Tuesday, 11th August 2020

ಡಿಕೆಶಿ ಪರ ಮರೆವಣಿಗೆ ಹೋದವರು ಸಮಾಜಕ್ಕೆ ನೀಡುವ ಸಂದೇಶ ಏನು?

ಒಕ್ಕಲಿಗರಿಗೆ ಈ ಘನಂಪಾಟಿ ಐಡಿಯಾವನ್ನು ಯಾರು ಕೊಟ್ಟರೋ ಗೊತ್ತಿಿಲ್ಲ, ಅಥವಾ ಸ್ವತಃ ಡಿಕೆ ಶಿವಕುಮಾರರೇ ಒಕ್ಕಲಿಗ ಸಮಾಜದ ಬೆಂಬಲ ತನಗಿದೆಯೆಂಬುದನ್ನು ಜಗತ್ತಿಿಗೆ ಸಾರಲು ಆ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿದರೋ ಗೊತ್ತಿಿಲ್ಲ. ಈ ಐಡಿಯಾವನ್ನು ಯಾರೇ ಕೊಟ್ಟಿಿರಲಿ, ಅದನ್ನು ಕೇಳಿದವರ ಬುದ್ಧಿಿಮತ್ತೆೆ ಹಾಗೂ ಬುದ್ಧಿಿಮಟ್ಟವನ್ನು ಮೆಚ್ಚಲೇಬೇಕು.

ಅಲ್ಲಾಾರೀ, ಒಬ್ಬ ಆರೋಪಿಯ ಪರವಾಗಿ, ಬೆಂಬಲವಾಗಿ ಪ್ರತಿಭಟನಾ ರ್ಯಾಾಲಿಯನ್ನು ಒಂದು ಸಮಾಜದವರು ಮಾಡ್ತಾಾರೇನ್ರಿಿ? ಅರೆಸ್‌ಟ್‌ ಆದ ವ್ಯಕ್ತಿಿ ಪರ ಪ್ರತಿಭಟನೆ ಮಾಡುವುದಾದರೆ, ಎಲ್ಲ ಸಮಾಜದವರೂ ತಮ್ಮ ತಮ್ಮ ಸಮಾಜದ ನಾಯಕ ಹೀನ ಕಾರ್ಯ ಮಾಡಿದಾಗ ಪ್ರತಿಭಟಿಸಬಹುದಲ್ಲ? ಹಾಗಾದರೆ ಕಾನೂನು, ಕೋರ್ಟುಗಳಾದರೂ ಯಾಕೆ ಬೇಕು? ಐಎಂಎ ಪ್ರಕರಣದಲ್ಲಿ ಸಾವಿರಾರು ಕೋಟಿ ರುಪಾಯಿ ಜನ ಸಾಮಾನ್ಯರ ಹಣ ತಿಂದ ಮನ್ಸೂರ್ ಖಾನ್ ಪರವಾಗಿ ಮುಸ್ಲಿಿಮರೆಲ್ಲ ಬೀದಿಗಿಳಿದು ಹೋರಾಟ ಮಾಡಿದರೆ, ಅವನ ಬಿಡುಗಡೆಗೆ ಆಗ್ರಹಿಸಿದರೆ ಏನು ಮಾಡುವುದು? ಹಾಗಾದರೆ ಉಮೇಶ ರೆಡ್ಡಿಿಯನ್ನು ಬಿಡುಗಡೆ ಮಾಡಿ ಎಂದು ರೆಡ್ಡಿಿ ಸಮಾಜದವರು ಪ್ರತಿಭಟಿಸಿದರೆ ಅದು ತಪ್ಪಾಾ? ಒಕ್ಕಲಿಗ ಸಮಾಜದ ಮುಖಂಡರು ಬುದ್ಧಿಿಯನ್ನು ಎಲ್ಲಿ ಇಟ್ಟುಕೊಂಡಿದ್ದಾಾರೆ? ಕೆಲವೇ ಕೆಲವು ಜನರ ಅವಿವೇಕದ ನಿರ್ಧಾರದಿಂದ ಇಡೀ ಸಮಾಜ ತಲೆತಗ್ಗಿಿಸುವಂತಾಗಿದೆ. ಇದು ನಿಜಕ್ಕೂ ದುರದೃಷ್ಟಕರ.

ಡಿಕೆಶಿ ಹಣ ತಿಂದಿದ್ದಾಾರೋ, ಇಲ್ಲವೋ, ದಿಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಸಿಕ್ಕ ಹಣ ಅವರದ್ದಾಾ ಅಥವಾ ಮೇಲಿನಿಂದ ಉದುರಿದ್ದಾಾ, ಡಿಕೆಶಿ ತಮ್ಮ ಎಲ್ಲಾಾ ಆಸ್ತಿಿ-ಪಾಸ್ತಿಿಗಳನ್ನು ನ್ಯಾಾಯಯುತವಾಗಿ ಗಳಿಸಿದ್ದಾಾರಾ ಅಥವಾ ಅಕ್ರಮವಾಗಿ ಬಾಚಿದ್ದಾಾರಾ, ಅವರ ಬಳಿ ಹೇಗೆ ಅಷ್ಟೊೊಂದು ಆಸ್ತಿಿ, ಹಣ ಬಂತು, ಅವರು ತೆರಿಗೆ ಕಟ್ಟಿಿಲ್ಲವಾ…ಈ ಎಲ್ಲಾಾ ಸಂಗತಿಗಳನ್ನು ತನಿಖೆ ಮಾಡಲು, ವಿಚಾರಣೆ ಮಾಡಲು ಇನ್‌ಕಂ ಟ್ಯಾಾಕ್‌ಸ್‌, ಜಾರಿ ನಿರ್ದೇಶನಾಲಯದ ಅಧಿಕಾರಿಗಳಿದ್ದಾಾರೆ, ಕಾನೂನಿದೆ, ಕೋರ್ಟ್ ಇದೆ, ನ್ಯಾಾಯದಾನ ಪ್ರಕ್ರಿಿಯೆಯಲ್ಲಿ ಸ್ಥಾಾಪಿತ ರೀತಿ-ರಿವಾಜುಗಳಿವೆ, ಸಂಪ್ರದಾಯಗಳಿವೆ, ಕಾನೂನು ಪಂಡಿತರಿದ್ದಾಾರೆ. ರಾಜಕೀಯ ದುರುದ್ದೇಶದಿಂದಲೇ ಅವರನ್ನು ಫಜೀತಿಗೆ ಸಿಲುಕಿಸಿದ್ದಾಾರೆ ಎಂದು ಒಂದು ಕ್ಷಣ ಅಂದುಕೊಂಡರೂ, ಅದನ್ನು ಪ್ರಶ್ನಿಿಸಲು ನ್ಯಾಾಯಾಲಯಗಳಿವೆ, ಅಲ್ಲದೇ ನ್ಯಾಾಯಾಲಯಕ್ಕಿಿಂತ ಉನ್ನತವಾದುದು ಯಾವುದೂ ಇಲ್ಲ. ಹೀಗಿರುವಾಗ ಡಿಕೆಶಿ ಅವರನ್ನು ಅರೆಸ್‌ಟ್‌ ಮಾಡಿದ ಮಾತ್ರಕ್ಕೆೆ ಅವರು ಅಪರಾಧಿ ಎಂದು ಸಾಬೀತು ಆಗಿರಲಿಲ್ಲ. ಆದರೆ ಅವರನ್ನು ಅರೆಸ್‌ಟ್‌ ಮಾಡಲೇಬಾರದು, ಹಾಗೆ ಮಾಡಿದ್ದು ತಪ್ಪುು ಎಂದರೆ ಹೇಗೆ? ಇದೇ ತಪ್ಪನ್ನು ಬೇರೆಯವರು ಮಾಡಿ, ಸಿಕ್ಕಿಿ ಹಾಕಿಕೊಂಡರೆ ಅವರನ್ನೂ ಬಿಟ್ಟುಬಿಡಬೇಕಾ? ನಮ್ಮ ಸಮಾಜದವರು ಏನೇ ಮಾಡಿದರೂ ಅವರನ್ನು ಬಂಧಿಸಬಾರದು ಎಂದರೆ ಏನರ್ಥ?

ಒಕ್ಕಲಿಗರು ಈ ಮಟ್ಟಕ್ಕೆೆ ಇಳಿಯಬಾರದಿತ್ತು. ಇದು ಅಸಂಖ್ಯ ಒಕ್ಕಲಿಗರ ಒಳಮನಸ್ಸಿಿನಲ್ಲಿ ಮೂಡಿರುವ ಪ್ರಶ್ನೆೆ. ನಾಳೆ ಲಿಂಗಾಯತರು, ಬ್ರಾಾಹ್ಮಣರು, ದಲಿತರು, ಹಿಂದುಳಿದವರು, ಕುರುಬರು, ಕ್ರಿಿಶ್ಚಿಿಯನ್‌ರು, ಮುಸ್ಲಿಿಮರು ತಮ್ಮ ತಮ್ಮ ಜಾತಿಯ ನಾಯಕರನ್ನು ಬಂಧಿಸಿದಾಗ, ಬೀದಿಗಿಳಿದು ಪ್ರತಿಭಟಿಸಲಾರಂಭಿಸಿದರೆ, ತಪ್ಪಿಿತಸ್ಥರ್ಯಾಾರನ್ನೂ ಬಂಧಿಸಬಾರದು ಎಂದು ಆಗ್ರಹಿಸಿದರೆ, ಈ ನೆಲದ ಕಾನೂನಿನ ಕಿಮ್ಮತ್ತು ಏನು ಉಳಿಯಿತು? ಹಾಗೆಂದು ನಮ್ಮ ಜಾತಿಯವನೆಂಬ ಕಾರಣಕ್ಕೆೆ ಆತ ಏನೇ ಮಾಡಿದರೂ ಸಹಿಸಿಕೊಳ್ಳಬೇಕು ಹಾಗೂ ಅವನ ಬೆಂಬಲಕ್ಕೆೆ ಇಡೀ ಅವನ ಜಾತಿಯ ಸಮಾಜ ನಿಲ್ಲಬೇಕು ಎನ್ನುವುದಾದರೆ ಆ ಸಮಾಜ ಯಾವ ಜಾತಿಯದ್ದೇ ಆಗಿರಲಿ, ಅದು ಅವನತಿಯ ಹಾದಿ ಹಿಡಿದಿದೆ ಎಂದೇ ಅರ್ಥ.

ಇದು ಯಾವ ಜಾತಿಗೂ ಭೂಷಣವಲ್ಲ. ಒಂದು ಜಾತಿಗೆ ಆ ಜಾತಿಯಲ್ಲಿರುವ ಎಲ್ಲರ ಬಗ್ಗೆೆ ಪ್ರೀತಿ, ವಿಶ್ವಾಾಸ, ಅಭಿಮಾನ ಇರಬೇಕು. ಆದರೆ ಆ ಜಾತಿಯಲ್ಲಿನ ಒಬ್ಬ ನಾಯಕ ತಪ್ಪುು ಮಾಡಿದ್ದಾಾನೆಂಬ ಆರೋಪ ಕೇಳಿ ಬಂದಾಗ, ಅವನನ್ನು ಬೆಂಬಲಿಸುವುದು ಅದು ಸ್ವಜಾತಿ ಪ್ರೇಮ ಅಲ್ಲ. ಅದು ಇಡೀ ಸಮಾಜದ ವಿಘಟನೆಗೆ ಪ್ರಚೋದನೆ ನೀಡಿದಂತೆ. ನೀನು ಪಾಪಕಾರ್ಯ ಮಾಡಿದರೆ, ನಿನ್ನ ಬೆಂಬಲಕ್ಕೆೆ ಇಡೀ ಸಮಾಜ ನಿಲ್ಲುತ್ತದೆ ಎಂಬ ಸಂದೇಶ ನೀಡಿದಂತಾಗಲಿಲ್ಲವೇ? ಇದರಿಂದ ಇಡೀ ಸಮಾಜಕ್ಕೆೆ ಕೆಟ್ಟ ಸಂದೇಶ ಹೋದಂತಾಗುವುದಿಲ್ಲವೇ? ನಾಳೆ ಡಿಕೆಶಿ ತಪ್ಪಿಿಸ್ಥರು ಎಂದು ಕೋರ್ಟ್ ತೀರ್ಪು ನೀಡಿದರೆ, ಅವರನ್ನು ಬೆಂಬಲಿಸಿದ ಅವರ ಸಮಾಜದ ಮುಖಂಡರು ಏನನ್ನುತ್ತಾಾರೆ? ಇಡೀ ಒಕ್ಕಲಿಗ ಸಮಾಜವನ್ನು ಒಬ್ಬ ಅಪರಾಧಿಯ ಸಮರ್ಥನೆಗೆ ದುರುಪಯೋಗಪಡಿಸಿಕೊಂಡಂತಾಗಲಿಲ್ಲವೇ?

ಡಿಕೆಶಿ ಅವರೇನು ಅಪರಾಧಿ ಅಲ್ಲ, ಈಗ ಅವರೊಬ್ಬ ಆರೋಪಿ. ಅವರ ಮನೆಯಲ್ಲಿ 8.50 ಕೋಟಿ ರುಪಾಯಿ ಅಕ್ರಮ ಹಣ ಸಿಕ್ಕಿಿದ್ದು ಸುಳ್ಳಲ್ಲ. ಆ ಹಣವನ್ನು ಮೋದಿ ಅಥವಾ ಶಾ ಹೊತ್ತುಕೊಂಡು ಹೋಗಿ ಡಿಕೆಶಿ ಅವರಿಗೆ ಸೇರಿದ ಅಪಾರ್ಟ್‌ಮೆಂಟ್‌ನಲ್ಲಿ ಇಟ್ಟುಬಂದಿಲ್ಲ. ಈ ದೇಶದಲ್ಲಿ ಯಾರು ಬೇಕಾದರೂ, ಎಷ್ಟು ಬೇಕಾದರೂ ಹಣ ಸಂಪಾದಿಸಬಹುದು. ಅದಕ್ಕೆೆ ಮಿತಿ ಇಲ್ಲ. ಆದರೆ ಗಳಿಸಿದ ಹಣಕ್ಕೆೆ ತೆರಿಗೆ ಕಟ್ಟಿಿದರಾಯಿತು, ಅಷ್ಟೆೆ. ಡಿಕೆಶಿ ಸಾವಿರಾರು ಕೋಟಿ ರುಪಾಯಿ ಗಳಿಸಲು ಸ್ವತಂತ್ರರು. ಆದರೆ ಗಳಿಸುವ ಹಣದ ಮೂಲ ಹೇಳಬೇಕು ಹಾಗೂ ಹಣ ಗಳಿಸಿದ ವಿಧಾನ ಸರಿಯಾಗಿರಬೇಕು. ಅಷ್ಟಾಾದರೆ ಮುಗಿಯಿತು. ಐಟಿಯವರೂ ನಿಮ್ಮ ತಂಟೆಗೆ ಬರುವುದಿಲ್ಲ. ಇ.ಡಿ.ಯವರೂ ಹತ್ತಿಿರ ಬರುವುದಿಲ್ಲ.

ಈ ಮೂಲ ಹಾಗೂ ವಿಧಾನದ ಬಗ್ಗೆೆ ಸಂದೇಹ ಮೂಡಿದರೆ, ಆಗ ನಿಮ್ಮನ್ನು ವಿಚಾರಣೆಗೊಳಪಡಿಸಿ ತನಿಖೆ ಮಾಡಲೇಬೇಕಾಗುತ್ತದೆ. ಇದು ಎಲ್ಲರಿಗೂ ಅನ್ವಯವಾಗುವ ಕಾನೂನು. ಈ ವಿಷಯದಲ್ಲಿ ಪಕ್ಷ, ಜಾತಿ ನಗಣ್ಯ. ಹಾಗಂತ ರಾಜಕೀಯ ಪ್ರಭಾವ ಕೆಲಸ ಮಾಡುವುದಿಲ್ಲ ಎಂದಲ್ಲ, ಕೆಲಸ ಮಾಡುತ್ತದೆ. ಅಷ್ಟರಮಟ್ಟಿಿಗೆ ತಪ್ಪುು ಮಾಡಿದ್ದು, ಅಕ್ರಮವೆಸಗಿದ್ದು ನಿಜ ಎಂಬುದನ್ನು ಒಪ್ಪಿಿಕೊಂಡಂತಾಗುತ್ತದೆ.

ಡಿಕೆಶಿ ವಿಷಯದಲ್ಲಿ ರಾಜಕೀಯ ಸಂಗತಿ ಕೆಲಸ ಮಾಡಿದೆ, ಸಂದೇಹವಿಲ್ಲ. ಆದರೆ ಅದಕ್ಕೆೆ ಡಿಕೆಶಿಯವರು ಆಸ್ಪದ ನೀಡಿದ್ದಾಾರೆ ಎಂಬುದೂ ಕಠೋರ ಸತ್ಯ. ಡಿಕೆಶಿ ವಿರುದ್ಧ ಕ್ರಮ ಜರುಗಿಸಿದಂತೆ, ದಿನೇಶ ಗುಂಡೂರಾವ್, ಡಾ.ಪರಮೇಶ್ವರ, ಎಂ.ಬಿ.ಪಾಟೀಲ ಮುಂತಾದವರ ವಿರುದ್ಧವೂ ರಾಜಕೀಯ ಪ್ರತಿಕಾರವಾಗಿ ಕ್ರಮ ಜರುಗಿಸಬಹುದಲ್ಲ? ಅವರೆಲ್ಲರನ್ನು ಬಿಟ್ಟು ಡಿಕೆಶಿ ವಿರುದ್ಧ ಮಾತ್ರ ಈ ಕ್ರಮಕ್ಕೆೆ ಇ.ಡಿ. ಏಕೆ ಮುಂದಾಯಿತು? ಕಾರಣ ಸ್ಪಷ್ಟ. ಡಿಕೆಶಿ ತಪ್ಪುು ಮಾಡಿದ ಆರೋಪಕ್ಕೆೆ ಗುರಿಯಾಗಿದ್ದಾಾರೆ. ಹೀಗಾಗಿ ಇದು ಕೇವಲ ರಾಜಕೀಯ ಪ್ರಚೋದನೆಯಷ್ಟೇ ಅಲ್ಲ. ಪ್ರತಿಭಟನಾ ರ್ಯಾಾಲಿ ಮಾಡಿದ ಮಾತ್ರಕ್ಕೆೆ ಬಚಾವ್ ಆಗಿಬಿಡಬಹುದಾದ ಪ್ರಕರಣವೂ ಅಲ್ಲ. ಹೀಗಾಗಿ ಇಂಥ ಪ್ರಕರಣದಲ್ಲಿ ಜಾತಿ ಕಾರ್ಡ್ ಬಳಸಬಾರದಿತ್ತು.

ಅದು ಅವಿವೇಕದ ಪರಮಾವಧಿ. ಒಕ್ಕಲಿಗ ಸಮಾಜ, ಇಡೀ ದೇಶಕ್ಕೆೆ, ರಾಜ್ಯಕ್ಕೆೆ ಯಾವ ಹಾಗೂ ಎಂಥ ಸಂದೇಶ ಕಳಿಸಿತು ಎಂಬುದನ್ನು ಆ ಸಮಾಜದ ನಾಯಕರು ಆತ್ಮಾಾವಲೋಕನ ಮಾಡಿಕೊಳ್ಳಬೇಕು. ಒಬ್ಬ ಡಿಕೆಶಿಗಾಗಿ ಇಡೀ ಒಕ್ಕಲಿಗ ಸಮಾಜ ತನ್ನ ಆತ್ಮಪ್ರತಿಷ್ಠೆೆ, ಸ್ವಾಾಭಿಮಾನ ಅಡ ಇಡುವಂತಾಯಿತು, ಇದು ಖೇದಕರ. ಸಾಮಾನ್ಯವಾಗಿ ಇಂಥ ಸಂದರ್ಭಗಳಲ್ಲಿ ರಾಜಕೀಯ ಪ್ರೇರಿತ ಎಂದು ಹೇಳುವುದು ರೂಢಿಯಾಗಿಬಿಟ್ಟಿಿದೆ. ಹಾಗಾದರೆ ಡಿಕೆಶಿ ಏನೂ ತಪ್ಪೇ ಮಾಡಿಲ್ಲವಾ? ಅವರು ಅಕ್ರಮವಾಗಿ ಹಣ ಮತ್ತು ಆಸ್ತಿಿಯನ್ನು ಮಾಡಿದ್ದಾಾರೆಂದು ಇ. ಡಿ. ಸಾಕಷ್ಟು ದಾಖಲೆಗಳ ಸಮೇತ ಸಾಬೀತುಪಡಿಸಿದೆ. ಒಂದು ವೇಳೆ ಈಗ ಕಾಂಗ್ರೆೆಸ್ ಸರಕಾರ ಇದ್ದಿದ್ದರೆ ಡಿಕೆಶಿ ಅವರನ್ನು ಬಚಾವ್ ಮಾಡುತ್ತಿಿತ್ತೇನೋ.

ಅದೂ ಸಹ ರಾಜಕೀಯ ಪ್ರೇರಿತವೇ ಅಲ್ಲವೇ? ನಾವು ಸರಿಯಾಗಿದ್ದರೆ ಆಡಳಿತ ಪಕ್ಷದವರೇನು ಬೇಕಾ ಬಿಟ್ಟಿಿ ಕೇಸು ಹಾಕುವುದಿಲ್ಲವಲ್ಲಾ? ಡಿಕೆಶಿ ತಪ್ಪುು ಮಾಡಿರುವುದರಿಂದ ಅವರ ವಿರುದ್ಧ ಕೇಸು ಹಾಕಿದ್ದಾರೆಂಬುದು ಜಗತ್ತಿಿಗೇ ಗೊತ್ತಿಿದೆ. ಇದನ್ನು ಒಕ್ಕಲಿಗರ ಸಮಾಜದ ಮುಖಂಡರು, ಧರ್ಮಗುರುಗಳು ಅರಿಯದಾದರಾ? ಇದರಿಂದ ಒಕ್ಕಲಿಗರ ಸ್ವಾಾಮೀಜಿಗಳು ತಮ್ಮದೇ ಸಮಾಜಕ್ಕೆೆ ಯಾವ ಸಂದೇಶ ಕಳಿಸಿದಂತಾಯಿತು? ನಮ್ಮ ಸಮಾಜದ ಜನ ಏನೇ ಅಕ್ರಮ ಮಾಡಿ, ನಿಮ್ಮ ರಕ್ಷಣೆಗೆ ನಾವಿದ್ದೇವೆ ಎಂದು ಹೇಳಿದಂತಾಗಲಿಲ್ಲವಾ? ಅಂದರೆ ಅಕ್ರಮ ವ್ಯವಹಾರಕ್ಕೆೆ ಸ್ವಾಾಮೀಜಿಗಳೇ ಕುಮ್ಮಕ್ಕು ನೀಡಿದಂತಾಗಲಿಲ್ಲವಾ?

ಈ ಪ್ರಶ್ನೆೆಗೆ ಒಕ್ಕಲಿಗರ ಗುರುಗಳಾದ ನಂಜಾವಧೂತ ಸ್ವಾಾಮೀಜಿ ಅವರು ತಮ್ಮ ಅಭಿಪ್ರಾಾಯ ತಿಳಿಸಬೇಕು. ಇಲ್ಲವಾದರೆ ಅವರ ಬಗ್ಗೆೆ ಇಡೀ ಸಮಾಜ ತಪ್ಪುು ಭಾವಿಸುವ ಸಾಧ್ಯತೆ ಇದೆ. ನಾಳೆ ಅವರದೇ ಸಮಾಜದ ನಾಯಕ ತಪ್ಪೆೆಸಗಿದಾಗ ಇದೇ ನಂಜಾವಧೂತ ಸ್ವಾಾಮೀಜಿ ಅವರು ಆ ನಾಯಕನ ರಕ್ಷಣೆಗೆ ಮುಂದೆ ಬರುತ್ತಾಾರಾ ಅಥವಾ ಅವರ ಕಾಳಜಿ ಇರುವುದು ಕೇವಲ ಡಿಕೆಶಿ ಅವರ ಬಗ್ಗೆೆ ಮಾತ್ರವಾ?

ಇದೇ ರೀತಿ ಎಲ್ಲಾ ಜಾತಿಯ ಸ್ವಾಾಮೀಜಿಗಳು ಅಕ್ರಮವೆಸಗಿದ ತಮ್ಮ ತಮ್ಮ ಜಾತಿಯ ನಾಯಕರ ರಕ್ಷಣೆಗೆ ಟೊಂಕ ಕಟ್ಟಿಿ ನಿಂತರೆ, ಪ್ರತಿಭಟನೆ ಮಾಡಿದರೆ ನ್ಯಾಾಯಾಂಗ ಅಥವಾ ಕಾನೂನಿನ ಮೊರೆ ಹೋಗುವ ಬದಲು ಸ್ವಾಾಮೀಜಿಗಳ ಆಶ್ರಯ ಹಿಡಿಯುವುದೇ ವಾಸಿ ಎಂದು ಯಾರಿಗಾದರೂ ಅನಿಸುವುದು ಸಹಜ. ಅದಕ್ಕಿಿಂತ ಹೆಚ್ಚಾಾಗಿ ಕಾನೂನಿನ ಕಣ್ಣಿಿನೆ ಮುಂದೆ ಆರೋಪಿಯಾಗಿ ನಿಂತ ವ್ಯಕ್ತಿಿಯ ಬೆಂಬಲಕ್ಕೆೆ ಮತ್ತು ರಕ್ಷಣೆಗೆ ಇಲ್ಲಿನ ತನಕ ಯಾವ ಸಮಾಜವೂ ಮುಂದೆ ನಿಂತಿರಲಿಲ್ಲ. ಅವರ ಪರವಾಗಿ ಮೆರವಣಿಗೆ ಮಾಡಿರಲಿಲ್ಲ. ಸ್ವಾಾಮೀಜಿಗಳಾದವರು ಇಂಥ ವಿಷಯಗಳಲ್ಲಿ ತಲೆ ಹಾಕಬಾರದು. ಸಮಾಜದ ಯಾರಾದರೂ ಇಂಥ ಕ್ರಮಕ್ಕೆೆ ಮುಂದಾದರೆ ಅವರಿಗೆ ಬುದ್ಧಿಿ ಹೇಳಬೇಕು. ಅದು ಬಿಟ್ಟು ಸ್ವಾಾಮೀಜಿಗಳಾದವರು ಬುದ್ಧಿಿ ಹೇಳಿಸಿಕೊಳ್ಳುವಂಥ ಸಂದರ್ಭವನ್ನು ತಂದುಕೊಳ್ಳಬಾರದು. ಇದರಿಂದ ಇಡೀ ಸಮಾಜವೇ ತಲೆ ತಗ್ಗಿಿಸಬೇಕಾಗಿ ಬರುತ್ತದೆ.

ಅಷ್ಟಕ್ಕೂ ಡಿಕೆಶಿ ಅವರಿಗೂ ನಂಜಾವಧೂತ ಸ್ವಾಾಮೀಜಿಗಳಿಗೂ ಏನು ಸಂಬಂಧ? ನಂಜಾವಧೂತರಿಗೆ ಡಿಕೆಶಿ ಅವರನ್ನು ಬೆಂಬಲಿಸುವ ಅನಿವಾರ್ಯತೆಯೇನು? ಇದು ಕೇವಲ ಗುರು-ಶಿಷ್ಯ ಸಂಬಂಧವೇ ಆಗಿದ್ದರೆ, ಒಬ್ಬ ಸ್ವಾಾಮೀಜಿಯಾಗಿ ನಂಜಾವಧೂತರು ಡಿಕೆಶಿ ಅವರಿಗೆ ಬುದ್ಧಿಿ ಹೇಳಬಹುದಿತ್ತು. ಒಬ್ಬರೇ ಈ ಪರಿ ಆಸ್ತಿಿ ಮಾಡುವುದು ಸರಿಯಲ್ಲ, ಒಂದಲ್ಲ ಒಂದು ದಿನ ನೀವು ಸಮಸ್ಯೆೆಗೆ ಸಿಲುಕಿ ಹಾಕಿಕೊಳ್ಳುತ್ತೀರಿ ಎಂದು ಕಿವಿಮಾತು ಹೇಳಬಹುದಿತ್ತು. ಆ ಕೆಲಸವನ್ನು ಎಂದಾದರೂ ನಂಜಾವಧೂತರು ಒಂದು ಸಮಾಜದ ಸ್ವಾಾಮೀಜಿಯಾಗಿ ಮಾಡಿದ್ದಾರಾ? ಶಿಷ್ಯರನ್ನು ಸರಿ ದಾರಿಗೆ ತರುವ ಕೆಲಸವನ್ನು ಮಾಡಿದ್ದಾರಾ? ಇಲ್ಲ ಎಂದಾದರೆ ತಪ್ಪುು ಮಾಡಿದ ಶಿಷ್ಯನ ಬೆಂಬಲಕ್ಕೆೆ ನಿಂತರೆ ಸಮಾಜಕ್ಕೆೆ ತಪ್ಪುು ಸಂದೇಶ ರವಾನೆಯಾಗುವುದಿಲ್ಲವಾ ಎಂಬ ವಿವೇಕ ಒಬ್ಬ ಧರ್ಮ ಗುರುವಿಗೆ ಇರಲೇಬೇಕು.

ಇಲ್ಲದಿದ್ದರೆ ಅದು ಧರ್ಮ ಲೋಪವಾಗುತ್ತದೆ. ನಾಳೆ ಲಿಂಗಾಯತ ಸಮಾಜದ, ಕುರುಬ ಸಮಾಜದ ನಾಯಕ ತಪ್ಪುು ಮಾಡಿದಾಗ ಆಯಾ ಸಮಾಜದ ಸ್ವಾಾಮೀಜಿಗಳು ಅವರ ಬೆಂಬಲಕ್ಕೆೆ ನಿಂತರೆ, ಇದೇ ರೀತಿ ಎಲ್ಲಾ ಸಮಾಜದ ಸ್ವಾಾಮೀಜಿಗಳೂ ಮಾಡುತ್ತಾಾ ಹೋದರೆ, ಏನಾಗಬಹುದು?

ಅದರಲ್ಲೂ ನಂಜಾವಧೂತರ ಅಂದಿನ ಮಾತಿನ ಧಾಟಿಯೇ ಸರಿ ಇರಲಿಲ್ಲ. ಅವರ ಮಾತಿನಲ್ಲಿ ಆಕ್ರೋೋಶವಿತ್ತು, ದ್ವೇಷವಿತ್ತು, ಹಿಂಸಾಚಾರವನ್ನು ಪ್ರಚೋದಿಸುವ ನಂಜಿತ್ತು, ಭಕ್ತರನ್ನು ಕೆರಳಿಸುವ ಹುನ್ನಾಾರವಿತ್ತು, ಯಾರಿಗೋ ಧಮಕಿ ಹಾಕುವ ಅತಾರ್ಕಿಕ ನಡೆಯಿತ್ತು, ತಮ್ಮ ಸಮಾಜದ ಜನರನ್ನು ಪ್ರಚೋದಿಸುವ ಸಂಚಿತ್ತು. ಒಬ್ಬ ಸ್ವಾಾಮಿಜೀಯಾಗಿ ಅವರ ಈ ಮಾತುಗಳು ಯಾರೂ ಒಪ್ಪುುವಂಥದ್ದಿರಲಿಲ್ಲ. ಅವರ ಮಾತುಗಳನ್ನು ಅವರ ಜಾತಿಯ ವಿವೇಕವಂತರು ಒಪ್ಪುುವ ಪ್ರಶ್ನೆೆಯೇ ಇರಲಿಲ್ಲ.

ಅಷ್ಟಕ್ಕೂ ಅವರ ಆಕ್ರೋೋಶ ಯಾರ ವಿರುದ್ಧ? ಇ.ಡಿ.ಎಂಬುದು ಸ್ವಾಾಯತ್ತ ತನಿಖಾ ಸಂಸ್ಥೆೆ. ಅಕ್ರಮ ಆಸ್ತಿಿ ಸಂಪಾದಿಸಿದವರ ವಿರುದ್ಧ, ಆರೋಪ ಕೇಳಿಬಂದವರ ವಿರುದ್ಧ ತನಿಖೆ ಮಾಡುವುದು ಅದರ ಕರ್ತವ್ಯ. ಒಂದು ವೇಳೆ ಡಿಕೆಶಿ ತಪ್ಪುು ಮಾಡಿಲ್ಲ ಅಂದರೆ ಅವರಿಗೆ ನ್ಯಾಾಯ ಕೊಡಲು ಕೋರ್ಟುಗಳಿವೆಯಲ್ಲ? ತನಿಖಾ ಸಂಸ್ಥೆೆಗಳು ಹೇಳಿದ್ದೇ ವೇದ ವಾಕ್ಯವಲ್ಲ. ತನಿಖಾ ಸಂಸ್ಥೆೆಗಳನ್ನು ಪ್ರಶ್ನಿಿಸಲು ನಮ್ಮಲ್ಲಿ ನ್ಯಾಾಯಾಲಯಗಳಿವೆಯಲ್ಲ? ತಪ್ಪುು ಮಾಡಿಲ್ಲ ಅಂದರೆ ಯಾರಿಗೂ ಭಯಪಡಬೇಕಿಲ್ಲ. ಈ ಸಂಗತಿಗಳು ಡಿಕೆಶಿಗೆ ಗೊತ್ತಿಿಲ್ಲವಾ? ನಂಜಾವಧೂತರಿಗೆ ಗೊತ್ತಿಿಲ್ಲವಾ?

ನಂಜಾವಧೂತರು, ಡಿಕೆಶಿ ಅವರನ್ನು ಬೆಂಬಲಿಸುವುದು ತಪ್ಪಲ್ಲ. ಒಬ್ಬ ಶಿಷ್ಯನ ನೆರವಿಗೆ ಗುರು ನೆರವಾಗಬೇಕಾದುದು ಕರ್ತವ್ಯ. ಆದರೆ ಅದು ವೈಯಕ್ತಿಿಕ ನೆಲೆಯಲ್ಲಿರಬೇಕು. ಆದರೆ ಮೊನ್ನೆೆ ನಂಜಾವಧೂತರು ಎಂಥ ಸಂದೇಶ ಕಳಿಸಿದರೆಂದರೆ ಇಡೀ ಒಕ್ಕಲಿಗ ಸಮಾಜವೇ ಡಿಕೆಶಿ ಅವರ ಹಿಂದಿದೆ ಎಂಬಂತೆ ಬಿಂಬಿಸಿದರು. ಯಡವಟ್ಟಾಾಗಿದ್ದೇ ಇಲ್ಲಿ. ಬೇರೆ ಯಾರೂ ಅಲ್ಲ , ಒಕ್ಕಲಿಗರೇ ಇದರಿಂದ ಅಸಮಾಧಾನಗೊಂಡರು.ಅಸಲಿಗೆ ಅಂದಿನ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದವರಲ್ಲಿ ಒಕ್ಕಲಿಗರಿಗಿಂತ ಇತರೆಯವರೇ ಜಾಸ್ತಿಿ ಇದ್ದರು. ಅವರಲ್ಲಿ ಹೆಚ್ಚಿಿನವರು ಬಾಡಿಗೆ ಮೆರವಣಿಗೆಕಾರರು ಮತ್ತು ಬಿರಿಯಾನಿಪ್ರಿಿಯರು.

ಈ ಪ್ರತಿಭಟನಾ ಮೆರವಣಿಗೆಗೆ ವಿರೋಧ ವ್ಯಕ್ತಪಡಿಸಿದವರು ಒಕ್ಕಲಿಗರೇ. ಬಹುತೇಕ ಮಂದಿ ಒಕ್ಕಲಿಗರಿಗೇ ಡಿಕೆಶಿ ಪರವಾಗಿ ತಮ್ಮ ಸಮಾಜ ನಿಲ್ಲುವುದು ಇಷ್ಟವಿರಲಿಲ್ಲ. ಒಬ್ಬ ತಪ್ಪಿಿತಸ್ಥನ ಪರ ಸಮಾಜಕ್ಕೆೆ ಸಮಾಜವೇ ವಕಾಲತ್ತು ವಹಿಸುವುದು ಇಷ್ಟವಿರಲಿಲ್ಲ. ಅನೇಕ ವಿವೇಕವಂತರಿಗೆ ಗೊತ್ತಿಿತ್ತು, ಡಿಕೆಶಿ ಈ ಪ್ರಕರಣದಲ್ಲಿ ಬಚಾವ್ ಆಗಿ ಬರುವುದು ಸಾಧ್ಯವೇ ಇಲ್ಲ ಎಂದು. ಇದು ಕೇವಲ ದ್ವೇಷ ಸಾಧನೆಯ ಪ್ರಕರಣ ಅಲ್ಲ ಎಂದು. ದ್ವೇಷ ಸಾಧನೆಗೆ ಮೋದಿ ಅಥವಾ ಅಮಿತ್ ಶಾ ಮನಸ್ಸು ಮಾಡಿದ್ದರೆ, ಡಿಕೆಶಿ ಅವರನ್ನು ವಿಧಾನಸಭಾ ಚುನಾವಣೆಗೆ ಮುನ್ನವೇ ಅರೆಸ್‌ಟ್‌ ಮಾಡುತ್ತಿಿದ್ದರು. ಇಲ್ಲವೇ ಮೊನ್ನೆೆಯ ಲೋಕಸಭಾ ಚುನಾವಣೆಗೆ ಮುನ್ನವಾದರೂ ಅರೆಸ್‌ಟ್‌ ಮಾಡುತ್ತಿಿದ್ದರು. ಗುಜರಾತಿನ ಶಾಸಕರನ್ನು ಡಿಕೆಶಿ ಇಲ್ಲಿ ಇಟ್ಟುಕೊಂಡಿದ್ದಕ್ಕೆೆ ಪ್ರತಿಕಾರವಾಗಿ, ಮೋದಿ- ಶಾ ಇಷ್ಟು ದಿನ ಕಾಯುತ್ತಿಿರಲಿಲ್ಲ. ಈ ಸಂಗತಿಗಳನ್ನು ಮೆರವಣಿಗೆ ಮಾಡಿದವರು ಗಮನಿಸಿಲ್ಲ ಎಂಬುದು ಸ್ಪಷ್ಟ.

ಒಂದು ವೇಳೆ ಡಿಕೆಶಿ ಅವರ ಪರವಾಗಿ ಮೆರವಣಿಗೆ ಮಾಡಲೇಬೇಕಿದ್ದರೆ, ಒಕ್ಕಲಿಗ ಸಮಾಜದ ಬದಲಿಗೆ, ದೇವೇಗೌಡರ ಕುಟುಂಬ ಮಾಡಬೇಕಿತ್ತು. ಅಥವಾ ಅವರಾದರೂ ಈ ಮೆರವಣಿಗೆಯ ಲೀಡ್ ತೆಗೆದುಕೊಳ್ಳಬೇಕಿತ್ತು. ಯಾಕೆಂದರೆ ಕುಮಾರಸ್ವಾಾಮಿ ಅವರ ಸರಕಾರಕ್ಕೆೆ ಬಂಡೆಗಲ್ಲಿನಂತೆ ನಿಂತವರು ಡಿಕೆಶಿಯೇ ಹೊರತು ನಂಜಾವಧೂತ ಸ್ವಾಾಮೀಜಿ ಅಲ್ಲ, ಕರವೇ ನಾರಾಯಣ ಗೌಡರಲ್ಲ. ಕುಮಾರಸ್ವಾಾಮಿ ಈ ಕಾರಣಕ್ಕೆೆ ಡಿಕೆಶಿಗೆ ಉಪಕೃತರಾಗಿರಲೇಬೇಕು. ಕುಮಾರಸ್ವಾಾಮಿ ಸರಕಾರಕ್ಕೆೆ ಎದುರಾದ ಸಂಕಷ್ಟಗಳಿಗೆಲ್ಲ ಡಿಕೆಶಿ ಎದೆ ಕೊಟ್ಟರು.

ಕಾಂಗ್ರೆೆಸ್ ಮತ್ತು ಜೆಡಿಎಸ್ ಶಾಸಕರನ್ನು ಮುಂಬೈಯಲ್ಲಿ ಇಟ್ಟಾಾಗ ಡಿಕೆಶಿ ಏಕಾಂಗಿಯಾಗಿ ಅಲ್ಲಿಗೆ ಹೋದರು. ಶಾಸಕರನ್ನು ಕರೆ ತರಲು ಹರಸಾಹಸ ಮಾಡಿದರು. ಈ ಯಾವ ದುಸ್ಸಾಾಹಸಕ್ಕೂ ಡಿಕೆಶಿ ಮುಂದಾಗಬೇಕಿರಲಿಲ್ಲ. ಆದರೂ ಅವರು ಸ್ವಯಂ ಪ್ರೇರಿತರಾಗಿ ವಿವಾದಗಳನ್ನು, ಕಷ್ಟಗಳನ್ನು ಮೈಮೇಲೆ ಎಳೆದುಕೊಂಡರು. ನಿಖಿಲ್ ಕುಮಾರಸ್ವಾಾಮಿ ಮಂಡ್ಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಡಿಕೆಶಿ, ಅವರ ಗೆಲುವಿಗೆ ಪ್ರಾಾಮಾಣಿಕವಾಗಿ ಶ್ರಮಿಸಿದರು. ಅಲ್ಲದೇ ಸರಕಾರಕ್ಕೆೆ ದಿನನಿತ್ಯ ಬಂದೊದಗಿದ ಸವಾಲು-ಸಮಸ್ಯೆೆಗಳ ಪರಿಹಾರಕ್ಕೆೆ ಡಿಕೆಶಿ ನಿಸ್ಪಹರಾಗಿ ದುಡಿದರು.

ಆದರೆ ಎಂಥಾ ದುರ್ದೈವ ಅಂದ್ರೆೆ ದೇವೇಗೌಡ ಕುಟುಂಬದವರ್ಯಾಾರೂ ಈ ಮೆರವಣಿಗೆಯಲ್ಲಿ ಭಾಗವಹಿಸಲೇ ಇಲ್ಲ. ಅವರಾರೂ ಅತ್ತ ಸುಳಿಯಲೇ ಇಲ್ಲ. ಕಡೇ ಪಕ್ಷ ಕುಮಾರಸ್ವಾಾಮಿಯವರಾದರೂ ಭಾಗವಹಿಸಬೇಕಿತ್ತು. ಆದರೆ ಅವರು ತಮಗೆ ಬೇರೆ ಕಾರ್ಯಕ್ರಮವಿದೆ ಎಂದು ಮೆಲ್ಲಗೆ, ಮೆತ್ತಗೆ ಜಾರಿಕೊಂಡರು. ಅವರಿಗೆ ಗೊತ್ತಿಿತ್ತು, ತಾವು ಭಾಗವಹಿಸುವುದು ಒಳ್ಳೆೆಯ ನಡೆ ಅಲ್ಲ ಎಂದು. ಡಿಕೆಶಿ ತಾಯಿ ಅವರನ್ನು ಭೇಟಿಯಾಗಿ ಬಂದರೆ ಹೊರತು ಸಮಾಜದ ಮುಖಂಡರು ಸಂಘಟಿಸಿದ ಮೆರವಣಿಗೆಗೆ ಬರಲೇ ಇಲ್ಲ. ಡಿಕೆಶಿ ಅವರನ್ನು ಒಕ್ಕಲಿಗ ಸಮಾಜದ ನಾಯಕ ಎಂದು ಬಿಂಬಿಸುವುದು ಅಥವಾ ಅವರ ಹೆಸರನ್ನು ಮೆರೆಸುವುದು ಅವರಿಗಾಗಲಿ, ದೇವೇಗೌಡರಿಗಾಗಲಿ ಇಷ್ಟವಿರಲಿಲ್ಲ.

ಸಮಾಜದ ಕಾರ್ಯಕ್ರಮ ಎಂದ ಮೇಲೆ ತಮ್ಮ ಬೆಂಬಲವನ್ನು ಪ್ರಕಟಿಸುವುದಕ್ಕಾಾದರೂ ದೇವೇಗೌಡರು ಬರಬೇಕಿತ್ತು. ದೊಡ್ಡಗೌಡರು ಇಂಥ ಕಡೆಗಳಲ್ಲಿ ಸಿಕ್ಕಿಿಸಿಕೊಳ್ಳಲು ಹೋಗುವುದಿಲ್ಲ. ಅವರಿಗೆ ಡಿಕೆಶಿ ಎದುರಿಸುತ್ತಿಿರುವ ಕೇಸಿನ ಪರಿಣಾಮವೇನು ಎಂಬುದು ಗೊತ್ತಿಿತ್ತು. ಅವರು ಮೋದಿ-ಶಾ ವಿರುದ್ಧ ಕಾಟಾಚಾರದ ಹೇಳಿಕೆಗಳನ್ನು ಕೊಟ್ಟು ಸುಮ್ಮನಾದರು. ಅದನ್ನು ಬಿಟ್ಟರೆ ಹರ-ಶಿವ ಅಂದರೂ ದೇವೇಗೌಡರ ಕುಟುಂಬ ಡಿಕೆಶಿ ಅವರ ಬೆಂಬಲಕ್ಕೆೆ ನಿಲ್ಲಲೇ ಇಲ್ಲ. ಸಮಾಜದ ಸ್ವಾಾಮೀಜಿ ಅವರು ಭಾಗವಹಿಸಿದ್ದರೂ ಕ್ಯಾಾರೇ ಅನ್ನಲಿಲ್ಲ.

ಒಂದು ಸಂಗತಿಯಂತೂ ನಿಶ್ಚಿಿತ. ಡಿಕೆಶಿ ಈ ಪ್ರಕರಣದಲ್ಲಿ ನಿರಪರಾಧಿ ಎಂದು ಸಾಬೀತಾಗಲಿ. ಅದನ್ನು ಸ್ವಾಾಗತಿಸೋಣ. ಆದರೆ ಈ ಪ್ರಕರಣದಲ್ಲಿ ಒಕ್ಕಲಿಗ ಸಮಾಜವನ್ನು ಕಟಕಟೆಯಲ್ಲಿ ನಿಲ್ಲಿಸಬಾರದಿತ್ತು. ಬೇರೆ ಸಮುದಾಯದ ಎದುರಿಗೆ ಒಕ್ಕಲಿಗರನ್ನು ತಪ್ಪಾಾಗಿ ಕಲ್ಪಿಿಸಿಕೊಳ್ಳಲು ಅವಕಾಶ ಕೊಡಬಾರದಿತ್ತು. ಒಬ್ಬ ಆರೋಪಿಯ ಬೆಂಬಲಕ್ಕೆೆ ನಿಂತು, ಅದನ್ನು ಇಡೀ ಸಮಾಜ ಸಮರ್ಥಿಸಿಕೊಳ್ಳುವಂಥ ಪರಿಸ್ಥಿಿತಿ ತಂದಿಡಬಾರದಿತ್ತು. ಒಂದು ವೇಳೆ ಡಿಕೆಶಿ ವಿರುದ್ಧದ ಆರೋಪಗಳೆಲ್ಲ ಸಾಬೀತಾದರೆ ಈಗ ಮೆರವಣಿಗೆ ಮಾಡಿದವರೆಲ್ಲ ಏನನ್ನುತ್ತಾಾರೆ?

ಈಗ ಕೋರ್ಟ್ ಡಿಕೆಶಿ ಅವರನ್ನು ನ್ಯಾಾಯಾಂಗ ಬಂಧನಕ್ಕೆೆ ಒಪ್ಪಿಿಸಿದೆ. ನಂಜಾವಧೂತರು ಮತ್ತು ಅಂದು ಅವರ ಜತೆಯಿದ್ದವರು ನ್ಯಾಾಯಾಧೀಶರ ವಿರುದ್ಧ, ನಮ್ಮ ನ್ಯಾಾಯಾಂಗದ ವಿರುದ್ಧ ಮೆರವಣಿಗೆ ಮಾಡುತ್ತಾಾರಾ?
ಇಲಿಗೆ ಹೊಡೆಯಲು ಹೋಗಿ ಗಣಪತಿಗೆ ಪೆಟ್ಟು ಬೀಳಬಾರದಲ್ಲವೇ?

Leave a Reply

Your email address will not be published. Required fields are marked *