Wednesday, 26th February 2020

ವ್ಯಾಘ್ರಕ್ಕೇಕೆ ಕೊಲೆಗಡುಕನ ಪಟ್ಟ?

ಬೆಂಗಳೂರು
ರಾಜ್ಯದಲ್ಲಿ ಮನುಷ್ಯನ ಜೀವ ತೆಗೆದ ಹುಲಿಗಳಿಗೆ ನರ ಭಕ್ಷಕ ಎಂದು ಪಟ್ಟ ಕಟ್ಟುತ್ತಾಾರೆ. ಗ್ರಾಾಮಗಳತ್ತ ಸುಳಿಯುವ ಹುಲಿಗಳನ್ನು ಸೆರೆ ಹಿಡಿಯುವ ಕಾಯಕ ಅರಣ್ಯ ಇಲಾಖೆ ಮರೆತಿದೆ. ಚಾಮರಾಜನಗರದಲ್ಲಿ ಎರಡು ವ್ಯಕ್ತಿಿಗಳ ಜೀವ ತೆಗೆದ ಹುಲಿಯನ್ನು ಹಿಡಿಯುವುದು ಬಿಟ್ಟು, ಕೊಲ್ಲುವ ನಿರ್ಧಾರಕ್ಕೆೆ ಬರುವುದು ಎಷ್ಟರ ಮಟ್ಟಿಿಗೆ ಸರಿ ಎಂಬುದು ಪ್ರಾಾಣಿ ಪ್ರಿಿಯರ ವಾದ.

ಬಂಡೀಪುರ ಅರಣ್ಯದಂಚಿನಲ್ಲಿ ಹುಲಿ ಹಾವಳಿ ಹೆಚ್ಚಾಾಗಿದೆ. ಜನ, ಜಾನುವಾರುಗಳ ಮೇಲೆ ಹುಲಿರಾಯ ಪದೇಪದೆ ದಾಳಿ ನಡೆಸುತ್ತಿಿದ್ದಾನೆ. ಒಂದು ತಿಂಗಳ ಅವಧಿಯಲ್ಲಿ ಇಬ್ಬರು ರೈತರು ಹುಲಿ ಬಾಯಿಗೆ ಸಿಕ್ಕಿಿ ಪ್ರಾಾಣಬಿಟ್ಟಿಿದ್ದಾರೆ. ಮೊದಲ ಬಾರಿ ಹುಲಿ ದಾಳಿ ಮಾಡಿದಾಗ ಸ್ಥಳಿಯರು ಎಚ್ಚೆೆತ್ತುಕೊಂಡಿದ್ದರೆ, ಮತ್ತೊೊಂದು ಜೀವ ಬಲಿಯಾಗುತ್ತಿಿರಲಿಲ್ಲ. ಇಂತಹ ಸನ್ನಿಿವೇಶಗಳು ನಡೆಯುವ ಮುನ್ನ ಅರಣ್ಯಾಾಧಿಕಾರಿಗಳು ಕೈಗೊಳ್ಳಬೇಕಾದ ಮೂಲೆಗುಂಪಾಗಿವೆ. ಹುಲಿಗಳ ಸಂತತಿ ರಾಜ್ಯದಲ್ಲಿ ಕ್ಷೀಣಿಸುತ್ತಿಿದ್ದು, ಕೊಲ್ಲುವ ನಿರ್ಧಾರ ಸೂಕ್ತವಲ್ಲ.

2 ದಿನಗಳಲ್ಲಿ ಹುಲಿ ಹಿಡಿಯುವುದಾಗಿ, ಇಲ್ಲವೇ ಶೂಟೌಟ್ ಮಾಡುವ ಆಶ್ವಾಾಸನೆಯನ್ನು ಅರಣ್ಯಾಾಧಿಕಾರಿ ಸೂಚನೆ ನೀಡಿದ್ದಾಾರೆ. ಆದರೆ, ಇನ್ನೂ ಹುಲಿ ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಿಲ್ಲ. ತಮ್ಮ ತಪ್ಪುು ಮರೆ ಮಾಚಿಕೊಳ್ಳಲು ಕೊಲ್ಲುವ ನಿರ್ಧಾರಕ್ಕೆೆ ಬಂದಿದ್ದಾಾರೆ. ಹೀಗಾಗಿ ಹುಲಿ ಹಿಡಿಯಲು ಗಂಭೀರ ಕ್ರಮ ಕೈಗೊಳ್ಳದ ಅರಣ್ಯಾಾಧಿಕಾರಿಗಳ ವಿರುದ್ಧ ಗ್ರಾಾಮಸ್ಥರು ಆಕ್ರೋೋಶ ವ್ಯಕ್ತಪಡಿಸಿದ್ದಾರೆ. ನರ ಭಕ್ಷಕ ಹುಲಿಯನ್ನು ಸೆರೆಹಿಡಿಯದಿದ್ದರೆ, ಮತ್ತಷ್ಟು ಜನ-ಜಾನುವಾರುಗಳು ಕಳೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಏಕೆಂದರೆ ಒಂದು ತಿಂಗಳ ಅವಧಿಯಲ್ಲಿ ಇಬ್ಬರು ವ್ಯಕ್ತಿಿಗಳು ಹುಲಿ ದಾಳಿಗೆ ಬಲಿಯಾಗಿದ್ದಾರೆ. ಹೀಗಾಗಿ ಬಂಡೀಪುರ ಅರಣ್ಯದಂಚಿನ ಗ್ರಾಾಮಸ್ಥರು ಭಯಭೀತರಾಗಿದ್ದಾರೆ. ಇನ್ನಾಾದರೂ ಸಂಬಂಧಪಟ್ಟ ಅರಣ್ಯಾಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಕಾರ್ಯಾಚರಣೆ ಆರಂಭಿಸಿ ಹುಲಿಯನ್ನು ಸೆರೆ ಹಿಡಿಯಬೇಕೆಂಬುದು ಗ್ರಾಾಮಸ್ಥರ ಆಗ್ರಹವಾಗಿದೆ.

14 ಮಂದಿಯನ್ನು ಕೊಂದಿದ್ದ ಅವನಿ ಹುಲಿಗೆ ಅತ್ಯಂತ ತರಾತುರಿಯಲ್ಲಿ ಗುಂಡು ಹಾರಿಸಲಾಗಿದೆ. ಆ ಹುಲಿಯನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಸಾಮಾನ್ಯ ಕಾರ್ಯನಿರ್ವಹಣಾ ಪ್ರಕ್ರಿಿಯೆಗಳನ್ನು ಉಲ್ಲಂಸಲಾಗಿತ್ತು. ರಾಜ್ಯದಲ್ಲಿ ಹುಲಿ ಹಾಗೂ ಅರಣ್ಯದಂಚಿತ ಗ್ರಾಾಮಗಳಿಗೆ ಪ್ರವೇಶ ತಡೆಯುವಲ್ಲಿ ಅರಣ್ಯ ಇಲಾಖೆ ಪಾತ್ರ ಶೂನ್ಯ.

ಹುಲಿಯನ್ನು ಕೊಲ್ಲಬೇಡಿ, ಸೆರೆ ಹಿಡಿಯಿರಿ: ಸಿ.ಸಿ ಪಾಟೀಲ್
ಹುಲಿಯನ್ನು ಕೊಲ್ಲದೆ, ಕಾರ್ಯಾಚರಣೆ ಮೂಲಕ ಹುಲಿಯನ್ನು ಸೆರೆ ಹಿಡಿಯಲು ಆರಣ್ಯ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಅರಣ್ಯಾಾಧಿಕಾರಿಗಳಿಗೆ ಸೂಚಿಸಿದ್ದಾಾರೆ.

ಗುಂಡ್ಲುಪೇಟೆಯ ಗೋಪಾಲಸ್ವಾಾಮಿ ಬೆಟ್ಟ ವಲಯದ ಚೌಡಹಳ್ಳಿಿ ಗ್ರಾಾಮದ ಬಳಿ ಜಮೀನಿನಲ್ಲಿ ಮಂಗಳವಾರ ಹಸುಗಳನ್ನು ಮೇಯುಸುತ್ತಿಿದ್ದ ಶಿವಲಿಂಗಪ್ಪ (60) ಎಂಬುವರ ಮೇಲೆ ಹುಲಿ ದಾಳಿ ಮಾಡಿತ್ತು. ಇವರ ಕುಟುಂಬಕ್ಕೆೆ 5 ಪರಿಹಾರವನ್ನು ಘೋಷಿಸಿದ್ದಾಾರೆ.

ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಸುದ್ದಿಗಾರೊಂದಿಗೆ ಮಾತನಾಡಿ, ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿಿಯಲ್ಲಿ ರೈತನನ್ನು ಬಲಿ ಪಡೆದ ಹುಲಿಯನ್ನು ಯಾವುದೇ ಕಾರಣಕ್ಕೂ ಕೊಲ್ಲುವುದಿಲ್ಲ.ಸಾಮಾಜಿಕ ಜಾಲತಾಣದಲ್ಲಿ ಅರಣ್ಯ ಇಲಾಖೆಯು ಹುಲಿಯನ್ನು ಸೆರೆಹಿಡಿಯುವ ಆಥವಾ ಗುಂಡಿಕ್ಕಿಿಕೊಲ್ಲುವ ಆದೇಶ ವೈರಲ್ ಆದ ಹಿನ್ನೆೆಲೆ ಸ್ಪಷ್ಟನೆ ನೀಡಿದ್ದಾರೆ.

ಬಂಡಿಪುರ ವ್ಯಾಾಪ್ತಿಿಯಲ್ಲಿ 120 ಹುಲಿಗಳಿವೆ. ಒಂದೆರಡು ಹುಲಿಗಳ ಸಮಸ್ಯೆೆ ಇದೆ. ಕಳೆದ ಬಾರಿ 60 ವೃದ್ಧನ ಮೇಲೆ ಹುಲಿ ದಾಳಿ ನಡೆಸಿತ್ತು. ಅದೇ ಹುಲಿ ಇದಾಗಿರಬಹುದು ಎಂಬ ಸಂಶಯ ಇದೆ. ಹೀಗಾಗಿ ಮೊದಲು ಯಾವ ಹುಲಿ ಅನ್ನೋೋದನ್ನ ಪತ್ತೆೆ (ಟ್ರೇಸ್ ಔಟ್) ಮಾಡುತ್ತೇವೆ. ಬಳಿಕ ಅದನ್ನ ಸೆರೆಹಿಡಿಯಲಾಗುತ್ತದೆ ಎಂದು ತಿಳಿಸಿದರು.

ನರಭಕ್ಷಕ ಹುಲಿಯನ್ನು ಗುಂಡಿಕ್ಕಿಿ ಕೊಲ್ಲುವುದಕ್ಕೆೆ ಯಾವುದೇ ಆದೇಶ ಮಾಡಿಲ್ಲ. ಮಾಡುವುದೂ ಇಲ್ಲ. ಜೀವಂತವಾಗಿ ಸೆರೆಹಿಡಿಯಲಾಗುತ್ತದೆ. ಪ್ರತಿ ವರ್ಷ ಎರಡೆರಡು ಬಾರಿ ಕ್ಯಾಾಮೆರಾ ಇಡಲಾಗುತ್ತದೆ. ಕ್ಯಾಾಮೆರಾ ಮೂಲಕ ಪ್ರತಿಯೊಂದು ಹುಲಿ ವಿವರ ತಿಳಿಯಲಾಗುತ್ತದೆ. ಆ ಓಡಾಡುವ ಹುಲಿ ಯಾವುದು? ದಪ್ಪ ಇದ್ಯೆೆಯೋ ಸಣ್ಣ ಇದೆಯೋ, ಮೈಮೇಲೆ ಎಷ್ಟು ಪಟ್ಟಿಿಗಳಿವೆ? ಅನ್ನೋೋ ವಿವರ ತಿಳಿದ ಬಳಿಕ ಯಾವ ಹುಲಿ ದಾಳಿ ಮಾಡಿರಬಹುದು ಅನ್ನುವುದು ಪತ್ತೆೆಯಾಗುತ್ತದೆ. ಹುಲಿಯನ್ನು ಸೆರೆಹಿಡಿದ ಬಳಿಕ ಸುರಕ್ಷಿತವಾಗಿ ಮೈಸೂರು ಅಥವಾ ಬನ್ನೇರುಘಟ್ಟ ರಕ್ಷಣಾ ಶಿಬಿರಕ್ಕೆೆ ಬಿಡಲಾಗುವುದು ಎಂದು ಹೇಳಿದರು.

ಇನ್ನು ಹುಲಿ ಕೊಲ್ಲಲು ಮಹಾರಾಷ್ಟ್ರದಿಂದ ಶೂಟರ್‌ಗಳು ಬಂದಿದ್ದಾರೆ ಎಂಬ ಸುದ್ದಿ ಬಗ್ಗೆೆ ಗೊತ್ತಿಿಲ್ಲ. ಒಂದು ವೇಳೆ ಆ ರೀತಿಯ ತಜ್ಙರು ಬಂದಿದ್ದರೂ ಅವರನ್ನು ವಾಪಸ್ ಕಳುಹಿಸಲಾಗುವುದು. ಶೌಕತ್ ಅಲಿ ಖಾನ್ ಸೇರಿದಂತೆ ಯಾರೇ ಆದರೂ ಹೊರರಾಜ್ಯದಿಂದ ಬಂದಿರುವ ಶೂರ್ಟ ಗಳು ಈ ಆಪರೇಷನ್ ನಲ್ಲಿ ಪಾಲ್ಗೊೊಳ್ಳುವುದಿಲ್ಲ. ನಮ್ಮ ರಾಜ್ಯದಲ್ಲೇ ವನ್ಯಜೀವಿಗಳ ವೈದ್ಯರು ಇರುವುದರಿಂದ ಅವರನ್ನೇ ಕಾರ್ಯಾಚರಣೆಯಲ್ಲಿ ಸೇರಿಸಿಕೊಳ್ಳಲಾಗುತ್ತದೆ. ಈಗಾಗಲೇ ವೈದ್ಯರ ತಂಡವೂ ಆ ಪ್ರದೇಶಕ್ಕೆೆ ಹೋಗಿರುವುದರಿಂದ ಹುಲಿಯನ್ನು ಸೆರೆ ಹಿಡಿಯುವ ಕೆಲಸ ಭರದಿಂದ ಸಾಗುತ್ತಿಿದೆ ಎಂದು ತಿಳಿಸಿದರು.

ಅಧಿಕಾರಿ ಮತ್ತು ಸದಸ್ಯರ ನಡುವೆ ಮಾತಿನ ಚಕಮಕಿ
ಚಾಮರಾಜನಗರದ ಬಂಡೀಪುರದಲ್ಲಿ ಹುಲಿ ಸಂಬಂಧ ಅರಣ್ಯ ಇಲಾಖೆ ಅಧಿಕಾರಿ ಮತ್ತು ಪ್ರಾಾಣಿ ದಯಾ ಸಂಘದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂಬಂಧ ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ನಡೆದ ಅಧಿಕಾರಿಗಳು ಹಾಗೂ ಪ್ರಾಾಣಿದಯಾ ಸಂಘದವರ ಸಭೆಯಲ್ಲಿ ವಾಗ್ವಾಾದ ನಡೆದಿದೆ. ನಿನ್ನೆೆಯಷ್ಟೇ ದುರ್ಗಿ ಆರಾಧನೆ ಮಾಡಿದ್ದೇವೆ. ಮೊದಲೇ ರಾಜ್ಯದ ಅರಣ್ಯದಲ್ಲಿ ಹುಲಿಗಳ ಸಂಖ್ಯೆೆ ಇಳಿಮುಖವಾಗಿದೆ. ಈ ಹುಲಿಯನ್ನು ಕೊಲ್ಲಬೇಡಿ ಎಂದು ಅರಣ್ಯ ಇಲಾಖೆ ಅಧಿಕಾರಿ ಸಂಜಯ್ ಮೌನಿಗೆ ಪ್ರಾಾಣಿ ದಯಾ ಸಂಘದವರು ಮನವಿ

Leave a Reply

Your email address will not be published. Required fields are marked *