Wednesday, 8th February 2023

‘ವೃಷಭಾವತಿ’ ಇರಬೇಕಾದರೆ ಗಣೇಶನ ಅಭಿಷೇಕಕ್ಕೆ ‘ಕಾವೇರಿ’ ಯಾಕೆ?

ಮೋಹನ್ ವಿಶ್ವ

ನಗರದಲ್ಲಿ ನದಿಯೊಂದು ಇದ್ದರೆ ಎಷ್ಟು ಚೆಂದ ಅಲ್ಲವೇ? ನದಿಗಳಿರುವ ನಗರಗಳ ಸೌಂದರ್ಯವೇ ಅದ್ಭುತ. ಎಷ್ಟೇ ಕೆರೆಗಳಿದ್ದರೂ ನದಿಯ ಸೌಂದರ್ಯವೇ ಬೇರೆ. ಬೆಳಗಿನ ಜಾವದಲ್ಲಿ ಮನಸ್ಸಿಿಗೆ ಮುದ ನೀಡುವ ನದಿಯ ಶಾಂತ ಸ್ವರೂಪ, ಅಕ್ಕ ಪಕ್ಕದ ಗಿಡಗಂಟೆಗಳಲ್ಲಿನ ಹಸಿರು, ಹಕ್ಕಿಿಗಳ ಕಲರವ ಎಷ್ಟು ಚೆಂದ ಅಲ್ಲವೇ. ಸ್ವಿಿಟ್ಜರ್‌ಲೆಂಡ್‌ನ ಜಿನೀವಾ ನಗರದ ನದಿಯನ್ನು ನೋಡಿದರೆ ಎಷ್ಟು ಆನಂದವಾಗುತ್ತದೆ ಎಂದರೆ, ನದಿಯೆಂದರೆ ಹೀಗಿರಬೇಕು ಎಂಬ ಭಾವನೆ ಮೂಡುತ್ತದೆ. ತಳದಲ್ಲಿರುವ ಕಲ್ಲುಗಳು, ಗಿಡಗಳು, ಜಲಚರಗಳು ಎಲ್ಲವೂ ಸ್ಪಷ್ಟವಾಗಿ ಕಾಣಿಸುತ್ತವೆ. ಅಲ್ಲಿನ ಜನರು ಬೆಳಗಿನ ಜಾವ ಕಿಮೀಗಟ್ಟಲೆ ಸ್ಲೈಕ್ಲಿಿಂಗ್ ಮಾಡಿ, ಕೊನೆಗೆ ಲೇಕ್ ಜಿನೀವಾ ದಲ್ಲಿ ಬಿದ್ದು ಒಂದು ಗಂಟೆ ಕಾಲ ಈಜಿಕೊಂಡು ಮನೆಗಳ ಕಡೆಗೆ ತೆರಳುತ್ತಾಾರೆ.

ಅವರು ಈಜಿದ ನಂತರವೂ ಸಹ ಅಲ್ಲಿನ ನೀರು ಅಷ್ಟೇ ತಿಳಿಯಾಗಿ ಕಾಣುತ್ತದೆ. ಇನ್ನು ಈ ನದಿಯ ಮೇಲೆ ಪ್ರತಿನಿತ್ಯವೂ ಖಾಸಗಿ, ಸರಕಾರಿ ಬೋಟ್‌ಗಳು ಪ್ರವಾಸಿಗರನ್ನು ಹೊತ್ತು ಪ್ರಯಾಣಿಸುತ್ತಲೇ ಇರುತ್ತವೆ. ಪ್ರತಿನಿತ್ಯವೂ ಲಕ್ಷಾಾಂತರ ಪ್ರವಾಸಿಗರು ಇಲ್ಲಿಗೆ ಬರುತ್ತಾಾರೆ. ಭಾರತದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವುದು ಹೊಸ ವಿಷಯವಲ್ಲ. ನಾನು ನನ್ನ ಪತ್ನಿಿಯೊಂದಿಗೆ ಇಲ್ಲಿಗೆ ಭೇಟಿ ನೀಡಿದ್ದಾಾಗ, ಇಡೀ ದಿನ ಇದೇ ನದಿಯಲ್ಲಿ ಬೋಟ್‌ನ್ನು ಹತ್ತಿಿ, ನದಿಯೆಲ್ಲ ವಿಹರಿಸಿ, ಅಲ್ಲಿನ ದಂಡೆಯ ಮೇಲೆಲ್ಲ ಸುತ್ತಾಾಡಿ, ಅಲ್ಲಿನ ಹಚ್ಚ ಹಸಿರು ಉದ್ಯಾಾನವನಗಳಲ್ಲೇ ಕಾಲಕಳೆದು ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿದೆವು. ಅದೊಂದು ಮರೆಯಲಾಗದ ಅನುಭವ.

ಈ ನದಿಯನ್ನು ‘ಲೇಕ್ ಜಿನೀವಾ’ ಎಂದೇ ಕರೆಯುತ್ತಾಾರೆ. ಲೇಕ್ ಎಂದರೆ ಕೆರೆ ಅಂತ ಅನಿಸಿದರು ಸಹ ಇದು ಕೆರೆಯಷ್ಟು ಸಣ್ಣದು ಅಲ್ಲವೇ ಅಲ್ಲ. ದೊಡ್ಡ ನದಿಯೇ ಹೌದು. ಈ ನದಿ ಎಷ್ಟು ದೊಡ್ಡದೆಂದರೆ, ನದಿಯ ಅರ್ಧಭಾಗ ಸ್ವಿಿಟ್ಜರ್‌ಲೆಂಡಿಗೆ ಸೇರಿದರೆ, ಉಳಿದರ್ಧ ಭಾಗ ಫ್ರಾಾನ್‌ಸ್‌ ದೇಶಕ್ಕೆೆ ಸೇರಿದ್ದು. ನೀವು ಗೂಗಲ್ ಮ್ಯಾಾಪ್‌ನಲ್ಲಿ ನೋಡಿದರೆ ಸ್ಪಷ್ಟವಾಗಿ ಕಾಣುತ್ತದೆ. ಈ ನದಿಯ ಮುಖ್ಯ ಭಾಗದಲ್ಲಿ ಎರಡು ದೇಶಗಳ ಗಡಿಯೂ ಕಾಣುತ್ತದೆ. ಅಲ್ಲಿನ ಜನರು ಎಷ್ಟು ಪುಣ್ಯ ಮಾಡಿದ್ದಾಾರೋ ತಿಳಿದಿಲ್ಲ, ಈ ರೀತಿಯ ನೀರಿನ ಸೆಲೆಯ ಮಧ್ಯೆೆ ತಮ್ಮ ಜೀವನ ಕಳೆಯುವುದೆಂದರೆ, ಎಷ್ಟೋೋ ಜನ್ಮದ ಪುಣ್ಯ ಮಾಡಿರಬೇಕು.
ನಮ್ಮಲ್ಲಿಯೂ ಹಲವು ನದಿಗಳಿವೆ. ಇಲ್ಲಿಯೂ ಪ್ರಾಾಕೃತಿಕ ಸೌಂದರ್ಯದಿಂದ ತುಂಬಿ ತುಳುಕುವಂಥ ನದಿಗಳಿವೆ.

ಆದರೆ ನಗರಗಳ ಮಧ್ಯೆೆ ನದಿಗಳ ಸೆಲೆ ಇರುವುದು ಕಡಿಮೆ. ಇರುವ ನದಿಗಳನ್ನು ನಾವು ಸರಿಯಾಗಿ ಇಟ್ಟುಕೊಂಡಿಲ್ಲ, ನದಿಯ ಸೌಂದರ್ಯವನ್ನು ಉಳಿಸಿಕೊಳ್ಳದೇ ಪ್ಲಾಾಸ್ಟಿಿಕ್ ತುಂಡುಗಳು, ಹಸಿ ತ್ಯಾಾಜ್ಯ, ಮರದ ದಿಮ್ಮಿಿಗಳು, ಮಾಂಸದ ತ್ಯಾಾಜ್ಯಗಳನ್ನು ನದಿಗಳಿಗೆ ಸುರುವಿ ಹಾಳುಗೆಡವಿದ್ದೇವೆ. ನದಿಗಳೆಲ್ಲ ಗಬ್ಬು ನಾರುತ್ತಿಿವೆ. ಪೂಜ್ಯ ಭಾವನೆಯಿಂದ ನೋಡುವ ಗಂಗೆಯನ್ನೇ ಮಲಿನಗೊಳಿಸಿದ್ದೇವೆ. ದೇವರ ಹೆಸರಿನಲ್ಲಿ ರುವ ವಸ್ತುಗಳನ್ನು, ಸತ್ತ ಹೆಣಗಳನ್ನು, ಸುಟ್ಟ ಬೂದಿಯನ್ನು, ಪಿಂಡ ಬಿಡುವ ನೆಪದಲ್ಲಿ ಮೈಮೇಲಿನ ಬಟ್ಟೆೆಯನ್ನೂ ನದಿಗೆ ಎಸೆಯಲಾಗಿದೆ. ನಮ್ಮ ಮನೆ ಹಾಗೂ ನಾವು ಸ್ವಚ್ಛವಾಗಿದ್ದರೆ ಸಾಕು, ಪ್ರಕೃತಿಯು ಹಾಳಾದರೂ ಪರವಾಯಿಲ್ಲ ಎನ್ನುವ ಮನಸ್ಥಿಿತಿ ನಮ್ಮದು.

ಬೆಂಗಳೂರು ನಗರ ಮಧ್ಯೆೆದಲ್ಲಿ ಒಂದು ಕಾಲಕ್ಕೆೆ ಪ್ರಕೃತಿಯ ಸೊಬಗಿನಿಂದ ಕೂಡಿದ್ದ ವೃಷಭಾವತಿ ನದಿಯೊಂದು ಹರಿಯುತ್ತಿಿತ್ತು, ಎಷ್ಟು ಜನರಿಗೆ ಈ ವಿಷಯ ತಿಳಿದಿದೆಯೋ ಇಲ್ಲವೋ, ಗೊತ್ತಿಿಲ್ಲ. ಈಗಿನ ಎಷ್ಟೋೋ ಹುಡುಗರಿಗೆ ಈ ರೀತಿಯ ನದಿ ಇತ್ತೆೆಂದು ಊಹಿಸಲು ಸಾಧ್ಯವಿಲ್ಲ. ಶಾಲೆಗಳಲ್ಲಿನ ಮಕ್ಕಳಿಗೆ ಶಿಕ್ಷಕರು ಇಲ್ಲಿ ನದಿಯೊಂದು ಇತ್ತೆೆಂದು ಹೇಳುವ ಮನಸ್ಥಿಿತಿಯಲ್ಲೂ ಇಲ್ಲ. ಅಪ್ಪ-ಅಮ್ಮಂದಿರು ಸಹ ಈ ರೀತಿಯ ನದಿ ಇತ್ತೆೆಂದು ಹೇಳಲೂ ಸಾಧ್ಯವಿಲ್ಲ. ಆದರೆ ‘ಕೆಂಗೇರಿ ಮೋರಿ’ ಎಂದರೆ ಎಲ್ಲರಿಗೂ ತಿಳಿಯುತ್ತದೆ. ಮೈಸೂರು ರಸ್ತೆೆಯಲ್ಲಿ ಹೋಗಬೇಕಾದರೆ ಮೂಗು ಮುಚ್ಚುವ ಪರಿಸ್ಥಿಿತಿ ಇರುವ ನೀರೆಂದರೆ ತಿಳಿಯುತ್ತದೆ. ನೊರೆ ಬರುವ ನೀರೆಂದರೆ ತಿಳಿಯುತ್ತದೆ. ಮಳೆ ಬಂತೆಂದರೆ ಇದರ ನೀರು ಮೊದಲು ನುಗ್ಗುವುದೇ ಗಾಳಿ ಆಂಜನೇಯ ಸ್ವಾಾಮಿಯ ಪಾದಕ್ಕೆೆ ನೈಸರ್ಗಿಕ ಸೊಬಗಿನಿಂದ ಕೂಡಿದ್ದ ಒಂದು ಸುಂದರ ನದಿಯೊಂದಕ್ಕೆೆ ಈ ರೀತಿಯ ಅವಮಾನದುದ್ದು ವಿಪರ್ಯಾಾಸವೇ ಸರಿ. ಒಂದು ಹೆಣ್ಣಿಿನ ಹೆಸರಿರುವ ನದಿಯೊಂದಕ್ಕೆೆ ಇಷ್ಟೊೊಂದು ಗಲೀಜು ಸುರಿದು ಹಾಳುಗೆಡುವುದೆಂದರೆ, ಹೆಣ್ಣಿಿನ ಜೀವನವನ್ನೇ ಹಾಳುಮಾಡಿದ್ದಕ್ಕೆೆ ಸಮ.

ವೃಷಭಾವತಿ ನದಿಯು ಬಸವನಗುಡಿಯ ದೊಡ್ಡ ಬಸವಣ್ಣ ದೇವಸ್ಥಾಾನದ ಹಿಂಬದಿಯ ಬೆಟ್ಟದಿಂದ ಹುಟ್ಟಿಿ, ಕೊನೆಗೆ ಮೈಸೂರು ರಸ್ತೆೆಗೆ ಹೊಂದಿಕೊಂಡಿರುವ ಅರ್ಕಾವತಿ ನದಿಯೊಡನೆ ಸೇರಿ, ಕಾವೇರಿ ನದಿಯಲ್ಲಿ ಸಂಗಮವಾಗುತ್ತವೆ. ಸುಮಾರು ಅರವತ್ತರ ದಶಕದಲ್ಲಿ ವೃಷಭಾವತಿ ‘ಲೇಕ್ ಜಿನೀವಾ’ದಷ್ಟೇ ಸ್ವಚ್ಛವಾಗಿ, ತಿಳಿಯಾಗಿ ಹರಿಯುತ್ತಿಿದ್ದಳು. ಅದೆಷ್ಟು ಸ್ವಚ್ಛತೆಯಿಂದ ಕೂಡಿದ್ದಳೆಂದರೆ ಕೆಂಗೇರಿಯ ಶಿವನ ದೇವಾಲಯ, ಬಾಪುಜಿನಗರದ ಆಂಜನೇಯ ಸ್ವಾಾಮಿಗೆ ನಿತ್ಯವೂ ವೃಷಭಾವತಿ ನದಿಯ ನೀರಿನಿಂದಲೇ ಅಭಿಷೇಕ ಮಾಡಲಾಗುತ್ತಿಿತ್ತು ಎಂದರೆ ನೀವು ಅಚ್ಚರಿಪಡುವಿರೇನೋ.

ತನ್ನ ಅಕ್ಕಪಕ್ಕದಲ್ಲಿ ಸೌಂದರ್ಯದ ಸೆಲೆಯನ್ನೇ ಹೊಂದಿದ್ದೇ ಈಕೆ, ತನ್ನನ್ನು ಕಲುಷಿತಗೊಳಿಸಿದವರಿಗೆ ಮಾತ್ರ ಏನೂ ಮಾಡದೇ ಕೊಳಕಿನಿಂದಲೇ ಹರಿಯುತ್ತಿಿದ್ದಾಾಳೆ. ಒಂದು ಕಾಲದಲ್ಲಿ ಬೆಂಗಳೂರಿನ ಹಲವಾರು ಬಡಾವಣೆಗಳಿಗೆ ನೀರಿನ ಸೆಲೆಯಾಗಿದ್ದ ಈಕೆ, ಇಂದು ಸ್ವಾಾಭಾವಿಕ ಸೊಬಗಿನಿಂದ ಹರಿಯದೇ, ನಗರದ ಕೊಳೆ ಹೊತ್ತೊೊಯ್ಯುವ ಬೃಹತ್ ಚರಂಡಿಯಾಗಿ ಹರಿಯುತ್ತಿಿದೆ!

ಅಂದು ಈ ನದಿ ನೀರಿನಿಂದ ದೇವರುಗಳಿಗೆ ಅಭಿಷೇಕವಾಗುತ್ತಿಿತ್ತು, ಹಲವಾರು ಜಾನುವಾರುಗಳು ಪ್ರತಿನಿತ್ಯ ನೀರು ಕುಡಿಯುತ್ತಿಿದ್ದವು, ಸುತ್ತಮುತ್ತ ವಾಸಿಸುವ ಜನರಿಗೆ ಕುಡಿಯುವ ನೀರಿನ ಸೆಲೆಯಾಗಿದ್ದಳು. ಇಂಥ ವೃಷಭಾವತಿಯು ಇಂದು ರಸ್ತೆೆಯ ಬದಿಯಲ್ಲಿ ಜನರು ನಿಂತು ಮಲ, ಮೂತ್ರ ವಿಸರ್ಜನೆ ಮಾಡಲೂ ಆಗದಂಥ ದುರ್ವಾಸನೆಯ ಮೋರಿಯಾಗಿದ್ದಾಾಳೆ!
ಈ ನದಿಯ ಮೇಲಾದ ಮಾನವನ ಕೃತ್ಯದ ಬಗ್ಗೆೆ ಬರೆಯಲು ನನಗೆ ಎಷ್ಟು ಸಂಕಟವಾಗುತ್ತಿಿದೆಯೆಂದರೆ, ಬೇರೆ ವಿಧಿಯಿಲ್ಲದೇ ಈ ಪದ ಬಳಕೆಗಳನ್ನು ಮಾಡಬೇಕಿದೆ. ಮೊದಲ ಭಾಗದಲ್ಲಿ ‘ಜಿನೀವಾ’ ನಗರದ ನದಿಯನ್ನು ಅಷ್ಟು ಹೊಗಳಿ, ನಾನು ಹುಟ್ಟಿಿ ಬೆಳೆದ, ಪ್ರತಿನಿತ್ಯ ನೋಡುವ ವೃಷಭಾವತಿ ನದಿಯ ಕೆಟ್ಟ ವರ್ಣನೆಯನ್ನು ಮಾಡಬೇಕಾದರೆ ಕರುಳು ಕಿತ್ತು ಬಂದಂತಾಗುತ್ತದೆ.

ಪ್ರತಿನಿತ್ಯವೂ ನನ್ನ ಮನೆಯ ಮಲಮೂತ್ರವೂ ನೀರು ಹಾಕಿದ ತಕ್ಷಣ ವೃಷಭಾವತಿಯನ್ನು ಸೇರುತ್ತಾಾಳೆ ಎಂದಾಗಲೆಲ್ಲ, ಕೈಲಾಗದ ಪರಿಸ್ಥಿಿತಿಯಲ್ಲಿರುವ ನಮ್ಮನ್ನೇ ನೋಡಿದಾಗ ಅಸಹ್ಯವೆನಿಸುತ್ತದೆ. ಅಷ್ಟು ಚೆಂದದ ನದಿಗೆ ಎಲ್ಲಾಾ ಕೊಳಕುಗಳನ್ನು ಬಿಟ್ಟು ಗಲೀಜು ಮಾಡಿರುವವರು ನಾವೇ. ಅವಳ ಇಂದಿನ ಪರಿಸ್ಥಿಿತಿಗೆ ನಾವೇ ಕಾರಣ. ನಾವೆಲ್ಲರೂ ಸೇರಿ ಒಂದು ಹೆಣ್ಣನ್ನು ಹಾಳುಮಾಡಿರುವ ರೀತಿ ಭಾಸವಾಗುತ್ತಿಿದೆ. ಹಾಳಾದ ನಂತರವೂ ಆಕೆಯನ್ನು ಸರಿ ಮಾಡದೆ, ಮತ್ತೇ ಮತ್ತೆೆ ಪ್ರತಿನಿತ್ಯವೂ ಹಾಳುಮಾಡುತ್ತಿಿದ್ದೇವೆ. ಬೆಂಗಳೂರು ನಗರವು ಬೆಳೆದಂತೆಲ್ಲ ಆಕೆಯನ್ನು ಹಾಳುಮಾಡುವವರ ಸಂಖ್ಯೆೆಯೂ ಹೆಚ್ಚುತ್ತಿಿದೆ.

ಪ್ರಪಂಚದ ಬೇರೆ ಯಾವ ನಗರದಲ್ಲಿಯೂ ಹಾಗಾದರೆ ಮಲ, ಮೂತ್ರ ವಿಸರ್ಜನೆ ಮಾಡುವುದಿಲ್ಲವೇ? ಎಲ್ಲಿಯೂ ಕಸವನ್ನು ಹರಡುವುದಿಲ್ಲವೇ? ಎಲ್ಲಿಯೂ ಪ್ರಾಾಣಿಗಳು ಸಾಯುವುದಿಲ್ಲವೇ? ಎಲ್ಲಿಯೂ ಕಾರ್ಖಾನೆಗಳೇ ಇಲ್ಲವೇ? ಅವರು ನದಿಯನ್ನು ಕಲುಷಿತಗೊಳಿಸದೇ ತ್ಯಾಾಜ್ಯವನ್ನು ವಿಲೇವಾರಿ ಮಾಡುತ್ತಿಿಲ್ಲವೇ? ಜಿನೀವಾದಲ್ಲಿಯೂ ಎಲ್ಲಾಾ ದಿನನಿತ್ಯದ ಚಟುವಟಿಕೆಗಳು ನಡೆಯುತ್ತವೆ. ಆದರೂ ಅಲ್ಲಿನ ನದಿ ಮಾತ್ರ ಯಾಕೆ ಅಷ್ಟು ಚೆನ್ನಾಾಗಿದೆ? ಬೆಂಗಳೂರು ನಗರ ಬೆಳೆದಂತೆಲ್ಲ ಅಡ್ಡಕಸುಬಿ ಸರಕಾರದ ಪ್ರತಿನಿಧಿಗಳು ಸುಲಭವಾಗಿ ನಗರದ ತ್ಯಾಾಜ್ಯವನ್ನೆೆಲ್ಲ ವಿಲೇವಾರಿ ಮಾಡಲು ಬಳಸಿಕೊಂಡ ಒಂದೇ ಮಾರ್ಗವೆಂದರೆ, ವೃಷಭಾವತಿ ನದಿ.

ಐಟಿ, ಬಿಟಿ ನಗರವೆಂದು ವಿಶ್ವವಿಖ್ಯಾಾತಿಯಾಗಿರುವ ಬೆಂಗಳೂರಿಗೆ ಏನಾದರೂ ವಿದೇಶಿ ಗಣ್ಯರನ್ನು ವೃಷಭಾವತಿ ನದಿಯ ಮಗ್ಗುಲುಗಳಲ್ಲಿ ಕರೆತಂದರೆ, ಅವರ ಜತೆಯಿರುವ ಜನನಾಯಕರಿಗೆ ಯಾವುದರಲ್ಲಿ ಹೊಡೆದುಕೊಳ್ಳಬೇಕಾಗುತ್ತದೆಯೋ ತಿಳಿದಿಲ್ಲ. ಇಲ್ಲಿಯವರೆಗೂ ನಮ್ಮನ್ನಾಾಳಿದ ಸರಕಾರಗಳು ಈ ವಿಚಾರದಲ್ಲಿ ಏನನ್ನೂ ಮಾಡಲಿಲ್ಲ. ಸುಲಭ ಮಾರ್ಗವಾಗಿ ಈಕೆಯನ್ನು ಬಳಸಿಕೊಂಡರು. ಬೆಂಗಳೂರು ಮಹಾನಗರ ಪಾಲಿಕೆಯು, ಬೃಹತ್ ಬೆಂಗಳೂರು ನಗರ ಪಾಲಿಕೆಯಾಗಿ ಬೆಳೆಯಿತು. ಆದರೆ ಇದಕ್ಕನುಗುಣವಾಗಿ ವೃಷಭಾವತಿಯ ಒಡಲು ಸೇರುವ ವಿಷವೂ ಸಹ ಬೃಹತ್ ಮಟ್ಟಕ್ಕೆೆ ಏರಿತು. ಈ ನದಿಯ ಹುಟ್ಟು, ಬಳಕೆ, ರಾಜರ ನೀತಿಗಳು, ಉಪಕಥೆಗಳನ್ನು ಇಲ್ಲಿ ಚರ್ಚಿಸಲು ನನಗೂ ಇಷ್ಟವಿಲ್ಲ. ಈಗಾಗಲೇ ಹಲವಾರು ವರ್ಷಗಳಿಂದಲೂ ಇದರ ಬಗ್ಗೆೆ ಬರೆಯುತ್ತಿಿರುವ, ಚರ್ಚಿಸುತ್ತಿಿರುವ ವಿಚಾರಗಳು ಯುಟ್ಯೂಬ್‌ನಲ್ಲಿ ಅಥವಾ ಪುಸ್ತಕಗಳಲ್ಲಿ ದೊರೆಯುತ್ತವೆ.

ನಾನೂ ಸಹ ಅದೇ ಪುಂಗಿಯನ್ನು ಊದಿದರೆ, ಈ ವಿಚಾರವನ್ನು ಓದಿದ ಜನರು ಅಲ್ಲಿಗೇ ಮರೆಯುತ್ತಾಾರೆ. ಎರಡು ದಿನ ಅದರ ಬಗ್ಗೆೆ ಯೋಚಿಸಿ, ಅಯ್ಯೋ ಪಾಪವೆಂದು ಅಲ್ಲಿಗೆ ಬಿಡುತ್ತಾಾರೆ. ಈ ಕಥೆಗಳೆಲ್ಲವೂ ಓದಲು, ಕೇಳಲು ಚೆಂದ. ಆದರೆ ಇನ್ನು ಎಷ್ಟು ದಿವಸ ಇತಿಹಾಸವನ್ನು ಕೇಳಬೇಕು? ಕೊಳಕಾಗಿರುವ ಇತಿಹಾಸವನ್ನು ಅಳಿಸಿ, ಶುದ್ಧ ಮಾಡಿ ಇತಿಹಾಸವನ್ನು ಸೃಷ್ಟಿಿಮಾಡುವುದು ಯಾವಾಗ? ಬಾಯಿ ಮಾತಿನಲ್ಲಿ ಹೇಳಲು ಎಲ್ಲವೂ ಸರಿಯಿರುತ್ತದೆ. ಕೇಳಲು ಕಿವಿಗಳೂ ಚೆನ್ನಾಾಗಿರುತ್ತವೆ. ಆದರೆ ಇತಿಹಾಸ ಸೃಷ್ಟಿಿಸಲು ಮುಂದೆ ಬರುವ ಮಂದಿ ಮಾತ್ರ ಬೆರಳೆಣಿಕೆಯಷ್ಟು ಮಾತ್ರ. ಎಲ್ಲರೂ ಸಹ ಫೇಸ್‌ಬುಕ್ ಹೀರೋಗಳೇ.

ನೆಲಮಟ್ಟದಲ್ಲಿ ನಿಂತು, ಇದರ ಪರವಾಗಿ ಹೋರಾಡುವವರಿಲ್ಲ. ನಿಮ್ಮ ಮನೆಯ ಹೆಣ್ಣುಮಕ್ಕಳನ್ನು ಹಾಳುಮಾಡಿದ್ದರೆ, ನೀವು ಸುಮ್ಮನಿರುತ್ತಿಿದ್ದಿರಾ? ಈ ರೀತಿಯಾಗಿ ಹಾಳಾದ ನದಿಗಳನ್ನು ಸರಕಾರದ ಪ್ರತಿನಿಧಿಗಳು ಶುದ್ಧ ಮಾಡಿರುವ ಹಲವಾರು ಉದಾಹರಣೆಗಳಿವೆ. ಎಲ್ಲರ ತಲೆಯಲ್ಲಿಯೂ ಲಂಡನ್ನಿಿನ ಥೇಮ್‌ಸ್‌ ನದಿಯೊಂದೇ ನೆನಪಾಗುತ್ತದೆ. ಯಾಕೆ ನಮ್ಮಲ್ಲಿಯೂ ಈ ರೀತಿಯ ಕೆಲಸಗಳು ಆಗಿಲ್ಲವೇ? ಆಗಿವೆ ಎಂದರೆ ಎಲ್ಲರಿಗೂ ಆಶ್ಚರ್ಯವಾಗಬಹುದು. ‘ನಮಾಮಿ ಗಂಗೆ’ಯ ಹೆಸರಿನಲ್ಲಿ ಇಂದು ಗಂಗೆಯ ಶೇ.60ರಷ್ಟು ಭಾಗ ಶುದ್ಧವಾಗಿರುವುದನ್ನು ತಾವುಗಳು ಅಂಟಿಕೊಂಡಿರುವ ಕುರ್ಚಿಗಳನ್ನು ಬಿಟ್ಟು ಸ್ವತಃ ಹೋಗಿ ನೋಡಿ ಬರಬೇಕು. ಕೆಲವು ತಲೆತಿರುಕರು ಟಿವಿಯ ಮುಂದೆ ಕುಳಿತು, ಯಾವುದೋ ಒಂದು ಫೋಟೊ ತೋರಿಸಿ ಗಂಗೆಯು ಇನ್ನೂ ಪವಿತ್ರಳಾಗಿಲ್ಲವೆಂದು ಬೊಗಳುತ್ತಾಾರೆ.

ಇದಕ್ಕೆೆ ಒಂದು ಸಣ್ಣ ಉದಾಹರಣೆಯನ್ನು ನೀಡುತ್ತೇನೆ. ಮಧ್ಯಪ್ರದೇಶದ ಕಾನ್‌ಪುರ ನಗರದಲ್ಲಿ ಏಷ್ಯಾಾ ಖಂಡದ ಅತ್ಯಂತ ಹಳೆಯದಾದ ರಾಜಕಾಲುವೆಯೊಂದಿದೆ. ಸುಮಾರು 128 ವರ್ಷ ಹಳೆಯದಾದ ಈ ರಾಜಕಾಲುವೆಯು ಗಂಗೆಯ ಒಡಲನ್ನು ಸೇರುತ್ತಿಿತ್ತು. ಕಾನ್‌ಪುರ ನಗರದ ಗಲೀಜು ಎಲ್ಲವೂ ಈ ರಾಜಕಾಲುವೆಯ ಮೂಲಕ ನದಿಗೆ ಸೇರುತ್ತಿಿತ್ತು. ಪ್ರತಿನಿತ್ಯ ಸುಮಾರು 14ಕೋಟಿಯಷ್ಟು ಲೀಟರ್‌ನಷ್ಟು ಸಂಸ್ಕರಿಸದ ಒಳಚರಂಡಿಯ ನೀರು ಈ ರಾಜಕಾಲುವೆಯ ಮೂಲಕ ನದಿಯನ್ನು ಸೇರುತ್ತಿಿತ್ತು. ಈಗ ರಾಜಕಾಲುವೆಯ ಒಳಚರಂಡಿಯ ನೀರನ್ನುಸಂಪೂರ್ಣವಾಗಿ ನದಿಯಿಂದ ಬೇರ್ಪಡಿಸಲಾಗಿದೆ. ಕಾನ್‌ಪುರದ ತ್ಯಾಾಜ್ಯವೆಲ್ಲ ಈಗ ನದಿಗೆ ಸೇರುವುದಿಲ್ಲ. ‘ವಿಶೇಷ ಸಂಸ್ಕರಣಾ’ ಘಟಕಗಳನ್ನು ಸ್ಥಾಾಪಿಸಿ ನಗರದ ತ್ಯಾಾಜ್ಯಯುಕ್ತ ನೀರನ್ನು ಅಲ್ಲಿಗೆ ರವಾನಿಸಲಾಗುತ್ತಿಿದೆ. ಸಂಸ್ಕರಿಸಿದ ನೀರು ಕಾರ್ಖಾನೆಗಳಲ್ಲಿ ಮರುಬಳಕೆಯಾಗುತ್ತಿಿದೆ. ಸುಮಾರು 1250 ಕೋಟಿಯ ವೆಚ್ಚದಲ್ಲಿ ಈ ಕಾರ್ಯವನ್ನು ಮಾಡಲಾಗಿದೆ.

ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಹಾಗೂ ಮುಖ್ಯಮಂತ್ರಿಿ ಜಂಟಿಯಾಗಿ ಈ ಯೋಜನೆಯನ್ನು ಕೈಗೆತ್ತಿಿಕೊಂಡು ಯಶಸ್ವಿಿಯಾಗಿ ಮುಗಿಸಿದ್ದಾಾರೆ. ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಈ ಸಂಸ್ಕರಣಾ ಘಟಕಗಳು ಗಂಗೆಯನ್ನು ಶುದ್ಧೀಕರಿಸುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ. ಇಚ್ಛಾಾಶಕ್ತಿಿಯಿದ್ದರೆ ಏನನ್ನು ಬೇಕಾದರೂ ಮಾಡಬಹುದು ಎಂಬುದಕ್ಕೆೆ ಈ ಪ್ರಸಂಗವೇ ಸಾಕ್ಷಿಿ.

ಇದೇ ನಿಟ್ಟಿಿನಲ್ಲಿ ಸಾಗಿರುವ ಮತ್ತೊೊಂದು ಬೃಹತ್ ಯೋಜನೆಯೆಂದರೆ ನಾಗಪುರದ ‘ನಾಗ’ ನದಿಯ ಶುದ್ಧೀಕರಣ. ನಾಗಪುರ ನಗರದ 17 ಕಿ.ಮೀ ವ್ಯಾಾಪ್ತಿಿಯಲ್ಲಿ ಈ ನದಿ ಹರಿಯುತ್ತದೆ. ಇಡೀ ನಗರದ ತ್ಯಾಾಜ್ಯವೆಲ್ಲವೂ ಈ ನದಿಯಲ್ಲಿಯೇ ಸೇರಿ ಕಲುಷಿತಗೊಳ್ಳುವುದರಿಂದ, ಈ ನದಿಯಲ್ಲಿನ ನೀರನ್ನು ಸಹ ವಿಶೇಷ ಸಂಸ್ಕರಣಾ ಘಟಕಗಳಿಗೆ ರವಾನಿಸಿ ಸಂಸ್ಕರಿಸುವ ಬೃಹತ್ ಯೋಜನೆಯೊಂದು ಶುರುವಾಗಿದೆ. 2016ರಲ್ಲಿಯೇ ಸರಕಾರವು ಈ ಯೋಜನೆಗೆ ಒಪ್ಪಿಿಗೆ ನೀಡಿದೆ. ಸುಮಾರು 1300 ಕೋಟಿಯ ವೆಚ್ಚದಲ್ಲಿ ತಯಾರಾಗಿರುವ ಈ ಯೋಜನೆಗೆ ಈಗಾಗಲೇ ಶುರುವಾಗಿದೆ. ಕೇಂದ್ರ ಸರಕಾರವು ಈ ಯೋಜನೆಗೆ ಬೇಕಿರುವ ಹಣದಲ್ಲಿ ಶೇ.60ರಷ್ಟು ಹಣವನ್ನು ಜಪಾನಿನ ಬ್ಯಾಾಂಕ್‌ನಿಂದ ಸಾಲದ ರೂಪದಲ್ಲಿ ನೀಡಲು ಒಪ್ಪಿಿದೆ.

ಉಳಿದ ಶೇ.40ರಷ್ಟು ಹಣವನ್ನು ನಾಗಪುರ ನಗರಾಭಿವೃದ್ಧಿಿ ಪ್ರಾಾಧಿಕಾರ ಹಾಗೂ ಮಹಾರಾಷ್ಟ್ರ ಸರಕಾರವು ಸಮನಾಗಿ ಹಂಚಿಕೊಳ್ಳಲಿವೆ. ಈ ನದಿಯೂ ಸಹ ತನ್ನ ಒಡಲಲ್ಲಿ ಮಲ, ಮೂತ್ರ, ಕೊಳೆತ ಮಾಂಸಗಳ ತ್ಯಾಾಜ್ಯ, ಆಸ್ಪತ್ರೆೆಯ ತ್ಯಾಾಜ್ಯ, ಕಾರ್ಖಾನೆಗಳ ವಿಷಪೂರಿತ ತ್ಯಾಾಜ್ಯಗಳೆಲ್ಲವನ್ನೂ ಸೇರಿಸಿಕೊಂಡಿದೆ. ಈ ಎಲ್ಲಾಾ ತ್ಯಾಾಜ್ಯ ಸೇರಿದ ನೀರನ್ನು ಶೇಖರಿಸಿ ಸಂಸ್ಕರಣಾ ಘಟಕಗಳಿಗೆ ನೇರವಾಗಿ ರವಾನಿಸಿ, ಸಂಸ್ಕರಿಸುವ ಯೋಜನೆಯಿದೆ. ಸಂಸ್ಕರಣೆಯಾದ ಬಳಿಕ, ಆ ನೀರನ್ನು ಪುನಃ ಕಾರ್ಖಾನೆಗಳಿಗೇ ಮಾರುವ ಯೋಜನೆಯನ್ನು ರೂಪಿಸಲಾಗಿದೆ.

ನಮ್ಮ ಕಣ್ಣಮುಂದೆಯೇ ಎರಡು ಉದಾಹರಣೆಗಳಿರುವಾಗ, ನಮ್ಮಲ್ಲಿನ ವೃಷಭಾವತಿ ನದಿಯನ್ನು ಸ್ವಚ್ಛ ಮಾಡಲು ಸಾಧ್ಯವಿಲ್ಲವೇ? ಪ್ರತಿನಿತ್ಯವೂ ಸುಮಾರು 50 ಲಕ್ಷ ಲೀಟರ್‌ಗಿಂತಲೂ ಹೆಚ್ಚು ನೀರು ವೃಷಭಾವತಿಯನ್ನು ಸೇರುತ್ತಿಿದೆ. ಸುಮಾರು 50ಕಿಮೀ ಗಳ ದೂರವನ್ನು ಕ್ರಮಿಸಿ ಕೊನೆಗೆ ಅರ್ಕಾವತಿ ನದಿಯನ್ನು ಸೇರುತ್ತದೆ. ಈ ಜಾಗದಲ್ಲಿ ಈಗಾಗಲೇ ಹಲವು ಸಂಸ್ಕರಣಾ ಘಟಕಗಳು ಇದ್ದರೂ ಸಹ ಇರುವ ಘಟಕಗಳು ಸಾಕಾಗುತ್ತಿಿಲ್ಲ. ಸಂಪೂರ್ಣವಾಗಿ ವೃಷಭಾವತಿಯನ್ನು ಶುದ್ಧೀಕರಿಸಲು ಹಲವು ಸಂಸ್ಕರಣಾ ಘಟಕಗಳ ಅವಶ್ಯಕತೆಯಿದೆ. ಮೊದಲು ತ್ಯಾಾಜ್ಯಯುಕ್ತ, ಕಲುಷಿತ ನೀರನ್ನು ನದಿಗೆ ಬಿಡುವುದನ್ನು ತಡೆದು, ನಗರದಲ್ಲಿ ಅಲ್ಲಲ್ಲಿ ಎಲ್ಲಾಾ ದಿಕ್ಕುಗಳಲ್ಲಿಯೂ ‘ಸಂಸ್ಕರಣಾ ಘಟಕ’ಗಳನ್ನು ನಿರ್ಮಿಸಬೇಕಿದೆ. ತ್ಯಾಾಜ್ಯಯುಕ್ತ ನೀರನ್ನು ತಡೆದರೆ, ನದಿಯು ತಾನಾಗಿಯೇ ಸುರಿದ ಮಳೆಯಲ್ಲಿ ಶುದ್ಧವಾಗುತ್ತದೆ. ಆದರೆ ಇದು ಹೇಳಿದಷ್ಟು ಸುಲಭವಲ್ಲ.

ಬೆಂಗಳೂರಿನ ಶೇ.33ರಷ್ಟು ಭಾಗದ ಬಡಾವಣೆಗಳ ಮೂಲಸೌಕರ್ಯವನ್ನೇ ಬದಲಾಯಿಸಬೇಕು. ನಾಳೆಯಿಂದ ನಿಮ್ಮ ಮನೆಯ ಬಾತ್‌ರೂಮಿನ ಪೈಪುಗಳಿಂದ ನೀರು ವೃಷಭಾವತಿಯನ್ನು ಸೇರಬಾರದೆಂದರೆ, ಬೇರೆ ಎಲ್ಲಿಯಾದರೂ ಸಂಸ್ಕರಣಾ ಘಟಕವನ್ನು ನೇರವಾಗಿ ಸೇರಿಸಬೇಕಲ್ಲವೇ? ಕನಿಷ್ಠವೆಂದರೂ ಸುಮಾರು 800-1000 ಕೋಟಿರು. ವೆಚ್ಚದ ಬೃಹತ್ ಯೋಜನೆಯಿದು. ವೈಟ್ ಟಾಪಿಂಗ್ ಎಂದು ಕಿಮೀಗೆ 11 ಕೋಟಿಯನ್ನು ವೆಚ್ಚ ಮಾಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು 50 ಕಿಮೀ ಉದ್ದದ ನದಿಯ ಜೀರ್ಣೋದ್ಧಾಾರಕ್ಕೆೆ ವೆಚ್ಚ ಮಾಡಲು ಸಾಧ್ಯವಿಲ್ಲವೇ? ಹಲವಾರು ಹೋರಾಟಗಾರರು ಈ ವಿಚಾರವಾಗಿ ಹೋರಾಟ ಮಾಡುತ್ತಾಾ ಬಂದಿದ್ದಾಾರೆ. ಆದರೆ ಯಾವ ಹೋರಾಟಕ್ಕೂ ಸರಕಾರಗಳು ಸರಿಯಾಗಿ ಸ್ಪಂದಿಸಿಲ್ಲ.

ಮಾತುಮಾತಿಗೂ ಕೇಂದ್ರ ಹಾಗೂ ರಾಜ್ಯದಲ್ಲಿ ಬೇರೆ ಬೇರೆ ಸರಕಾರಗಳಿವೆ ಎಂದು ಸಬೂಬು ನೀಡುತ್ತಿಿದ್ದ ಸರಕಾರಕ್ಕೆೆ ಈಗ ಸರಿಯಾದ ಕಾಲವು ಕೂಡಿ ಬಂದಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ನಿತಿನ್ ಗಡ್ಕರಿಯಂಥವರು ಘಟಾನುಘಟಿ ನಾಯಕರ ಕೈಯಲ್ಲಿ ಮೂಲಸೌಕರ್ಯದ ಮಂತ್ರಿಿಗಿರಿಯಿದೆ. ಇನ್ನು ಬೆಂಗಳೂರಿನಿಂದ ಐದು ಜನ ಸಂಸದನ್ನು ನೀಡಿದ್ದೇವೆ. ಮೂರು ಲೋಕಸಭಾ ಸಂಸದರು, ಇಬ್ಬರು ರಾಜ್ಯಸಭಾ ಸಂಸದರು ಬೆಂಗಳೂರು ಉತ್ತರದ ಸಂಸದರಾದ ಸದಾನಂದಗೌಡರು ರಸಗೊಬ್ಬರ ಸಚಿವರಾಗಿದ್ದಾಾರೆ. ಬೆಂಗಳೂರು ದಕ್ಷಿಿಣ ಕ್ಷೇತ್ರದಿಂದ ಯುವ ಸಂಸದನನ್ನೇ ಆಯ್ಕೆೆ ಮಾಡಿ ಕಳಿಸಿದ್ದೇವೆ. ಸಣ್ಣಪುಟ್ಟ ವಿಚಾರಗಳ ಬಗ್ಗೆೆ ಟ್ವಿಿಟ್ ಮಾಡುವ ಬದಲು ಈ ರೀತಿಯ ಕಾರ್ಯವನ್ನು ಕೈಗೆತ್ತಿಿಕೊಂಡು ಮುನ್ನಡೆಸಿದರೆ ಅದಕ್ಕಿಿಂತಲೂ ಒಳ್ಳೆೆಯ ಕೆಲಸ ಮತ್ತೊೊಂದಿಲ್ಲ.

ಮಲ್ಲೇಶ್ವರಂನ ಶಾಸಕರಾದ ಡಾ.ಅಶ್ವತ್‌ಥ್‌ ನಾರಾಯಣ ಅವರು ಉಪಮುಖ್ಯಮಂತ್ರಿಿಯಾಗಿದ್ದಾಾರೆ. ಬೆಂಗಳೂರಿನಿಂದ ನಾಲ್ವರಿಗೆ ಮಂತ್ರಿಿಗಿರಿ ದೊರಕಿದೆ. ಇದಕ್ಕಿಿಂತಲೂ ಉತ್ತಮ ಅವಕಾಶ ಇವರಿಗೆ ಸಿಗುವುದಿಲ್ಲ. ರಾಜ್ಯದಿಂದ ಸ್ಪರ್ಧಿಸಿ ಗೆದ್ದಿರುವ ನಿರ್ಮಲಾ ಸೀತಾರಾಮನ್ ಅವರ ಬಳಿ ವಿತ್ತ ಖಾತೆಯೇ ಇದೆ. ಇವರು ಮನಸ್ಸು ಮಾಡಿದರೆ ಇದು ದೊಡ್ಡ ವಿಷಯವಲ್ಲ. 25 ಸಂಸದರನ್ನು ನೀಡಿರುವ ಕರ್ನಾಟಕದ ಋಣ ತೀರಿಸಬೇಕೆಂದರೆ, ಪ್ರಧಾನ ಮಂತ್ರಿಿಯೂ ಈ ವಿಚಾರದಲ್ಲಿ ಮುಂದೆ ಬರಲೇಬೇಕು.
ಕಾವೇರಿ ನದಿಯ ಹೋರಾಟದಲ್ಲಿ ಪಾಲ್ಗೊೊಳ್ಳುವ ಎಲ್ಲ ಕನ್ನಡ ಸಂಘಟನೆಗಳು ಈ ವಿಚಾರದಲ್ಲಿ ದನಿಗೂಡಿಸಬೇಕು.

ನನಗೆ ಕುತೂಹಲ ಕೆರಳಿಸಿರುವ ಮತ್ತೊೊಂದು ವಿಚಾರವೆಂದರೆ, ಬೆಂಗಳೂರಿನ ಮಾರ್ವಾಡಿಗಳು ಎಷ್ಟು ಜನ ಈ ವಿಚಾರದಲ್ಲಿ ದನಿಗೂಡಿಸುತ್ತಾಾರೆಂಬುದನ್ನು ನೋಡಬೇಕು. ಅವರ ರಾಜ್ಯ ಪ್ರೇಮವು ನಿಜವಾಗಿಯೂ ಈಗ ತಿಳಿಯುತ್ತದೆ. ನಮ್ಮ ಯುವ ಸಂಸದನ ಬಳಿ ನಂತರ ಕೇಳುವ ಪ್ರಶ್ನೆೆಗಳು ಹಲವಾರು ಇವೆ.

ವೃಷಭಾವತಿಯ ಕಲುಷಿತ ವಾತಾವರಣಕ್ಕೆೆ ಕಾರಣವಾಗಿರುವ ಹಲವಾರು ಕಾರ್ಖಾನೆಗಳು ಸಹ ಈ ವಿಚಾರಗಳಿಗೆ ದನಿಗೂಡಿಸಬೇಕಿದೆ. ಮಾತು ಮಾತಿಗೂ ಥೇಮ್‌ಸ್‌ ನದಿಯ ಉದಾಹರಣೆಯನ್ನು ನೀಡುವ ಜಗತ್ತಿಿನ ಇತರ ದೇಶಗಳು ನಮ್ಮ ವೃಷಭಾವತಿಯ ಉದಾಹರಣೆಯನ್ನು ನೀಡಿದರೆ ಎಷ್ಟು ಸಂತಸ ಅಲ್ಲವೇ?

ಮುಖ್ಯಮಂತ್ರಿಿಗಳು ಬೆಂಗಳೂರಿಗರಿಗಾಗಿ ಇದೊಂದು ಯೋಜನೆಯನ್ನು ಕೈಗೆತ್ತಿಿಕೊಂಡು ಕೆಲಸವನ್ನು ಶುರು ಮಾಡಿ ಮುಗಿಸಿದರೆಂದರೆ, ಎಷ್ಟೋೋ ಶತಮಾನಗಳ ಕಾಲ ಅವರ ಹೆಸರ ಅಜರಾಮರವಾಗಿರುವುದೋ ಯೋಚಿಸಿ ನೋಡಿ. ನಿರಂತರವಾಗಿ ಹೋರಾಟವನ್ನು ಮಾಡಿ, ಸರಕಾರಕ್ಕೆೆ ಬಿಸಿ ತಾಗಿಸುವವರೆಗೂ ಈ ಯೋಜನೆಯು ಶುರುವಾಗುವುದಿಲ್ಲ. ಹಾಗಾಗಿ ಎಲ್ಲರೂ ಬೀದಿಗೆ ಇಳಿದು ಹೋರಾಟ ನಡೆಸಿಯಾದರೂ ನಮ್ಮ ನದಿಯನ್ನು ಉಳಿಸಿಕೊಂಡು, ನಮ್ಮ ಮುಂದಿನ ಪೀಳಿಗೆಯ ಹುಡುಗ-ಹುಡುಗಿಯರಿಗೆ ಬೆಂಗಳೂರಿನ ಇತಿಹಾಸ ಗರ್ಭದಲ್ಲಿ ಹುದುಗಿಹೋಗಿರುವ ನದಿಯನ್ನು ಪುನಶ್ಚೇತನಗೊಳಿಸಬೇಕಿದೆ. ಈ ನಿಟ್ಟಿಿನಲ್ಲಿ ಇದೇ ತಿಂಗಳ 22ರಂದು ಚಕ್ರವರ್ತಿ ಸೂಲಿಬೆಲೆಯವರು ಬೃಹತ್ ಆಂದೋಲನವೊಂದಕ್ಕೆೆ ಕರೆ ಕೊಡಲಿದ್ದಾಾರೆ. ಇವರು ಕೈಹಾಕಿದ ಕೆಲಸವನ್ನು ಕೈ ಬಿಟ್ಟಿಿರುವ ಉದಾಹರಣೆಯೇ ಇಲ್ಲ. ಹಾಗಾಗಿ ನಮಗೂ ಇವರ ಮೇಲೆ ವಿಶ್ವಾಾಸವು ಹೆಚ್ಚು. ಇಂಥ ಬೃಹತ್ ಕಾರ್ಯಕ್ಕೆೆ ಕೈಹಾಕಿ, ನಮ್ಮ ನದಿಯ ಸೌಂದರ್ಯವನ್ನು ನಾವು ಮರುಕಳಿಸುವಂತೆ ಮಾಡಿ ಮಾದರಿಯಾಗೋಣ. ಗಣೇಶನ ಅಭಿಷೇಕವನ್ನು ಮಾಡಲು ವೃಷಭಾವತಿಯ ನೀರನ್ನು ಬೇಗನೇ ಬಳಸುವಂತೆ ನದಿಯನ್ನು ಪುನರುಜ್ಜೀವನಗೊಳಿಸೋಣ.

error: Content is protected !!