Wednesday, 26th February 2020

ವಿಶ್ವದಲ್ಲೇ ಅಪರೂಪದ ವಿಶ್ವವಿದ್ಯಾಪೀಠ ಸ್ಥಾಪನೆ

ಬೆಂಗಳೂರು: ವಿಶ್ವದಲ್ಲಿ ಎಲ್ಲೂ ಇಲ್ಲದ ‘ಗೋಸ್ವರ್ಗ’ ಕಾರ್ಯಾರಂಭಗೊಂಡ ನಂತರ ಅಪರೂಪದ ವಿಶ್ವವಿದ್ಯಾಾಪೀಠ ಸ್ಥಾಾಪನೆಗೆ ರಾಮಚಂದ್ರಾಾಪುರ ಮಠ ಮುಂದಾಗಿದೆ.

ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಮಠದ ಪೀಠಾಧಿಪತಿ ರಾಘವೇಶ್ವರ ಭಾರತೀ ಶ್ರೀಗಳು, ನೂತನ ವಿಶ್ವವಿದ್ಯಾಾಪೀಠದ ಕಾರ್ಯಗಳು ನಮ್ಮ ಯೋಜನೆಯಂತೆ ನಡೆಯುತ್ತಿಿದೆ. ಸಮಾಜ ಬಾಂಧವರ ಸಹಕಾರವನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇವೆ ಎಂದು ನುಡಿದರು. ಮುಂದಿನ ವರ್ಷದ, ಏಪ್ರಿಿಲ್ 26ರ ಅಕ್ಷಯ ತೃತೀಯ ಪರ್ವದಿನದಂದು ವಿಷ್ಣುಗುಪ್ತ ವಿಶ್ವವಿದ್ಯಾಾಪೀಠ ಲೋಕಾರ್ಪಣೆಗೊಳ್ಳಲಿದೆ. ಆತ್ಮಲಿಂಗವಿರುವ ಏಕೈಕ ಪುಣ್ಯಕ್ಷೇತ್ರವಾದ ಗೋಕರ್ಣದಲ್ಲಿ ಈ ವಿಶ್ವವಿದ್ಯಾಾಪೀಠದ ಕೆಲಸ ಭರದಿಂದ ಸಾಗುತ್ತಿಿದೆ ಎಂದು ಶ್ರೀಗಳು ಹೇಳಿದರು.

ಗೋಸ್ವರ್ಗದ ಯಶಸ್ಸೇ ಈ ನೂತನ ವಿದ್ಯಾಾಪೀಠದ ಸ್ಥಾಾಪನೆ ಮುಂದಾಗಲು ನಮಗೆ ಪ್ರೇರಣೆ ಎಂದಿರುವ ರಾಘವೇಶ್ವರ ಶ್ರೀಗಳು, ಜಗದ್ಗುರು ಶಂಕರಾಚಾರ್ಯರ ಸ್ಮರಣೆಯೊಂದಿಗೆ ಈ ವಿಶ್ವವಿದ್ಯಾಾಪೀಠವನ್ನು ಅವರಿಗೆ ಸಮರ್ಪಣೆ ಮಾಡುತ್ತಿಿದ್ದೇವೆ ಎಂದರು. ಈ ವಿಶ್ವವಿದ್ಯಾಾಪೀಠದಲ್ಲಿ ಶುಲ್ಕವಿರುತ್ತದೆ. ಆದರೆ, ಆರ್ಥಿಕವಾಗಿ ಹಿಂದುಳಿದವರಿಗಾಗಿ ಸ್ಕಾಾಲರ್‌ಶಿಪ್ ವ್ಯವಸ್ಥೆೆಯನ್ನು ಮಾಡಲಾಗುವುದು. ವಿದ್ಯಾಾರ್ಜನೆಗೆ ಬಂದವರಿಗೆ, ಆರ್ಥಿಕ ತೊಂದರೆ ಹಿನ್ನಡೆಯಾಗಬಾರದು ಎನ್ನುವುದು ನಮ್ಮ ಉದ್ದೇಶ ಎಂದು ರಾಘವೇಶ್ವರ ಶ್ರೀಗಳು ತಿಳಿಸಿದರು.

ತಕ್ಷಶಿಲಾ ವಿಶ್ವವಿದ್ಯಾಾಲಯ ಲಕ್ಷಾಂತರ ವಿದ್ಯಾಾರ್ಥಿಗಳಿಗೆ ಆಶ್ರಯತಾಣವಾಗಿದ್ದ ವಿದ್ಯಾಾಕೇಂದ್ರ. ಚಾಣಕ್ಯ ಮತ್ತು ಚಂದ್ರಗುಪ್ತರು ತಕ್ಷಶಿಲೆಯನ್ನು ಪ್ರವರ್ಧಮಾನಕ್ಕೆೆ ತಂದರು. ವಿಷ್ಣುಗುಪ್ತ ಚಾಣಕ್ಯನ ಶ್ರಮವನ್ನು ಗುರುತಿಸಿ, ವಿಷ್ಣುಗುಪ್ತ ವಿಶ್ವವಿದ್ಯಾಾಪೀಠ ಎಂದು ನಾಮಕರಣ ಮಾಡಲು ನಿರ್ಧರಿಸಿದೆವು.
– ರಾಘವೇಶ್ವರ ಭಾರತೀ ಶ್ರೀ
ರಾಮಚಂದ್ರಾಾಪುರ ಮಠ

Leave a Reply

Your email address will not be published. Required fields are marked *