Tuesday, 25th February 2020

ಮೋದಿಯೇಕೆ ಕರ್ನಾಟಕದ ಜನರ ಮನ ನೋಯಿಸಿದರು?

ಲೀಲಾವತಿ ಕೆ

ನರೇಂದ್ರ ಮೋದಿ-ಈ ಹೆಸರನ್ನು ನಾನು ಕೇಳಿದ್ದು ಅವರು ಮೊದಲ ಬಾರಿ ಗುಜರಾತ್‌ನ ಮುಖ್ಯಮಂತ್ರಿಿಯಾಗಿದ್ದಾಾಗ. ಟಿವಿಯಲ್ಲಿ ಅವರ ಬಗ್ಗೆೆ ನಕಾರಾತ್ಮಕವಾದ ವಿಷಯಗಳೇ ಬರುತ್ತಿಿದ್ದವು. ನಾನೂ ಅವರ ಬಗೆಗೆ ನಕಾರಾತ್ಮಕವಾಗೇ ತಿಳಿದುಕೊಂಡಿದ್ದೆೆ. ಎರಡನೇ ಬಾರಿಗೂ ಅವರೇ ಮುಖ್ಯಮಂತ್ರಿಿಯಾದಾಗ ಟಿವಿಯಷ್ಟನ್ನೇೇ ನೋಡಿ ಗೊತ್ತಿಿದ್ದ ನನಗೆ ವ್ಯಕ್ತಿಿ ಹ್ಯಂಗೆ ಎರಡನೇ ಬಾರಿಗೂ ಮುಖ್ಯಮಂತ್ರಿಿಯಾಗಿ ಆಯ್ಕೆೆಯಾದರು ಅಂತ ಆಶ್ಚರ್ಯ ಆಯಿತು. ಗುಜರಾತಲ್ಲಿ ಬಹಳ ವರ್ಷಗಳು ಇದ್ದು ಮೈಸೂರಿಗೆ ಬಂದಿದ್ದ ನನ್ನ ಸ್ನೇೇಹಿತೆಯೊಬ್ಬರನ್ನು ಈ ಬಗ್ಗೆೆ ಕೇಳಿದಾಗ ಅವರು ‘ಮೀಡಿಯಾ ಏನೇ ಹೇಳಿಕೊಳ್ಳಲಿ, ಅಲ್ಲಿಯ ಜನಕ್ಕೆೆ ಅವರು ಏನು ಮಾಡಿದ್ದಾಾರೆ ಅಂತ ಗೊತ್ತಿಿದೆ. ಅದಕ್ಕೇ ಮತ್ತೆೆ ಅವರನ್ನೇೇ ಆರಿಸಿದ್ದಾಾರೆ’ ಅಂದರು. ನಂತರ ಮೂರನೇ ಬಾರಿಗೂ ಅವರೇ ಸಿಎಂ ಆದರು.

ಮುಂದೆ ಮೋದಿ, ಪ್ರಧಾನಿ ಅಭ್ಯರ್ಥಿ ಅಂತ ಘೋಷಣೆ ಆದಾಗ ಮಾಧ್ಯಮಗಳೂ ಅವರ ಹಿಂದೆ ಬಿದ್ದವು. ಆಗ ಅದರಿಂದಾಗಿ ಮಾಧ್ಯಮಗಳ ಟಿಅರ್‌ಪಿ ಜಾಸ್ತಿಿಯಾಗಿದ್ದಿರಬೇಕು. ಯಾಕೇಂದ್ರೆೆ, ಆಗ ಚಾನೆಲ್‌ಗಳ ಬದಲಾಯಿಸುವಾಗ ಅಲ್ಲೇನಾದ್ರು ಮೋದಿ ಬಗ್ಗೆೆ ಬರ್ತಿಿದ್ರೆೆ ಅಲ್ಲೇೇ ನಿಂತುಬಿಡ್ತಿಿದ್ವಿಿ. ಅವರ ಬಗ್ಗೆೆ ಹೆಚ್ಚು ಹೆಚ್ಚು ತಿಳಿಯಬೇಕು ಅನ್ನಿಿಸ್ತಿಿತ್ತು. ಪೂರ್ಣ ಬಹುಮತದೊಂದಿಗೆ ಪ್ರಧಾನಿ ಆಗಿಬಿಟ್ಟಾಾಗಲಂತೂ ಖುಷಿಯೋ ಖುಷಿ.

ಸ್ವಾಾತಂತ್ರ್ಯ ದಿನದ ಮೊದಲ ಭಾಷಣದಲ್ಲಿ ಅವರು ಹೇಳಿದ ಸ್ವಚ್ಛ ಭಾರತ, ಮೇಕ್ ಇನ್ ಇಂಡಿಯಾ, ಜನ್‌ಧನ್‌ಗಳ ಬಗ್ಗೆೆ ಕೇಳಿದಾಗ ಈ ಮನುಷ್ಯ ಭಾರತ ಕುರಿತು ಕನಸಿದ್ದಿರಬಹುದು ಅನ್ನಿಿಸಿತ್ತು. ಪ್ರಧಾನಿ ಮೋದಿ ಮೊದಲ ಬಾರಿಗೆ ಅಮೆರಿಕಾಕ್ಕೆೆ ಹೋಗಿ ಅಲ್ಲಿನ ಭಾರತೀಯರನ್ನು ಉದ್ದೇಶಿಸಿ ಮ್ಯಾಾಡಿಸನ್ ಸ್ಕ್ವೇರ್‌ನಲ್ಲಿ ಮಾಡಿದ ಭಾಷಣ ಕೇಳಿ ಪುಳಕಿತಳಾಗಿದ್ದೆೆ. ಏಕೆಂದರೆ ಒಂದು ಕಾಲದಲ್ಲಿ ಅವರಿಗೆ ಅಮೆರಿಕಾ ವೀಸಾ ನೀಡಲು ನಿರಾಕರಿಸಿತ್ತು. ಅದೇ ನೆಲದಲ್ಲಿ ಭಾಷಣದ ಅಂತಿಮ ಭಾಗದಲ್ಲಿ ಅಲ್ಲಿನ ಜನರಿಂದ ‘ಭಾರತ್ ಮಾತಾ ಕಿ ಜೈ’ ಆರು ಬಾರಿ ಹೇಳಿಸಿಬಿಟ್ಟರು. (ಆಗ ನವರಾತ್ರಿಿ ಉಪವಾಸದಲ್ಲಿದ್ದವರು ಸಭಿಕರು ಜೋರಾಗಿ ಹೇಳಲಿಲ್ಲ ಎಂದು ‘ಉಪವಾಸ ಇರೋದು ನಾನು, ಜೋರಾಗಿ ಹೇಳಿ’ ಅಂತ ಅವರನ್ನು ಕೆಣಕಿದ್ದರು).

ಒಬ್ಬ ರಾಜಕಾರಣಿ ಹೀಗೂ ಇರಬಹುದಾ ಅಂತ ಸಖೇದಾಶ್ಚರ್ಯ ಪಡಲು ತಕ್ಕನಾಗಿದ್ದರು. ‘ರಾತ್ರಿಿ ಮಲಗಿದ ಮೂವತ್ತು ಸೆಕೆಂಡುಗಳಲ್ಲಿ ನಿದ್ರೆೆ ಮಾಡಿಬಿಡ್ತೇನೆ’ ಅಂತ ಹೇಳಿಕೊಂಡಾಗ ಅವರೊಬ್ಬ ಯೋಗಿಯೇ ಇರಬೇಕು; ಇಲ್ಲದಿದ್ದರೆ ಇಷ್ಟೊೊಂದು ಸಮಸ್ಯೆೆಗಳಿರುವ ದೇಶದ ಪ್ರಧಾನಿ ಮಲಗಿದ ಕೂಡಲೆ ನಿದ್ರೆೆ ಮಾಡುವುದೆಂದರೆ ಸಾಮಾನ್ಯ ಸಂಗತಿಯೇ ಅನ್ನಿಿಸಿತ್ತು. ‘ನೋಟ್‌ಬ್ಯಾಾನ್’ನಂತಹ ನಿರ್ಧಾರ ಕೈಗೊಂಡಾಗ ಇಂತಹ ಧೀರ ನಾಯಕತ್ವಕ್ಕಾಾಗಿ ಭಾರತ ಕಾದು ಕುಳಿತಿತ್ತು. ಅನೇಕ ಜನರ ನಿರೀಕ್ಷೆ, ಪ್ರಾಾರ್ಥನೆ ಅನ್ನಿಿಸಿತ್ತು.

ಪ್ರಧಾನಿಯಾದ ನಂತರ ಮೊದಲ ಬಾರಿಗೆ ವಿಶ್ವಸಂಸ್ಥೆೆಯಲ್ಲಿ ಯೋಗದ ಬಗ್ಗೆೆ ಹೇಳಿ, ಇಡೀ ವಿಶ್ವವೇ ಯೋಗದಲ್ಲಿ ಒಂದಾಗುವಂತೆ ಮಾಡಿದರು. ಅವರ ಉನ್ನತ ಚಿಂತನೆಗಳು, ಆದರ್ಶಗಳು ಅವರ ಬಗೆಗೆ ಹೆಚ್ಚು ಹೆಚ್ಚು ಅಭಿಮಾನಿೂಗುವಂತೆ ಮಾಡಿತು.
ಅಂಥ ಮೋದಿ ಎರಡನೇ ಬಾರಿಗೆ ಪೂರ್ಣ ಬಹುಮತದೊಂದಿಗೆ ಪ್ರಧಾನಿ ಆಗಿದ್ದಾಾರೆ. ಅವರ ಸಾಧನೆಗಳು ಮುಂದುವರಿದಿವೆ. ಕೇರಳದ ಪ್ರವಾಹಕ್ಕೆೆ ಅವರು ಸ್ಪಂದಿಸಿದ್ದು, ಆಂಧ್ರದಲ್ಲಿ ದೋಣಿ ಮುಳುಗಿ ಹನ್ನೆೆರಡು ಜನ ಸಾವನ್ನಪ್ಪಿಿದಾಗ ಟ್ವೀಟ್ ಮಾಡಿದ್ದು, ಇತ್ತೀಚೆಗೆ ಬಿಹಾರದ ಸ್ಪಂದಿಸಿದ್ದು ಎಲ್ಲ ಗಮನಾರ್ಹ. ಆದರೆ ಅವರು ಕರ್ನಾಟಕದ ವಿಷಯದಲ್ಲಿ, ಇಲ್ಲಿನ ನೋವಿನಲ್ಲಿ ಮೌನವಾಗಿದ್ದೇಕೆ ಎಂಬುದೇ ಅರ್ಥವಾಗುತ್ತಿಿಲ್ಲ.

ಪರಿಹಾರದ ವಿಷಯದಲ್ಲೂ ಉದಾಸೀನ ಮತ್ತು ಚೌಕಾಶಿ ಮಾಡ್ತಿಿದ್ದಾಾರೆ. ಅವರ ಮೇಲಿನ ಅಭಿಮಾನದಿಂದಾಗಿ ಕರ್ನಾಟಕದಿಂದ 25 ಸಂಸದರು ಮತ್ತೆೆ ಒಬ್ಬ ರಾಜ್ಯಸಭಾ ಸದಸ್ಯರನ್ನೂ(ನಿರ್ಮಲಾ ಸೀತಾರಾಮನ್) ಆರಿಸಿದ್ದೇವೆ. ಆದರೆ ಕರ್ನಾಟಕದ ಕಣ್ಣೀರಿನಲ್ಲಿ ಪಾಲುದಾರರಾಗದೇ ಅವರು ಉಳಿದ ಬಗ್ಗೆೆ ಮೋದಿ ಅಭಿಮಾನಿಯಾದ ನನಗೆ ನೋವಾಗಿದೆ. ಭ್ರಮನಿರಸನವಾಗಿದೆ. ಇಲ್ಲಿನ ಸಂಸದರು ಅದೆಷ್ಟು ನಾಲಾಯಕ್ಕು ಅಂತ ನಮಗೆ ತೋರಿಸಲಿಕ್ಕಾಾಗಿ ಮಾಡ್ತಿಿದ್ದಾಾರಾ? ಈ ಬಗ್ಗೆೆ ಕೇಳಿದ ಯತ್ನಾಾಳ್‌ಗೆ ಷೋಕಾಸ್ ನೋಟಿಸ್ ಕೊಟ್ಟಿಿದ್ದಾಾರೆ. ಅವರು ಪರಿಹಾರ ಧನ ಕೇಳಿದ್ದೇೇ ತಪ್ಪಾಾ? ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲವಾ? ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರಕಾರ ಇದ್ದರೆ ಅನುಕೂಲ ಅನ್ನೋೋದು ಕರ್ನಾಟಕದ ಪಾಲಿಗೆ ಸುಳ್ಳಾಾಗಿಬಿಟ್ಟಿಿತೇ?

Leave a Reply

Your email address will not be published. Required fields are marked *