲ್ವೇಗೆ ಹೊಸ ’ವೇಗ’ ನೀಡಿರುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌, ಸಮಯಪಾಲನೆಯನ್ನು ತನ್ನ ಬದ್ಧತೆ ಮುಂದುವರೆಸಿದ್ದು ದೇಶದ ಮತ್ತೆರಡು ಪ್ರತಿಷ್ಠಿತ ರೈಲುಗಳಾದ ರಾಜಧಾನಿ ಹಾಗೂ ಶತಾಬ್ಧಿ ಎಕ್ಸ್‌ಪ್ರೆಸ್‌ಗಳನ್ನೂ ಹಿಮ್ಮೆಟ್ಟಿದೆ.

ದೆಹಲಿ-ವಾರಾಣಸಿ ನಡುವೆ ಸಂಚರಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌, ಫೆಬ್ರವರಿ 15ರಂದು ತನ್ನ ಪ್ರಾರಂಭಿಕ ಸಂಚಾರದಿಂದ ಇಲ್ಲಿಯವರೆಗೂ, ದೆಹಲಿ-ಕಾನ್ಪುರ ನಡುವಿನ ಪ್ರಯಾಣದ ಘಟ್ಟದಲ್ಲಿ ಸಮಯಪಾಲನೆಯಲ್ಲಿ 94% ಬದ್ಧತೆ ತೋರಿದೆ. ಇದೇ ದೆಹಲಿ-ಕಾನ್ಪುರ ಮಾರ್ಗದಲ್ಲಿ 91.18% ಬದ್ಧತೆ ಕಾಪಾಡಿಕೊಂಡಿರುವ ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್‌ ಎರಡನೇ ಸ್ಥಾನದಲ್ಲಿದೆ.

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ತನ್ನ ಸಂಚಾರದಲ್ಲಿ 100% ಸಮಯ ಪಾಲನಾ ಬದ್ಧತೆ ಕಾಪಾಡಿಕೊಂಡಿದ್ದ ಕುರಿತ ವರದಿಗಳು ಏಪ್ರಿಲ್‌ನಲ್ಲಿ ಬಂದಿದ್ದವು. ತನ್ನ ಪ್ರಯಾಣದ 80%ಗಿಂತ ಹೆಚ್ಚಿನ ದಿನಗಳಲ್ಲಿ, ದೆಹಲಿ-ಪ್ರಯಾಗ್‌ರಾಜ್‌ ನಡುವಿನ ಮಾರ್ಗದಲ್ಲಿ ಇದೇ ರೈಲು ನಿಗದಿತ ಸಮಯಕ್ಕಿಂತ ಕೊಂಚ ಮುನ್ನವೇ ಸಾಗಿದ ದಾಖಲೆ ಇದೆ.

ಇದೇ ಮಾರ್ಗದಲ್ಲಿ 84.62 % ಬದ್ಧತೆ ಇರುವ ರಾಂಚಿ ರಾಜಧಾನಿ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿದೆ.

Leave a Reply

Your email address will not be published. Required fields are marked *