Friday, 24th September 2021

ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸವಾಲು ಎದುರಿಸಬೇಕು: ಉಪಕುಲಪತಿ ಡಾ.ಶ್ರೀನಿವಾಸ್ ಬಲ್ಲಿ

ತುಮಕೂರು: ಪದವಿಧರ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರಪಂಚದ ಸವಾಲುಗಳನ್ನು ಎದುರಿಸಲು ಸಿದ್ದರಾದಾಗ ಮಾತ್ರ ಜನರು ಎದುರಿಸುತ್ತಿರುವ ಸಮಸ್ಯೆ ಗಳಿಗೆ ಪರಿಹಾರ ಕಂಡು ಹಿಡಿಯಲು ಸಾಧ್ಯ ಎಂದು ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾಲಯದ ಉಪಕುಲ ಪತಿ ಡಾ.ಶ್ರೀನಿವಾಸ್ ಬಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಹೆಚ್.ಎಂ.ಎಸ್.ಐ.ಟಿ.ಕಾಲೇಜಿನಲ್ಲಿ ಆಯೋಜಿಸಿದ್ದ ಪದವಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾ ಡುತಿದ್ದ ಅವರು, ತಮ್ಮ ಕೌಶಲ್ಯ, ಬುದ್ದಿವಂತಿಕೆ,ವಿಭಿನ್ನ ಆಲೋಚನೆಗಳ ಮೂಲಕ ಜನರ ನಡುವಿನ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಚಾಕುಚಕ್ಯತೆಯನ್ನು ಬೆಳೆಸಿಕೊಂಡರೆ, ಈ ಪೈಪೋಟಿ ಯುಕ್ತ ಪ್ರಪಂಚದಲ್ಲಿ ಉಳಿಯಲು ಸಾಧ್ಯ ಎಂದರು. ವಿದ್ಯಾರ್ಥಿಗಳಿಗೆ ಪದವಿ ಎಂಬುದು ಮುಕ್ತಾಯವಲ್ಲ.ಹೊಸ ಶಕೆಯ ಆರಂಭ,ನಾನೇನು ಕಲಿತಿದ್ದೀನಿ ಎಂಬುದನ್ನು ಸಮಾಜದ ಮುಂದೆ ತೆರೆದಿಡಲು ಸಿಗುವ ಅವಕಾಶ. ಕೌಟುಂಬಿಕ ವಾಗಿ ಆಗಲಿ, ವೃತ್ತಿಯಾಗಲಿ ಸರಿಯಾಗಿ ಬಳಸಿಕೊಂಡವರು ಭವಿಷ್ಯದಲ್ಲಿ ಮೇಲೆರಲು ಸಾಧ್ಯ ಎಂದರು.

ಇ೦ದು ಮಹಾಮೇದಾವಿ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನ. ಅವರು ಇಂಜಿನಿಯರ್‌ಗಳಿಗೆ ಮಾದರಿ ಇದ್ದಂತೆ.ತಮ್ಮ ಅತಿಯಾದ ಬುದ್ದಿವಂತಿಕೆ, ಸರಳತೆ ಮತ್ತು ಪ್ರಾಮಾಣಿಕತೆಯಿಂದ ಅಂದಿನ ಇಂಗ್ಲೀಷ್ ಅಧಿಕಾರಿಗಳನ್ನು ಮೆಚ್ಚಿಸಿ, ಅವರನ್ನು ಹಿಂದಕ್ಕೆ ತಳ್ಳಿ, ಉನ್ನತ ಹುದ್ದೆಯನ್ನು ಪಡೆದರು. ನಿಮ್ಮ ಪೋಷಕರ ನಿರೀಕ್ಷೆಗಳು ಸಾಕಷ್ಟಿವೆ. ಹಾಗೆಯೇ ಸಮಾಜವೂ ನಿಮ್ಮಿಂದ ಸಾಕಷ್ಟು ನಿರೀಕ್ಷಿಸುತ್ತದೆ. ಹಾಗಾಗಿ ತಾವು ಕಲಿತಿದ್ದನ್ನು ಸಮಾಜಕ್ಕೆ ತಿರುಗಿಸಿ ಕೊಡುವ ನಿಟ್ಟಿನಲ್ಲಿ ತಾವೆಲ್ಲರೂ ಶಕ್ತಿ ಮೀರಿ ಪ್ರಯತ್ನಿಸುವಂತೆ ಡಾ.ಶ್ರೀನಿವಾಸ ಬಲ್ಲಿ ಸಲಹೆ ನೀಡಿದರು.

ಜಾಂಬೋರ್ ಎಜುಕೇಷನ್ ಪ್ರವೈಟ್ ಲಿಮಿಟೆಡ್ ನ ಕರ್ನಾಟಕ ಮುಖ್ಯಸ್ಥ ಉಮಾಶಂಕರ್ ಮಾತನಾಡಿ, ಕ್ಷೇತ್ರದಲ್ಲಿ ಕೆಲಸ ಮಾಡುವಾಗ ನಾವು ಗಳಿಸುವ ಅಂಕಗಳು ಮುಖ್ಯವಾಗುವುದಿಲ್ಲ.ನಾವು ಒಂದು ವಿಷಯದ ಕುರಿತು ಪಡೆದಿರುವ ಜ್ಞಾನ ಮುಖ್ಯವಾಗುತ್ತದೆ.ಹಾಗಾಗಿ ಇಂಜಿನಿಯರಿAಗ್ ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕದ ಕಲಿಕೆಗಷ್ಟೇ ಸಿಮೀತವಾಗದೆ, ತಮಗೆ ಸುಲಭದಲ್ಲಿ ದೊರೆಯುವ ಇನ್ನಿತರ ಪೂರಕ ಜ್ಞಾನಗಳ ಕಡೆಗೂ ಗಮನಹರಿಸಿ,ತಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳ ಬೇಕಿದೆ.ಸ್ಟಾರ್ಟ್ಅಫ್‌ನಲ್ಲಿ ಇಡೀ ದೇಶದಲ್ಲಿಯೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ.ಸಿಗುವ ಅವಕಾಶಗಳನ್ನು ಬಳಸಿಕೊಂಡು, ಉದ್ಯಮಿ ಗಳಾಗಿ ಬೆಳೆಯಲು ಮುಂದಾಗಿದೆ. ಇದರಿಂದ ಹಣದ ಜೊತೆಗೆ, ಸಮಾಜದಲ್ಲಿ ಘನತೆ, ಗೌರವವೂ ಹೆಚ್ಚುತ್ತದೆ ಎಂದು ಕಿವಿಮಾತು ಹೇಳಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಹೆಚ್.ಎಂ.ಎಸ್.ಐ.ಟಿಯ ಪ್ರಾಂಶುಪಾಲರಾದ ಡಾ.ಇರ್ಫಾನ್,ಪದವಿ ಎಂಬುದು ಹಲವರ ಗುರಿ. ನಿಮ್ಮ ಜೀವನದಲ್ಲಿ ಅದು ಈಡೇರಿದೆ.ಆದರೆ ಇಷ್ಟಕ್ಕೆ ಎಲ್ಲಾ ಮುಗಿಯುವುದಿಲ್ಲ.ನಿರಂತರ ಕಲಿಕೆಯನ್ನು ರೂಢಿಸಿ ಕೊಂಡು,ಹೊಸ ಅವಿಷ್ಕಾರಗಳಿಗೆ ತಮ್ಮನ್ನು ತೆರೆದುಕೊಂಡಾಗ ಮಾತ್ರ ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಲು ಸಾಧ್ಯ.ನಿರಂತರ ಕಲಿಕೆಯ ಜೊತೆಗೆ,ಎಂತದಾದರೂ ಸಾಧಿಸಬಲ್ಲೇ ಎಂಬ ಆತ್ಮವಿಶ್ವಾಸವನ್ನು ರೂಢಿಸಿಕೊಳ್ಳಿ, ಕೌಶಲ್ಯದ ಜೊತೆಗೆ, ಉತ್ತಮ ಸಂಮೋಹನ ಕಲೆಗಳನ್ನು ಕರಗತ ಮಾಡಿಕೊಂಡರೆ ಅದ್ವೀತಿಯವಾದ ಸಾಧನೆ ಮಾಡಬಹುದು. ನಿಮ್ಮಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಚ್.ಎಂ.ಎಸ್.ಐ.ಟಿ.ಯ ಅಧ್ಯಕ್ಷ ಡಾ.ಎಸ್.ಷಪಿ ಅಹಮದ್ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು,ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ೨೨೫ ಇಂಜಿನಿಯ ರಿಂಗ್ ೩೫ ಎಂ.ಬಿ.ಎವಿದ್ಯಾರ್ಥಿಗಳಿಗೆ ಪದವಿ ಆರ್ಹತಾ ಪತ್ರಗಳನ್ನು ವಿತರಿಸಿ, ಪ್ರತಿಜ್ಞಾವಿಧಿ ಬೋಧಿಸಲಾಯಿತು.

Leave a Reply

Your email address will not be published. Required fields are marked *