Tuesday, 27th September 2022

ಇಂದಿರಾ ನಗರದಲ್ಲಿ ಗೋಡೆ ಗೂಂಡಾಗಿರಿ

ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು

ಕ್ರಿಕೆಟ್ ಅಂಗಳದಲ್ಲಿ ಸೌಮ್ಯತೆಗೆ ಹೆಸರಾದ ರಾಹುಲ್ ದ್ರಾವಿಡ್‌ರ ಗೂಂಡಾಯಿಸಂ ನೆಟ್ಟಿಗರನ್ನು ಎರಡು ದಿನಗಳ ಕಾಲ ನಿಬ್ಬೆರ ಗಾಗಿಸಿದೆ.

ದ್ರಾವಿಡ್‌ರ ಜಾಹೀರಾತು ಇಂದಿರಾ ನಗರ ಕಾಲ ಗೂಂಡಾ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಭಾರತೀಯ ಕ್ರಿಕೆಟ್ ನಲ್ಲಿ ಮಿಸ್ಟರ್ ಫರ್ಪೆಕ್ಟ್‌, ಸಹನಾಶೀಲ ವ್ಯಕ್ತಿತ್ವಗಳಿಂದಲೇ ಗುರುತಿಸಿಕೊಂಡು, ಅಂಗಳದಲ್ಲಿ ತಾಳ್ಮೆಗೆ ಹೆಸರಾದ ರಾಹುಲ್ ದ್ರಾವಿಡ್ ಬರೆದ ದಾಖಲೆಗಳಿಗೆ ಬರವಿಲ್ಲ. ಒಂದನೇ ಕ್ರಮಾಂಕದಿಂದ 10 ನೇ ಕ್ರಮಾಂಕದವರೆಗೆ ಬ್ಯಾಟಿಂಗ್ ನಡೆಸಿದ ಪಂದ್ಯಗಳು ನಮ್ಮ ಕಣ್ಮುಂದೆ ಇದ್ದು, ಅವರ ತಾಳ್ಮೆಗೆ ಇದೆಲ್ಲವೂ ಉದಾಹಣೆಗಳಾಗಿವೆ.

ಇಂತಹ ದ್ರಾವಿಡ್ ಅವರನ್ನು ಮೊದಲನೇ ಬಾರಿಗೆ ಕೋಪದ ರೂಪದಲ್ಲಿ ಕಂಡು ಕ್ರಿಕೆಟ್ ಪ್ರೇಮಿಗಳು ಮತ್ತು ನೆಟ್ಟಿಗರು ದಂಗಾಗಿ ದ್ದಾರೆ. ದ್ರಾವಿಡ್ ಅವರ ಹೊಸ ಅವತಾರವನ್ನು ಕಂಡ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ, ರಾಹುಲ್ ಅವರನ್ನು ಈ ರೀತಿ ನಾನು ಎಂದೂ ಕಂಡಿರಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ದೇಶ ವಿದೇಶಗಳಲ್ಲಿ ದ್ರಾವಿಡ್ ಬಗೆಗಿನ ಅಭಿ ಪ್ರಾಯಕ್ಕೆ ತದ್ವಿರುದ್ಧವಾಗಿರುವ ಜಾಹೀರಾತು ಗಮನ ಸೆಳೆದಿದೆ.

ನೆಟ್ಟಿಗರ ಕಾಮೆಂಟ್ ಜೋರು: ರಾಹುಲ್ ಅವರನ್ನು ಈ ರೀತಿ ಎಂದೂ ಕಂಡಿರಲಿಲ್ಲ ಎಂದಿದ್ದಾರೆ ನೆಟ್ಟಿಗರು. ಅವರ ಜತೆಗಾರ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ‘1997/98 ನೇ ಸಾಲಿನ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಕೊನೆಯ ವಿಕೆಟ್‌ನಲ್ಲಿ ಗೆಲುವಿಗೆ ಮತ್ತೊಂದು ರನ್ ಅವಶ್ಯಕತೆ ಇದ್ದಾಗ ಗಣೇಶ್‌ಗೆ ‘ ಇನ್ನೂ ಒಂದ್ ರನ್ ಇದೆ ಕಣೋ ಎಂದು ಹೇಳಿದ್ದನ್ನು ಸ್ಮರಿಸಿಕೊಂಡಿದ್ದಾರೆ.

ವಿದೇಶಗಳಲ್ಲೂ ಟ್ರೆಂಡ್
ದ್ರಾವಿಡ್ ಅವರ ಈ ಜಾಹೀರಾತು ದೇಶಕ್ಕಷ್ಟೇ ಸೀಮಿತವಾಗಿಲ್ಲ. ಅವರ ಜಾಹೀರಾತು ತುಣುಕು ಮತ್ತು ಇಂದಿರಾ ನಗರ ಗೂಂಡಾ
ಎಂಬ ಹ್ಯಾಶ್ ಟ್ಯಾಗ್‌ನಲ್ಲಿ ಸಾವಿರಾರು ಟ್ವೀಟ್‌ಗಳಾಗಿವೆ. ಇಂಗ್ಲೆಂಡ್‌ನ ಸ್ಥಳೀಯ ಫುಟ್‌ಬಾಲ್ ಕ್ಲಬ್‌ಗಳು ಅಲ್ಲಿನ ಕೆಲ ಆಟಗಾರ ರನ್ನು ದ್ರಾವಿಡ್ ಜತೆಗೆ ಹೋಲಿಕೆ ಮಾಡಿ, ಇವರು ಇಂದಿರಾನಗರದ ಗೂಂಡಾ ಆದರೆ, ಈತ ’ಲಂಡನ್‌ನ ಗೂಂಡಾ’ ಎಂದು ಶೇರ್ ಮಾಡಿದ್ದಾರೆ.

ಒಟ್ಟಾರೆ ದ್ರಾವಿಡ್‌ರ ಸೌಮ್ಯ ಸ್ವಭಾವದ ವ್ಯಕ್ತಿತ್ವ, ಜಾಹೀರಾತೊಂದರಲ್ಲಿ ವಿಭಿನ್ನವಾಗಿ ಅನಾವರಣಗೊಂಡಿದ್ದು, ನೆಟ್ಟಿಗರಿಗೆ ಖುಷಿ ಕೊಟ್ಟಿದೆ. ಇದನ್ನು ರಿಟ್ವೀಟ್, ಟ್ವೀಟ್ ಮತ್ತು ಕಾಮೆಂಟ್‌ಗಳ ಮೂಲಕ ನೆಟ್ಟಿಗರು ವ್ಯಕ್ತಪಡಿಸಿದ್ದಾರೆ. ಈ ಜಾಹೀರಾತು
ಐಪಿಎಲ್ ಪಂದ್ಯಗಳಲ್ಲಿ ಓವರ್ ನಡುವೆ ಪದೇಪದೆ ಕಾಣಿಸಿಕೊಳ್ಳುತ್ತಿತ್ತು.