Friday, 17th January 2020

ಕರ್ನಾಟಕದ 23 ಜಿಲ್ಲೆಗಳಲ್ಲಿ ಹಳದಿ ಅಲರ್ಟ್

ಹವಾಮಾನ ವೈಪರೀತ್ಯ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸೂಚನೆ

ರಾಜ್ಯದಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯದಿಂದಾಗಿ ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ 23 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚಿತ್ರದುರ್ಗ, ಬಳ್ಳಾಾರಿ, ಚಾಮರಾಜನಗರ, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕನ್ನಡ ಏಳು ಜಿಲ್ಲೆಗಳನ್ನು ಹೊರತುಪಡಿಸಿ, ಉಳಿದ 23 ಜಿಲ್ಲೆಗಳಿಗೆ ಹವಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಿದೆ. ಬೆಂಗಳೂರಿಗೂ ಸಹ ಹಳದಿ ಅಲರ್ಟ್ ಘೋಷಿಸಿದ್ದು, ಸಂಜೆಯಿಂದ ರಾತ್ರಿಿಯವರೆಗೆ ವ್ಯಾಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರವೂ ಕೂಡ ಹವಾಮಾನ ಇಲಾಖೆ ರಾಜ್ಯದ 26 ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಿತ್ತು.

ಸುಮಾರು 7ರಿಂದ 11 ಸೆಂ.ಮೀ. ಮಳೆಯಾಗುವ ನಿರೀಕ್ಷೆಯಿದ್ದು, ಮಧ್ಯಾಾಹ್ನದ ವೇಳೆಗೆ ಮೋಡ ಕವಿದ ವಾತಾವರಣವಿರುತ್ತದೆ. ಸಂಜೆಯಿಂದ ರಾತ್ರಿಿವರೆಗೂ ವ್ಯಾಾಪಕ ಸಹಿತ ಭಾರಿ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ. ತೆಲಂಗಾಣದಲ್ಲಿ ಸೈಕ್ಲೋೋನ್ ಸಕ್ರ್ಯೂಲೇಷನ್ ಇರುವುದರಿಂದ ಹಾಗೂ ಕೇರಳದ ಕಡಿಮೆ ಒತ್ತಡ ರೇಖೆ ತನ್ನ ದಿಕ್ಕು ಬದಲಿಸುತ್ತಿಿರುವುದರಿಂದ ಮಳೆ ಹೆಚ್ಚಾಾಗಲಿದೆ ಎಂದು ಮಾಹಿತಿ ನೀಡಿದೆ.
ಕೆಲ ಜಿಲ್ಲೆೆಗಳಲ್ಲಿ ಅ.12ರವರೆಗೆ ಭಾರಿ ಮಳೆಯಾಗಲಿದ್ದು, ಅವಾಂತರ ಸೃಷ್ಟಿಿಯಾಗುವ ಸಾಧ್ಯತೆ ಇದೆ. ಗುಡುಗು, ಗಾಳಿ ಸಹಿತ ಮಳೆಯಾಗಲಿದೆ. ರಾಜ್ಯದ ಎಲ್ಲಾಾ ಜಿಲ್ಲೆೆಗಳಿಗೂ ಮಳೆ ವ್ಯಾಾಪಿಸಲಿದೆ. ಕಳೆದ ಎರಡು ದಿನಗಳಿಂದ ಮಳೆಯ ಆರ್ಭಟ ಶುರುವಾಗಿದ್ದು, ಉತ್ತಮ ಮಳೆಯಾಗುತ್ತಿಿದೆ.

ಕುಸಿದ ಗೋಡೆ: ಮಹಿಳೆ ಬಲಿ
ಮಂಗಳವಾರ ಚಿಕ್ಕಬಳ್ಳಾಾಪುರ, ಗೌರಿಬಿದನೂರು, ಬೆಂಗಳೂರು ಗ್ರಾಾಮಾಂತರ ಜಿಲ್ಲೆಗೆ ಸೇರುವ ದೊಡ್ಡ ಬಳ್ಳಾಾಪುರ, ದೇವನಹಳ್ಳಿಿ, ವಿಜಯಪುರ ಸುತ್ತಮುತ್ತ ರಾತ್ರಿಿಯಿಡಿ ಮಳೆ ಸುರಿದಿದೆ. ಸೋಮವಾರ ಚಿಕ್ಕಬಳ್ಳಾಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ದ್ವಾಾರಗಾನಹಳ್ಳಿಿಯಲ್ಲಿ ಗೋಡೆ ಕುಸಿದು 70 ವರ್ಷದ ಪುಟ್ಟ ನರಸಮ್ಮ ಎಂಬುವರು ಮೃತಪಟ್ಟಿಿದ್ದಾಾರೆ. ಚಿಕ್ಕಬಳ್ಳಾಾಪುರ-ದೊಡ್ಡಬಳ್ಳಾಾಪುರ ನಗರಗಳ ಜನರ ಜೀವನಾಡಿ ಜಕ್ಕಲಮಡಗು ಜಲಾಶಯಕ್ಕೆೆ ಭಾರಿ ಪ್ರಮಾಣದಲ್ಲಿ ಮಳೆ ನೀರು ಹರಿದು ಬರುತ್ತಿಿದೆ. 42 ಅಡಿ ಎತ್ತರದ ಡ್ಯಾಾಂ 28 ಅಡಿಯಷ್ಟು ಭರ್ತಿಯಾಗಿದೆ.

ಹೆಚ್ಚು ಮಳೆಯಾದ ಪ್ರದೇಶಗಳು
ಜಿಲ್ಲೆೆ ಪ್ರಮಾಣ (ಮಿ.ಮೀ)
ರಾಮನಗರ 84
ಮಂಡ್ಯ 65
ಕೋಲಾರ 71
ಹಾಸನ 67
ಚಾಮರಾಜನಗರ 67

Leave a Reply

Your email address will not be published. Required fields are marked *