Monday, 13th July 2020

ಯಾವುದು ಅಸಾಧ್ಯವಾದ ಅದನ್ನು ಅವರು ಸಾಧ್ಯ ಮಾಡಿ ತೋರಿಸಿದ್ದಾರೆ!

ಬೇರೆ ಯಾರೇ ಆಗಿದ್ದರೂ ಈ ನಿರ್ಧಾರ ತೆಗೆದುಕೊಳ್ಳುತ್ತಿಿರಲಿಲ್ಲ ಅಥವಾ ನೂರು ಸಲ ಹಿಂದೆ-ಮುಂದೆ ಯೋಚಿಸುತ್ತಿಿದ್ದರು. ಇದು ಒಂದು ರೀತಿಯಲ್ಲಿ ಅವರ ರಾಜಕೀಯ ಜೀವನದ ಅತ್ಯಂತ ಪೂರ್ಣ ಮತ್ತು ನಿರ್ಣಾಯಕ ನಿರ್ಧಾರ. ಇಂಥ ನಿರ್ಧಾರ ತೆಗೆದುಕೊಳ್ಳಲು ಬಹಳ ಎದೆಗಾರಿಕೆ ಬೇಕು. ಪ್ರಮಾಣದ ಧಾಡಸಿತನ, ಹುಂಬ ಧೈರ್ಯವೂ ಬೇಕು. ಹೆಚ್ಚು-ಕಮ್ಮಿಿಯಾದರೆ ಇಡೀ ದೇಶಾದ್ಯಂತ ಕೋಲಾಹಲವೆದ್ದು ಅಧಿಕಾರಕ್ಕೆೆ ಸಂಚಕಾರ ಬರಬಹುದು ಇಲ್ಲವೇ ಅನಗತ್ಯವಾಗಿ ವಿವಾದ, ತಲೆನೋವನ್ನು ಮೈಮೇಲೆ ಎಳೆದುಕೊಂಡಂತಾಗಬಹುದು. ಹೀಗಾಗಿ ಯಾರೂ ಸಹ ಇಂಥ ದುಸ್ಸಾಾಹಸಕ್ಕೆೆ ಮುಂದಾಗುವುದಿಲ್ಲ.

ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ತಮ್ಮ ಜೀವನದ ಬಹಳ ದೊಡ್ಡ ರ್ಕ್‌ಿ ತೆಗೆದುಕೊಂಡರು. ಅಷ್ಟೇ ಅಲ್ಲ, ಯಶಸ್ವಿಿಯೂ ಆದರು. ತಮ್ಮ ಪಕ್ಷವನ್ನು ಮತ್ತೆೆ ಅಧಿಕಾರಕ್ಕೆೆ ತಂದರೆ ಸಂವಿಧಾನದ ವಿಧಿಯನ್ನು ರದ್ದುಪಡಿಸುವುದಾಗಿ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿತ್ತು. ಪ್ರಣಾಳಿಕೆಯಲ್ಲಿ ಹೇಳಿದ ಮಾತ್ರಕ್ಕೆೆ ಎಲ್ಲಾ ಆಶ್ವಾಾಸನೆಗಳನ್ನು ಈಡೇರಿಸಲೇಬೇಕು ಎಂದೇನೂ ಇಲ್ಲ. ಬಿಜೆಪಿ ಹುಟ್ಟಿಿದಾಗಿನಿಂದ ಈ ವಿಧಿಯನ್ನು ರದ್ದುಪಡಿಸುತ್ತೇವೆ ಎಂದು ಹೇಳಿಕೊಂಡೇ ಬಂದಿದೆ. ಆದರೆ ಇಲ್ಲಿವರೆಗೆ ರದ್ದುಪಡಿಸಿಲ್ಲ. ರದ್ದುಪಡಿಸಲು ಬೇಕಾದ ವಾತಾವರಣವೂ ಇರಲಿಲ್ಲ, ಸಂಸತ್ತಿಿನಲ್ಲಿ ಅದಕ್ಕೆೆ ಬೇಕಾದ ಬಹುಮತವೂ ಇರಲಿಲ್ಲ. ಇವೆರಡೂ ಇದ್ದಿದ್ದರೆ ಬಿಜೆಪಿ ನಾಯಕರು ಅಂಥ ಸಾಹಸಕ್ಕೆೆ ಮುಂದಾಗುತ್ತಿಿದ್ದರಾ ಎಂಬುದು ಬೇರೆ ಪ್ರಶ್ನೆೆ. ಒಟ್ಟಾಾರೆ ಇಷ್ಟು ವರ್ಷಗಳಲ್ಲಿ ಆ ಮಾತನ್ನು ಬಂದಿದ್ದರೂ, ಹೇಳಿದ್ದನ್ನು ಮಾಡಿ ತೋರಿಸಲು ಆಗಿರಲಿಲ್ಲ.

ಅದಕ್ಕಾಾಗಿಯೇ ಕಾಶ್ಮೀರದ ನಾಯಕರೂ ಜೋರಾಗಿಯೇ ಹೇಳುತ್ತಿಿದ್ದರು, ಮೋದಿ ಇನ್ನೂ ಹತ್ತು ಸಲ ಪ್ರಧಾನಿಯಾಗಿ ಬಂದರೂ 370 ನೇ ವಿಧಿ ರದ್ದು ಪಡಿಸಲು ಸಾಧ್ಯವಿಲ್ಲ, ಮೋದಿ ನೂರು ಸಲ ಜನ್ಮವೆತ್ತಿಿ ಬಂದರೂ ಕಾಶ್ಮೀರಕ್ಕೆೆ ನೀಡಿದ ವಿಶೇಷ ಸ್ಥಾಾನಮಾನವನ್ನು ರದ್ದು ಪಡಿಸಲು ಸಾಧ್ಯವಿಲ್ಲ, ಮೋದಿಯೇನು ಅತಿ ಮಾನವರಾ…ಈ ರೀತಿಯ ಮಾತುಗಳನ್ನು ಕಾಶ್ಮೀರದ ನಾಯಕರಾದ ಫಾರೂಕ್ ಅಬ್ದುಲ್ಲಾ, ಉಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿಿ, ಗುಲಾಮ್ ನಬಿ ಮುಂತಾದ ನಾಯಕರೂ ಪದೇಪದೆ ಹೇಳಿದ್ದರು.

ಇವರ ಮಾತಿಗೆ ಕಾಶ್ಮೀರದ ಕೆಲವು ಪ್ರತ್ಯೇಕತಾವಾದಿಗಳು ಸಹ ದನಿಗೂಡಿಸಿದ್ದರು.
ಕಳೆದ ಆರೂವರೆ ದಶಕಗಳಿಂದ ವಿಶೇಷ ಸ್ಥಾಾನಮಾನ ರದ್ದು ಮಾಡುವುದಾಗಿ ಹೇಳಿದವರೆಲ್ಲ ಇತಿಹಾಸದಲ್ಲಿ ನಾಮಾವಶೇಷರಾಗಿದ್ದನ್ನು ನೋಡಿದ್ದೇವೆ, ಮೋದಿ ಕೂಡ ಆ ಸಾಲಿಗೆ ಸೇರುತ್ತಾಾರೆ ಎಂದೇ ಇವರೆಲ್ಲ ಬೊಬ್ಬಿಿರಿಯುತ್ತಿಿದ್ದರು. ಒಂದು ವೇಳೆ ಮೋದಿ ಅವರಿಗೆ 370 ನೇ ವಿಧಿಯನ್ನು ರದ್ದು ಮಾಡಬೇಕು ಎಂಬ ಮನಸ್ಸಿಿದ್ದರೂ ಅದು ಸಾಧ್ಯವಿಲ್ಲ, ಕಾರಣ ಅಂಥ ಸಂದರ್ಭವೇ ಬರುವುದಿಲ್ಲ ಮತ್ತು ಬಂದರೂ ಬಿಡುವುದಿಲ್ಲ ಎಂದೇ ಈ ನಾಯಕರು ಹೇಳುತ್ತಾಾ ಬಂದಿದ್ದರು.
ಆದರೆ ಮೋದಿ-ಶಾ ಇಂಥ ಕೆಲಸಕ್ಕೆೆ ಮುಂದಾಗಬಹುದು ಎಂದು ಕಾಶ್ಮೀರಿ ನಾಯಕರನ್ನು ಬಿಡಿ, ಈ ದೇಶದಲ್ಲಿ ಯಾರೂ ಅಂದುಕೊಂಡಿರಲಿಲ್ಲ, ಕಾರಣ ಅದು ವಿಷ ಸರ್ಪದ ಹುತ್ತಕ್ಕೆೆ ಕೈ ಹಾಕಿದಂತೆ ಆಗಿತ್ತು.

ಇದೇನು ಏಕಾಏಕಿ ತೆಗೆದುಕೊಂಡ ತೀರ್ಮಾನ ಆಗಿರಲಿಲ್ಲ. ಮೆಹಬೂಬಾ ಮುಫ್ತಿಿ ನೇತೃತ್ವದ ಜಮ್ಮು-ಕಾಶ್ಮೀರ ಸರಕಾರಕ್ಕೆೆ ನೀಡಿದ ಬೆಂಬಲವನ್ನು ಬಿಜೆಪಿ ಯಾವಾಗ ವಾಪಸ್ ತೆಗೆದುಕೊಂಡಿತೋ ಅಂದಿನಿಂದಲೇ ಈ ಜೋಡಿ ಈ ನಿಟ್ಟಿಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು ಸೋಜಿಗವೆನಿಸಬಹುದು. ಜಮ್ಮು-ಕಾಶ್ಮೀರದಲ್ಲಿ ಜನಪ್ರಿಿಯ ಸರಕಾರವಿರುವಾಗ ಇಂಥ ನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವೇ ಇರಲಿಲ್ಲ. ಅಲ್ಲಿ ಸರಕಾರ ಇಲ್ಲದಿರುವ ಸಂದರ್ಭ ನೋಡಿಯೇ, ಇಂಥ ಕ್ರಮಕ್ಕೆೆ ಮುಂದಾಗಿರುವುದನ್ನು ನೋಡಿದರೆ, 370 ನೇ ‘ವಿಧಿವಶ’ಕ್ಕೆೆ ಆಗಲೇ ಸ್ಕೆೆಚ್ ಹಾಕಿದ್ದು ಗೊತ್ತಾಾಗುತ್ತದೆ. ಕಾರಣ ಕಾಶ್ಮೀರಕ್ಕೆೆ ನೀಡಿದ ವಿಶೇಷ ಸ್ಥಾಾನಮಾನ ವಿಧಿಯನ್ನು ಹಿಂಪಡೆಯಲು ಆ ರಾಜ್ಯದ ವಿಧಾನಸಭೆಯ ಒಪ್ಪಿಿಗೆ ಬೇಕೆಂದು 370ನೇ ವಿಧಿಯಲ್ಲೇ ಸ್ಪಷ್ಟವಾಗಿ ಹೇಳಲಾಗಿದೆ. ಹೀಗಿರುವಾಗ ವಿಧಾನಸಭೆ ಅಮಾನತ್ತಿಿನಲ್ಲಿರುವಾಗಲೇ ಈ ನಿರ್ಧಾರಕ್ಕೆೆ ಮುಂದಾಗಬೇಕು ಎಂಬುದು ಮೋದಿ ಸ್ಪಷ್ಟವಾಗಿತ್ತು.
ಈ ಕಾರಣದಿಂದಲೇ ಅವರು ಆಗಲೇ ಮುಫ್ತಿಿ ಸಂಪುಟಕ್ಕೆೆ ನೀಡಿದ ಬೆಂಬಲ ವಾಪಸ್ ಪಡೆದಿದ್ದು ಮತ್ತು ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ನಂತರ ತಮ್ಮ ನಿಷ್ಠರಾದ ಅಮಿತ್ ಶಾ ಅವರನ್ನು ಗೃಹ ಮಂತ್ರಿಿಯಾಗಿ ಮಾಡಿ ಅವರಿಗೆ ಈ ಜವಾಬ್ದಾಾರಿಯನ್ನು ನೀಡಿದ್ದು. ಪ್ರಧಾನಿಯವರ ಅಂತರಂಗವನ್ನು ಅರಿತು ಕಾರ್ಯನಿರ್ವಹಿಸುವ ಗೃಹ ಸಚಿವರಿಲ್ಲದಿದ್ದರೆ ಅಂಥವರ ಹೆಗಲಿಗೆ ಇಂಥ ಗುರುತರ ಜವಾಬ್ದಾಾರಿ ಹೊರಿಸಲು ಸಾಧ್ಯವಿಲ್ಲ. ಕಾರಣ ಇಂಥ ಕಾರ್ಯಾಚರಣೆಯಲ್ಲಿ ಅನೇಕ ಸೂಕ್ಷ್ಮ ಸಂಗತಿಗಳಿರುತ್ತವೆ. ಬಂಟರಲ್ಲಿ ಮಾತ್ರ ಅಂಥ ಸೂಕ್ಷ್ಮಗಳನ್ನು ಹಂಚಿಕೊಳ್ಳಬಹುದು. ಅದಕ್ಕೆೆ ಅಮಿತ್ ಶಾ ಅವರಿಗಿಂತ ಮಿಗಿಲಾದ ವ್ಯಕ್ತಿಿಯೇ ಇರಲಿಲ್ಲ. ಹೀಗಾಗಿ ಯಾವಾಗ ಶಾ ಗೃಹ ಮಂತ್ರಿಿಯಾಗಿ ನೇಮಕಗೊಂಡರೋ ಆಗಲೇ ‘ಮಿಷನ್ ಕಾಶ್ಮೀರ’ಕ್ಕೆೆ ಚಾಲನೆ ಕೊಟ್ಟಂತಾಗಿತ್ತು.

ಕಾಶ್ಮೀರದಲ್ಲಿ ಅದೆಂಥ ಭಯಾನಕ ಪರಿಸ್ಥಿಿತಿ ಇತ್ತೆೆಂದರೆ, ಕೈಯಲ್ಲಿ ಬಂದೂಕು ಹಿಡಿದ ಸೈನಿಕರನ್ನು ಪ್ರತ್ಯೇಕತಾವಾದಿಗಳು ಅಟ್ಟಿಿಸಿಕೊಂಡು ಹೋಗಿ ಹೊಡೆಯುತ್ತಿಿದ್ದರು. ಗುಂಡು ಹಾರಿಸಿದರೂ ತನ್ನ ಪ್ರಾಾಣ ರಕ್ಷಿಸಿಕೊಳ್ಳಬಲ್ಲೆ ಎಂಬ ವಿಶ್ವಾಾಸ ಸೈನಿಕರಿಗೆ ಇರಲಿಲ್ಲ. ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ಸೈನಿಕರನ್ನು ಪುಂಡು ಯುವಕರು ಕಲ್ಲಿನ ಮಳೆಗರೆಯುತ್ತಿಿದ್ದರು. ಶಸ್ತ್ರಧಾರಿ ಯೋಧರು ಇವರನ್ನೆೆಲ್ಲ ಮೂಕ ಪ್ರೇಕ್ಷಕರಾಗಿ ಸಹಿಸಿಕೊಳ್ಳಬೇಕಾಗಿತ್ತು. ಇವರ ಮೇಲೆ ಪೆಲ್ಲೆಟ್ ಗುಂಡು ಹಾರಿಸಿದರೆ ಅದಕ್ಕೆೆ ಪ್ರತಿಯಾಗಿ ಅವರೂ ದಾಳಿ ಮಾಡುತ್ತಿಿದ್ದರು. ಉಗ್ರರ ಮೇಲೆ ದಾಳಿ ಮಾಡಿದರೆ, ಕೆಲವರು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿಿದೆ ಎಂದು ಹುಯಿಲೆಬ್ಬಿಿಸುತ್ತಿಿದ್ದರು. ಇವರೆಲ್ಲರಿಗೂ ಪಾಕಿಸ್ತಾಾನದ ಕುಮ್ಮಕ್ಕು. ಅಲ್ಲದೆ ಭಾರತದಲ್ಲಿರುವ ಜಾತ್ಯತೀತ ಶಕ್ತಿಿಗಳು ಈ ಉಗ್ರರ ಬೆಂಬಲಕ್ಕೆೆ ನೈತಿಕ ಸ್ಥೈರ್ಯ ನೀಡುತ್ತಿಿದ್ದವು. ಕಾಶ್ಮೀರದಲ್ಲಿ ದಿನದಿಂದ ದಿನಕ್ಕೆೆ ಉಗ್ರರ ಕೈ ಮೇಲಾಗುತ್ತಿಿತ್ತು. ಪಾಕಿಸ್ತಾಾನ ಭಾರತದ ಮೇಲೆ ತನ್ನ ಹಿಡಿತ ಸಾಧಿಸುವತ್ತ ಮೇಲುಗೈ ಪಡೆಯುತ್ತಿಿತ್ತು.
ಕಾಲಕಾಲಕ್ಕೆೆ ಅಧಿಕಾರಕ್ಕೆೆ ಬಂದ ಸರಕಾರಗಳೆಲ್ಲ ಈ ಉಗ್ರರ ಸಂಘಟನೆಗಳ ಜತೆಗೆ ನೇರ ಸಂಪರ್ಕ ಹೊಂದಿದ್ದವು. ಕಾಯಬೇಕಾದವರೇ ಕೊಲ್ಲುವವರ ಜತೆಗೆ ಕೈ ಜೋಡಿಸಿದ್ದರು. ಉಗ್ರರ ಜತೆ ಶಾಮೀಲಾಗದೆ ಜಮ್ಮು-ಕಾಶ್ಮೀರದಲ್ಲಿ ಸರಕಾರ ನಡೆಸುವುದೂ ಸಾಧ್ಯವಿರಲಿಲ್ಲ. ಕಾಶ್ಮೀರಿ ನಾಯಕರಿಗೆ ಮತ್ತು ಅಲ್ಲಿನ ಪ್ರತ್ಯೇಕತಾವಾದಿಗಳಿಗೆ ಸಂವಿಧಾನದ 370ನೇ ವಿಧಿ ಒಂದು ರಕ್ಷಾಕವಚವಾಗಿತ್ತು. ಯಾರೂ ತಮ್ಮನ್ನು ಅಲ್ಲಾಡಿಸಲಾರರು ಎಂಬುದು ಅವರಿಗೆ ಸ್ಪಷ್ಟವಾಗಿತ್ತು. ದಿಲ್ಲಿಯಲ್ಲಿ ಅಧಿಕಾರಕ್ಕೆೆ ಸರಕಾರಗಳ ಬೆನ್ನುಹುರಿ ಎಷ್ಟು ಗಟ್ಟಿಿ ಇವೆ ಎಂಬುದನ್ನು ಅವರು ಪರೀಕ್ಷಿಸಿ, ಇವರೆಲ್ಲ ಕೈಲಾಗದವರು ಎಂಬ ನಿರ್ಧಾರಕ್ಕೆೆ ಬಂದಿದ್ದರು. ಇಲ್ಲದಿದ್ದರೆ ಫಾರೂಕ್ ಅಬ್ದುಲ್ಲಾ ಅವರಂಥ ಹಿರಿಯ ನಾಯಕ, ಹತ್ತು ಜನ್ಮ ಎತ್ತಿಿ ಬಂದರೂ ಮೋದಿ ಅವರಿಗೆ 370ನೇ ವಿಧಿ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿಿರಲಿಲ್ಲ.

370ನೇ ವಿಧಿ ರದ್ದು ಪಡಿಸಬೇಕೆಂಬ ಇಚ್ಛಾಾಶಕ್ತಿಿಯಿದ್ದರೂ ಅದು ಸಾಧ್ಯವೇ ಇಲ್ಲ ಎಂಬುದು ಎಲ್ಲರಿಗೂ ಮನವರಿಕೆಯಾಗಿತ್ತು. ಕಾರಣ ಅದನ್ನು ರದ್ದುಪಡಿಸಲು ಅನುಸರಿಸಬೇಕಾದ ಕ್ರಮಗಳೂ ಹಾಗೆ ಇದ್ದವು. ನೋಡಿದರೆ, ಕೇಳಿದರೆ ಎಂಥವರಿಗಾದರೂ ಇದು ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂಬುದು ಗೊತ್ತಾಾಗಿಬಿಡುತ್ತಿಿತ್ತು. ಸಂಸತ್ತಿಿನಲ್ಲಿ ಇದರ ಬಗ್ಗೆೆ ಪ್ರಸ್ತಾಾಪ ಮಾಡಿದರೆ ಸಾಕು, ಸಾವಿರಾರು ಅಮಾಯಕ ಹೆಣಗಳು ಉರುಳಿ ಕೋಲಾಹಲವಾಗಿ, ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿ, ಆಗಬಾರದೆಲ್ಲ ಆಗಿಬಿಡಬಹುದು ಎಂದು ಎಂಥವರಾದರೂ ಊಹಿಸಿಕೊಳ್ಳಬಹುದಿತ್ತು. ಅದು ನಿಜವೂ ಆಗಿತ್ತು. ಅದರಲ್ಲೇನೂ ಉತ್ಪ್ರೇಕ್ಷೆ ಇರಲಿಲ್ಲ. ಹೀಗಾಗಿ ಯಾರೂ ಇಂಥ ಕ್ರಮಕ್ಕೆೆ ಮುಂದಾಗುವುದಿಲ್ಲ ಎಂದೇ ಎಲ್ಲರೂ ಅಂದುಕೊಂಡಿದ್ದರು.
ಮೋದಿ-ಶಾ ಅವರಿಗೂ ಇದು ಗೊತ್ತಿಿಲ್ಲದ ಸಂಗತಿಯೇನೂ ಇವೆಲ್ಲವುಗಳ ಮಧ್ಯದಲ್ಲಿಯೂ ಅದನ್ನು ಸಾಧಿಸುವುದು ಹೇಗೆ ಎಂದು ಅವರು ಸ್ಕೆೆಚ್ ಹಾಕಿದರು. ಅದಕ್ಕೆೆ ಪೂರಕವಾಗಿ ಜಾಗರೂಕತೆಯಿಂದ ಹೆಜ್ಜೆೆ ಇಡಲಾರಂಭಿಸಿದರು. ಆದರೆ ಯಾರಿಗೂ ಅದರ ಸುಳಿವು ಬಿಟ್ಟುಕೊಡಲಿಲ್ಲ. ಸಂಸತ್ತಿಿನ ಕಾರ್ಯಕಲಾಪ ಹದಿನೈದು ದಿನಗಳವರೆಗೆ ಮುಂದೂಡಿದರೂ ಯಾರಿಗೂ ಸಂದೇಹ ಬರಲಿಲ್ಲ. ಅಮರನಾಥ ಯಾತ್ರೆೆಯನ್ನು ಅರ್ಧಕ್ಕೆೆ ನಿಲ್ಲಿಸಿದರೂ ಯಾರಿಗೂ ಸಂಶಯ ಬರಲಿಲ್ಲ. ಕಾರಣ ಅಮರನಾಥ ಯಾತ್ರೆೆ ಹಠಾತ್ತಾಾಗಿ ನಿಂತ ನಿದರ್ಶನ ಇತ್ತೀಚಿನ ವರ್ಷಗಳಲ್ಲಿ ಇರಲಿಲ್ಲ. ಯಾತ್ರಿಿಕರ ಸುರಕ್ಷತೆಗಾಗಿ ಸರಕಾರ ನಲವತ್ತು ಸಾವಿರ ಸೈನಿಕರನ್ನು ಆ ಎಲ್ಲಾ ಸೈನಿಕರನ್ನು ಬೇರೆಡೆಗೆ ಕೇಂದ್ರ ಸರಕಾರ ವರ್ಗಾಯಿಸಿತು.

ಜಮ್ಮು-ಕಾಶ್ಮೀರಕ್ಕೆೆ ಮತ್ತೆೆ ಮೂವತ್ತು ಸಾವಿರ ಸೈನಿಕರನ್ನು ಕಳುಹಿಸಿದಾಗಲೂ ಅಲ್ಲೇನೋ ಆಗುತ್ತಿಿದೆ ಎಂದು ಜನ ಅಂದುಕೊಂಡರು. ಏನು ಆಗುತ್ತಿಿದೆ, ಯಾಕಾಗಿ ಹೀಗೆ ಮಾಡುತ್ತಿಿದ್ದಾರೆ ಎಂದು ಗೊತ್ತಾಾಗಲಿಲ್ಲ. ಪ್ರಾಾಯಶಃ ಮೋದಿ ಅವರು ಈ ಸಲದ ಸ್ವಾಾತಂತ್ರ್ಯ ದಿನಾಚರಣೆಯನ್ನು ಲಾಲ್ ಖಿಲಾ ಬದಲು, ಲಾಲ್ ಚೌಕ್‌ನಿಂದ ಆಚರಿಸಬಹುದು, ಅಲ್ಲಿಂದ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಬಹುದು ಎಂದು ಅಂದುಕೊಂಡರು. ಅದಕ್ಕಾಾಗಿ ಅಷ್ಟೊೊಂದು ಪ್ರಮಾಣದ ಸೈನಿಕರನ್ನು ಜಮಾವಣೆ ಎಂದು ಭಾವಿಸಿದರು.
ಮೋದಿ ಅವರು ಕಾಶ್ಮೀರದ ನಾಯಕರ ಜತೆ ಮಾತುಕತೆ ನಡೆಸಿದರೂ, ಅವರಿಗೂ ಏನು ನಡೆಯುತ್ತಿಿದೆ ಎಂಬುದು ಗೊತ್ತಾಾಗಲಿಲ್ಲ. ಕಾಶ್ಮೀರದಲ್ಲಿ ಏನೋ ಆಗಲಿದೆ ಎಂದು ಅಂದುಕೊಂಡವರಿಗೂ ನಿಶ್ಚಿಿತವಾಗಿ ಇಂಥದೇ ಆಗುತ್ತದೆ ಎಂಬುದು ಗೊತ್ತಿಿರಲಿಲ್ಲ. ಜಮ್ಮು-ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷಗಳ ನಾಯಕರಾದ ಫಾರೂಕ್ ಅಬ್ದುಲ್ಲಾ, ಉಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿಿ ಮತ್ತು ಹುರಿಯತ್ ಕಾನ್ಫರ್ಸ್‌ೆ ನಾಯಕರನ್ನು ಕರೆಯಿಸಿ ಅವರ ಜತೆಗೂ ಮಾತುಕತೆ ನಡೆಸಿದರು. ಆದರೆ ತಾವು ಸಂವಿಧಾನದ 370 ನೇ ಬಗ್ಗೆೆ ತೆಗೆದುಕೊಳ್ಳಲಿರುವ ನಿರ್ಧಾರದ ಬಗ್ಗೆೆ ಅವರ ಮುಂದೆ ಸುಳಿವು ನೀಡಲಿಲ್ಲ. ಈ ನಾಯಕರಿಗೆ ಅದರ ಬಗ್ಗೆೆ ಸಣ್ಣ ಸುಳಿವು ಸಿಕ್ಕರೂ ಅವರು ಕಣಿವೆಯ ರಾಜ್ಯದಲ್ಲಿ ಬೆಂಕಿ ಹಚ್ಚಿಿಬಿಡುತ್ತಿಿದ್ದರು.
ಅಷ್ಟರಮಟ್ಟಿಿಗೆ ಇಡೀ ಕಾರ್ಯಾಚರಣೆಯ ಮೂಲ ಉದ್ದೇಶವನ್ನು ಗುಪ್ತವಾಗಿ ಇಡಲಾಗಿತ್ತು. ಒಂದೆಡೆ ಸಂಸತ್ತಿಿನ ಕಲಾಪ ನಡೆಯುತ್ತಿಿದೆ, ಇನ್ನೊೊಂದೆಡೆ ಸೈನಿಕರನ್ನು ಭಾರಿ ಪ್ರಮಾಣದಲ್ಲಿ ಜಮಾವಣೆ ಮಾಡಲಾಗುತ್ತಿಿದೆ. ಆದರೂ ಇಡೀ ದೇಶಕ್ಕೆೆ ಇವೆಲ್ಲವುಗಳ ಸುಳಿವೂ ಸಿಗದಂತೆ ತಂತ್ರ ಹೊಸೆಯಲಾಗಿತ್ತು.

ಯಾವುದೇ ಚ್ಸ್‌ಾ ತೆಗೆದುಕೊಳ್ಳಲು ಸಿದ್ಧರಿರಲಿಲ್ಲ. ಎಡವಟ್ಟಾಾದರೂ ಮೈಮೇಲೆ ಬಂಡೆಗಲ್ಲನ್ನು ಎಳೆದುಕೊಂಡಂತೆ ಎಂಬುದು ಗೊತ್ತಿಿತ್ತು. ಅದರಲ್ಲೂ ದಿಲ್ಲಿಯಲ್ಲಿ ಎಲ್ಲಾ ಗೋಡೆಗಳಿಗೂ ಕಿವಿ, ಕಣ್ಣುಗಳು. ಏನೇ ಮಾಡಿದರೂ ಬೇರೆಯವರಿಗೆ ಗೊತ್ತಾಾಗಿಯೇ ಆಗುತ್ತದೆ. ಶ್ರೀನಗರದಂಥ ಸೂಕ್ಷ್ಮ ಪ್ರದೇಶಕ್ಕೆೆ ಆ ಪ್ರಮಾಣದಲ್ಲಿ ಸೈನಿಕರನ್ನು ಕಳುಹಿಸಿದರೂ, ಇಡೀ ಜಗತ್ತಿಿನ ಲಕ್ಷ್ಯ ಆ ಕಡೆ ಹೊರಳಿದರೂ ಮೂಲ ಉದ್ದೇಶವನ್ನು ಗಪ್‌ಚುಪ್ ಆಗಿ ಇಡುವುದು ಸಾಧ್ಯವೇ ಇರಲಿಲ್ಲ. ಅದೇ ಈ ಕಾರ್ಯಾಚರಣೆಯ ಬಹು ದೊಡ್ಡ ಯಶಸ್ಸು. ಸಣ್ಣ ಸುಳಿವು ಸಿಕ್ಕರೂ ಉಗ್ರರು ಅಟ್ಟಹಾಸ ಮೆರೆಯಲು ಕಾಶ್ಮೀರದಲ್ಲಿ ಐನೂರು ಜನ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿಡಲಾಗಿದೆ ಮತ್ತು ಇಡೀ ರಾಜ್ಯಕ್ಕೆೆ ಬೀಗ ಹಾಕಲಾಗಿದೆ ಎಂದು ಬೊಬ್ಬೆೆ ಹೊಡೆಯುವವರಿಗೆ ಈ ಸಂಗತಿಗಳು ಅರ್ಥ ಆಗುವುದಿಲ್ಲವೇ?
ಇಡೀ ಜಗತ್ತಿಿಗೆ ಮೊದಲೇ ತಿಳಿಸಿ, ಸಂಸತ್ತಿಿನಲ್ಲಿ ವಿಧೇಯಕವನ್ನು ಮಂಡಿಸಿದ್ದರೆ, ಕಾಶ್ಮೀರ ಕಣಿವೆಯಲ್ಲಿ ಏನಿಲ್ಲವೆಂದರೂ ಸಾವಿರಾರು ಜನ ಸಾಯುತ್ತಿಿದ್ದರು. ಇವರನ್ನು ಸಾವಿನ ಕಣಿವೆಗೆ ಕಾಶ್ಮೀರದ ನಾಯಕರೇ ದೂಡುತ್ತಿಿದ್ದರು. ಆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹುಯಿಲೆಬ್ಬಿಿಸಿ, ಕೇಂದ್ರ ಸರಕಾರದ ಮೇಲೆ ಗೂಬೆ ಕುಳ್ಳಿಿರಿಸಿ, ನಿರ್ಧಾರ ತೆಗೆದುಕೊಳ್ಳದಂತೆ ಒತ್ತಡ ತರುತ್ತಿಿದ್ದರು.

ಇತ್ತ ದಿಲ್ಲಿಯಲ್ಲಿ ಸ್ವತಃ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಇಡೀ ಕಾರ್ಯಾಚರಣೆಯನ್ನು ಅತ್ಯಂತ ಯಶಸ್ವಿಿಯಾಗಿ ಪೂರ್ಣಗೊಳಿಸಲು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆೆ ಹಗಲು-ರಾತ್ರಿಿಯೆನ್ನದೇ ಕಾರ್ಯಮಗ್ನರಾಗಿದ್ದರು. ಇಡೀ ಜಮ್ಮು-ಕಾಶ್ಮೀರದಲ್ಲಿ ಶಾಂತಿ, ಕಾನೂನು ಹಾಗೂ ಸುವ್ಯವಸ್ಥೆೆ ಕಾಪಾಡುವುದು ಬಹಳ ಮುಖ್ಯವಾಗಿತ್ತು. ಅದಕ್ಕೆೆ ಬೇಕಾದ ಭದ್ರತಾಪಡೆ ಜವಾನರನ್ನು ಜಮಾವಣೆ ಮಾಡುವುದು ಒಂದೆಡೆಯಾದರೆ, ಆಂತರಿಕ ಕ್ಷೋೋಭೆ ಅಥವಾ ಯುದ್ಧ ಸ್ವರೂಪಿ ಕಲಹಗಳಾದರೆ, ಅವುಗಳನ್ನು ಎದುರಿಸಲು ಸನ್ನದ್ಧರಾಗಬೇಕಿತ್ತು. ಅಷ್ಟೇ ಅಲ್ಲ, ರಾಜ್ಯದ ಜನರು ಮನೆಗಳಿಂದ ಹೊರ ಬರದ ರೀತಿಯ ವಾತಾವರಣದಲ್ಲಿ ಜೀವನಾವಶ್ಯಕ ವಸ್ತು, ಪದಾರ್ಥಗಳ ದಾಸ್ತಾಾನು ಮಾಡಿಟ್ಟುಕೊಳ್ಳಬೇಕಾದ ಅಗತ್ಯವಿತ್ತು. ಇಂಥ ಸ್ಥಿಿತಿಯಲ್ಲಿ ಕೈಗೊಳ್ಳಬೇಕಾದ ಎಲ್ಲ ಕ್ರಮಗಳಿಗೆ ಕೇಂದ್ರ ಸರಕಾರ ಮುಂದಾಯಿತು.
ಜಮ್ಮು-ಕಾಶ್ಮೀರದ ಎಲ್ಲಾಾ ಜಿಲ್ಲಾಾ ಕೇಂದ್ರಗಳಿಗೆ ಭಾರೀ ಪ್ರಮಾಣದಲ್ಲಿ ದವಸ ಧಾನ್ಯ, ದಿನಸಿ, ಜೀವನಾವಶ್ಯಕ ವಸ್ತುಗಳು, ಪೆಟ್ರೋೋಲ್, ಡೀಸೆಲ್, ಔಷಧಗಳನ್ನು ನಾಲ್ಕು ದಿನಗಳಲ್ಲಿ ಕಳುಹಿಸಿಕೊಡಲಾಯಿತು. ನೀರು ಹಾಗೂ ಸಕಾಲಕ್ಕೆೆ ಪೂರೈಕೆಯಾಗುವಂತೆ ರಕ್ತದ ಬಾಟಲಿಗಳನ್ನು ಸಹ ಕಳುಹಿಸಲಾಯಿತು. ಪ್ರತಿ ಐದು ಕಿಮೀ ತಾತ್ಕಾಾಲಿಕ ಆಸ್ಪತ್ರೆೆ, ಪ್ರಥಮ ಚಿಕಿತ್ಸಾಾ ಕೇಂದ್ರಗಳನ್ನು ತೆರೆಯಲಾಯಿತು. ಈ ಉದ್ದೇಶಕ್ಕಾಾಗಿ ಸುಮಾರು ಐದು ಸಾವಿರ ವೈದ್ಯರು, ನರ್ಸ್‌ಗಳು, ಆಸ್ಪತ್ರೆೆ ಸಿಬ್ಬಂದಿಯನ್ನು ಕಳುಹಿಸಲಾಯಿತು. ಒಂದು ತಿಂಗಳು ಪರಿಸ್ಥಿಿತಿ ನಿಭಾಯಿಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಯಿತು. ಒಂದು ಚಿಕ್ಕ ಪುಟ್ಟ ಲೋಪವಾದರೂ ಪ್ರತಿಪಕ್ಷಗಳ ನಾಯಕರು ಟೀಕಿಸದೇ ಹೋಗುವುದಿಲ್ಲ ಹಾಗೂ ಅಂತಾರಾಷ್ಟ್ರೀಯ ಸಮುದಾಯದ ಎದುರು ತಲೆತಗ್ಗಿಿಸಬೇಕಾಗುತ್ತದೆ ಎಂಬುದು ಗೊತ್ತಿಿತ್ತು. ಹೀಗಾಗಿ ಸಣ್ಣ ಸಣ್ಣ ಸಂಗತಿಗಳ ಬಗ್ಗೆೆ ಕೂಡ ಲಕ್ಷ್ಯವಹಿಸಲಾಯಿತು.
ಸಂಸತ್ತಿಿನಲ್ಲಿ ಮಸೂದೆಯನ್ನು ಮಂಡಿಸುವ ಬೆಳಗ್ಗೆೆ ಐದು ಗಂಟೆಯಿಂದಲೇ ಜಮ್ಮು-ಕಾಶ್ಮೀರದೆಲ್ಲೆೆಡೆ, ದೂರವಾಣಿ, ಮೊಬೈಲ್, ಇಂಟರ್‌ನೆಟ್ ಸಂಪರ್ಕವನ್ನೇ ಕಡಿದುಹಾಕಲಾಯಿತು. ಇದರಿಂದ ಇಡೀ ರಾಜ್ಯ ಹೊರಜಗತ್ತಿಿನ ಸಂಪರ್ಕ ಕಡಿದುಕೊಂಡಿತು. ಅಕ್ಕ ಪಕ್ಕದವರು ಸಹ ಭೇಟಿಯಾಗಬಾರದೆಂದು ಕರ್ಫ್ಯೂೂ ವಿಧಿಸಲಾಯಿತು. ಇದರಿಂದ ವದಂತಿ ಹಬ್ಬುವುದಕ್ಕೆೆ ಆರಂಭದಲ್ಲೇ ಕಡಿವಾಣ ಹಾಕಲಾಯಿತು. ಗಲಭೆಕೋರರಿಗೆ ಪರಸ್ಪರರಲ್ಲಿ ಸಂಪರ್ಕವೇ ಸಾಧ್ಯವಾಗದೇ ಹೋಯಿತು. ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿ ಇರಿಸಿದ್ದರಿಂದ ಅವರಾರಿಗೂ ಗಲಭೆಗೆ ಪ್ರಚೋದಿಸಲು ಸಾಧ್ಯವಾಗಲಿಲ್ಲ.
ಸಣ್ಣ ಪುಟ್ಟ ಕಾರಣಗಳಿಗೂ, ದಿನಕ್ಕೆೆ ಮೂರ್ನಾಲ್ಕು ಬಾರಿ ರಸ್ತೆೆಗಿಳಿದು ಕಲ್ಲು ತೂರುತ್ತಿಿದ್ದ ಪುಂಡು ಪೋಕರಿಗಳು ಮನೆಯೊಳಗೇ ಇರುವಂತಾಯಿತು. ಮನೆಯಿಂದ ಹೊರಬಂದರೆ, ಕರ್ಫ್ಯೂೂ ಉಲ್ಲಂಸಿದ ಆರೋಪದ ಮೇಲೆ ಭದ್ರತಾ ಪಡೆಯವರು ಗುಂಡು ಹಾರಿಸದೇ ಬಿಡುತ್ತಿಿರಲಿಲ್ಲ. ವಾಟ್ಸಪ್ ಹಾಗೂ ಮೊಬೈಲ್ ಸಂಪರ್ಕವನ್ನೆೆಲ್ಲ ಕಡಿದುಹಾಕಿದ್ದರಿಂದ ಇಂಥ ಪೋಕರಿಗಳಿಗೆ ನಾಲ್ಕು ಜನರನ್ನೂ ಸೇರಿಸಲು ಸಾಧ್ಯವಾಗಲಿಲ್ಲ. ಹೊರ ಜಗತ್ತಿಿನಲ್ಲಿ ಏನು ನಡೆಯುತ್ತಿಿದೆ ಎಂಬುದು ಗೊತ್ತಾಾಗದಂತಾಯಿತು.

ತಮ್ಮನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ಅಬ್ದುಲ್ಲಾಾಗಳು, ಮುಫ್ತಿಿ ಹುಯಿಲೆಬ್ಬಿಿಸಿದರಲ್ಲ, ವಾಸ್ತವವಾಗಿ ಅವರನ್ನು ಬಂಧಿಸಿರಲೇ ಇಲ್ಲ. ಅವರಿಗೆ ನೀಡಲಾದ ಸರಕಾರಿ ಬುಲೆಟ್‌ಪ್ರೂೂಫ್ ವಾಹನ, ಭದ್ರತಾ ಸಿಬ್ಬಂದಿ ಗನ್‌ಮನ್‌ಗಳನ್ನು ವಾಪಸ್ ಪಡೆಯಲಾಗಿತ್ತು. ಹೀಗಾಗಿ ಅವರ್ಯಾಾರೂ ತಮ್ಮ ತಮ್ಮ ಮನೆಗಳಿಂದ ಹೊರ ಬೀಳಲಿಲ್ಲ. ಅವರಿಗೆ ಹೊರ ಹೋಗಬೇಡಿ ಎಂದು ಯಾರೂ ಹೇಳಿರಲಿಲ್ಲ. ತಮ್ಮ ಜೀವಭಯದಿಂದ, ಮೋದಿ-ಶಾ ಅವರನ್ನು ಜರೆಯುತ್ತಾಾ, ಮನೆಯೊಳಗೇ ಮೂರ್ನಾಾಲ್ಕು ದಿನ ಅಡಗಿ ಕುಳಿತಿದ್ದರು. ಗನ್‌ಮನ್ ಹಾಗೂ ಬುಲೆಟ್‌ಪ್ರೂೂಫ್ ವಾಹನವಿಲ್ಲದೇ ಮನೆಯಿಂದ ಹೊರ ಹೋಗುವಂಥ ಪರಿಸ್ಥಿಿತಿ ಅಲ್ಲಿನ ನಾಯಕರಿಗೇ ಇರಲಿಲ್ಲ.
ಇತ್ತ ದಿಲ್ಲಿಯಲ್ಲಿ, ರಾಜ್ಯಸಭೆಯಲ್ಲಿ ಜಮ್ಮು-ಕಾಶ್ಮೀರ ಪುನರ್‌ವಿಂಗಡಣೆ ಮಸೂದೆಯನ್ನು ಮಂಡಿಸುವ ದಿನ ಬೆಳಗ್ಗೆೆ ಮೋದಿಯವರು ಒಂಬತ್ತು ಗಂಟೆಗೆ ನಿವಾಸದಲ್ಲಿ ಕ್ಯಾಾಬಿನೆಟ್ ಮೀಟಿಂಗ್ ಕರೆದರು. ಅಲ್ಲಿಯವರೆಗೆ 370ನೇ ವಿಧಿ ರದ್ದುಪಡಿಸುವ ಸಣ್ಣ ಸುಳಿವು ಸಹ ಸಚಿವ ಸಂಪುಟದ ಸಹೋದ್ಯೋೋಗಿಗಳಿಗೆ ಇರಲಿಲ್ಲ. ಅರ್ಧ ಗಂಟೆಯೊಳಗೆ ಸಂಪುಟಸಭೆ ಮುಗಿದುಹೋಯಿತು. ತಮ್ಮ ಸಚಿವ ಸಹೋದ್ಯೋೋಗಿಗಳನ್ನು ಹೊರಗೆ ಹೋಗಲು ಬಿಟ್ಟುಕೊಡಲಿಲ್ಲ. ರುಪಾಯಿ ಅಪನಗದೀಕರಣದ ಸಂದರ್ಭದಲ್ಲಿ ಸಹೋದ್ಯೋೋಗಿಗಳನ್ನು ಒಂದೆಡೆ ಹಿಡಿದಿಟ್ಟುಕೊಂಡಂತೆ, ಈ ಸಲವೂ ಹಾಗೇ ಮಾಡಿದರು. ಅತಿ ಉತ್ಸಾಾಹದಿಂದ ಸುದ್ದಿ ಸೋರಿ ಹೋಗಿ, ಅವಾಂತರವಾಗಬಾರದು ಎಂಬುದು ಅವರ ಕಾಳಜಿಯಾಗಿತ್ತು. ಕೇಂದ್ರ ಗೃಹಸಚಿವರು ಹಾಗೂ ಸಂಸದೀಯ ವ್ಯವಹಾರಗಳ ಮಾತ್ರ ರಾಜ್ಯಸಭೆಗೆ ತೆರಳಿದರೆ, ಉಳಿದವರೆಲ್ಲ ಪ್ರಧಾನಿ ನಿವಾಸದಲ್ಲೇ ಇದ್ದರು. ಈ ಮಸೂದೆಯನ್ನು ಮಂಡಿಸುವುದಕ್ಕಿಿಂತ ಒಂದು ಗಂಟೆಯ ಮೊದಲಷ್ಟೇ ಪ್ರತಿಗಳನ್ನು ಸದಸ್ಯರಿಗೆ ವಿತರಿಸಲಾಯಿತು. ಸದಸ್ಯರಿಗೆ ವಿತರಿಸಲು ಸುಮಾರು ನೂರು ಪ್ರತಿಗಳ ಸಾವಿರ ಸೆಟ್ ನೆರಳಚ್ಚು ಮಾಡಿಸುವಾಗಲೂ ವಿಷಯ ಬಹಿರಂಗವಾಗಲಿಲ್ಲ.

ಬೆಳಗ್ಗೆೆ ಹನ್ನೊೊಂದು ಗಂಟೆಗೆ ರಾಜ್ಯಸಭೆಯಲ್ಲಿ ಗೃಹಸಚಿವ ಅಮಿತ್ ಶಾ 370ನೇ ವಿಧಿ ರದ್ದುಗೊಳಿಸುವ ಮಸೂದೆ ಮಂಡಿಸಿದರೆ, ಪ್ರತಿ ಪಕ್ಷಗಳು ಕಕ್ಕಾಾಬಿಕ್ಕಿಿ. ಇದಕ್ಕೆೆ ಪ್ರತಿಕ್ರಿಿಯಿಸುವುದು ಹೇಗೆ ಎಂದು ತಿಳಿಯದೇ ಗಲಿಬಿಲಿಗೊಂಡರು. ಅಷ್ಟೂ ರಾಜ್ಯಸಭೆಯಲ್ಲಿ ಕಾಂಗ್ರೆೆಸ್ ಸಚೇತಕರೇ ರಾಜೀನಾಮೆ ಕೊಟ್ಟುಬಿಟ್ಟರು. ಬಿಜೆಪಿಯನ್ನು ವಿರೋಧಿಸುವವರೂ ಬೆಂಬಲ ಸೂಚಿಸಿಬಿಟ್ಟರು. ದೇಶಾದ್ಯಂತ ಮೂಡು 370ನೇ ವಿಧಿ ವಿರುದ್ಧ ಅದೆಷ್ಟು ಉಗ್ರವಾಗಿತ್ತೆೆಂದರೆ ಕಾಂಗ್ರೆೆಸ್‌ನ ಸದಸ್ಯರೇ ಸರಕಾರದ ಕ್ರಮಕ್ಕೆೆ ಬೆಂಬಲ ವ್ಯಕ್ತಪಡಿಸಿದರು.
ಅಂತೂ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಯಿತು. ಕೇಂದ್ರ ಸರಕಾರ ಬರೀ 370ನೇ ವಿಧಿಯನ್ನು ರದ್ದುಪಡಿಸಿರಲಿಲ್ಲ, ಅದರ ಬದಲು ಜಮ್ಮು-ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಾಡಳಿತ ಪ್ರದೇಶ (ಜಮ್ಮು-ಕಾಶ್ಮೀರ ಹಾಗೂ ಲಡಾಖ್) ಗಳಾಗಿ ವಿಂಗಡಿಸಿತ್ತು. ಇದು ಇಡೀ ಕಾರ್ಯಯೋಜನೆಯ ಮಾಸ್ಟರ್
ಯಾವುದು ಅಸಾಧ್ಯವೆಂದು ಭಾವಿಸಲಾಗಿತ್ತೋೋ ಅದನ್ನು ಮೋದಿ-ಶಾ ಜೋಡಿ ಸಾಧ್ಯ ಮಾಡಿ ತೋರಿಸಿತ್ತು. ಯಾವುದೇ ಅನಾಹುತ, ವಿವಾದಗಳಿಲ್ಲದೇ ಆ ಸಮಸ್ಯೆೆ ಇತ್ಯರ್ಥಗೊಂಡಿತ್ತು. ಅಲ್ಲಿಗೆ ಒಂದು ಮಹಾಕಂಟಕದಿಂದ ದೇಶ ಪಾರಾದಂತಾಗಿದೆ. ಹಾಗಂತ ಇಲ್ಲಿಗೆ ಎಲ್ಲವೂ ಮುಗಿದೇ ಹೋಯಿತು ಎಂದಲ್ಲ, ಇನ್ನು ಮುಂದಿನದು ಸುಧಾರಣಾ ಕ್ರಮ. ಅದು ಆಗಬೇಕಿದೆ.

7 thoughts on “ಯಾವುದು ಅಸಾಧ್ಯವಾದ ಅದನ್ನು ಅವರು ಸಾಧ್ಯ ಮಾಡಿ ತೋರಿಸಿದ್ದಾರೆ!

  1. Most people are saying they are OK with the removal of the article but don’t agree with the way it was done, like keeping the whole state in isolation, cutting off all communication etc., posing as very smart and savvy experts. But no one understands that, that was the only way it could’ve been done without too much fuss and it was executed clinically, another surgical strike, the only difference was, this time the scale was massive!

Leave a Reply

Your email address will not be published. Required fields are marked *