Monday, 20th January 2020

ಕಿದ್ವಾಯಿಯಲ್ಲಿ ವಿಶ್ವದರ್ಜೆ ತಂತ್ರಜ್ಞಾನ ಉದ್ಘಾಟನೆ ಶೀಘ್ರ…

ಕಿದ್ವಾಯಿ ಕ್ಯಾನ್ಸರ್ ಸಂಸ್ಥೆೆಯು ಹೈಟೆಕ್ ಸ್ಪರ್ಶ ಪಡೆಯುತ್ತಿಿದ್ದು, ಹೊಸ ತಂತ್ರಜ್ಞಾಾನಗಳನ್ನು ಅಳವಡಿಸುವ ಮೂಲಕ ವಿಶ್ವದರ್ಜೆಯ ಪಟ್ಟಕ್ಕೆೆರುವ ದಿನಗಳು ಹತ್ತಿಿರ ಬರುತ್ತಿಿವೆ. ಆಸ್ಪತ್ರೆೆಯಲ್ಲಿ ಸ್ಥಾಾಪಿಸಲಾಗಿರುವ ವಿ-ಮ್ಯಾಾಟೆಕ್ (ಐಜಿ ಆರ್‌ಟಿ) ತಂತ್ರಜ್ಞಾಾನ ನಾಲ್ಕು, ವೈಡ್ ಬೋರ್ ಸಿಎಫ್ ಸಿಮ್ಯುಲೇಟರ್, ಲೇಸರ್ ಎಮಿಷನ್ ತಂತ್ರಜ್ಞಾಾನವು ಶೀಘ್ರದಲ್ಲೆೆ ಉದ್ಘಾಟಿಸಲಾಗುತ್ತಿದೆ.

ಬಡ ಕ್ಯಾಾನ್ಸರ್ ರೋಗಿಗಳಿಗೆ ಆಶಾಕಿರಣವಾಗಿರುವ ಕಿದ್ವಾಾಯಿ ಸ್ಮಾಾರಕ ಗಂಥಿ ಸಂಸ್ಥೆೆಯ ನಿರ್ದೇಶಕ ಡಾ.ಸಿ.ರಾಮಚಂದ್ರ ಅವರು ಇಂತಹ ಸರಕಾರಿ ಆಸ್ಪತ್ರೆೆಯನ್ನು ಉನ್ನತೀಕರಿಸಲು ರೂಪುರೇಷೆ ಸಿದ್ಧಪಡಿಸಿದ್ದಾಾರೆ. ಈ ಸಂಸ್ಥೆೆ ಕಾರ್ಪೊರೇಟ್ ಆಸ್ಪತ್ರೆೆ ಮಾದರಿಯಲ್ಲಿ ಸ್ವರೂಪ ಬದಲಿಸಲಿದೆ. ನವೀಕರಣಕ್ಕೆೆ ಈಗಾಗಲೇ ನೀಲನಕ್ಷೆ ಸಿದ್ಧವಾಗಿದ್ದು, ಕಾಮಗಾರಿ ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. 1973ರಲ್ಲಿ ಆರಂಭವಾದ ಸಂಸ್ಥೆೆ ಹಂತಹಂತವಾಗಿ ಮೇಲ್ದರ್ಜೆಗೇರಿದ್ದು, ಪ್ರತಿವರ್ಷ ಮೂರು ಲಕ್ಷಕ್ಕೂ ಅಧಿಕ ಮಂದಿ ಚಿಕಿತ್ಸೆೆ ಪಡೆದುಕೊಳ್ಳುತ್ತಿಿದ್ದಾರೆ. 24 ಎಕರೆ ಪ್ರದೇಶದಲ್ಲಿರುವ ಸಂಸ್ಥೆೆಗೆ ದಾನಿಗಳ ನೆರವಿನಿಂದ ಹೈಟೆಕ್ ಸ್ಪರ್ಶ ಸಿಗಲಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಬ್ಲಾಾಕ್ ಹಾಗೂ ಆಸ್ಪತ್ರೆೆಯ ಆವರಣವನ್ನು ನವೀಕರಿಸಲು ಯೋಜನೆ ಸಿದ್ಧಗೊಂಡಿದೆ.

ಈಗಾಗಲೇ ಸಂಸ್ಥೆೆಯಲ್ಲಿ ವಿ-ಮ್ಯಾಾಟೆಕ್ (ಐಜಿ ಆರ್‌ಟಿ) ಆರು ತಂತ್ರಜ್ಞಾಾನಗಳನ್ನು ಅಳವಡಿಸಲಾಗಿದ್ದು, ರೆಡಿಯೋಥೆರಪಿ ಚಿಕಿತ್ಸೆೆ ನೀಡಲಾಗುತ್ತಿಿದೆ. ಹೆಚ್ಚುವರಿಯಾಗಿ 4 ತಂತ್ರಜ್ಞಾಾನ ಅಳವಡಿಸಲಾಗಿದ್ದು, 72 ಕೋಟಿ ರು. ಖರ್ಚು ಮಾಡಲಾಗಿದೆ. ಇಡೀ ದೇಶದಲ್ಲೆೆ ಇಂತಹ ತಂತ್ರಜ್ಞಾಾನ ಅಳವಡಿಸಿರುವುದು ಕಿದ್ವಾಾಯಿ ಸಂಸ್ಥೆೆಯಲ್ಲಿ ಮಾತ್ರ. ವಿದೇಶಗಳಿಂದ ತಂತ್ರಜ್ಞಾಾನ ತರಿಸಿಕೊಳ್ಳಲಾಗಿದೆ. ಒಂದು ತಂತ್ರಜ್ಞಾಾನದಲ್ಲಿ ದಿನಕ್ಕೆೆ ಸಾವಿರಕ್ಕೂ ಹೆಚ್ಚು ಮಂದಿಗೆ ರೇಡಿಯೋಥೆರಫಿ ಮಾಡಲಾಗುತ್ತದೆ. ಹಾಗೆಯೇ ವೈಡ್ ಬೋರ್ ಸಿಎಫ್ ಸಿಮ್ಯುಲೇಟರ್ ಎಂಬ ತಂತ್ರಜ್ಞಾಾನಕ್ಕೆೆ 2.11 ಕೋಟಿ ಖರ್ಚು ಮಾಡಲಾಗಿದ್ದು, ರೋಗ ವಿಧಾನ ಪತ್ತೆೆ ಹಚ್ಚಲು ಬಳಸಲಾಗುತ್ತಿಿದೆ. ಕ್ಯಾಾನ್ಸರ್ ರೋಗಿಗಳೆ ಲೇಸರ್ ಥೆರಪಿ ಮಾಡಲು ಲೇಸೆರ್ ಎಮಿಷನ್ ಯಂತ್ರ ಅಳವಡಿಸಲಾಗಿದೆ.

50 ಕೋಟಿ ವೆಚ್ಚದಲ್ಲಿ ಇನ್ಫೊೊಸಿಸ್ ಪ್ರತಿಷ್ಠಾಾನದ ನೇತೃತ್ವದಲ್ಲಿ ಒಪಿಡಿ ಘಟಕದ ನಿರ್ಮಾಣ ಕಾಮಗಾರಿ ಮುಗಿದಿದ್ದು, ಸೆಪ್ಟೆೆಂಬರ್ ಅಂತ್ಯಕ್ಕೆೆ ಶೀಘ್ರದಲ್ಲಿಯೇ ಉದ್ಘಾಾಟನೆಯಾಗಲಿದೆ. ಇದರಿಂದ ಸಹಜವಾಗಿಯೇ ಹಳೆಯ ಕಟ್ಟಡದಲ್ಲಿ ರೋಗಿಗಳ ದಟ್ಟಣೆ ಕಡಿಮೆಯಾಗಲಿದೆ. ಆದ್ದರಿಂದ ಹಳೆಯ ಕಟ್ಟಡ ಹಾಗೂ ಹೊರಾಂಗಣವನ್ನು ನವೀಕರಣ ಮಾಡುವ ಯೋಜನೆಯನ್ನು ಸಂಸ್ಥೆೆ ಮುಂದಾಗಿದೆ. ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್ ಅವರ ಹೆಸರಿನಲ್ಲಿ ನಿರ್ಮಿಸಲಾಗಿರುವ ಏಳು ವಿಶೇಷ ಕೊಠಡಿಗಳು ಉದ್ಘಾಾಟನೆಗೆ ಸಿದ್ಧವಾಗಿವೆ.

ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಉದ್ಘಾಟನೆ
ಕಿದ್ವಾಯಿ ಕ್ಯಾಾನ್ಸರ್ ಸಂಸ್ಥೆೆ ಆವರಣದಲ್ಲಿ ಸುಸಜ್ಜಿತ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ನಿರ್ಮಾಣವಾಗಿದ್ದು, ಒಂದು ವಾರದಲ್ಲಿ ಇದಕ್ಕೂ ಉದ್ಘಾಾಟನಾ ಭಾಗ್ಯ ಸಿಗಲಿದೆ. ಆಸ್ಪತ್ರೆೆಯ ಆವರಣದ ವಾಹನಗಳ ದಟ್ಟಣೆ ಉಂಟಾಗಿ ತುರ್ತು ಚಿಕಿತ್ಸೆೆಗೆ ರೋಗಿಗಳನ್ನು ಕರೆತರುವ ಆ್ಯಂಬುಲೆನ್‌ಸ್‌‌ಗಳ ಸಂಚಾರ ಹಾಗೂ ಚಿಕಿತ್ಸೆೆಗಾಗಿ ನಾನಾ ವಿಭಾಗಗಳಿಗೆ ರೋಗಿಗಳನ್ನು ಕೊಂಡೊಯ್ಯವ ಬ್ಯಾಾಟರಿ ಚಾಲಿತ ವಾಹನಗಳ ಸಂಚಾರಕ್ಕೆೆ ಅನುಕೂಲವಾಗಲಿದೆ. ಸುಸಜ್ಜಿತ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್‌ಗೆ ಬಿಬಿಎಂಪಿ ವತಿಯಿಂದ 15 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿತ್ತು. ಸುಮಾರು 400 ನಾಲ್ಕು ಚಕ್ರದ ವಾಹನ ಹಾಗೂ 500 ದ್ವಿಿಚಕ್ರ ವಾಹನಗಳ ನಿಲುಗಡೆಗೆ ಅನುಕೂಲವಾಗುವಂತೆ ಪಾರ್ಕಿಂಗ್ ತಾಣ ನಿರ್ಮಾಣಮಾಡಲಾಗಿದೆ.

ಕಿದ್ವಾಯಿ ಕ್ಯಾನ್ಸರ್ ಸಂಸ್ಥೆೆಯನ್ನು ಉನ್ನತಮಟ್ಟಕ್ಕೇರಿಸುವ ದೃಷ್ಟಿಯಿಂದ ನೂತನ ತಂತ್ರಜ್ಞಾಾನ ಅಳವಡಿಸಲಾಗುತ್ತಿದೆ. ರೋಗಿಗಳಿಗೆ ತೊಂದರೆಯಾಗದಂತೆ ಎಲ್ಲಾಾ ಮೂಲ ಸೌಲಭ್ಯಗಳನ್ನು ಕಲ್ಪಿಿಸಲಾಗಿದೆ. ಇನ್ಪೋೋಸಿಸ್‌ನಿಂದ ನೂತನವಾಗಿ ನಿರ್ಮಿಸಲಾಗಿರುವ ಕಟ್ಟಡ ಸೆಪ್ಟೆೆಂಬರ್ ಅಂತ್ಯಕ್ಕೆೆ ಚಾಲನೆ ಸಿಗಲಿದೆ.
-ಡಾ.ಸಿ.ರಾಮಚಂದ್ರ, ಕಿದ್ವಾಾಯಿ ಸಂಸ್ಥೆೆಯ ನಿರ್ದೇಶಕ

Leave a Reply

Your email address will not be published. Required fields are marked *