Tuesday, 29th September 2020

ನಾವು ಎಲ್ಲೂ ಹೋಗಿಲ್ಲ, ತಲೆಮರೆಸಿಕೊಂಡಿಲ್ಲ: ದಿಗಂತ್, ಐಂದ್ರಿತಾ ರೇ

ಬೆಂಗಳೂರು: ನಾವು ಎಲ್ಲೂ ಹೋಗಿಲ್ಲ, ತಲೆಮರೆಸಿಕೊಂಡಿಲ್ಲ. ನಾಳೆ ಸಿಸಿಬಿ ನೋಟಿಸಿಗೆ ಉತ್ತರ ಕೊಡುತ್ತೇವೆ ಎಂದು ಸ್ಟಾರ್ ದಂಪತಿಗಳಾದ ದಿಗಂತ್ ಹಾಗೂ ಐಂದ್ರಿತಾ ರೇ ಮಾಧ್ಯಮಕ್ಕೆ ತಿಳಿಸಿದ್ದಾರೆ.

ದಂಪತಿ ಕೇರಳ ಪ್ರವಾಸಕ್ಕೆ ಹೋಗಿದ್ವಿ. ಬೆಂಗಳೂರಿಗೆ ಮರಳುತ್ತಿದ್ದೇವೆ. ಇಬ್ಬರಿಗೂ ಪ್ರತ್ಯೇಕವಾಗಿ ವಾಟ್ಸಪ್‍ ಮೂಲಕ ನೋಟಿಸ್ ಕಳಿಸಲಾಗಿದೆ. ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ವರದಿ ತಿಳಿಸಿವೆ.

ಇತ್ತ ದಿಗಂತ್ ತಾಯಿ ನೋಟಿಸ್ ಕುರಿತು, ನೋಟಿಸ್ ಬಗ್ಗೆ ನನಗೆ ಮಾಹಿತಿ ಇಲ್ಲ. ಕಳೆದ ಬಾರಿಯೂ ಹೀಗೆ ಆಗಿತ್ತು. ಮಗ, ಸೊಸೆ ಇಬ್ಬರೂ ಕೇರಳಕ್ಕೆ ಹೋಗಿದ್ದಾರೆ. ಡ್ರಗ್ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದಷ್ಟೇ ಪ್ರತಿಕ್ರಿಯಿಸಿದ್ದಾರೆ.

Leave a Reply

Your email address will not be published. Required fields are marked *