Wednesday, 29th June 2022

ಯೋಗದಿಂದ ಸದೃಢ ಆರೋಗ್ಯ: ಹಿರಿಯ ಸಿವಿಲ್ ನ್ಯಾ.ಎಂ.ಭಾರತಿ

ಹರಪನಹಳ್ಳಿ: ಯೋಗಾಸನ ಮಾಡುವುದು ಬರಿಯ ಧ್ಯಾನವನ್ನು ಮಾತ್ರ ಒಳಗೊಂಡಿಲ್ಲ. ಮಾನಸಿಕ ನೆಮ್ಮದಿಯೊಂದಿಗೆ ದೇಹಕ್ಕೆ ಹೊಸ ಉಲ್ಲಾಸವನ್ನು ನೀಡುವ ಯೋಗ ಹಲವಾರು ರೋಗಗಳನ್ನು ದೂರಬಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎ0.ಭಾರತಿ ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಹರಪನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಸಸಿಗೆ ನೀರು ಏರೆಯುವ ಉಭಯ ನ್ಯಾಯಾಲಯದ ನ್ಯಾಯಾಧೀಶರುಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದರು. ಯೋಗಾಸನ ಹಲವು ಆಸನಗಳನ್ನು ಒಳಗೊಂಡಿದ್ದು ಇವು ದೈಹಿಕವಾಗಿ ಮಾನಿಸಿಕವಾಗಿ ನಮ್ಮನ್ನು ಸದೃಢಗೊಳಿಸುತ್ತದೆ.

‘ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಗಾದೆಯಂತೆ ಯೋಗ ಬಲ್ಲವನೂ ರೋಗದಿಂದ ಮುಕ್ತನಾಗಿರುತ್ತಾನೆ. ಕೆಲವು ಆಸನಗಳಾದ ಅನುಸಾರ ವಿನ್ಯಾಸ ಮತ್ತು ಬಿಕ್ರಮ ನಿಮ್ಮ ವಿನ್ಯಾಸ ವಿರುವ ದೇಹ ಅಕಾರಕ್ಕೆ ಕಾರಣವಾಗಿದೆ ಅಧಿಕ ತೂಕವನ್ನು ಕಳೆದು ಕೊಂಡು ಆರೋಗ್ಯಕರ ದೇಹ ಸಂಪತ್ತನ್ನು ಯೋಗ ಮೂಲಕ ಪಡೆದುಕೋಳ್ಳಬಹುದು ಎಂದು ವಿಶ್ಲೇಷಿಸಿದರು.

ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಾಧೀಶರಾದ ಫಕ್ಕಿರವ್ವ ಕೆಳಗೇರಿ, ವಕೀಲರ ಸಂಘದ ಅಧ್ಯಕ್ಷ ಕೆ. ಜಗದಪ್ಪ, ಉಪಾಧ್ಯಕ್ಷ ಡಿ.ಬಿ. ವಾಸುದೇವಾ ಕಾರ್ಯದರ್ಶಿ ಎಸ್.ಜಿ.ತಿಪ್ಪೇಸ್ವಾಮಿ, ಜಂಟಿ ಕಾರ್ಯದರ್ಶಿ ಎಂ. ನಾಗೇಂದ್ರಪ್ಪ, ಖಾಜಾಂಚಿ ಹುಲಿಯಪ್ಪ, ಸಹಾ ಯಕ ಅಭಿಯೋಜಕರಾದ ಎನ್. ಮೀನಾಕ್ಷಿ , ನಿರ್ಮಲ ಡಿ. ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶ್ ಗೌಡ, ಹಿರಿಯ ವಕೀಲರಾದ ಮತ್ತಿಹಳ್ಳಿ ಅಜ್ಜಪ್ಪ, ಎಸ್.ಎಂ.ರುದ್ರಮನಿ, ಗಂಗಾಧರ್ ಗುರುಮಠ್, ಬಿ. ಹಾಲೇಶ್ ಬಿ. ಗೋಣಿಬಸಪ್ಪ , ಬಂಡ್ರಿ ಆನಂದ, ಕೆ. ಕೊಟ್ರೇಶ್, ಎಂ ಮೃತಂಜಯ್ಯ, ಕಣವಿಹಳ್ಳಿ ಮಂಜುನಾಥ್, ಮದ್ದಾನಪ್ಪ, ಶ್ರೀಕಾಂತ್, ಯೋಗ ಶಿಕ್ಷಕ ಎಸ್.ಟಿ. ಲೋಕೇಶ್, ಉಭಯ ನ್ಯಾಯಾಲಯದ ಶಿರಸ್ತೇದಾರರು, ಮಂಜುನಾಥ್ ಜನವಾಡೆ, ಶಿವಾನಂದ್, ಮೇಘರಾಜ್, ಚೆನ್ನಮಲ್ಲಪ್ಪ, ರೇವಣ ಸಿದ್ದಪ್ಪ, ಶ್ರೀನಿವಾಸ್, ಕುಭೇರ, ಉಜ್ವಲ, ಕೊಟ್ರೇಶ್, ಬಸವರಾಜ್, ಮತ್ತು ಇತರರು ಉಪಸ್ಥಿತರಿದ್ದರು.