Tuesday, 17th September 2019

ಕಠಿಣ ಸಂಚಾರ ನಿಯಮ ಕುರಿತು ಅಪಸ್ವರ ಏಕೆ?

ವಿಮರ್ಶೆ

ಗಣೇಶ್ ಭಟ್, 
ನಮ್ಮ ಜನರ ಮನಸ್ಥಿಿತಿ ಬಹಳ ವಿಚಿತ್ರ. ಒಳ್ಳೆೆಯ ಪರಿಣಾಮಕಾರೀ ಕಾನೂನುಗಳು ಬೇಕು ಅನ್ನುತ್ತಾಾರೆ. ಆದರೆ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರೆ ಅದಕ್ಕೆೆ ನೂರು ಆಕ್ಷೇಪಗಳನ್ನು ಹೇಳುತ್ತಾಾರೆ. ವ್ಯವಸ್ಥೆೆ ಸರಿಯಿಲ್ಲ, ಬದಲಾಗಬೇಕು ಎಂದು ಜನರು ಹೇಳುತ್ತಲೇ ಇರುತ್ತಾಾರೆ. ಆದರೆ ವ್ಯವಸ್ಥೆೆಯನ್ನು ಬದಲಾಯಿಸುವ ಪ್ರಯತ್ನ ಆರಂಭವಾದಲ್ಲಿ ಇದೇ ಜನ ಅದನ್ನು ವಿರೋಧಿಸುತ್ತಾಾರೆ. ಬದಲಾವಣೆಗೋಸ್ಕರ ಸ್ವಲ್ಪವೂ ಕಷ್ಟವನ್ನು ಅಥವಾ ತೊಂದರೆಯನ್ನು ಅನುಭವಿಸಲು ಸಿದ್ಧರಿಲ್ಲ. ಆರಂಭಿಕ ಹಂತದಲ್ಲಿ ಆಗುವ ಅನನುಕೂಲತೆಯನ್ನು ಸಕಾರಾತ್ಮಕ ದೃಷ್ಟಿಿಯಿಂದ ಸ್ವೀಕರಿಸದೆ ವ್ಯವಸ್ಥೆೆಯ ವಿರುದ್ಧ ತಿರುಗಿ ಬೀಳುವವರು ನಾವು. ಯಾವುದೇ ಬದಲಾವಣೆಯ ಪ್ರಯತ್ನಗಳನ್ನು ನಡೆಯಿಸಿದಾಗಲೂ ಗೊಣಗಾಡುವ ಹಾಗೂ ದೂರುವ ಪ್ರವೃತ್ತಿಿಯನ್ನು ಮುಂದುವರಿಸುತ್ತೇವೆ. ದೂರಗಾಮಿ ದೃಷ್ಟಿಿಕೋನದ ಕೊರತೆಯೇ ಇದಕ್ಕೆೆ ಕಾರಣ.

ಇತ್ತೀಚೆಗೆ ದಿನಾಂಕ 01.09.2019 ರಿಂದ ಅನ್ವಯವಾಗುವಂತೆ ಕೇಂದ್ರ ಸರಕಾರ ಸಂಚಾರ ನಿಯಮಗಳನ್ನು ಬಿಗುಗೊಳಿಸಿದೆ. ಜನರು ಬದಲಾದ ವ್ಯವಸ್ಥೆೆಯ ವಿರುದ್ಧ ಅಲ್ಲಲ್ಲಿ ಗೊಣಗಾಟ ಆರಂಭಿಸಿದ್ದಾಾರೆ. ಸಂಚಾರ ನಿಯಮವನ್ನು ಉಲ್ಲಂಘನೆ ಮಾಡುವವರ ವಿರುದ್ಧ ಶಿಕ್ಷೆಯನ್ನು ಈಗ ಕಠಿಣಗೊಳಿಸಲಾಗಿದೆ. ಅಪಾಯಕಾರಿ ಹಾಗೂ ಅಜಾಗರೂಕ ರೀತಿಯಲ್ಲಿ ವಾಹನ ಚಲಾಯಿಸುವವರ ಮೇಲಿನ ದಂಡದ ಪ್ರಮಾಣವು ಈ ಮೊದಲು 1000ರು. ಇದ್ದಿದ್ದು ಈಗ ಅದನ್ನು 10,000 ರುಪಾಯಿಗೆ ಏರಿಸಲಾಗಿದೆ. ಕುಡಿದು ವಾಹನ ಚಾಲನೆ ಮಾಡುವವರ ಮೇಲಿನ ದಂಡದ ಪ್ರಮಾಣವನ್ನು ಕೂಡಾ 10,000 ರುಪಾಯಿಗೆ ಏರಿಸಲಾಗಿದೆ. ಕುಡಿದು ವಾಹನ ಚಾಲನೆ ಮಾಡಿದ್ದಕ್ಕೆೆ ಮೊದಲ ಬಾರಿ ಸಿಕ್ಕಿಿ ಬಿದ್ದಾಾಗ 6 ತಿಂಗಳ ಜೈಲುಶಿಕ್ಷೆ ಹಾಗೂ ಎರಡನೇ ಬಾರಿ ಸಿಕ್ಕಿಿ ಬಿದ್ದರೆ 2 ವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸಲಾಗುವುದು. ವಾಹನ ವಿಮೆ ಇಲ್ಲದೆ, ವಾಹನ ಚಲಾವಣೆ ಮಾಡುವವರ ಮೇಲೆ 2000 ರು. ದಂಡ ವಿಧಿಸಲಾಗುತ್ತಿಿದೆ.

ಅತಿ ವೇಗದ ಚಾಲನೆ, ಹೆಲ್ಮೆೆಟ್ ಇಲ್ಲದೆ ದ್ವಿಿಚಕ್ರ ವಾಹನ ಚಲಾಯಿಸುವ ಅಕ್ರಮಗಳಿಗೆ ಸಹ ಅಧಿಕ ದಂಡ ಮತ್ತು ವಾಹನ ಚಾಲನಾ ಪರವಾನಗಿ ಅನ್ನು ಮೂರು ತಿಂಗಳ ಮಟ್ಟಿಿಗೆ ಅಮಾನತಿನಲ್ಲಿ ಇಡುವ ಶಿಕ್ಷೆ ನಿಗದಿಪಡಿಸಿದೆ. ಲೈಸೆನ್‌ಸ್‌ ಅಮಾನತಿನಲ್ಲಿರುವಾಗ ಪುನಃ ವಾಹನ ಚಲಾಯಿಸಿದಲ್ಲಿ ಒಂದು ಲಕ್ಷದ ವರೆಗೂ ಫೈನ್ ವಿಧಿಸಲಾಗುವುದು. ಟ್ರಾಾಫಿಕ್ ಸಿಗ್ನಲ್ ಗಳ ಉಲ್ಲಂಘನೆಗೂ ಹಿಂದಿನದಕ್ಕಿಿಂತ ಹಲವು ಪಟ್ಟು ದಂಡ, ಅಪ್ರಾಾಪ್ತ ಮಕ್ಕಳು ವಾಹನ ಚಲಾಯಿಸಿದಲ್ಲಿ, ಅವರ ಕೈಯಲ್ಲಿ ವಾಹನ ಕೊಟ್ಟವರಿಗೆ ಜೈಲು ಹಾಗೂ ಆ ವಾಹನದ ನೋಂದಣಿಯನ್ನು ಶಾಶ್ವತವಾಗಿ ರದ್ದು ಮಾಡುವ ಶಿಕ್ಷೆಗಳನ್ನೂ ನೂತನ ಶಾಸನದಲ್ಲಿ ರೂಪಿಸಲಾಗಿದೆ.

ಸಾರಿಗೆ ನಿಯಮ ಉಲ್ಲಂಸುವವರ ಮೇಲಿನ ಶಿಕ್ಷೆಯನ್ನು ಕಠಿಣಗೊಳಿಸಿದುದರ ವಿರುದ್ಧವಾಗಿ ಕೆಲ ಸಾರ್ವಜನಿಕರು ಮಾತನಾಡುತ್ತಿಿದ್ದಾಾರೆ. ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಬದಲಾದ ಕಾನೂನಿನ ವಿರುದ್ಧ ಆಕ್ಷೇಪ, ಲೇಖನ, ವ್ಯಂಗ್ಯಚಿತ್ರ, ಮೀಮ್‌ಗಳು ಕಾಣಿಸಿಕೊಳ್ಳುತ್ತಿಿವೆ. ಸರಕಾರ ಹಾಳಾದ, ಹೊಂಡ ಬಿದ್ದ ರಸ್ತೆೆಗಳನ್ನು ಸರಿಪಡಿಸಿದ ಮೇಲೆ ಸಾರಿಗೆ ನಿಯಮ ಉಲ್ಲಂಘನೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಿ, ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ದಂಡ ವಿಧಿಸಲಿ ಎಂದೆಲ್ಲಾ ಕಿಡಿ ಕಾರುತ್ತಿಿದ್ದಾಾರೆ. ಬಡ ವಾಹನ ಚಾಲಕರ ಮೇಲೆ ವಿಧಿಸಿರುವ ದಂಡ ಅತಿಯಾಯಿತು ಎನ್ನುತ್ತಿಿದ್ದಾಾರೆ.

ವೊಂದಕ್ಕೆೆ ಏನಿಲ್ಲವೆಂದರೂ 5 ಲಕ್ಷ ರಸ್ತೆೆ ಅಫಘಾತಗಳು ಸಂಭವಿಸುತ್ತವೆ. ಇದರ ಪರಿಣಾಮವಾಗಿ 1.5 ಲಕ್ಷ ಜನರು ಪ್ರಾಾಣ ಕಳೆದುಕೊಂಡರೆ, 3 ಲಕ್ಷ ಜನರು ತೀವ್ರ ಗಾಯಾಳುಗಳಾಗಿ ಆಸ್ಪತ್ರೆೆ ಸೇರಬೇಕಾಗುತ್ತದೆ. ಅರ್ಧದಷ್ಟು ಅಪಘಾತಗಳು ರಸ್ತೆೆಗಳ ದೋಷದಿಂದ, ರಸ್ತೆೆ ಹೊಂಡಗಳಿಂದ ಸಂಭವಿಸುತ್ತದೆ ಎಂದುಕೊಂಡರೂ ಉಳಿದ 50% ಅಪಘಾತಗಳು ಸಂಭವಿಸುವುದು ಅಜಾಗರೂಕತೆಯ ಚಾಲನೆ ಹಾಗೂ ನಿಯಮ ಉಲ್ಲಂಸಿ ವಾಹನ ಚಾಲನೆ ಮಾಡುವುದರಿಂದ. ಈ ಲೆಕ್ಕಾಾಚಾರದಲ್ಲಿ ವಾರ್ಷಿಕ 75,000 ಜನರು ನಿರ್ಲಕ್ಷ್ಯದ ಚಾಲನೆಯಿಂದ ಪ್ರಾಾಣ ಕಳೆದುಕೊಳ್ಳುವಂತಾದರೆ, 1.5 ಲಕ್ಷ ಜನರು ಇದೇ ಕಾರಣಕ್ಕೆೆ ಕೈಕಾಲು ಎಲುಬುಗಳನ್ನು ಮುರಿದುಕೊಂಡು ಆಸ್ಪತ್ರೆೆ ಸೇರುತ್ತಾಾರೆ. ಬಹಳಷ್ಟು ಜನರು ಶಾಶ್ವತವಾಗಿ ಅಂಗ ವಿಹೀನರಾಗುತ್ತಾಾರೆ. ಅತಿ ವೇಗದ ಚಾಲನೆಯಿಂದ ಆಗುವ ರಸ್ತೆೆ ಅಪಘಾತಗಳಲ್ಲಿ ಶೇ.41 ಜನ ಪ್ರಾಾಣ ಕಳೆದುಕೊಳ್ಳುತ್ತಿಿದ್ದಾರೆ ಎಂದು ಅಧ್ಯಯನವೊಂದು ಹೇಳುತ್ತದೆ.

ಅಂಕಿ ಅಂಶಗಳ ಪ್ರಕಾರ, 2017ರಲ್ಲಿ ದೇಶದಲ್ಲಿ ದಿನವೊಂದಕ್ಕೆೆ 98 ಮಂದಿ ಹೆಲ್ಮೆೆಟ್ ಇಲ್ಲದೆ ಪ್ರಯಾಣ ಮಾಡಿದ ಬೈಕ್ ಸವಾರರು ಬೈಕ್ ಅಪಘಾತಗಳಲ್ಲಿ ಸಾವನ್ನಪ್ಪಿಿದ್ದಾಾರೆ. ಅಂದರೆ ವರ್ಷವೊಂದಕ್ಕೆೆ 35,000 ಕ್ಕಿಿಂತಲೂ ಹೆಚ್ಚು ವ್ಯಕ್ತಿಿಗಳು ಹೆಲ್ಮೆೆಟ್ ಧರಿಸದೆ ಬೈಕ್ ಸವಾರಿ ಮಾಡಿದ ಸಂದರ್ಭದಲ್ಲಿ ಅಪಘಾತಕ್ಕೆೆ ಒಳಗಾಗಿ ತಮ್ಮ ಪ್ರಾಾಣವನ್ನು ಕಳೆದುಕೊಂಡಿದ್ದಾಾರೆ ಎಂದಾಯಿತು.

ಹೆಲ್ಮೆೆಟ್ ಧರಿಸದೇ ಇರುವುದಕ್ಕಾಾಗಿ ಕಡಿಮೆ ದಂಡ ಇದ್ದಾಾಗ ಒಂದು ಬಾರಿ ಫೈನ್ ಕಟ್ಟಿಿದವರೂ ಅದೇ ತಪ್ಪನ್ನು ಹಲವು ಬಾರಿ ಪುನರಾವರ್ತಿಸುತ್ತಿಿದ್ದರು. ಈಗ ಏರಿದ ದಂಡದ ಮೊತ್ತ ಹಾಗೂ ಚಾಲನಾ ಪರವಾನಗಿಯ ಅಮಾನತುಗೊಳ್ಳುವಿಕೆಯ ಭಯದಿಂದ ದ್ವಿಿಚಕ್ರ ವಾಹನವನ್ನು ಹೆಲ್ಮೆೆಟ್ ಧರಿಸಿಯೇ ಚಾಲನೆ ಮಾಡುವ ಸಾಧ್ಯತೆ ಹೆಚ್ಚಿಿದೆ. ಇದರಿಂದಾಗಿ ಬೈಕ್ ಅಪಘಾತಗಳ ಸಾವಿನ ಸಂಖ್ಯೆೆಯೂ ಕಡಿಮೆಯಾಗಲಿದೆ. ಕಾರು ಅಥವಾ ನಾಲ್ಕು ಚಕ್ರದ ವಾಹನ ಚಲಾವಣೆಯ ಸಂದರ್ಭದಲ್ಲಿ ನಡೆಯುವ ಅಪಘಾತಗಳಲ್ಲಿ 79% ಸಾವುಗಳು ಸಂಭವಿಸುವುದು ಸೀಟ್ ಬೆಲ್ಟ್ ಧರಿಸದೆ ಪ್ರಯಾಣಿಸುವುದರಿಂದ ಎಂದು ಅಂಕಿ ಅಂಶಗಳು ಹೇಳುತ್ತವೆ. 2017 ನೇ ಇಸವಿಯಲ್ಲಿ ಸೀಟ್ ಬೆಲ್ಟ್ ಧರಿಸದ ಕಾರಣ ಕಾರು ಅಪಘಾತಗಳಲ್ಲಿ ಮರಣಿಸಿದವರ ಸಂಖ್ಯೆೆ 28,986, ತೀವ್ರವಾಗಿ ಗಾಯಗೊಂಡವರ ಸಂಖ್ಯೆೆ 33,264. 2017 ರಲ್ಲಿ ಸೀಟ್ ಬೆಲ್ಟ್ ಧಾರಣೆ ಕಡ್ಡಾಾಯವಾಗಿದ್ದಿದ್ದರೆ ಈ ಎಲ್ಲಾ ಸಾವು ನೋವುಗಳ ಪ್ರಮಾಣವನ್ನು ಕಡಿಮೆಗೊಳಿಸಬಹುದಾಗಿತ್ತು.

ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ವಾಹನ ಅಪಘಾತದ ಇನ್ನೊೊಂದು ಪ್ರಮುಖ ಕಾರಣವಾಗಿದೆ. ಹೊಸ ವರ್ಷ ಆಚರಣೆ, ವಾರಾಂತ್ಯ ಆಚರಣೆ ಅಥವಾ ಇತರ ಹಬ್ಬಗಳ ಸಂದರ್ಭದಲ್ಲಿ ಹಾಗೂ ರಾತ್ರಿಿ ಹೊತ್ತು ಸಂಭವಿಸುವ ಅಪಘಾತಗಳಲ್ಲಿ ಕುಡಿತ ಅಥವಾ ಮಾದಕ ವಸ್ತುಗಳ ಪ್ರಭಾವವು ಕಾಣುತ್ತದೆ. 2017 ನೇ ಇಸವಿಯಲ್ಲಿ ಕುಡಿತ ಅಥವಾ ಮಾದಕ ವಸ್ತುಗಳ ಪ್ರಭಾವದಲ್ಲಿ ವಾಹನ ಚಾಲನೆ ಮಾಡಿದುದರ ಪರಿಣಾಮವಾಗಿ 14,071 ಅಪಘಾತಗಳು ದೇಶದಲ್ಲಿ ಸಂಭವಿಸಿದ್ದು ,ಇದರಲ್ಲಿ 4776 ಜನರು ಜೀವವನ್ನು ಕಳೆದುಕೊಂಡಿದ್ದಾರೆ. ಈ ಸಂಖ್ಯೆೆಯನ್ನು ಗಮನಿಸುವಾಗ ಅಮಲಿನಲ್ಲಿನ ವಾಹನ ಚಾಲನೆಯ ಅಪರಾಧದ ಪರಿಣಾಮವು ಎಷ್ಟು ಅಪಾಯಕಾರಿ ಹಾಗೂ ತೀವ್ರತರವಾದುದು ಎಂಬುದು ಅರ್ಥವಾಗಬಹುದು.

ಮೊಬೈಲ್ ಫೋನ್ ನಲ್ಲಿ ಮಾತನಾಡಿಕೊಂಡು ಅಥವಾ ಇರ್ಯ ಫೋನ್ ನಲ್ಲಿ ಹಾಡು ಕೇಳಿಕೊಂಡು ಡ್ರೈವಿಂಗ್ ಮಾಡುವುದು, ಬೈಕ್ ಚಲಾಯಿಸುವುದು ಕೂಡಾ ದೊಡ್ಡ ಮಟ್ಟಿಿನ ಅಪಘಾತಕ್ಕೆೆ ಕಾರಣವಾಗುತ್ತಿಿದೆ. ಭಾರತದಲ್ಲಿ 2017 ರಲ್ಲಿ ವಾಹನ ಚಲಾಯಿಸುತ್ತಿಿರುವಾಗ ಸೆಲ್ ಫೋನ್ ಗಳಲ್ಲಿ ಮಾತನಾಡುತ್ತಾಾ ವಾಹನ ಚಲಾಯಿಸಿದುದರಿಂದ 3,172 ಜನರು ಮೃತಪಟ್ಟಿಿದ್ದಾರೆ. 3,668 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಆಟೋರಿಕ್ಷಾ ಅಥವ ವ್ಯಾಾನ್‌ಗಳು ಕೂಡಾ ನಿಗದಿತ ಮಿತಿಗಿಂತ ಎಷ್ಟೋೋ ಹೆಚ್ಚು ಮಕ್ಕಳನ್ನು ತುಂಬಿಸಿಕೊಂಡು ಸಾಗುತ್ತವೆ. ಬಹಳಷ್ಟು ರಿಕ್ಷಾ ಹಾಗೂ ವ್ಯಾಾನ್‌ಗಳಿಗೆ ಮಕ್ಕಳನ್ನು ಶಾಲೆಗೆ ಕೊಂಡು ಹೋಗಲು ಪರವಾನಗಿಯೂ ಇರುವುದಿಲ್ಲ. ಶಾಲಾವಾಹನಗಳಿಗೆ ಪರವಾನಗಿ ಸಿಗಲು ಸಾಕಷ್ಟು ಸುರಕ್ಷಾ ವ್ಯವಸ್ಥೆೆಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಆದರೆ ಈ ವಾಹನಗಳಲ್ಲಿ ಅಂತಹ ಯಾವುದೇ ವ್ಯವಸ್ಥೆೆ ಇರುವುದಿಲ್ಲ. ಅಪಘಾತ ಸಂಭವಿಸಿದಾಗ ಮಕ್ಕಳ ಸಾವು ಸಂಭವಿಸಿತ್ತದೆ. ವರುಷವೊಂದಕ್ಕೆೆ ಇದರಿಂದಾಗಿ ಸಾವಿರಾರು ಮಕ್ಕಳು ಸಾವನ್ನಪ್ಪುುತ್ತಾಾರೆ.

ಹಾಗೆಯೇ ಸಾಮಾನುಗಳನ್ನು ಸಾಗಿಸುವ ವಾಹನಗಳಲ್ಲಿ ಜನರನ್ನು ಸಾಗಿಸುವುದು ಅಪರಾಧ. ಆದರೆ ದೇಶಾದ್ಯಂತ ಕಟ್ಟಡ ಕಾರ್ಮಿಕರನ್ನು ಹಾಗೂ ಕೂಲಿಯವರನ್ನು ಲಾರಿ, ಗೂಡ್‌ಸ್‌ ಟೆಂಪೋ, ಟ್ರ್ಯಾಾಕ್ಟರ್‌ಗಳಲ್ಲಿ ಭಾರಿ ಸಲಕರಣೆಗಳ ಜೊತೆಯೇ ಕರೆದುಕೊಂಡು ಹೋಗುವುದು ಸರ್ವೇಸಾಮಾನ್ಯ ದೃಶ್ಯ. ಇಂತಹ ಸಂದರ್ಭಗಳಲ್ಲಿ ಅಪಘಾತ ಸಂಭವಿಸಿದರೆ ಅಪಘಾತದ ಏಟಿನ ಜೊತೆಗೆ ಸಲಕರಣೆಗಳು ಮೈಮೇಲೆ ಬಿದ್ದು ಈ ಕಾರ್ಮಿಕರು ಸಾವನ್ನಪ್ಪುುತ್ತಿಿದ್ದಾರೆ. ಇವರು ಪ್ರಯಾಣಿಸಿದ ವಾಹನ ಸರಕು ಸಾಗಣೆಯ ವಾಹನವಾದುದರಿಂದ ಗಾಯಗೊಂಡವರಿಗೆ ಹಾಗೂ ಮರಣಿಸಿದವರಿಗೆ ಯಾವುದೇ ರೀತಿಯ ಪರಿಹಾರ ಕೂಡಾ ದೊರಕುವುದಿಲ್ಲ.

ಸರಕು ಸಾಗಣೆಯ ವಾಹನಗಳಲ್ಲಿ ಕಬ್ಬಿಿಣದ ಸರಳು ಮುಂತಾದವುಗಳು ವಾಹನದ ಅಳತೆಯನ್ನು ಮೀರುವಂತೆ ಇರಿಸಿ ಸಾಗಾಟ ಮಾಡುವುದರ ಮೇಲೆ ನಿಷೇಧವಿದೆ. ಆದರೆ ಚೂಪಾದ ಸರಳುಗಳು ಹಾಗೂ ಮರಮಟ್ಟುಗಳನ್ನು ಇತರ ವಾಹನಗಳ ಪ್ರಯಾಣಿಕರಿಗೆ ತಾಗುವಂತೆ ಕೊಂಡು ಹೋಗುವುದು ಮುಂದುವರಿದಿದೆ. ಈ ವಾಹನಗಳ ಅಪಘಾತವು ಸಂಭವಿಸಿದಾಗ ರಸ್ತೆೆಯಲ್ಲಿರುವ ಇತರ ವಾಹನಗಳ ಪ್ರಯಾಣಿಕರು ಈ ಅಪಾಯಕಾರಿ ಸರಂಜಾಮುಗಳೆಡೆಗೆ ಸಿಲುಕಿ ಮರಣವನ್ನಪ್ಪುುತ್ತಾಾರೆ. ಭಾರತದಲ್ಲಿ ವಾರ್ಷಿಕವಾಗಿ 9,000 ದಷ್ಟು ಜನರು ಈ ರೀತಿಯ ಅಪಘಾತಕ್ಕೆೆ ಸಿಲುಕಿ ಜೀವ ಕಳೆದುಕೊಳ್ಳುತ್ತಾಾರೆ.

ವಿಮೆ ಇಲ್ಲದೆ ವಾಹನಗಳನ್ನು ಓಡಿಸುವುದು ಭಾರತೀಯರು ಎಸಗುತ್ತಿಿರುವ ಇನ್ನೊೊಂದು ಬಹು ದೊಡ್ಡ ಅಪರಾಧ. ಒಂದು ಲೆಕ್ಕಾಾಚಾರದ ಪ್ರಕಾರ ದೇಶದ 70% ವಾಹನಗಳನ್ನು ಜನರು ಇನ್ಶೂರೆನ್‌ಸ್‌ ಇಲ್ಲದೆ ಓಡಿಸುತ್ತಿಿದ್ದಾಾರೆೆ. ವಾಹನಕ್ಕೆೆ ವಿಮೆ ಇಲ್ಲದಿದ್ದಾಗ ಅಪಘಾತಕ್ಕೆೆ ಒಳಗಾದವರಿಗೆ ವಿಮಾ ಪರಿಹಾರವನ್ನು ಕೊಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಬದಲಾದ ಕಾನೂನಿನಡಿಯಲ್ಲಿ ಇನ್ಶೂರೆನ್‌ಸ್‌ ಇಲ್ಲದೆ ಓಡಿಸುವ ವಾಹನ ಚಾಲಕರಿಗೆ/ ಮಾಲೀಕರಿಗೆ ಭಾರಿ ದಂಡವನ್ನು ವಿಧಿಸಲಾಗುತ್ತಿಿದೆ.

ಆಂಬುಲೆನ್‌ಸ್‌‌ಗಳಿಗೆ ದಾರಿ ಬಿಡದಿರುವುದು, ಕರ್ಕಶ ಹಾರನ್ ಹಾಕಿ ಓಡಿಸುವುದು, ಟ್ರಾಾಫಿಕ್ ಸಿಗ್ನಲ್ ಗಳನ್ನು ಉಲ್ಲಂಸುವುದು, ಪಾದಚಾರಿಗಳ ಸಂಚಾರಕ್ಕೆೆ ಮೀಸಲಿಟ್ಟ ಫುಟ್‌ಪಾತ್ ಗಳಲ್ಲಿ, ರಸ್ತೆೆಯ ರಾಂಗ್ ಸೈಡ್ ನಲ್ಲಿ ವಾಹನ ಚಲಾಯಿಸುವುದು, ರಾತ್ರಿಿ ಹೊತ್ತಿಿನಲ್ಲಿ ಪ್ರಖರವಾದ ಹೆಡ್ ಲೈಟ್‌ಗಳನ್ನು ಉರಿಸಿ, ಎದುರು ಬದಿಯಿಂದ ಬರುವ ವಾಹನಗಳಿಗೆ ತೊಂದರೆ ಉಂಟುಮಾಡುವುದು, ನಿಷೇಧಿತ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡುವುದು, ಅಪಾಯಕಾರಿ ಸ್ಥಳಗಳಲ್ಲಿ ಓವರ್‌ಟೇಕ್ ಮಾಡುವುದು, ಮಿತಿಗಿಂತ ಹೆಚ್ಚು ಸಂಖ್ಯೆೆಯ ಪ್ರಯಾಣಿಕರನ್ನು ಸಾಗಿಸುವುದು ಮುಂತಾದ ಬೇಜವಾಬ್ದಾಾರಿ ವರ್ತನೆಗಳಿಗೆ ದೇಶಾದ್ಯಂತ ಸಾವಿರಾರು ಅಮಾಯಕರು ಜೀವ ಕಳೆದುಕೊಳ್ಳುತ್ತಿಿದ್ದಾರೆ.

ಇನ್ನು ಭಾರತದಲ್ಲಿ ಸಂಭವಿಸುವ ವಾಹನ ಅಪಘಾತಗಳಲ್ಲಿ 65% ಬಲಿಪಶುಗಳು 18 ರಿಂದ 35 ವರ್ಷ ವಯಸ್ಸಿಿನವರು. ಹೆಲ್ಮೆೆಟ್ ಇಲ್ಲದೆ ದ್ವಿಿಚಕ್ರ ವಾಹನ ಚಾಲನೆ, ಸೀಟ್ ಬೆಲ್‌ಟ್‌ ಇಲ್ಲದೆ ಕಾರು ಚಾಲನೆ, ಅತಿವೇಗದ ಚಾಲನೆ, ವ್ಹೀಲಿಂಗ್ ಮಾಡುವುದು, ಮೊಬೈಲ್ ಫೋನ್ ಗಳಲ್ಲಿ ಮಾತನಾಡುತ್ತಾಾ ಚಾಲನೆ ಮಾಡುವವರಲ್ಲಿ, ರಸ್ತೆೆ ನಿಯಮ ಉಲ್ಲಂಘನೆ ಮಾಡುವವರಲ್ಲಿ ಹೆಚ್ಚಿಿನವರು ಯುವಕರೇ. ವಯೋಸಹಜವಾದ ಅತ್ಯುತ್ಸಾಾಹ ಹಾಗೂ ಕಾನೂನಿನ ಭಯ ಇಲ್ಲದಿರುವುದು ಇವರ ಇಂತಹ ದುಸ್ಸಾಾಹಸಗಳಿಗೆ ಕಾರಣವಾಗಿದೆ. ಹಾಗಾಗಿ ಭಾರಿ ಮೊತ್ತದ ಜುಲ್ಮಾಾನೆಗಳ ಹಾಗೂ ಜೈಲುಶಿಕ್ಷೆಯ ಭಯವನ್ನು ಹುಟ್ಟಿಿಸುವ ಮೂಲಕ ಮಾತ್ರ ಸಂಚಾರ ನಿಯಮ ಉಲ್ಲಂಸುವವರನ್ನು ನಿಯಂತ್ರಿಿಸಲು ಸಾಧ್ಯ.

ಜೀವಕ್ಕಿಿಂತ ಅಮೂಲ್ಯವಾದದ್ದು ಯಾವುದೂ ಅಲ್ಲ. ಪ್ರಜೆಗಳ ಜೀವಕ್ಕೆೆ ಹಾನಿಯಾಗದಂತೆ ತಡೆಗಟ್ಟುವುದು ಸರಕಾರದ ಆದ್ಯ ಕರ್ತವ್ಯವಾಗಿದೆ. ವಾಹನ ಸಂಚಾರ ನಿಯಮಗಳನ್ನು ಬಿಗಿಗೊಳಿಸುವುದರ ಮೂಲಕ ಚಾಲನಾ ಅಪರಾಧಗಳನ್ನು ಕಡಿಮೆಗೊಳಿಸಿ ಜೀವಹಾನಿಯನ್ನು ತಡೆಗಟ್ಟುವುದು ಸರಕಾರದ ಈ ಕ್ರಮದ ಹಿಂದಿನ ಪ್ರಮುಖ ಉದ್ದೇಶವಾಗಿದೆ. ಹಳೆಯ ಕಾನೂನು ಅಷ್ಟು ಪರಿಣಾಮಕಾರಿಯಲ್ಲ ಎಂದಾದಾಗ ಕಾನೂನನ್ನು ಪರಿಷ್ಕೃತಗೊಳಿಸುವುದು ಅನಿವಾರ್ಯವಾಗುತ್ತದೆ. ರಸ್ತೆೆ ಗುಂಡಿ, ಹಾಳಾದ ರಸ್ತೆೆ, ಅವೈಜ್ಞಾನಿಕ ರಸ್ತೆೆ ಮುಂತಾದವುಗಳಿಂದ ಜೀವ ಹಾನಿಯಾಗುತ್ತದೇನೋ ನಿಜ. ಇಂತಹ ಆಕ್ಷೇಪಗಳಿಗೆ ಉತ್ತರವಾಗಿ, ಕಳಪೆ ಗುಣಮಟ್ಟದ ರಸ್ತೆೆ ತಯಾರಿಸುವ ಗುತ್ತಿಿಗೆದಾರರ ಹಾಗೂ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಹೇಳಿದ್ದಾಾರೆ.

ಅದರೊಂದಿಗೆ ಪ್ರತಿ ಪ್ರಜೆಯೂ ಟ್ರಾಾಫಿಕ್ ನಿಯಮಗಳನ್ನು ಸರಿಯಾಗಿ ಪರಿಪಾಲಿಸುವಂತಾದರೆ ಈಗ ಆಗುತ್ತಿಿರುವ ಅಪಘಾತ ಹಾನಿಯಲ್ಲಿ 50% ಆದರೂ ಕಡಿಮೆ ಮಾಡಬಹುದಲ್ಲವೇ? ವಾಹನ ಚಾಲಕರಲ್ಲಿ ಎಲ್ಲಾ ರೀತಿಯ ದಾಖಲೆಗಳು ಇದ್ದರೆ, ಅವರು ಸಂಚಾರ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಿಕೊಂಡಿದ್ದರೆ ಅವರಿಗೆ ಯಾವುದೇ ಶಿಕ್ಷೆಯ ಭಯವಿಲ್ಲ. ಡಿಜಿ ಲಾಕರ್‌ಗಳ ಮೂಲಕ ಇವನ್ನು ಸಂಗ್ರಹಿಸಿಟ್ಟುಕೊಳ್ಳಲು ಸರಕಾರ ಮಾನ್ಯತೆ ನೀಡಿದೆ.

ಸಂಚಾರ ನಿಯಮಗಳ ಸುಧಾರಿತ ಕಾನೂನು ಪಾಲಿಸುವಾಗ ಮೊದಲ ಹಂತದಲ್ಲಿ ಒಂದಷ್ಟು ತೊಂದರೆ ಹಾಗೂ ಅನನುಕೂಲವಾಗುವುದು ಇದ್ದದ್ದೇ. ರೂಢಿಯಾದಮೇಲೆ ತನ್ನಿಿಂತಾನೇ ಎಲ್ಲವೂ ಸರಿಹೋಗುತ್ತದೆ. ಕ್ರಮೇಣ ಎಲ್ಲರೂ ಬದಲಾವಣೆಗೆ ಹೊಂದಿಕೊಳ್ಳುತ್ತಾಾರೆ.ಅಲ್ಲಿಗೆ ಗೊಣಗಾಟ ನಿಲ್ಲುತ್ತದೆ. ಹಾಗಾಗಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *