Saturday, 10th June 2023

ವೇತನ ಬಾಕಿ: ಐವತ್ತು ಕಾವಲುಗಾರ ಸಿಬ್ಬಂದಿಗಳಿಂದ ಮಳೆಯಲ್ಲೇ ಪ್ರತಿಭಟನೆ

ಪಾವಗಡ: ಕ್ಯೂಟ್ ಏರಿಯರ್ ಏಜೆನ್ಸಿ ಪ್ರೈವೇಟ್ ಲಿಮಿಟೆಡ್ ಕಂಪನಿ ಯಿಂದ ನಾಲ್ಕು ತಿಂಗಳ ವೇತನ ನೀಡಿಲ್ಲ ಎಂದು ಟಾಟಾ ಪವರ್ ಖಾಸಗಿ ಸೋಲಾರ್ ಘಟಕದಲ್ಲಿ ಕರ್ತವ್ಯ ನಿರ್ವಹಣೆ ಮಾಡುವ ಐವತ್ತು ಕಾವಲುಗಾರ ಸಿಬ್ಬಂದಿಗಳಿಂದ ಹಾಗೂ ತಿರುಮಣಿ ವ್ಯಾಪ್ತಿಯ ಅಚ್ಚಮ್ಮನಹಳ್ಳಿ ಗ್ರಾಮದ ಸೋಲಾರ್ ಘಟಕದ 32.34. ಪ್ಲಾಂಟ್ ಸಿಬ್ಬಂದಿಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಸೆಕ್ಯೂರಿಟಿ ಸಿಬ್ಬಂದಿ ಮಳೆಯಲ್ಲಿಯೇ ಪ್ರತಿಭಟನೆ ಮಾಡಿದ್ದು ವಿಶೇಷವಾಗಿತ್ತು. ಏಷ್ಯಾದ ಅತಿದೊಡ್ಡ ಸೋಲಾರ ಘಟಕ ಎಂಬುದಾಗಿ ಹೆಗ್ಗಳಿಕೆಗೆ ಪಾತ್ರವಾದ ಸೋಲಾರ್ ಘಟಕದಲ್ಲಿ ನಿರ್ವಹಿಸುತ್ತಿರುವ ಸೆಕ್ಯೂರಿಟಿ ಗಾರ್ಡ್ ಸಿಬ್ಬಂದಿಗಳ ಪಾಡು ಹೇಳತೀರದಾಗಿದೆ.

ಇದೇ ವೇಳೆ ಪ್ರತಿಭಟನೆ ಉದ್ದೇಶಿ ಮಾತನಾಡಿದ ಸೆಕ್ಯೂರಿಟಿ ಸಿಬ್ಬಂದಿ ರಾಮಾಂಜಿ ಮಾತನಾಡಿ ತಾಲ್ಲೂಕಿನ ದುಡಿದು ತಿನ್ನಲು ಯಾವುದೇ ರೀತಿಯ ಮೂಲ ಆದಾಯ ಇಲ್ಲ ದಂತಹ ಸಮಯದಲ್ಲಿ ಬೆಂಗಳೂರು ಅಂತಹ ದೊಡ್ಡ ಪಟ್ಟಣಕ್ಕೆ ಗೂಳೆ ಹೋಗಿದಂತಹ ನಾವುಗಳು ನಮ್ಮ ತಾಲೂಕಿನಲ್ಲಿಯೇ ಏಷ್ಯಾದ ಅತಿದೊಡ್ಡ ಸೋಲಾರ್ ಘಟಕ ನಿರ್ಮಾಣ ವಾದ ಕಾರಣ ಕೆಲಸ ಬಿಟ್ಟು ಇಲ್ಲಿಗೆ ಬಂದು ಸೆಕ್ಯೂರಿಟಿ ಕೆಲಸ ಮಾಡಲು ಮುಂದಾಗಿದ್ದೆವೆ ಅದರೆ ನಾವುಗಳು ಈಗಾಗಲೇ ನಾಲ್ಕು ಐದು ವರ್ಷಗಳ ಕಾಲದಿಂದಲೂ ಕೆಲಸ ಮಾಡುತ್ತಿದ್ದೆವೆ ಅದರೆ ಮೂಲಭೂತ ಸೌಕರ್ಯಗಳು ಒದಗಿಸುವಲ್ಲಿ ಸೆಕ್ಯೂರಿಟಿ ಏಜೆನ್ಸಿಯ ಕಂಪನಿಯ ಪದೇ ಪದೇ ವಿಫಲರಾಗುತ್ತಿದ್ದರೆ.

ನಂತರ ಸಿಬ್ಬಂದಿ ನಾಗಬೋಷಣ್ ಮಾತನಾಡಿ, ಸೆಕ್ಯೂರಿಟಿ ಏಜೆನ್ಸಿಗಳು ಅಧಿಕಾರಿಗಳು ಯಾವುದೇ ಮೂಲ ಭೂತ ಸೌಕರ್ಯಗಳನ್ನು ಒದಗಿಸಿಲ್ಲ ಸರಿಯಾದ ಸಮವಸ್ತ್ರ ವಾಗಲಿ, ಷೂಗಳಾಗಲಿ ನೀಡಿಲ್ಲ. ನಾವುಗಳು ಕಾರ್ಮಿಕ ಘಟಕದ ಆಡಿಯಲ್ಲಿ ಬರುತ್ತೇವೆ ಅದರ ಕಾರ್ಮಿಕರ ಸವಲತ್ತುಗಳು ಯಾವುದೇ ತರಹದ ವ್ಯವಸ್ಥೆ ಕಲ್ಪಸಿಲ್ಲ ತಕ್ಷಣವೇ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನಿಸಿ ನಮಗೆ ಅಗುತ್ತಿರುವ ಸಮಸ್ಯೆಗಳು ಬಗ್ಗೆ ಹರಿಸಿ ಕೊಡಬೇಕು.

ನಾವುಗಳು ಬಿಸಿಲು ಮಳೆ ಎನ್ನದೆ ಕೆಲಸ ನಿರ್ವಹಣೆ ಮಾಡುತೇವೆ. ಮಳೆ ಅಗಲಿ, ಬಿಸಿಲು ರಕ್ಷಣೆ ಪಡೆಯಲು ರಕ್ಷಣೆ ಸ್ಥಳ ಇರುವುದಿಲ್ಲ. ಸೋಲಾರ್ ಪ್ಯಾನಲ್ ಗಳ ಮದ್ಯದಲ್ಲಿ ನಿಲ್ಲಲು ವಿದ್ಯುತ್ ಪೂರೈಕೆ ಇರುವ ಕಾರಣ ನಿಲ್ಲಲು ಸಾದ್ಯ ವಾಗುವುದಿಲ್ಲ ಎಂದರು.

ನಮ್ಮ ಸಮಸ್ಯೆಗಳು ಆಲಿಸಲು ಇಲ್ಲಿ ಯಾರು ಇಲ್ಲ ಸಮಸ್ಯೆ ಗಳ ಬಗ್ಗೆ ಕಂಪನಿಯವರಿಗೆ ತಿಳಿಸಲು ಹೋದರೆ ದೂರವಾಣಿ ಕರೆ ಮಾಡಿದರು ಸಹ ಕರೆ ಎತ್ತುವುದಿಲ್ಲ ಎಂದರು ನಮ್ಮಗೆ ಮಾದ್ಯಮ ಮುಲಕ ನ್ಯಾಯ ಸಿಗಬೇಕು ಎಂದರು. ಪ್ರತಿಭಟನೆ ವೇಳೆ ಶಂಕರಪ್ಪ, ಶ್ರೀನಿವಾಸ, ಬಾಬಾವಲಿ, ಮಲ್ಲೇಶ್ ಇತರರು ಇದ್ದರು.

 

 

error: Content is protected !!