Tuesday, 7th July 2020

ರತ್ನಗಿರಿ: ಅಣೆಕಟ್ಟು ಕುಸಿದು 11 ಮಂದಿ ಸಾವು, 21 ಮಂದಿ ಕಾಣೆ

ರತ್ನಗಿರಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ಇಲ್ಲಿನ ತಿವಾರೆ ಅಣೆಕಟ್ಟು ಕುಸಿದು ಐವರು ವೃದ್ಧರು ಮತ್ತು ಇಬ್ಬರು ಹದಿಹರೆಯದವರು ಸೇರಿದಂತೆ 11 ಜನ ಮೃತಪಟ್ಟಿದ್ದು, ಬುಧವಾರ ಮೃತರ ಶವಗಳನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗಿದೆ ಎಂದು ಸ್ಥಳೀಯ ಆಡಳಿತ ಹೇಳಿದೆ.

ಮಂಗಳವಾರ ತಡರಾತ್ರಿ ದುರ್ಘಟನೆ ಸಂಭವಿಸಿದ್ದು, ಬಾರೀ ಮಳೆಯಿಂದಾಗಿ ಚಿಪ್ಲುನ್ ತಹಸಿಲ್ ತಿವಾರೆ ಅಣೆಕಟ್ಟು ಗೋಡೆ ಕುಸಿದಿದೆ.

ಬಲಿಯಾದವರೆಲ್ಲರೂ ಅಣೆಕಟ್ಟು ಗೋಡೆಯ ಪಕ್ಕದಲ್ಲಿದ್ದ ಭೇಂದೇವಾಡಿ ಕುಗ್ರಾಮದವರು ಎಂದು ವಿಪತ್ತು ನಿರ್ವಹಣಾ ಅಧಿಕಾರಿ ಅಜಯ್ ಸೂರ್ಯವಂಶಿ ತಿಳಿಸಿದ್ದಾರೆ. ದಾದರ್, ಅಕ್ಲೆ, ರಿಕ್ಟೋಲಿ, ಓವಲಿ, ಕಲ್ಕಾವ್ನೆ ಮತ್ತು ನಂದಿವಾಸಿಗಳ ಕೆಳಭಾಗದ ಹಳ್ಳಿಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ಕೆಲವು ದಿನಗಳಿಂದ ಸುರಿಯಿತ್ತಿರುವ ಬಾರೀ ಮಳೆಯಿಂದಾಗಿ ಅಣೆಕಟ್ಟು ಕುಸಿದಿದೆ ಎಂದು ಜಿಲ್ಲಾಧಿಕಾರಿ ದತ್ತ ಭಡಕವಾಡ್ ತಿಳಿಸಿದ್ದಾರೆ. ಮಂಗಳವಾರ ಮಳೆಯಿಂದಾಗಿ ರಾಜ್ಯದಲ್ಲಿ ಕನಿಷ್ಠ 45 ಜನ ಮೃತಪಟ್ಟ ವರದಿಯಾಗಿದೆ.

Leave a Reply

Your email address will not be published. Required fields are marked *