Tuesday, 7th July 2020

ಯಶಸ್ಸಿಗೆ ಬೆಂಬಲವಾಗುವ ಪತಿ…

*ಸುಪ್ರೀತಾ ವೆಂಕಟ್

ತವರಲ್ಲಿದ್ದಾಗ ಜೀವನವೇ ಒಂದು ತರಹವಾದರೆ, ಮದುವೆಯಾದ ಮೇಲೆ ಇನ್ನೊೊಂದು ವಿಧ. ಎರಡರ ಸೊಗಸು ಹೋಲಿಸಲಸಾಧ್ಯ! ಅವರದ್ದೇ ಆದ ಸಿಹಿಯಿದೆ. ಅಪ್ಪ ಅಮ್ಮನ ಮುದ್ದಿನ ಮಕ್ಕಳು ನಾನು ನನ್ನ ತಂಗಿ. ಪಾಠವಾಗಲಿ ಪಠ್ಯೇತರ ಚಟುವಟಿಕೆಗಳಿಗಾಗಲಿ ಸದಾ ಬೆಂಬಲ ನೀಡುತ್ತಿಿದ್ದರು. ಹೊರಗಲ್ಲೇ ಹೋಗುವುದಿರಲಿ ಅಪ್ಪನೇ ಕರೆದುಕೊಂಡು ಹೋಗುತ್ತಿಿದ್ದರು, ಹೀಗಾಗಿ ನಾವು ನಾವೇ ಒಂಟಿಯಾಗಿ ಪಯಣ ಮಾಡಿರೋದು ಕಡಿಮೆಯೇ. ಅದನ್ನು ನಕಾರಾತ್ಮಕ ಅನ್ನೋೋಲ್ಲ ನಾನು, ಒಂದು ರೀತಿಯಾಗಿ ಮುಚ್ಚಟೆಯಿಂದ ಬೆಳೆಸಿದ್ದರು ಅನ್ನಬಹುದು.

ವಿವಾಹದ ನಂತರದ ಬದುಕು, ಕಲಿಸುವ ಪಾಠ ಬೇರೆ.. ಆಗಲೇ ನಿಜವಾದ ಜೀವನ ಆರಂಭ..!? ಮುದ್ದಿಸುವ ಗಂಡವಿದ್ದರೂ, ಒಬ್ಬಳೇ ಇರಬೇಕಾಗಿ ಬಂದಾಗ ಎಲ್ಲವನ್ನೂ ಎದುರಿಸೋ ಧೈರ್ಯ ಬೇಕು. ನನ್ನ ಜೀವನದಲ್ಲಿ, ಜೀವನಕ್ಕೆೆ ಪ್ರಭಾವ ಬೀರಿದವರೆಂದರೆ ನನ್ನ ಪತಿ ವೆಂಕಟ್ ರಾವ್. ಅಪ್ಪನ ಪ್ರಭಾವವಿಲ್ಲ ಅಂತಲ್ಲ, ಅಪ್ಪನ ಜಾಗ್ರತೆ ವಹಿಸುವಿಕೆ, ಕಾಳಜಿ ಗಂಡನದ್ದಕ್ಕಿಿಂತಲೂ ವಿಭಿನ್ನ. ವೆಂಕಟ್ ಹೇಗೆಂದರೆ ನಾನು ಕಲಿಯೋಕೆ ಸಾಧ್ಯವಿರೋದೆಲ್ಲ ಕಲಿತು ಬಿಡಬೇಕು, ಇಲ್ಲವೆಂದರೆ ಮುಂದೆ ಕಷ್ಟ ಪಡ್ತಿಿಯ ಅನ್ನೋೋದು ಅವರ ವಾದ. ಚಾರಣ, ಡ್ರೈವಿಂಗ್, ಮ್ಯಾಾರಥಾನ್ ಎಲ್ಲದಕ್ಕೂ ಅವರೇ ಸ್ಫೂರ್ತಿ! ಮದುವೆಯಾಗಿ ಐದು ವರ್ಷವಾದರೂ ನವನವೀನ ಅನ್ನುವ ಭಾವನೆ ಇನ್ನೂ ಇದೆ. ಮೊನ್ನೆೆ ಮೊನ್ನೆೆ ಮದುವೆಯಾಗಿದ್ದೀವೋ ಎಂಬ ಹೊಸತು ಹೊಸತು ಅನುಭೂತಿ.

ಮದುವೆಯಾದ ಸಮಯದಲ್ಲಿ ಅಂದಿದ್ದರು ಅವರು 100ಕಿಮೀ ನಡೆದಿದ್ದೇನೆ ಎಂದು, ಅಷ್ಟೆೆಲ್ಲ ನಡೆದ್ರೆೆ ಏನು ಖುಷಿ ಸಿಗುತ್ತೆೆ ಅಂತೆಲ್ಲ ನಕ್ಕಿಿದ್ದೆ ಬೇರೆ. ಅವರನ್ನೇ ನೋಡುತ್ತಾಾ ನೋಡುತ್ತಾಾ ನಾನೂ ನಡೆಯೋಕೆ, ಓಡೋಕೆ ಪ್ರಾಾರಂಭಿಸಿದೆ. ಈಗ ನನ್ನ ನೋಡಿ ಅವರು ನಗುವ ಸಮಯ! ಅಡುಗೆ ಬರುತ್ತೆೆ ಅವರಿಗೆ, ಕೆಲವೊಂದು ಬಾರದಿದ್ದರೂ ಅದು ಹೇಗಿರಬೇಕಿತ್ತೆೆಂದು ಕಮೆಂಟ್‌ಸ್‌ ಮಾಡ್ತಾಾರೆ, ಇಷ್ಟಪಟ್ಟು ಅಡಿಗೆ ಮಾಡಬೇಕೆಂಬುದು ಅವರ ಸಲಹೆ. ನಂಗೆ ಸಲಹೆಗಳನ್ನು ಕೊಡ್ತಾಾರೆ, ಹೀಗಲ್ಲ ಹಾಗೆ ಅಂತಾರೆ. ನಾನೊಬ್ಬಳೇ ಇದ್ದಾಗ ಮೊಸರನ್ನ ಇದ್ರೂ ನಡೆಯುತ್ತೆೆ, ಆದ್ರೆೆ ವೆಂಕಟ್ ಗೋಸ್ಕರ ಏನಾದ್ರೂ ಚೆನ್ನಾಾಗಿ ಮಾಡಿ ಹಾಕಿ ಹೊಗಳಿಕೆ ಗಿಟ್ಟಿಿಸಬೇಕೆಂದು ಅಂದುಕೊಳ್ಳುತ್ತೇನೆ. ಹೋಗಳೋದು ಅಷ್ಟರಲ್ಲೇ ಇದೆ ಬಿಡಿ, ಆದ್ರೆೆ ಮನೆಯವರ ಎದುರಿಗೆ ಇಲ್ಲ ಫ್ರೆೆಂಡ್‌ಸ್‌ ಎದುರು ನಾನೇ ಸುಸ್ತಾಾಗುವಷ್ಟು ಹೊಗಳಿಕೆಯೋ ಹೊಗಳಿಕೆ.

ನನಗೆ ಓದುವ ಹವ್ಯಾಾಸ ಚಿಕ್ಕಂದಿನಿಂದಲೇ ಇತ್ತು. ಪದವಿ ಕಲಿಕೆ, ಕೆಲಸ, ಹೀಗೆ ಹಲವು ಜವಾಬ್ದಾಾರಿಗಳಿಂದ ಅದಕ್ಕೆೆ ಸ್ವಲ್ಪ ಸಮಯ ವಿರಾಮ ಬಿದ್ದಿತ್ತು. ಮದುವೆಯಾಗಿ ಕೆಲವು ಸಮಯದ ಬಳಿಕ ಪುನಃ ಶುರುವಿಟ್ಟುಕೊಂಡೆ, ಓದುತ್ತಾಾ ಓದುತ್ತಾಾ ಬರೆಯಬೇಕೆನಿಸಿ ಪುಸ್ತಕಗಳ ವಿಮರ್ಶೆಗಳಿಂದ ಪ್ರಾಾರಂಭಿಸಿದೆ. ಹೆದರಿಕೆಯಿದ್ದಾಗ ಧೈರ್ಯ ತುಂಬಿದವರೇ ನನ್ನ ಪತಿ. ಹೀಗೆ ಮುಂದಿವರಿಸು ಎಂದು ಶುಭಾಶಯಗಳನ್ನು ತಿಳಿಸುತ್ತಾಾ ಮತ್ತಷ್ಟು ಹುರಿದುಂಬಿಸಿದರು. ನನ್ನ ಯಾವುದೇ ಹವ್ಯಾಾಸಗಳಿಗಿರಲಿ ಅವರದ್ದೊಂದು ಬೆಂಬಲ ಇದ್ದೇ ಇರುವುದು.

ಅವರಿಗೆ ಆಫೀಸಿನಿಂದ ವಿದೇಶ ಪ್ರಯಾಣ ಮಾಡಬೇಕಾಗಿ ಬಂದಾಗಲೆಲ್ಲ, ಒಬ್ಬಂಟಿ ಆದವಳು ಹೇಗಿರಬೇಕು, ಏನು ಮಾಡಬೇಕೆಂಬುದೆಲ್ಲ ಮಾರ್ಗದರ್ಶನ. ಅಪ್ಪನ ಮನೆಯಲ್ಲಿ ಒಬ್ಬಳೇ ಇರಲೇ ಇಲ್ಲ ನಾನು, ಅಪ್ಪ ಅಮ್ಮ ಹೊರಗೆಲ್ಲಾದರೂ ಹೋದರೆ ಸ್ವಲ್ಪವೇ ಸಮಯ, ತಂಗಿ ಜೊತೆಗಿರುತ್ತಿಿದ್ದಳು. ಈಗ ಒಂಟಿಯಾಗಿ ಇರಬಲ್ಲೆಯೆನ್ನುವ ಧೈರ್ಯ ಬಂದಿದೆ. ಬೈಗುಳಕ್ಕೆೆ ಅಥವಾ ಕೆಟ್ಟ ಪದಗಳು ನನ್ನ ಮೇಲೆ ಬಂದರೆ ಹೇಗಪ್ಪಾಾ ಎಂದು ಚಿಂತಿಸುತಿದ್ದವಳು ಈಗ ಯಾವುದಕ್ಕೂ ಕೇರ್ ಅನ್ನದೆ ಆಫೀಸಲ್ಲಿ ಮಾತನಾಡಬೇಕಾಗಿ ಬಂದಾಗ ಅಳುಕಿಲ್ಲದೆ ಮಾತಾಡುವೆ, ವಾದ ಮಾಡುವೆ. ಆಫೀಸಲ್ಲಿ ಅಥವಾ ಹೊರಗೆ ಇದರಿಂದ ಪ್ರಯೋಜನಗಳೇ ಜಾಸ್ತಿಿಯಾಗಿವೆ. ಸುಮ್ಮನಿದ್ದಾಗ ಗುದ್ದು ಜಾಸ್ತಿಿಯಿತ್ತು. ನಾನು ಸೈಲೆಂಟ್ ಅನ್ನುತ್ತಾಾರೆ ಹಲವರು, ಆದ್ರೆೆ ದೃಢ ಸಂಕಲ್ಪ, ಆತ್ಮವಿಶ್ವಾಾಸ, ಛಲ ಎಲ್ಲವೂ ವೃದ್ಧಿಿಯಾಗಿದೆ, ಇನ್ನೂ ಬೆಳೆಸುವೆ. ಒಟ್ಟಾಾರೆಯಾಗಿ ವೆಂಕಟ್ ನನ್ನ ಸ್ಫೂರ್ತಿ, ಬಿಗ್ಗೆೆಸ್‌ಟ್‌ ಸಪೋರ್ಟರ್, ಬೆಸ್‌ಟ್‌ ಫ್ರೆೆಂಡ್ ಎಲ್ಲವೂ..

Leave a Reply

Your email address will not be published. Required fields are marked *