Monday, 13th July 2020

ವರುಣನ ಬಿಡುವು; ತಗ್ಗಿದ ನೆರೆ ; ನಿಲ್ಲದ ಆತಂಕ

– ರಾಜ್ಯದ ಹಲವು ಭಾಗದಲ್ಲಿ ತಗ್ಗಿದ ನೀರಿನ ಮಟ್ಟ
– ಕಾವೇರಿ, ತುಂಗಾಭದ್ರಾ ನದಿಪಾತ್ರದಲ್ಲಿ ಮುಂದುವರಿದ ಜಲಪ್ರವಾಹ
– ಪ್ರಾಥಮಿಕ ವರದಿಯಲ್ಲಿ 10 ಸಾವಿರ ಕೋಟಿ ಹಾನಿ. ತುರ್ತು ಮೂರು ಸಾವಿರ ಕೋಟಿ ಅಗತ್ಯ

ಕಳೆದೊಂದು ವಾರದಿಂದ ಭಾರಿ ಮಳೆ ಹಾಗೂ ಪ್ರವಾಹದಿಂದ ತತ್ತರಿಸಿದ್ದ ಕರ್ನಾಟಕಕ್ಕೆೆ ಭಾನುವಾರ ಕೊಂಚ ನಿರಾಳವಾಗಿದ್ದು, ರಾಜ್ಯದ ಬಹುತೇಕ ಭಾಗದಲ್ಲಿ ನೆರೆ ಪ್ರಮಾಣ ತಗ್ಗಿಿದೆ.
ರಾಜ್ಯದ ಭಾಗದಲ್ಲಿ ಭಾನುವಾರ ಮಳೆ ಬಿಡುವು ನೀಡಿತ್ತು. ಮಹಾರಾಷ್ಟ್ರದಲ್ಲಿಯೂ ಮಳೆಯ ಪ್ರಮಾಣ ತಗ್ಗಿಿರುವುದರಿಂದ, ಕೊಯ್ನಾಾ ನದಿಗೆ ಒಳಹರಿವು ತಗ್ಗಿಿದ್ದರಿಂದ ಕೃಷ್ಣಾಾ ನದಿ ಪಾತ್ರದ ಬಹುತೇಕ ಭಾಗದಲ್ಲಿ ಪ್ರವಾಹದ ಪ್ರಮಾಣ ಕಡಿಮೆಯಾಗಿದೆ. ಆದರೆ, ಕಾವೇರಿ ಹಾಗೂ ತುಂಗಾಭದ್ರಾಾ ನದಿ ಪಾತ್ರದ ಜಲಾಶಯಗಳಿಂದ ಲಕ್ಷಾಾಂತರ ಕ್ಯುಸೆಕ್ ನೀರು ಹೊರ ಬಿಟ್ಟಿಿದ್ದರಿಂದ, ಈ ಭಾಗದಲ್ಲಿ ನೆರೆ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಆದ್ದರಿಂದ ಹಲವು ಗ್ರಾಾಮಗಳು ಹಾಗೂ ಸೇತುವೆಗಳು ಜಲಾವೃತವಾಗಿವೆ.

ಬಳ್ಳಾಾರಿ ಜಿಲ್ಲೆಯ ಕೋಟೆ ಬಳಿ ತುಂಗಭದ್ರಾಾ ನದಿಗೆ ಅಡ್ಡಲಾಗಿ ಕಟ್ಟಿಿರುವ ಸೇತುವೆ ಮುಳುಗಡೆಯಾಗಿದ್ದು, ಕಂಪ್ಲಿಿ ಮತ್ತು ಗಂಗಾವತಿ ನಡುವಿನ ಸಂಚಾರ ಸ್ಥಗಿತಗೊಂಡಿದೆ. ತುಂಗಭದ್ರಾಾ ಜಲಾಶಯಕ್ಕೆೆ ತುಂಗಾ ಮತ್ತು ಭದ್ರ ಜಲಾಶಯದಿಂದ ಸುಮಾರು ಎರಡು ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹರಿದು ಬರುತ್ತಿಿರುವ ಹಿನ್ನೆೆಲೆಯಲ್ಲಿ ನದಿಗೆ ಹೆಚ್ಚಿಿನ ನೀರು ಬಿಡುಗಡೆ ಮಾಡಲಾಗಿದೆ. ತುಂಗಭದ್ರಾಾ ನದಿ ಪಾತ್ರದ ಕೋಟೆ ಪ್ರದೇಶದ ಆಂಜನೇಯ ದೇವಸ್ಥಾಾನ, ನೂರಾರು ಮನೆಗಳಿಗೆ ನೀರು ನುಗ್ಗಿಿದ್ದು, ನದಿ ಪಾತ್ರದ ಜನರಿಗೆ ಸುರಕ್ಷಿತ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ನದಿಗಳು ಉಕ್ಕಿಿ ಹರಿಯುತ್ತಿಿವೆ. ಪಶ್ಚಿಿಮ ಘಟ್ಟಗಳಲ್ಲಿ ನಿರಂತರ ಸುರಿದ ಮಳೆಗೆ ಜಿಲ್ಲೆಯ ಜೀವ ನದಿ ನೇತ್ರಾಾವತಿ, ಕುಮಾರಧಾರ ಬಂಟ್ವಾಾಳದಲ್ಲಿ ಅಪಾಯ ಮಟ್ಟಕ್ಕೆೆ ತಲುಪಿದೆ. ಬಂಟ್ವಾಾಳ ಪೇಟೆ ಮತ್ತು ಪಾಣೆಮಂಗಳೂರಿನಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗದೆ.
ಕಾವೇರಿ ಪಾತ್ರದಲ್ಲಿಯೂ ನೆರೆ

ಕೆಆರ್ ಪೇಟೆಯಲ್ಲಿ ಹೇಮಾವತಿ ನದಿ ಉಕ್ಕಿಿ ಹರಿಯುತ್ತಿಿದ್ದು, ಕಿಕ್ಕೇರಿ-ಮಂದಗೆರೆ ನಡುವಿನ ಸೇತುವೆ ಮುಳುಗಡೆಯಾಗಿದೆ. ಕೃಷ್ಣರಾಜಸಾಗರ ಜಲಾಶಯದಿಂದ ಕಾವೇರಿ ನದಿಗೆ ಒಂದು ಲಕ್ಷ ಕ್ಯುಸೆಕ್‌ಗೂ ಹೆಚ್ಚು ನೀರು ಹರಿಸುತ್ತಿಿರುವುದರಿಂದ, ಶ್ರೀರಂಗಪಟ್ಟಣ ಸಮೀಪದ, ಪ್ರಸಿದ್ಧ ವೆಲ್ಲಿಸ್ಲಿಿ ಸೇತುವೆ ಮುಳುಗಡೆ ಮಟ್ಟ ತಲುಪಿದೆ.
ಕಬಿನಿ ಮತ್ತು ಕೆಆರ್‌ಎಸ್ ಜಲಾಶಯಗಳಿಂದ ಹೆಚ್ಚಿಿನ ನೀರನ್ನು ಹೊರಗೆ ಬಿಡುತ್ತಿಿರುವುದರಿಂದ ಚಾಮರಾಜನಗರ ಜಿಲ್ಲೆಯ ಕೊಳ್ಳೆೆಗಾಲ ತಾಲೂಕಿನ ದಾಸನಪುರ ಗ್ರಾಾಮಕ್ಕೆೆ ನೀರು ನುಗ್ಗಿಿದ್ದು, ನೂರಾರು ಮನೆಗಳು ಜಲಾವೃತವಾಗಿದೆ. ಗ್ರಾಾಮಸ್ಥರದಲ್ಲಿ ಆತಂಕ ಮೂಡಿದೆ. ಮೈಸೂರು-ನಂಜನಗೂಡು ರಸ್ತೆೆ ಬಂದ್ ಆಗಿದೆ. ಅದೇ ರೀತಿ ಗುಂಡ್ಲಪೇಟೆ-ಕ್ಯಾಾಲಿಕೆಟ್ ರಸ್ತೆೆ, ಮೈಸೂರು-ಸುತ್ತೂರು ಸಂಪೂರ್ಣ ಬಂದ್ ಆಗಿವೆ.

ಮುಳುಗಿದ ಹಂಪಿ
ಇನ್ನು ತುಂಗಾಭದ್ರಾಾ ಜಲಾಶಯದ 33 ಗೇಟ್‌ಗಳಿಂದ ಎರಡು ಲಕ್ಷ ಕ್ಯುಸೆಕ್‌ಗೂ ಅಧಿಕ ನೀರನ್ನು ಹೊರಬಿಟ್ಟಿಿರುವುದರಿಂದ ವಿಶ್ವಪ್ರಸಿದ್ಧ ಹಂಪಿಯ ಹಲವು ಸ್ಮಾಾರಕಗಳು ಜಲಾವೃತಗೊಂಡಿವೆ. ಹಂಪಿ ಪೊಲೀಸ್ ಠಾಣೆ ಸೇರಿದಂತೆ ಹಲವು ಸರಕಾರಿ ಕಚೇರಿಯಲ್ಲಿ ನೀರು ನುಗ್ಗಿಿರುವುದರಿಂದ, ದಾಖಲೆಗಳನ್ನು ಜೈನ ಮಂದಿರಕ್ಕೆೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾಾರೆ.

ಐದು ಸಾವಿರ ಕೋಟಿ ಪರಿಹಾರ ನೀಡಿ : ಸಿದ್ದು

ಪ್ರವಾಹದಿಂದ ರಾಜ್ಯದ 15ಕ್ಕೂ ಜಿಲ್ಲೆೆಯ ಜನರು ತತ್ತರಿಸಿದ್ದಾಾರೆ. ಆದ್ದರಿಂದ ಕೇಂದ್ರ ಸರಕಾರ ಕೂಡಲೇ ಐದು ಸಾವಿರ ಕೋಟಿ ರು. ಪರಿಹಾರ ಘೋಷಿಸಬೇಕೆಂದು ಮಾಜಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಆಗ್ರಹಿಸಿದರು. ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಅವರು, ಶೇ.60ರಷ್ಟು ಪ್ರದೇಶ ಜಲಾವೃತವಾಗಿದೆ. ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಆಗುತ್ತಿಿರುವ ಮಳೆಯೂ ಇದಕ್ಕೆೆ ಕಾರಣ. ಆಲಮಟ್ಟಿಿ ಮತ್ತು ನಾರಾಯಣಪುರ ಜಲಾಶಯಗಳಿಂದ 6.5 ಲಕ್ಷ ಕ್ಯೂಸೆಕ್ ನೀರು ಬಿಟ್ಟಿಿರುವುದು ಇದೇ ಮೊದಲು. ರಾಜ್ಯದ ಪರಿಸ್ಥಿಿತಿ ಗಂಭೀರವಾಗಿದ್ದು, ಇದನ್ನು ಕೇಂದ್ರ ಸರಕಾರ ಗಮನಿಸಿ, ರಾಜ್ಯಕ್ಕೆೆ ಕೋಟಿ ರು. ಪರಿಹಾರ ಒದಗಿಸಿ, ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ತುರ್ತು 3000 ಕೋಟಿಗೆ ಮನವಿ : ಬಿಎಸ್‌ವೈ 

ಬೆಳಗಾವಿ: ರಾಜ್ಯದಲ್ಲಿ ಪ್ರವಾಹ ಹಾಗೂ ಧಾರಾಕಾರ ಮಳೆಯಿಂದ ಹತ್ತು ಸಾವಿರ ಕೋಟಿ ರು. ಹಾನಿಯಾಗಿದೆ ಎಂದು ಪ್ರಾಾಥಮಿಕ ವರದಿಯಲ್ಲಿ ತಿಳಿದುಬಂದಿದೆ. ಆದ್ದರಿಂದ ತಕ್ಷಣ 3 ಸಾವಿರ ಕೋಟಿ ನೆರವು ನೀಡುವಂತೆ ಕೇಂದ್ರ ಸರಕಾರಕ್ಕೆೆ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿಿ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.
ಕೇಂದ್ರ ಸಚಿವ ಅಮಿತ್ ಶಾ ಜತೆಯಲ್ಲಿ ಪ್ರವಾಹ ಬಾಧಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ಹಾಗೂ ಹಿರಿಯ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಿಯಲ್ಲಿ ಈ ವಿಷಯ ತಿಳಿಸಿದರು. 10ಸಾವಿರ ಕೋಟಿ ಹಾನಿಯು ಪ್ರಾಾಥಮಿಕ ಅಂದಾಜು ಮಾತ್ರವಾಗಿದೆ. ಪ್ರವಾಹ ಸ್ಥಿಿತಿಯನ್ನು ನೋಡಿದರೆ ಅಂದಾಜು 30 ರಿಂದ 40 ಸಾವಿರ ಕೋಟಿ ರೂಪಾಯಿ ಹಾನಿಯಾಗಿದೆ ಎಂಬುದು ನನ್ನ ಅಭಿಪ್ರಾಾಯ. ಸಮಗ್ರ ಸಮೀಕ್ಷೆ ಬಳಿಕ ಇದು ಗೊತ್ತಾಾಗಲಿದೆ. ಜನ-ಜಾನುವಾರುಗಳ ರಕ್ಷಣೆ ಹಾಗೂ ಪುನರ್ವಸತಿ ಕಲ್ಪಿಿಸುವುದು ಮತ್ತು ಪರಿಹಾರ ತಲುಪಿಸುವುದು ಸರಕಾರದ ಮೊದಲ ಆದ್ಯತೆಯಾಗಿದೆ. ಇದರಲ್ಲಿ ಯಾವುದೇ ರಾಜೀಯಿಲ್ಲ ಎಂದರು.

ಬಾಬಾಬುಡನ್‌ಗಿರಿಗೆ ನಿಷೇಧ
ಚಿಕ್ಕಮಗಳೂರು ತಾಲೂಕಿನ ಗುರುದತ್ತಾಾತ್ರೇಯ ಬಾಬಾಬುಡನ್ ದರ್ಗಾ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿಗೆ ಪ್ರವಾಸಿಗರ ಸಂಚಾರವನ್ನು ಆ.14ರವರೆಗೆ ನಿಷೇಧಿಸಲಾಗಿದೆ. ಸತತ ಮಳೆಯಿಂದಾಗಿ ಗಿರಿ ಮಾರ್ಗದಲ್ಲಿ ಕೆಲವೆಡೆ ಗುಡ್ಡ ಕುಸಿದಿದೆ, ಹೀಗಾಗಿ ಈ ಭಾಗಕ್ಕೆೆ ಪ್ರವಾಸಿಗರ ಸಂಚಾರ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.
ಚಾರ್ಮಾಡಿ, ಶಿರಾಡಿ ಘಾಟ್ ರಸ್ತೆೆಗಳನ್ನು ಬಂದ್ ಮಾಡಲಾಗಿದೆ, ಮತ್ತು ಮೂಡಿಗೆರೆ – ಸಕಲೇಶಪುರ ರಸ್ತೆೆಗಳು ಬಂದ್ ಆಗಿವೆ. ಸ್ಥಳೀಯ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ದೇಗುಲದ ಹರಕೆ ವಸ್ತ್ರ ವಿತರಿಸಲು ಅದೇಶ

ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳ ಸಂತ್ರಸ್ತರಿಗೆ ಆಯಾ ಜಿಲ್ಲೆಯ ದೇವಾಲಯಗಳಿಗೆ ಹರಕೆ ರೂಪದಲ್ಲಿ ಸಲ್ಲಿಕೆಯಾಗಿರುವ ಸೀರೆ ಮತ್ತಿಿತರರ ವಸ್ತ್ರಗಳನ್ನು ವಿತರಿಸುವಂತೆ ಧಾರ್ಮಿಕ ದತ್ತಿಿ ಇಲಾಖೆ ಆದೇಶ ಹೊರಡಿಸಿದೆ.
ಪ್ರಮುಖ ದೇವಾಲಯಗಳು ಹರಕೆ ರೂಪದಲ್ಲಿ ಭಕ್ತರಿಂದ ಸಲ್ಲಿಕೆಯಾಗಿರುವ ವಸ್ತ್ರಗಳನ್ನು ಸಂತ್ರಸ್ತರಿಗೆ ವಿತರಿಸಲು ಮುಂದೆ ಬಂದಿವೆ ಎಂದು ತಿಳಿಸಿವೆ. ಪ್ರವಾಹ ಪೀಡಿತ ಜಿಲ್ಲೆಗಳ ಎಲ್ಲಾ ಧಾರ್ಮಿಕ ದತ್ತಿಿ ದೇಗುಲಗಳು ಲಭ್ಯವಿರುವ ಸೀರೆ, ವಸ್ತ್ರಗಳನ್ನು ಆ. 12, ಸೋಮವಾರ ಮಧ್ಯಾಾಹ್ನದೊಳಗೆ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ತಲುಪಿಸಬೇಕು. ಸಾಗಣೆ ವೆಚ್ಚವನ್ನು ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯ, ಬೆಳಗಾವಿ ಜಿಲ್ಲೆ, ಸವದತ್ತಿಿ ತಾಲೂಕಿನ ರೇಣುಕಾ ಯಲ್ಲಮ್ಮ ದೇವಿ ದೇವಾಲಯಗಳ ನಿಧಿಯಿಂದ ಭರಿಸಲಾಗುವುದು ಎಂದು ಇಲಾಖೆ ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *