Tuesday, 21st March 2023

ರಾಯಚೂರಿನಲ್ಲಿ ವೈಟ್‌ ಫಂಗಸ್‌: ಆರು ಪ್ರಕರಣ ಪತ್ತೆ

ರಾಯಚೂರು: ರಾಜ್ಯದಲ್ಲಿ ಮೊದಲ ಬಾರಿಗೆ ವೈಟ್‌ ಫಂಗಸ್‌ ಪ್ರಕರಣ ಪತ್ತೆಯಾಗಿದೆ. ರಾಯಚೂರು ಜಿಲ್ಲೆಯ ಖಾಸಗಿ ಆಸ್ಪತ್ರೆ ಯಲ್ಲಿ ಆರು ಪ್ರಕರಣಗಳು ಪತ್ತೆಯಾದ ಮಾಹಿತಿ ಲಭ್ಯವಾಗಿದೆ.

ಖಾಸಗಿ ಆಸ್ಪತ್ರೆಯೊಂದರಲ್ಲೇ ವೈಟ್‌ ಫಂಗಸ್‌ ಪ್ರಕರಗಳು ಪತ್ತೆಯಾಗಿದ್ದು, ಅವರು ಕೋವಿಡ್‌ನಿಂದ ಗುಣಮುಖರಾಗಿ ದ್ದರು ಎಂದು ವೈದ್ಯ ಡಾ. ಮಂಜುನಾಥ್‌ ಮಾಹಿತಿ ನೀಡಿದ್ದಾರೆ.

ವೈಟ್‌ ಫಂಗಸ್‌ ಸೋಂಕಿತರಿಗೆ  ಆತಂಕ ಪಡುವ ಆಗತ್ಯವಿಲ್ಲ. ಅನ್ನನಾಳಕ್ಕೆ ತೊಂದರೆ ನೀಡುವ ಸೋಂಕು ಜೀವ ಮಾರಕವಲ್ಲ. ವೈಟ್ ಫಂಗಸ್‌ ರಕ್ತಕ್ಕೆ ಸೇರಿದರೆ ಮಾತ್ರ ಪ್ರಾಣಕ್ಕೆ ಅಪಾಯ. 100 ಜನರಿಗೆ ಸ್ಟಿರಾಯ್ಡ್‌ ನೀಡಿದರೆ ಒಬ್ಬರಲ್ಲಿ ವೈಟ್‌ ಫಂಗಸ್‌ ತಗಲುತ್ತೆ ಎಂದು ವಿವರಿಸಿದರು.

error: Content is protected !!