Thursday, 5th August 2021

ನಮ್ಮ ಮನಸ್ಸನ್ನು ಆಗಾಗ ರಿಫ್ರೆೆಶ್ ಮಾಡಿಕೊಳ್ಳುತ್ತಿರಬೇಕು

ಜೀವನದ ಬಗ್ಗೆೆ ಎಷ್ಟು ಹೇಳಿದರೂ ಅದು ಮುಗಿಯುವುದೇ ಇಲ್ಲ. ಹೀಗೆಂದು ಹೇಳಿದ್ದನ್ನೇ ಹೇಳಿದರೆ ಜನ ಕೇಳುವುದಿಲ್ಲ. ಒಮ್ಮೆೆ ಹೇಳುವುದನ್ನೇ ಬಹಳ ಗಂಭೀರವಾಗಿ ಹೇಳಿದ್ವಿಿ ಅಂತ ಅಂದುಕೊಳ್ಳಿಿ, ‘ಈ ಜೀವನಾನೇ ಬೇಡಪ್ಪಾಾ ನಂಗೆ!’ ಎನ್ನುವಂತಾಗುತ್ತದೆ. ಅದೇ ಸ್ವಲ್ಪ ಹಾಸ್ಯಮಯವಾಗಿಯೋ, ಪ್ರಯೋಗಾತ್ಮಕವಾಗಿಯೋ ನಾವು ಹೇಳಿದರೆ, ಕೇಳುವವರಿಗೂ ಆಸಕ್ತಿಿ ಬರುತ್ತದೆ. ಇವತ್ತು ಅಂಥದ್ದೇ ಒಂದು ಸಣ್ಣ ಪ್ರಯತ್ನ ಮಾಡೋಣ. ಮೊದಲಿಗೆ ಒಂದು ಪ್ಲಾಾಸ್ಟಿಿಕ್ ಲೋಟ, ಗಾಜಿನ ಲೋಟ, ಸ್ಟೀಲ್ ಲೋಟ, ಬೆಳ್ಳಿ ಲೋಟ ಮತ್ತು ಬಂಗಾರದ ಲೋಟ ತೆಗೆದುಕೊಳ್ಳಿ. ಎಲ್ಲವನ್ನೂ ನಿಮ್ಮ ಮುಂದಿಟ್ಟುಕೊಳ್ಳಿ.

ಈ ಎಲ್ಲ ಲೋಟಗಳೂ ಒಂದೇ ರೀತಿಯದ್ದಾಾಗಿ ಕಾಣಿಸುತ್ತಿಿವೆಯೇ? ಇಲ್ಲ ಅಲ್ಲವಾ? ಈಗ ಎಳನೀರು ತೆಗೆದುಕೊಳ್ಳಿಿ, ಪ್ಲಾಾಸ್ಟಿಿಕ್ ಲೋಟದಲ್ಲಿ ಸ್ವಲ್ಪ ಹಾಕಿ ಕುಡಿಯಿರಿ.. ಎಂಥ ರುಚಿ ಇರುತ್ತೆೆ ಅಲ್ಲವಾ? ಈಗ ಮತ್ತೆೆ ಸ್ವಲ್ಪ ಎಳನೀರನ್ನು ಗಾಜಿನ ಲೋಟದಲ್ಲಿ ಹಾಕಿ.. ರುಚಿ ಇದೆ ಅಲ್ಲವಾ? ಮತ್ತದೇ ಎಳನೀರನ್ನು ಸ್ಟೀಲ್ ಲೋಟದಲ್ಲಿ ಹಾಕಿ ಕುಡಿಯಿರಿ. ಇದೂ ಮೊದಲು ಕುಡಿದಷ್ಟೇ ರುಚಿ ಇದೆ ಎಲ್ಲವಾ? ಈಗ ಬೆಳ್ಳಿಿ ಲೋಟದ ಸರದಿ. ಮತ್ತದೇ ಟೇಸ್ಟು. ಒಳ್ಳೆೆಯ ಟೇಸ್ಟು. ಈಗ ಬಂಗಾರದ ಲೋಟದಲ್ಲಿ ಕುಡಿಯೋಣ. ಏನೆನ್ನಿಿಸಿತು? ಖುಷಿ ಆಯ್ತಾಾ? ರುಚಿ ಹೇಗಿತ್ತು? ಚೆನ್ನಾಾಗಿತ್ತಾ?

ಈಗ ಹೇಳಿ, ಪ್ಲಾಸ್ಟಿಕ್ ಲೋಟದಲ್ಲಿ ಎಳನೀರು ಕುಡಿದಾಗ ಹೆಚ್ಚು ರುಚಿಯಿತ್ತೋೋ? ಸ್ಟೀಲ್ ಲೋಟದಲ್ಲಿ ಕುಡಿದಾಗ ಹೆಚ್ಚು ರುಚಿಯಿತ್ತೋೋ? ಅಥವಾ ಬೆಳ್ಳಿಿ, ಗಾಜು ಮತ್ತು ಬಂಗಾರದ ಲೋಟದಲ್ಲಿ ಹೆಚ್ಚು ರುಚಿಯಿತ್ತೋೋ? ಅರೇ, ಏನಿದು ಈ ರೀತಿಯ ಪ್ರಶ್ನೆೆ ‘ಬಂಗಾರ ಇರಲಿ, ಪ್ಲಾಾಟಿನಂ, ವಜ್ರದ ಲೋಟದಲ್ಲಿ ಹಾಕಿದರೂ ಎಳನೀರು, ಎಳನೀರಾಗೇ ಇರುತ್ತದೆ ಅಲ್ಲವಾ? ಹೇಗೆ ಅದರ ರುಚಿ ಬದಲಾಗುತ್ತದೆ?’ ಎಂಬ ಪ್ರಶ್ನೆೆ ಮೂಡುತ್ತದೆ ಅಲ್ಲವೇ?

ಅದೇ ಜೀವನ. ನಾವು ಯಾವಾಗಲೂ ಕೊರಗುತ್ತಾಾ ಕುಳಿತಿರುತ್ತೇವೆ.. ಅಯ್ಯೋ ನನ್ನ ಜೀವನವೇ ಸರಿ ಇಲ್ಲ, ನಾನು ನತದೃಷ್ಟ ಎಂದೆಲ್ಲ ಚಿಂತಿಸುತ್ತಿಿರುತ್ತೇವೆ. ಹೀಗೆ ಚಿಂತೆ ಮಾಡುತ್ತಾಾ ಮಾಡುತ್ತಾಾ ಮುಂದಿನ ಜೀವನವನ್ನೂ ಹಾಳು ಮಾಡಿಕೊಳ್ಳುತ್ತೇವೆ. ಆದರೆ ಜೀವನ ಎಳನೀರು ಮತ್ತು ಲೋಟದ ಹಾಗೆ ಎಂದು ಯಾರೂ ಅರ್ಥವೇ ಮಾಡಿಕೊಳ್ಳುವುದಿಲ್ಲ. ನಾವು ತಿನ್ನುವ ಅನ್ನ, ಚಪಾತಿ ಎಲ್ಲವೂ ಒಂದೇ ರುಚಿಯಿರುತ್ತದೆ. ಆದರೆ ಪ್ಲಾಾಸ್ಟಿಿಕ್ ತಟ್ಟೆೆಯಲ್ಲಿ ಊಟ ಮಾಡುವವನ ಭಾವನೆ ಹೇಗಿರುತ್ತದೆ ಎಂದರೆ ‘ಬಹುಶಃ ಬೆಳ್ಳಿಿ ಮತ್ತು ಬಂಗಾರದ ಬಟ್ಟಲಲ್ಲಿ ಊಟ ಮಾಡುವವರ ಅನ್ನ ಒಳ್ಳೇ ರುಚಿ ಇರಬಹುದು’ ಎಂದೆಲ್ಲ ಯೋಚಿಸುತ್ತಾಾರೆ. ಆದರೆ ರುಚಿ ಎಲ್ಲವೂ ಒಂದೇ ಆಗಿರುವಾಗ ಅನ್ನ, ಚಪಾತಿಯನ್ನು ಯಾವ ತಟ್ಟೆೆಯಲ್ಲಿ ತಿಂದರೇನು? ಎಲ್ಲವೂ ಒಂದೇ ರೀತಿಯ ರುಚಿ ಕೊಡುತ್ತದೆ. ಇನ್ನು ಬೆಳ್ಳಿಿ, ಚಿನ್ನ, ಗಾಜು, ಪ್ಲಾಾಸ್ಟಿಿಕ್ ಎನ್ನುವುದು ಪದಾರ್ಥವನ್ನು ಶೇಖರಿಸಿಡುವ ವಸ್ತು ಅಷ್ಟೇ. ಜೀವನದಲ್ಲಿ ಇರಬೇಕಾದ್ದು ರುಚಿಯೋ ಅಥವಾ ಚಿನ್ನದ ಲೋಟ ತಟ್ಟೆೆಯೋ? ಜನರಿಗೆ ಈ ಸೂಕ್ಷ್ಮ ಅರ್ಥವಾಗುವಷ್ಟರ ಹೊತ್ತಿಿಗೆ ಹೋಗುವ ಟೈಮ್ ಬಂದಿರುತ್ತೆೆ.

ಹಣ ಮಾಡುವುದೇ ಜೀವನದ ಉದ್ದೇಶವಾಗಬಾರದು. ಹಣ ಮಾಡಿದರೆ ನಿಮಗೆ ಚಿನ್ನದ ಲೋಟವೇ ಸಿಗಬಹುದು, ಅನುಮಾನವೇ ಬೇಡ. ಆದರೆ ಖಂಡಿತವಾಗಿಯೂ ರುಚಿ ಸಿಗುವುದಿಲ್ಲ. ನಮ್ಮ ದೇಶ ಹೇಗಿದೆಯೆಂದರೆ ಇಲ್ಲಿ ಯಾವುದಕ್ಕೂ ಏನೂ ಕಡಿಮೆಯಿಲ್ಲ. ನೀವು ಓದುತ್ತೀರಿ ಎಂದರೆ ಇಲ್ಲಿ ಭಂಡಾರವೇ ಇದೆ. ಕೆಲಸ ಮಾಡುತ್ತೀರಿ ಎಂದರೆ ಒಳ್ಳೊೊಳ್ಳೆೆ ಕಂಪನಿಗಳಿವೆ, ಸನ್ಯಾಾಸಿಯಾದರೆ ಮಠಗಳಿವೆ, ಉದ್ದಿಮೆ ಶುರು ಮಾಡುವುದಾದರೆ ಸಾಕಷ್ಟು ಅವಕಾಶಗಳಿವೆ. ಯಾವುದೂ ಬೇಡ, ಇಲ್ಲಿ ಭಿಕ್ಷೆೆ ಬೇಡಿದರೂ ಶ್ರೀಮಂತನಾಗಬಹುದು. ಆದರೆ ಭಿಕ್ಷೆೆ ಬೇಡುವುದರಲ್ಲೂ ಪ್ಲಾಾನ್ ಮಾಡಬೇಕಾಗುತ್ತೆೆ ಅಷ್ಟೇ. ಒಂದೂರಲ್ಲಿ ಚರ್ಚ್ ಎದುರಿಗೆ ಇಬ್ಬರು ಭಿಕ್ಷುಕರು ಕುಳಿತಿದ್ದರಂತೆ. ಒಬ್ಬ ಕ್ರಾಾಸ್(ಕ್ರಿಿಸ್ತನ ಶಿಲುಬೆ ಹೋಲುವ ಸಣ್ಣ ಆಕೃತಿ) ಹಿಡಿದು ಕುಳಿತಿದ್ದ. ಮತ್ತೊೊಬ್ಬ ಮತ್ತೊೊಂದು ಧರ್ಮದ ಚಿಹ್ನೆೆಯನ್ನು ಹಿಡಿದು ಕುಳಿತದ್ದ.

ಚರ್ಚ್‌ನಿಂದ ಹೊರ ಬರುವ ಎಲ್ಲರೂ ಕ್ರಾಾಸ್ ಹಿಡಿದು ಬೇಡುತ್ತಿಿರುವ ವ್ಯಕ್ತಿಿಗೇ ಭಿಕ್ಷೆೆ ಹಾಕುತ್ತಿಿದ್ದರು. ಇನ್ನೊೊಬ್ಬ ವ್ಯಕ್ತಿಿಯ ತಟ್ಟೆೆಗೆ ಒಂದು ನಯಾ ಪೈಸಾ ಕಾಸೂ ಬಿದ್ದಿಲ್ಲ. ಇದು ಸಹಜ ಕೂಡ. ಜನರು ಆ ಧರ್ಮದ ಭಿಕ್ಷುಕನಿಗೆ ಹಾಕದೇ ಇನ್ಯಾಾರಿಗೆ ಹಾಕಲು ಸಾಧ್ಯ? ಇದನ್ನು ಗಮನಿಸಿ ನೋಡುತ್ತಿಿದ್ದ ಒಬ್ಬ ವ್ಯಕ್ತಿಿ ಬಂದು, ಆ ಅನ್ಯಧರ್ಮೀಯನ ಬಳಿ ಹೋಗಿ, ‘ಅಲ್ಲಯ್ಯಾಾ, ನಿಂದೊಳ್ಳೆೆ ಕತೆ ಆಯ್ತಲ್ಲ? ಇದು ಚರ್ಚ್. ಇಲ್ಲಿನ ಜನ ಕ್ರಿಿಶ್ಚಿಿಯನ್ನರಿಗೆ ಮಾತ್ರವೇ ಭಿಕ್ಷೆೆ ಹಾಕುತ್ತಾಾರೆ. ನೀನಿನ್ನೂ ಇಲ್ಲೇ ಕುಳಿತಿದ್ದರೆ, ನಿನ್ನ ಕತೆ ಅಷ್ಟೇ. ನಿನ್ನ ಮೇಲಿರುವ ಸೇಡಿಗೆ ಇನ್ನೊೊಬ್ಬನಿಗೆ ಇನ್ನೂ ಹೆಚ್ಚು ಭಿಕ್ಷೆೆ ಹಾಕುತ್ತಾಾರೆ. ನೋಡು, ಅವನಲ್ಲಾಾಗಲೇ ಹಣ ತುಂಬಿ ತುಳುಕುತ್ತಿಿದೆ.

ಇನ್ನಾಾದರೂ ಬೇರೆ ಕಡೆ ಹೋಗು’ ಎಂದ. ಇದನ್ನು ನೋಡಿ ಆ ಭಿಕ್ಷುಕ ನಗುತ್ತಾಾ ಮತ್ತೊೊಬ್ಬ ಭಿಕ್ಷುಕನ ಬಳಿ ಹೇಳಿದ ‘ಹ್ಹಹ್ಹಹ್ಹಾಾ, ಇವನ್ಯಾಾರೋ ಮಗಾ ನಮಗೇ ಬಿಜಿನೆಸ್ ಹೇಳಿಕೊಡುತ್ತಾಾನೆ? ಬಾರೋ, ಇಲ್ಲಿ ದುಡ್ಡು ತುಂಬಾಯ್ತಲ್ಲ, ನನ್ನ ಏರಿಯಾಕ್ಕೆೆ ಹೋಗಣಾ ಬಾ..’ ಎನ್ನುತ್ತಾಾ ಹೊರಟು ಬಿಟ್ಟರು. ಆ ಪಾಪದ ದಾರಿಹೋಕ ಕಮ್ ಮಾರ್ಗದರ್ಶಕ ಪೆಚ್ಚಾಾಗಿದ್ದ.
ಇನ್ನೊೊಂದು ಘಟನೆ ನೆನಪಾಯಿತು, ಇದರ ಜತೆಗೇ ಸೇರಿಸಿಬಿಡುತ್ತೇನೆ ಕೇಳಿ, ಒಮ್ಮೆೆ ಜಪಾನಿಯೊಬ್ಬ ಭಾರತಕ್ಕೆೆ ಬಂದಿದ್ದ, ಇಲ್ಲೆೆಲ್ಲ ಸುತ್ತಾಾಡಿ, ವಾಪಸ್ ವಿಮಾನ ನಿಲ್ದಾಾಣಕ್ಕೆೆ ಹೊರಟ. ಅವನು ಇರುವ ಹೋಟೆಲಿಗೇ ಬಂದ ಕಾರೊಳಗೆ ಕುಳಿತ. ವಿಮಾನ ನಿಲ್ದಾಾಣದತ್ತ ಕಾರು ಹೋಗುತ್ತಿಿತ್ತು.

ಪಕ್ಕದಲ್ಲೇ ಇನ್ನೊೊಂದು ಕಾರು, ಬಹಳ ಫಾಸ್‌ಟ್‌ ಆಗಿ ಹೋಯ್ತು. ಅದನ್ನು ನೋಡಿದವನೇ ಡ್ರೈವರ್‌ಗೆ ಹೇಳಿದ ‘ಹೇ ನೋಡು ನೋಡು, ಅದು ಮಿಟ್ಸುಬಿಷಿ ಕಾರು. ಜಪಾನಿ ಕಾರು.. ಬಹಳ ಫಾಸ್‌ಟ್‌.. ಹೆಂಗೆ? ನಿನ್ನ ಭಾರತದ ಕಾರೂ ಇದೆ… ನೋಡು ಎಷ್ಟು ನಿಧಾನ!’ ಡ್ರೈವರ್ ಸುಮ್ಮನಿದ್ದ. ಮತ್ತೊೊಂದು ಕಾರು ಜೋರಾಗಿ ಹೋಯ್ತು, ನೋಡುತ್ತಲೇ ಜಪಾನಿ ಪ್ರಜೆ ಹೇಳಿದ ‘ಹೇ ನೋಡು, ಅದು ಸುಜುಕಿ, ಜಪಾನಿ ಕಾರಮ್ಮಾಾ.. ಬಹಳ ಫಾಸ್‌ಟ್‌.. ಹೆಂಗೆ? ನಿನ್ನ ಭಾರತದ ಕಾರೂ ಇದೆ… ಆಮೆ ಥರ ಹೋಗ್ತಾಾ ಇದ್ದೀಯ’ ಡ್ರೈವರ್ ಸುಮ್ಮನಿದ್ದ. ಇನ್ನೊೊಂದು ಕಾರು ಹೋಯ್ತು. ‘ನೋಡು, ನೋಡು ಟೊಯೊಟಾ, ಜಪಾನಿ ಕಾರು. ಹೆಂಗ್ ಹೋಯ್ತು ಜುಂಯ್.. ಅಂತ. ನಿನ್ನ ಭಾರತದ ಕಾರೂ ಇದೆ’ ಡ್ರೈವರ್ ಸುಮ್ಮನಿದ್ದ.

ವಿಮಾನ ನಿಲ್ದಾಾಣ ಬಂತು. ಲಗೇಜ್ ಎಲ್ಲ ಇಳಿಸಿ, ಡ್ರೈವರ್ ಹೇಳಿದ ‘ಐದು ಸಾವಿರ ರುಪಾಯಿ ಮೀಟರ್ ಆಗಿದೆ. ಕೊಡಿ’. ಜಪಾನಿ ಪ್ರಜೆಗೆ ಅಚ್ಚರಿ ಆಯ್ತು ‘ಹೇ ನಾನು ಬಹಳ ದೂರದಿಂದೇನೂ ಹತ್ತಿಿಲ್ಲ, ಸ್ವಲ್ಪ ದೂರಕ್ಕೇ ಇಷ್ಟೊೊಂದು ಹಣವಾ? ಹೇಗೆ ಇದು?’ ಎಂದಾಗ ಭಾರತೀಯ ಹೇಳಿದ ‘ಸಾರ್ ಇದು ಭಾರತದ ಮೀಟರ್ರು, ಬಹಳ ಫಾಸ್‌ಟ್‌…’ ಎಂದುಬಿಟ್ಟ! ನೋಡಿ ಇಲ್ಲಿ ಹಣ ಯಾರು ಬೇಕಾದರೂ ಮಾಡಬಹುದು. ಚಿನ್ನದ ಲೋಟ ಭಿಕ್ಷುಕನ ಮನೆಯಲ್ಲೂ ಇರುತ್ತೆೆ, ಆ ಟ್ಯಾಾಕ್ಸಿಿ ಡ್ರೈವರ್ ಮನೆಯಲ್ಲೂ ಇರುತ್ತೆೆ. ಆದರೆ ರುಚಿ ಮುಖ್ಯವಲ್ಲವೇ?

ಜೀವನದಲ್ಲಿ ಜನರು ತೋರುವ ಪ್ರೀತಿ ಕಾಳಜಿಗೆ ಬೆಲೆ ಕೊಡಬೇಕೆ ಹೊರತು, ಹೇಗೆ ಆ ಪ್ರೀತಿಗೆ ಪಾಲಿಷ್ ಮಾಡಿ ನಮ್ಮ ಮುಂದೆ ತಂದಿಡುತ್ತಾಾರೆ ಎಂದು ನೋಡುವುದಲ್ಲ. ಇದಕ್ಕೆೆ ದೊಡ್ಡ ಉದಾಹರಣೆಯೇ ಹೆಂಡತಿಯರು. ಹೇಗೆ ಎಂದು ಹೇಳಲಾ? ಒಮ್ಮೆೆ ಗಂಡ ಹೆಂಡತಿಗೆ ದೊಡ್ಡ ಜಗಳ ಆಯ್ತು. ಮಾರಾಮಾರಿ… ಗಂಡಂಗೂ ಕೋಪ ಬಂತು ‘ಏಯ್ ನೋಡು, ನೋಡು… ಮತ್ತೆೆ ಹೇಳ್ತಾಾ ಇದೀನಿ… ನನ್ನ ತಲೆ ಕೆಡ್ತಾಾ ಇದೆ, ನನ್ನಲ್ಲಿರುವ ಮೃಗವನ್ನ ಹೊರಗೆ ತರ್ಬೇಡ’ ಎಂದ. ಆಗ ಹೆಂಡತಿ, ‘ಯಾವ್ ಮೃಗ ಬರುತ್ತೋೋ ನೋಡಿಯೇ ಬಿಡೋಣ. ಅಷ್ಟಕ್ಕೂ ಇಲಿಗೆಲ್ಲ ಯಾವಳ್ ಹೆದರುತ್ತಾಾಳೆ?’ ಎಂದಳು! ಹೆಂಡತಿ ಇಲ್ಲಿ ಜಗಳ ಮಾಡುತ್ತಿಿದ್ದಾಾಳೋ, ಕಿಂಡಲ್ ಮಾಡುತ್ತಿಿದ್ದಾಾಳೋ, ಕಾಮಿಡಿ ಮಾಡುತ್ತಿಿದ್ದಾಾಳೋ ಏನೂ ಗೊತ್ತಾಾಗುತ್ತಿಿಲ್ಲ.

ಕೊನೆಗೆ ಒಂದೈದು ನಿಮಿಷಕ್ಕೆೆ ಇಬ್ಬರೂ ಮತ್ತೆೆ ರಾಜಿಯಾಗಿ ನಗುನಗುತ್ತಿಿರುವಾಗ ಈ ಇಲಿ ಪ್ರಸಂಗ ಹೇಳಿಕೊಂಡು ನಗುತ್ತಿಿದ್ದರು. ಜೀವನದ ಸಂತೋಷ ಅಲ್ಲವೇ ಅದು? ಹೆಂಡತಿ ಪ್ರೀತಿ ಮಾಡುತ್ತಿಿರುತ್ತಾಾಳೆ, ಆದರೆ ಮಧ್ಯ ಮಧ್ಯ ಸುಮ್ಮನೆ ರೇಗುತ್ತಾಾಳೆ. ಈಗ ಹೇಳಿ, ಇಂಥ ಹೆಂಡತಿ ಇದ್ದರೆ ಒಳ್ಳೆೆಯದೋ ಅಥವಾ ಯಾವಾಗಲೂ ಚಿನ್ನದ ಆಭರಣಗಳನ್ನು ಧರಿಸಿ, ಮೇಕಪ್ ಮಾಡಿಕೊಂಡು ಕನ್ನಡಿ ಮುಂದೆಯೇ ಇರುವ ಹೆಂಡತಿ ಬೇಕೋ? ನನಗೆ ಒಂದು ನಂಬಿಕೆಯಿದೆ, ಎಲ್ಲರೂ ಆಯ್ಕೆೆ ಮಾಡಿಕೊಳ್ಳುವುದು ಆಗಾಗ ಜಗಳ ಮಾಡುವ ಹೆಂಡತಿಯನ್ನೇ.

ನಿಮ್ಮ ಜೀವನದಲ್ಲಿ ಎಲ್ಲವೂ ಪರ್ಫೆಕ್‌ಟ್‌ ಆಗಿರುವುದಿಲ್ಲ. ಆದರೆ ಇರುವುದರಲ್ಲೇ ಪರ್ಫೆಕ್‌ಟ್‌ ಆಗಿ ಬದುಕಲು ಕಲಿತರೆ ಖಂಡಿತ ನಾವು ಕೊನೆಯವರೆಗೂ ಸಂತೋಷವಾಗಿರಬಹುದು. ನೀವು ಒಬ್ಬ ಖುಷಿಯಾಗಿರುವ ವ್ಯಕ್ತಿಿಯ ಬಳಿ ಹೋಗಿ, ‘ನಿನಗೆ ಇವತ್ತೇ ಸಾವು ಬಂದರೆ ಏನು ಮಾಡುತ್ತೀಯ?’ ಎಂದು ಕೇಳಿ, ‘ಹ್ಹಹ್ಹಹ್ಹಾಾ ನಾನು ಇಷ್ಟು ದಿನ ಖುಷಿಯಾಗಿದ್ದೆೆ, ಆಗಲೂ ಖುಷಿಯಾಗೇ ಹೋಗುತ್ತೇನೆ’ ಎನ್ನುತ್ತಾಾನೆ. ಅದೇ ಈ ಬೆಳ್ಳಿಿ, ಚಿನ್ನ ಲೋಟದಲ್ಲಿ ಊಟ ಮಾಡಬೇಕು ಎನ್ನುವವನ ಬಳಿ ಹೋಗಿ ಇದೇ ಪ್ರಶ್ನೆೆ ಕೇಳಿ, ‘ಅಯ್ಯಯ್ಯೋ ಸಾವಾ? ಇರಪ್ಪಾಾ, ಮೊದಲು ನನ್ನ ಆಸ್ತಿಿಯಲ್ಲ ಹಂಚಿ, ಬಿಜಿನೆಸ್ ಅನ್ನು ಮಕ್ಕಳಿಗೆ ಕೊಟ್ಟು ಬರುತ್ತೇನೆ’ ಎನ್ನುತ್ತಾಾನೆ.

ಹಾಗಾದರೆ, ಖುಷಿಯಾಗಿರುವವನಿಗೆ ಕಷ್ಟವೇ ಬರುವುದಿಲ್ಲವಾ? ಬರುತ್ತದೆ. ಆದರೆ ಅದರಿಂದ ಹೊರ ಬರುವುದು ಹೇಗೆ ಎಂದು ಅವನು ತಿಳಿದುಕೊಂಡಿರುತ್ತಾಾನೆ. ಅದಕ್ಕೇ ಅವನು ಖುಷಿಯಾಗಿರುತ್ತಾಾನೆ. ನೀವು ವೆಬ್‌ಸೈಟ್ ಬ್ರೌೌಸ್ ಮಾಡುತ್ತಿಿರುತ್ತೀರಿ ಅಲ್ಲವೇ? ಅದರಲ್ಲಿ ಹಲವಾರು ಪೇಜ್‌ಗಳನ್ನು ಓಪನ್ ಮಾಡಿಕೊಂಡಿರುತ್ತೀರಿ. ಆಗ ಮಧ್ಯದಲ್ಲಿ ಏನಾದರೂ ಸ್ಟ್ರಕ್ ಆಗಿ ನಿಂತರೆ ಏನು ಮಾಡುತ್ತೀರಿ? ರಿಫ್ರೆೆಶ್ ಬಟನ್ ಒತ್ತುತ್ತೀರಿ ಅಲ್ಲವೇ? ಆಗ ಮತ್ತೊೊಮ್ಮೆೆ ಎಲ್ಲವೂ ರೀಲೋಡ್ ಆಗಿ, ಮೊದಲಿಗಿಂತಲೂ ಚೆನ್ನಾಾಗಿ ಕೆಲಸ ಮಾಡುವಂತಾಗುವುದಿಲ್ಲವೇ? ಹಾಗೆಯೇ, ನಮ್ಮ ಜೀವನದಲ್ಲಿ ಹಲವಾರು ಪುಟಗಳು ತೆರೆದು ಕಾರ್ಯ ನಿರ್ವಹಿಸುವಾಗ ಒಮ್ಮೊೊಮ್ಮೆೆ ಸ್ಟ್ರಕ್ ಆಗಿಬಿಡುತ್ತದೆ. ಆಗ ನಮ್ಮ ಮುಂದಿನ ಜೀವನದಲ್ಲಿ ನಮಗಾಗಿ ಕಾದಿರುವ ಒಳ್ಳೊೊಳ್ಳೆೆ ಅನುಭವಕ್ಕಾಾಗಿ ನಮ್ಮ ಮನಸ್ಸನ್ನು ರಿಫ್ರೆೆಶ್ ಮಾಡಿಕೊಳ್ಳಲೇ ಬೇಕು. ಆಗ ನಮ್ಮ ಜೀವನದ ಪುಟಗಳೂ ರೀಲೋಡ್ ಆಗಿ, ಜೀವನ ಸುಖಮಯವಾಗಿರುತ್ತದೆ. ಆದರೆ ಅದನ್ನು ಬಿಟ್ಟು ಮತ್ತೆೆ ಬ್ರ್ಯಾಾಂಡ್ ಹಿಂದೆ ಹೋಗಿ ರಿಫ್ರೆೆಶ್ ಮಾಡುವುದನ್ನೇ ಮರೆತರೆ, ಜೀವನ ಕಷ್ಟ. ಇದು ಉತ್ತಮ ಜೀವನದ ಮೊದಲ ಸೂತ್ರ.

Leave a Reply

Your email address will not be published. Required fields are marked *