Tuesday, 7th July 2020

ವಿಜಯ್ ಶಂಕರ್ ಕಾಲುಬೆರಳಿಗೆ ಗಾಯ : ವಿಶ್ವಕಪ್ ನಿಂದ ಹೊರಕ್ಕೆ

ಲಂಡನ್: ಭಾರತದ ಆಲ್‌ ರೌಂಡರ್ ವಿಜಯ್‌ ಶಂಕರ್ ಕಾಲು ಬೆರಳಿಗೆ ಗಾಯವಾದ ಕಾರಣ ಪ್ರಸ್ತುತ ನಡೆಯುತ್ತಿರುವ ಐಸಿಸಿ ವಿಶ್ವ ಕಪ್‌ ಟೂರ್ನಿಯಿಂದ ನಿರ್ಗಮಿಸಬೇಕಿದೆ.

ಕರ್ನಾಟಕದ ಬ್ಯಾಟ್ಸ್‌ಮನ್ ಮಯಾಂಕ್ ಅಗರ್‌ವಾಲ್ ಐಸಿಸಿ ಅನುಮತಿ ನಂತರ ಅವರ ಸ್ಥಾನವನ್ನು ತುಂಬುವ ಸಾಧ್ಯತೆ ಇದೆ. ಮಯಾಂಕ್ ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನಾಡಿದ್ದರೂ ಕೂಡ ಈವರೆಗೆ ಏಕದಿನ ಪಂದ್ಯಗಳಲ್ಲಿ ಆಡಿಲ್ಲ.

ಜೂನ್ 20 ರಂದು ತರಬೇತಿ ಸಮಯದಲ್ಲಿ ಜಸ್ಪ್ರೀತ್ ಬೂಮ್ರಾ ಎಸೆತದ ಸಂದರ್ಭದಲ್ಲಿ ವಿಜಯ್ ಕಾಲಿಗೆ ಗಾಯಗಳಾಗಿದ್ದು ಈಗ ನೋವು ತೀವ್ರವಾಗಿದ್ದು ಅದು ವಾಸಿಯಾಗಲು ಇನ್ನೂ ಕನಿಷ್ಠ ಮೂರು ವಾರಗಳಾಗುವ ಕಾರಣ ಅವರನ್ನು ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಿಂದ ಕೈಬಿಡಲಾಗಿದೆ.

ಭಾನುವಾರ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದ ಟಾಸ್ ವೇಳೆಯಲ್ಲಿ ಭಾರತದ ನಾಯಕ ವಿರಾಟ್ ಕೋಹ್ಲಿ ವಿಜಯ್ ಗಾಯದ ಸಮಸ್ಯೆ ಹೆಚ್ಚಾಗಿದೆ ಎಂದು ಹೇಳಿದ್ದರು.

ಜುಲೈ 2 ಮತ್ತು ಜುಲೈ 6 ರಂದು ಬಾಂಗ್ಲಾದೇಶ ಮತ್ತು ಶ್ರೀಲಂಕಾ ಎದುರು ಭಾರತ ಸೆಣಸಬೇಕಿದೆ.

Leave a Reply

Your email address will not be published. Required fields are marked *