Friday, 7th August 2020

ಸಾಂಸ್ಕೃತಿಕ ನಗರಿಗೆ ರಾಷ್ಟ್ರಪತಿ ಆಗಮನ, ರಾಜ್ಯಪಾಲರಿಂದ ಸ್ವಾಗತ

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೈಸೂರಿಗೆ ಆಗಮಿಸಿದ್ದಾರೆ. 2 ದಿನಗಳ ಭೇಟಿಗಾಗಿ ಬಂದಿರುವ ಅವರನ್ನು ಮಂಡಕನಹಳ್ಳಿ ವಿಮಾನ ನಿಲ್ದಾಣದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಸ್ವಾಾಗತಿಸಿದರು.

ಮೈಸೂರು: ರಾಷ್ಟ್ರಪತಿ ರಾಮನಾಥ್ ಕೋವಿಂದ್ 2 ದಿನಗಳ ಭೇಟಿಗಾಗಿ ಮೊದಲ ಬಾರಿಗೆ ಸಾಂಸ್ಕೃತಿಕ ನಗರಿಗೆ ಆಗಮಿಸಿದ್ದಾರೆ. ತಮ್ಮ ಪತ್ನಿಿಯೊಂದಿಗೆ ಆಗಮಿಸಿದ ಕೋವಿಂದ್, ಮಂಡಕನಹಳ್ಳಿಿ ವಿಮಾನ ನಿಲ್ದಾಾಣಕ್ಕೆೆ ಬಂದಿಳಿದರು. ವಿಮಾನ ನಿಲ್ದಾಾಣದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ, ಉಸ್ತುವಾರಿ ಸಚಿವ ವಿ.ಸೋಮಣ್ಣ, ಮೈಸೂರು ಮೇಯರ್ ಪುಷ್ಪಲತಾ ಜಗನ್ನಾಾಥ್ ಸೇರಿದಂತೆ ಅಧಿಕಾರಿಗಳು ಸ್ವಾಾಗತಿಸಿದರು.

ವಿಶ್ವವಿಖ್ಯಾಾತ ಅರಮನೆಯಲ್ಲಿ ಆಯೋಜಿಸಿದ್ದ ಮೈಸೂರು ಮಹಾಸಂಸ್ಥಾಾನದ ಕೊನೆಯ ಮಹರಾಜ ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಾಟಿಸಿದರು. ಶುಕ್ರವಾರ ಚಾಮುಂಡಿ ಬೆಟ್ಟಕ್ಕೆೆ ಭೇಟಿ ನೀಡಿ ದೇವಿಯ ದರ್ಶನ ಪಡೆಯಲಿದ್ದಾರೆ. ಬಳಿಕ ನಂಜನಗೂಡು ಶ್ರೀಕಂಠೇಶ್ವರ ದೇವಾಲಯಕ್ಕೆೆ ತೆರಳಿ ದರ್ಶನ ಪಡೆಯಲಿದ್ದಾರೆ. ಸಂಜೆ ನಾಲ್ಕು ಗಂಟೆಗೆ ವರುಣದಲ್ಲಿ ನಡೆಯಲಿರುವ ಜೆಎಸ್‌ಎಸ್ ಉನ್ನತ ಶಿಕ್ಷಣ ಅಕಾಡೆಮಿಯ ನೂತನ ಕ್ಯಾಾಂಪಸ್‌ಗೆ ಶಿಲಾನ್ಯಾಾಸ ನೆರವೇರಿಸಲಿದ್ದಾರೆ.

Leave a Reply

Your email address will not be published. Required fields are marked *